ವೇಣೂರು :- ಹಿರಿಯರ ಕಾಲದಿಂದಲೂ ಕೃಷಿಯೇ ನಮ್ಮ ಜೀವನಾಡಿ, ಕೃಷಿಯನ್ನು ಬೆಳೆಸಿ ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸು ಜವಾಬ್ದಾರಿ ನಮ್ಮ ಮೇಲಿದೆ. ಕೃಷಿಯನ್ನು ಅವಲಂಬಿಸಿ ಬದುಕಿದ ನಮ್ಮ ಹಿರಿಯರ ಜೀವನವೇ ಅದರ್ಶ ಎಂದು ಮುಲ್ಕಿ-ಮೂಡಬಿದಿರೆ ಕ್ಷೇತ್ರದ ಶಾಸಕರಾದ ಉಮನಾಥ್ ಕೋಟ್ಯಾನ್ ತಿಳಿಸಿದರು. ಅವರು ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಯುವವಾಹಿನಿ ವೇಣೂರು ಘಟಕದ ಆತಿಥ್ಯದಲ್ಲಿ “ಕೆಸರ್ ಡೊಂಜಿ ದಿನ”ಕೆಸರುಗದ್ದೆ ಕ್ರೀಡಾಕೂಟದ ಕಾರ್ಯಕ್ರಮದಲ್ಲಿ ಆತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಂಘಟನೆಗಳು ಸಮುದಾಯದ ಶಕ್ತಿಯಾಗಬೇಕು :- ಪದ್ಮರಾಜ್ ಆರ್
ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಂದೇಶದಂತೆ ನಾವು ಸಂಘಟನೆಯ ಮೂಲಕ ಬಲಯುತರಾಗಬೇಕು ಅದರೊಂದಿಗೆ , ಪ್ರಸ್ತುತ ಕಾಲ ಘಟ್ಟದಲ್ಲಿ ಸಂಘಟನೆಗಳು ಸಮುದಾಯದ ಶಕ್ತಿಯಾಗಿ ಬೆಳೆಯಬೇಕಾದರೆ ಎಲ್ಲರನ್ನು ಒಟ್ಟುಗೂಡಿಸುವ ಇಂತಹ ಕ್ರೀಡಾ ಕೂಟಗಳ ಅಗತ್ಯವಿದೆ ಕಾರ್ಯಕ್ರಮವು ಅರ್ಥಪೂರ್ಣವಾಗಿ ಮೂಡಿಬಂದಿದೆ ಎಂದು ಶ್ರೀ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ ಅಭಿಪ್ರಾಯ ಪಟ್ಟರು.ಶ್ರೀ ನಾರಾಯಣ ಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷರಾದ ಸತ್ಯಜಿತ್ ಸುರತ್ಕಲ್ ಮಾತನಾಡಿ ನಾರಾಯಣ ಗುರುಗಳ ಸಂದೇಶದಂತೆ ನಾವು ಸಂಘಟಿತರದಾಗ ಸರಕಾರದ ವತಿಯಿಂದ ಸಿಗಬೇಕಾದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿದೆ ಈ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾದ ಅಗತ್ಯವಿದೆ ಎಂದು ತಿಳಿಸಿದರು. ಬೆಳ್ತಂಗಡಿ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜ ಇವರು ಆಗಮಿಸಿ ಕ್ರೀಡಾ ಕೂಟಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸುದರ್ಶನ್, ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಕ್ಷೇತ್ರಾಡಳಿತ ಸಮಿತಿಯ ಗೌರವ ಅಧ್ಯಕ್ಷರಾದ ಜಯಂತ ನಡುಬೈಲ್, ಬೆಸ್ಟ್ ಫೌಂಡೇಶನ್ ಅಧ್ಯಕ್ಷರಾದ ರಕ್ಷಿತ್ ಶಿವರಾಮ್, ಅಧ್ಯಕ್ಷರು ಬಿ. ಜೆ. ಪಿ ಯುವಮೋರ್ಚಾ ಮೂಡಬಿದ್ರೆ ಅಶ್ವಥ್ ಪಣಪಿಲ, ಸುಜಿತಾ ವಿ ಬಂಗೇರ ಅಧ್ಯಕ್ಷರು ಮಹಿಳಾ ಬಿಲ್ಲವ ವೇದಿಕೆ ಬೆಳ್ತಂಗಡಿ, ಸಂಪತ್ ಬಿ ಸುವರ್ಣ ಅಧ್ಯಕ್ಷರು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಬೆಳ್ತಂಗಡಿ, ಧಾರ್ಮಿಕ ಪರಿಷತ್ ಸದಸ್ಯರಾದ ಶೈಲೇಶ್ , ಜಯಂತ್ ಕೋಟ್ಯಾನ್ , ಬೆಳ್ತಂಗಡಿ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರಾದ ಚಿದಾನಂದ ಎಲ್ದಕ್ಕ , ಗುರುದೇವ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಪದ್ಮನಾಭ ಮಾಣಿಂಜ , ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ರಾದ ಉದಯ ಅಮೀನ್ ಮಟ್ಟು, ಪ್ರಧಾನ ಕಾರ್ಯದರ್ಶಿ ಸತೀಶ್ ಕಿಲ್ಪಾಡಿ, ಉಪಾಧ್ಯಕ್ಷ ರುಗಳಾದ ರಾಜೇಶ್ ಬಂಟ್ವಾಳ, ಹರೀಶ್ ಪೂಜಾರಿ ಮಂಗಳೂರು, ಕೋಶಾಧಿಕಾರಿ ಜಗದೀಶ್ಚಂದ್ರ ಡಿ.ಕೆ , ಜಯವಿಕ್ರಂ ಕಲ್ಲಾಪು, ಯುವ ವಕೀಲರಾದ ಮನೋಹರ್ ಕುಮಾರ್, ಹರೀಶ್ ಕುಮಾರ್ ಪೊಕ್ಕಿ ಅಧ್ಯಕ್ಷರು ಗುರು ನಾರಾಯಣಸ್ವಾಮಿ ಸೇವಾ ಸಂಘ ವೇಣೂರು ಮತ್ತಿತರು ಉಪಸ್ಥಿತರಿದ್ದರು. ಸತೀಶ್ ಕಿಲ್ಪಾಡಿ ಸ್ವಾಗತಿಸಿ, ಯೋಗೀಶ್ ಬಿಕ್ರೋಟ್ಟು ವಂದಿಸಿ, ಗಣೇಶ್ ಬಿ ಅಳಿಯೂರ್ ರವರು ಕಾರ್ಯಕ್ರಮ ನಿರೂಪಿಸಿದರು. ಕೆಸರು ಗದ್ದೆ ಕ್ರೀಡಾ ಕೂಟದ ಸಮಗ್ರ ಪ್ರಶಸ್ತಿ ಗೆ -ಮಾಣಿ ಘಟಕವು ಭಾಜನವಾಯಿತು. ಒಟ್ಟು 27 ಘಟಕಗಳ 1500 ಮಂದಿ ಸದಸ್ಯರು ಭಾಗವಹಿಸಿದ್ದರು. ವೇಣೂರು ಘಟಕದ ಉತ್ತಮವಾದ ಆತಿಥ್ಯ ಹಾಗೂ ಅಚ್ಚುಕಟ್ಟಾದ ವ್ಯವಸ್ಥೆಯು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು