ವಿಟ್ಲ : ಯುವವಾಹಿನಿ(ರಿ.) ವಿಟ್ಲ ಘಟಕದ ವತಿಯಿಂದ ದಿನಾಂಕ 8-05-2024 ರಂದು ಒಂದು ದಿನದ ಕಿರು ಪ್ರವಾಸವನ್ನು ಕುಂದಾಪುರದ TINTON ರೆಸಾರ್ಟ್ ಗೆ ಹಮ್ಮಿಕೊಂಡಿದ್ದರು. ಜೀವನದ ಜಂಜಾಟಗಳ ನಡುವೆ ಬಸವಳಿದ ದೇಹಗಳ ಆಯಾಸವನ್ನು ತಣಿಸಲು ಸ್ವಲ್ಪ ರೋಮಾಂಚಕಾರಿಯಾಗಿ ಕಳೆಯಲು ಮುಂಜಾನೆ 5.30ಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಪೂಜೆಯನ್ನು ಸಲ್ಲಿಸಿ ಪ್ರವಾಸವನ್ನು ಪ್ರಾರಂಭಿಸಿದರು. ಬಸ್ಸಿನಲ್ಲಿ ಮೊದಲಿಗೆ ಎಲ್ಲರೂ ಅವರವರ ಪರಿಚಯವನ್ನು ಮಾಡಿಕೊಂಡು ಬಸ್ಸು ಹೊರಟಿತು ಬಡಗಣ ಉಡುಪಿಯತ್ತ ಬೆಳಿಗ್ಗೆ 9.30ಕ್ಕೆ TINTON ತಲುಪಿದರು. ಬೆಳಗ್ಗಿನ ಉಪಹಾರವನ್ನು ಮಾಡಿ ನಂತರ ಈಜು ಕೊಳದಲ್ಲಿ ಸದ್ಯಸರು ಆಟ ಆಡಿದರು. ಜೀವನದ ಹಂತದಲ್ಲಿ ಬಾಲ್ಯದ ಸವಿನೆನಪು ಎಂದೆಂದು ಮರೆಯಲಾಗದು, ಮತ್ತೆ ಎಲ್ಲರೂ ಮಕ್ಕಳಂತೆ ಎರಡು ತಂಡಗಳನ್ನು ಮಾಡಿ ಥ್ರೋ ಬಾಲ್ ಆಟವನ್ನು ನೀರಿನಲ್ಲಿ ಆಡಿದರು, ಮದ್ಯಾಹ್ನದ ಭೋಜನವನ್ನು ಸವಿದು ಸ್ವಲ್ಪ ವಿರಾಮವನ್ನು ಪಡೆದು ನಂತರ ಸಾಹಸಮಯ ಜಲಕ್ರೀಡೆ ಮನುಷ್ಯನ ಮನಸ್ಸಿಗೆ ಮುದ ನೀಡುವುದರಲ್ಲಿ ಸಂಶಯವಿಲ್ಲ.
ಮಧ್ಯಾಹ್ನದ ಬಿರು ಬಿಸಿಲಿನ ನಡುವೆ ರಮಣೀಯ ನದಿ ನೀರಿನಲ್ಲಿ ಬೋಟಿಂಗ್, ನೀರಿನಲ್ಲಿ ಆಟವನ್ನು ಆಡಿದರು. ಸಂಜೆಯ ಚಾ-ತಿಂಡಿಯನ್ನು ಮುಗಿಸಿ, ಮರಳಿ ಬಸ್ಸಿನಲ್ಲಿ ಬಂದು ಕಾಪು ಬೀಚ್ ಗೆ ಹೋಗಿ ಮತ್ತೆ ಅಲ್ಲಿಂದ ವಿಟ್ಲಕ್ಕೆ ತಲುಪಿದರು. ಒಂದು ದಿನ ಮಕ್ಕಳಾಗಿ ಪುನಃ ವಾಸ್ತವಕ್ಕೆ ಮರಳುವಾಗ ಮತ್ತೆ ಅದೇ ಜೀವನದ ಜವಾಬ್ದಾರಿಗಳಿಗೆ ಹೆಜ್ಜೆ ಹಾಕಿ ಬಸ್ಸಿನ ಮೆಟ್ಟಿಲುಗಳನ್ನು ಇಳಿಯುವಾಗ ಮನಸ್ಸಿನಲ್ಲಿ ಇಷ್ಟು ಬೇಗ ಮುಗಿಯಿತೆ? ಎನ್ನುವ ಭಾರವಾದ ಚಿಂತೆಯ ಜೊತೆಗೆ ಸವಿ ನೆನಪುಗಳು ಮಾತ್ರ ಎಂದೆಂದೂ ಸ್ಮರಣೀಯ ಎನ್ನುವಂತೆ ಮನ ಮಿಡಿದದ್ದು ಅಂತು ಸತ್ಯ. ಪ್ರವಾಸದಲ್ಲಿ ವಿಟ್ಲ ಘಟಕದ ಪದಾಧಿಕಾರಿಗಳು, ನಿರ್ದೇಶಕರುಗಳು, ಸದಸ್ಯರು, ಮಾಜಿ ಅಧ್ಯಕ್ಷರುಗಳು ಪಾಲ್ಗೊಂಡು ಒಂದು ದಿನವನ್ನು ಎಲ್ಲರೂ ಜೊತೆಯಾಗಿ ಆನಂದಿಸಿದರು.