ಮಂಗಳೂರು: 26-05-2024 ಮುಂಜಾನೆ ಪ್ರಾರ್ಥನೆಯೊಂದಿಗೆ ನಾರಾಯಣ ಗುರು ಸ್ವಾಮಿಗಳಿಗೆ ನಮಿಸಿ, ಯುವವಾಹಿನಿ(ರಿ.) ಶಕ್ತಿನಗರ ಘಟಕದ ವತಿಯಿಂದ ಒಂದು ದಿನದ ಕಿರು ಪ್ರವಾಸವನ್ನು ಹಮ್ಮಿಕೊಂಡೆದ್ದರು. ಘಟಕದ ಅಧ್ಯಕ್ಷ ಗಣೇಶ್ ಕೆ ಮಹಾಕಾಳಿ, ಉಪಾಧ್ಯಕ್ಷರುಗಳಾದ ತುಕರಾಮ್, ಸುಜಾತಾ ನವೀನ್, ಕಾರ್ಯದರ್ಶಿ ಅಕ್ಷತಾ ಚರಣ್ ಹಾಗೂ ಮಾಜಿ ಅಧ್ಯಕ್ಷರಾದ ಭಾರತಿ ಗಣೇಶ್ ರವರು ಮುಂದಾಳತ್ವ ವಹಿಸಿಕೊಂಡರು.
30 ಜನರೊಂದಿಗೆ ಕ್ಷೇತ್ರ ದರ್ಶನವನ್ನು ಮಾಡಿದೆವು ಮೊದಲಿಗೆ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಹೊರಟು, ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಉಪಹಾರವನ್ನು ಮುಗಿಸಿ ನಂತರ ಕಡಿಯಾಳಿ ದುರ್ಗಾಪರಮೇಶ್ವರಿ ದೇವಸ್ಥಾನ, ಆನೆಗುಡ್ಡೆ ಗಣಪತಿ ದೇವಸ್ಥಾನ, ಅಯ್ಯಪ್ಪ ಶಿವ ಕ್ಷೇತ್ರ ಆನೆಗುಡ್ಡೆ, ಕುಂಭ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ, ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನ ಹಾಗೆ ಕಮಲಶಿಲೆಯಲ್ಲಿ ಅನ್ನಪ್ರಸಾದವನ್ನು ಸ್ವೀಕರಿಸಿ ನಂತರ ಮುರುಡೇಶ್ವರಕ್ಕೆ ಹೋದೆವು.
ಅಲ್ಲಿ ತುಂತುರು ಮಳೆ ಹನಿಯ ಸಿಂಚನ ದೊಂದಿಗೆ ದೇವರ ದರ್ಶನ ಮಾಡಿ ಉಳಿದ ಎಲ್ಲಾ ಶಿವಕ್ಷೇತ್ರದ ದರ್ಶನದೊಂದಿಗೆ ಮಳೆಯ ಹನಿಯು ನಮ್ಮನ್ನು ಎಲ್ಲಾ ದೇವಾಲಯಗಳನ್ನು ನೋಡಿದ ನಮ್ಮನ್ನು ಪುನೀತರನ್ನಾಗಿ ಮಾಡಿತು. ಬಸ್ಸಿನಲ್ಲಿ ಅಂತ್ಯಾಕ್ಷರಿ, ಕ್ವಿಜ್ ಹಾಗೂ ಕಾರ್ಯಕ್ರಮಗಳನ್ನು ಇಟ್ಟು ವಿಜೇತರಿಗೆ ಬಹುಮಾನ ವಿತರಿಸಲಾಯೀತು. ಕಾಲ ಕ್ಷೇಪಗಳನ್ನು ಮಾಡುತ್ತಾ, ತಿಂಡಿ ತಿನಿಸುಗಳನ್ನು ತಿನ್ನುತ್ತಾ ತುಂಬಾ ಆನಂದಮಯವಾಗಿ ದಿನವನ್ನು ಕಳೆದೆವು. ದಾರಿಮಧ್ಯೆ ಹೋಟೆಲಿನಲ್ಲಿ ಊಟೊಪಚಾರವನ್ನು ಮುಗಿಸಿ ಎಲ್ಲರೂ ತಮ್ಮ ತಮ್ಮ ಮನೆಗೆ ಖುಷಿಯಿಂದ ಹೊರಟರು.