ಮಂಗಳೂರು : – ಯುವವಾಹಿನಿ ಸಂಸ್ಥೆಯು , ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯಲ್ಲಿ ನಡೆಯುತ್ತಿರುವ ಜಗದ್ವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಸುಸಂಸರ್ಭದಲ್ಲಿ ಜರಗುತ್ತಿರುವ ನಿರಂತರ “ಅನ್ನ ಪ್ರಸಾದ” ಸೇವೆಗೆ, ಯುವವಾಹಿನಿ ಕೇಂದ್ರ ಸಮಿತಿ ಹಾಗೂ ವಿವಿಧ ಘಟಕಗಳ ಸಹಕಾರದಿಂದ ₹ 3,00,000/- (ಮೂರು ಲಕ್ಷದ) ದೇಣಿಗೆಯನ್ನು ಶಾರದಾ ಮಾತೆಯ ಸನ್ನಿಧಿಯಲ್ಲಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಎಚ್.ಎಸ್ ಸಾಯಿರಾಂ ಇವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ . ಕೆ ಪೂಜಾರಿ, ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ , ಕೋಶಾಧಿಕಾರಿ ಹರೀಶ್ ಪಚ್ಚನಾಡಿ, ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು, ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರುಗಳು, ವಿವಿಧ ಘಟಕದ ಅಧ್ಯಕ್ಷರು , ಪದಾಧಿಕಾರಿಗಳು, ಯುವವಾಹಿನಿಯ ಸದಸ್ಯರು ಹಾಗೂ ದೇವಳದ ಕೋಶಾಧಿಕಾರಿ ಪದ್ಮರಾಜ್.ಆರ್ ಉಪಸ್ಥಿತರಿದ್ದರು.
ಮಂಗಳೂರು ದಸರಾ ಮಹೋತ್ಸವದಲ್ಲಿ ಯುವವಾಹಿನಿ ಸದಸ್ಯರು ಹಲವು ವರ್ಷಗಳಿಂದ ಸ್ವಯಂಸೇವಕರಾಗಿ ಸೇವೆ ಸಲ್ಲಿಸುವುದರ ಜತೆಗೆ ನಿರಂತರವಾಗಿ ಅನ್ನ ಪ್ರಸಾದಕ್ಕೆ ದೇಣಿಗೆ ನೀಡಿ ಕ್ಷೇತ್ರದ ಜತೆ ಕೈಜೋಡಿಸಿರುವುದು ಶ್ಲಾಘನೀಯ ಎಂದು ಕ್ಷೇತ್ರದ ಆಡಳಿತ ಮಂಡಳಿಯ ಸದಸ್ಯರು ಯುವವಾಹಿನಿಗೆ ಕೃತಜ್ಞತೆ ಸಲ್ಲಿಸಿದರು.