ಮಂಗಳೂರು: ಯುವವಾಹಿನಿ(ರಿ.) ಮಂಗಳೂರು ಮಹಿಳಾ ಘಟಕ ಮತ್ತು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಕರ್ನಾಟಕ ಸರ್ಕಾರ ಬೆಂಗಳೂರು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಬೆಂಗಳೂರು ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಧಾರವಾಡ ಸಹಯೋಗದಲ್ಲಿ 10 ದಿನಗಳ ಉದ್ಯಮಶೀಲತಾ ಅಭಿವೃದ್ಧಿ ಉಚಿತ ತರಬೇತಿ ಕಾರ್ಯಾಗಾರವು 13/2/2024 ರಿಂದ 22/2/2024 ರವರೆಗೆ ಜರುಗಿತು.
ಉದ್ಯಮಶೀಲತಾ ತರಬೇತಿಯ ಕಾರ್ಯಾಗಾರವನ್ನು ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಪ್ರದೀಪ್ ಡಿ’ಸೋಜ ಉದ್ಘಾಟಿಸಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ ಮಂಗಳೂರು ಮಹಿಳಾ ಘಟಕ ಅಧ್ಯಕ್ಷರು ಶುಭ ರಾಜೇಂದ್ರ ವಹಿಸಿದ್ದರು.
ವೇದಿಕೆಯಲ್ಲಿ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷರು ಶುಭಾ ರಾಜೇಂದ್ರ ಹಾಗೂ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರು ರವಿಕಲ ಉಪಸ್ಥಿತರಿದ್ದರು. ಸ್ವ ಅನುಭವದ ಜೊತೆಗೆ ಸ್ವದ್ಯೋಗಿಗಳಾದರೆ ಆಗುವ ಪ್ರಯೋಜನಗಳ ಬಗ್ಗೆ ಅಧ್ಯಕ್ಷರು ಹರೀಶ್ ಪೂಜಾರಿ ತಿಳಿಸಿದರು.
ಹತ್ತು ದಿನಗಳ ಅವಧಿಯಲ್ಲಿ ನಡೆದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಶಾಂತ್ ಶೆಟ್ಟಿ, ಎಸ್.ಎಮ್.ಪೈ, DGM ನಿವೃತ್ತ ಬ್ಯಾಂಕ್ ಅಧಿಕಾರಿ ಕೆನರಾ ಬ್ಯಾಂಕ್, ಹರಿಣಿ ಜೆ ರಾವ್ ಅಧ್ಯಕ್ಷರು STRIVE ಹಾಗೂ ಮಾಜಿ ಅಧ್ಯಕ್ಷರು ಜಿಲ್ಲಾ ಸಣ್ಣ ಕೈಗಾರಿಕಾ ಕೇಂದ್ರ ಯೆಯ್ಯಾಡಿ ಮಂಗಳೂರು, ರಾಧಾಕೃಷ್ಣ ಯಶಸ್ವಿ ಉದ್ಯಮಿ ನಿತ್ಯ ಫುಡ್ ಪ್ರಾಡಕ್ಟ್, ಸತೀಶ್ ಅತ್ತಾವರ CRM ಸಿಂಡಿಕೇಟ್ ಬ್ಯಾಂಕ್ ಮಂಗಳೂರು, ಸತೀಶ್ ಮಾಬೆನ್ DRP PMFME, ನಿತೇಶ್ Tax master, ಅರವಿಂದ್ ಬಾಲೇರಿ, Joint Director, CEDOK ಹಾಗೂ ಪ್ರದೀಪ್ ಡಿಸೋಜ, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಮಂಗಳೂರು, ಮೋಹನಾಂಗಯ್ಯ ಸ್ವಾಮಿ ಅಧ್ಯಕ್ಷರು SC/ST ಸೇವಾ ಕೇಂದ್ರ ಮತ್ತು ಶ್ರವಣ್ Prop ದಿ ಕಾರು ಪಿಕ್ಸ್ರ್ಸ್ ಕುಳಾಯಿ ಮಂಗಳೂರು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಅತಿಥಿಗಳಾಗಿ ಸಿಡಾಕ್ ಜಂಟಿ ನಿರ್ದೇಶಕರು ಅರವಿಂದ್ ಡಿ.ಬಲೇರಿ, ನಿವೃತ್ತ ಶಿಕ್ಷಕರು ರಮಣಿ ಉಪಸ್ಥಿತರಿದ್ದರು. ಹತ್ತು ದಿನಗಳ ನಿರಂತರ ತರಬೇತಿಗೆ ಸಹಕರಿಸಿದ ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಮಾಜಿ ಅಧ್ಯಕ್ಷರು ರೇಖಾ ಗೋಪಾಲ್ ಅಧ್ಯಕ್ಷರು ಶುಭ ರಾಜೇಂದ್ರ ಸರ್ವರ ಪರವಾಗಿ ಸನ್ಮಾನಿಸಲಾಯಿತು.
ಉದ್ಯಮಶೀಲತೆಯ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಸಲಾಯಿತು. ಯುವವಾಹಿನಿಯ ದಶದಿನದ ಉದ್ಯಮಶೀಲತಾ ತರಬೇತಿ ಕಾರ್ಯಕ್ರಮವು ಅತ್ಯುತ್ತಮ ಯಶಸ್ಸಿನೊಂದಿಗೆ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ಸಿಡೋಕ್ ಕೌನ್ಸಿಲರ್ ಟ್ರೈನರ್ ಪ್ರವಿಷ್ಯ ಕುಕ್ಯಾನ್ ಕಾರ್ಯಕ್ರಮ ನಿರೂಪಿಸಿದರು. ರವಿಕಲಾ ವಂದಿಸಿದರು. ಶುಭ ರಾಜೇಂದ್ರ ಧನ್ಯವಾದಗೈದರು.