ಯುವವಾಹಿನಿ (ರಿ) ಕೊಲ್ಯ ಘಟಕ ವತಿಯಿಂದ ದಿನಾಂಕ 19.10.19 ರಂದು ಶನಿವಾರ ಸಂಜೆ 7.30 ಕ್ಕೆ ಕಾರ್ಯಕ್ರಮ ನಿರೂಪಣಾ ನಿಯಮಗಳ ಬಗ್ಗೆ ತರಬೇತಿ ಕಾರ್ಯಾಗಾರವನ್ನು ಅಧ್ಯಕ್ಷರಾದ ಆನಂದ ಮಲಯಾಳ ಕೋಡಿ ಅವರ ನಿವಾಸ (ಒಲವು) ದಲ್ಲಿ ಆಯೋಜಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಯುವವಾಹಿನಿಯ ಸ್ವರ ಮಾಣಿಕ್ಯ ಶ್ರೀ ಯುತ. ದಿನೇಶ್ ಸುವರ್ಣ ರಾಯಿ ಅವರನ್ನು ನಮ್ಮ ಘಟಕದ ಅಧ್ಯಕ್ಷರು ಹೂ ಕೊಟ್ಟು ಸ್ವಾಗತಿಸಿದರು. ಹಾಗೂ ತರಬೇತಿಗೆ ಬಂದ ಸರ್ವರನ್ನು ಪ್ರೀತಿ ಪೂರ್ವಕವಾಗಿ ಸ್ವಾಗತಿಸಿದರು. ಶ್ರೀ ಯುತ. ದಿನೇಶ್ ಸುವರ್ಣ ರಾಯಿ ಯವರು ಕಾರ್ಯಾಗಾರವನ್ನು ಸವಿವರವಾಗಿ, ಅಚ್ಚುಕಟ್ಟಾಗಿ ನಡೆಸಿ ಕೊಟ್ಟರು ಹಾಗೂ ಕಾರ್ಯಕ್ರಮ ನಿರೂಪಣೆಯ ಒಟ್ಟು 19 ನಿಯಮಾವಳಿಗಳನ್ನು ತರಬೇತಿಯಲ್ಲಿ ಹೇಳಿದರು.
ಕಾರ್ಯಕ್ರಮದ ಕೊನೆಗೆ ತರಬೇತಿಯ ಅನಿಸಿಕೆಯನ್ನು ಘಟಕದ ಸದಸ್ಯರಾದ ರಶ್ಮಿತಾ, ಜೀವನ್ ಕೊಲ್ಯ ಲತೀಶ್ ಸಂಕೊಲಿಗೆ, ಮೋಹನ್ ಮಾಡೂರು, ಹೇಳಿದರು. ಸ್ಥಾಪಕ ಅಧ್ಯಕ್ಷ ರಾದ ಶ್ರೀ.ಸುರೇಶ್.ಬಿ ಯವರು ದಿನೇಶ್ ಸುವರ್ಣ ರಾಯಿ ಯವರಿಗೆ ಶಾಲು ಹೊದಿಸಿ, ಹೂ ಹಾಗೂ ಸ್ಮರಣಿಕೆ ಕೊಟ್ಟು ಗೌರವಿಸಿದರು.
ಕಾರ್ಯದರ್ಶಿ ಆನಂದ ಅಮೀನ್ ಧನ್ಯವಾದ ನೀಡುದರೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಂಡಿತು.