ಪುತ್ತೂರಿನ ಶ್ರೀ ಸಂತೋಷ್ ಹಾಗೂ ಶ್ರೀಮತಿ ದಿವ್ಯಾ ಎಸ್ ಇವರ ಸುಪುತ್ರಿ ಕು. ದಿಶಾ ಎಸ್ ಈ ಬಾರಿ SSLCಯಲ್ಲಿ ಅತ್ಯುನ್ನತ ಶ್ರೇಣಿಯ ಸಾಧನೆಯನ್ನು ಮಾಡಿ ಎಲ್ಲರ ಗಮನ ಸೆಳೆದಿದ್ದಾಳೆ. ಪುತ್ತೂರಿನ ಸಂತ ವಿಕ್ಟರ್‍ಸ್ ಹೈಸ್ಕುಲಿನ ವಿದ್ಯಾರ್ಥಿನಿಯಾದ ಈಕೆ ಕನ್ನಡ, ಗಣಿತ ಹಾಗೂ ವಿಜ್ಞಾನ ವಿಷಯಗಳಲ್ಲಿ ಶೇಕಡಾ 100 ಅಂಕಗಳಿಸಿದ್ದು ಒಟ್ಟಿನಲ್ಲಿ 625 ಕ್ಕೆ 616 ಅಂಕಗಳಿಸಿ(98.56%) ಎಲ್ಲರನ್ನೂ ಚಕಿತಗೊಳಿಸಿದ್ದಾರೆ.
ಶಾಲೆಯ ಅಧ್ಯಾಪಕರು, ಹೆತ್ತವರು ಬಿಲ್ಲವ ಸಮಾಜ ಮತ್ತು ಜಿಲ್ಲೆಗೆ ಕೀರ್ತಿ ತಂದ ಇವರ ಪರಿಶ್ರಮವನ್ನು ಮೆಚ್ಚಲೇಬೇಕು. ಪ್ರಾಯ ಸಹಜವಾದ ಯಾವುದೇ ಮನರಂಜನೆಯತ್ತ ವಾಲದೆ ಕರ್ಮ ತತ್ವರತೆಯಿಂದ, ತನ್ನ ಏಕಾಗ್ರತೆಯಿಂದ ಇಂಥ ಶ್ರೇಷ್ಠ ಸಾಧನೆ ಅಭಿನಂದನೀಯ. ಸಮಾಜವು ವಿದ್ಯಾ ಕ್ಷೇತ್ರದಲ್ಲಿ ಇತ್ತೀಚೆಗೆ ಅಪರಿಮಿತ ಸಾಧನೆಯನ್ನು ಮಾಡುತ್ತಿದ್ದು ದಿಶಾಳಂತಹ ಧ್ರುವತಾರೆಯರು ಇನ್ನಷ್ಟು ಮೂಡಿ ಬರಲಿ ಎಂಬುದೇ ನಮ್ಮೆಲ್ಲರ ಆಶಯ. ಯುವವಾಹಿನಿಯು ಕು| ದಿಶಾಳಿಗೆ ’ಅಕ್ಷರ ಪುರಸ್ಕಾರ’ ನೀಡಿ ಅಭಿನಂದಿಸುತ್ತಿದೆ.