ದಿನಾಂಕ 03.12.2017 ರಂದು ಯುವವಾಹಿನಿ (ರಿ) ಹಳೆಯಂಗಡಿ ಘಟಕದ ಮಾಸಿಕ ಸಭೆಯು, ಬಿಲ್ಲವ ಸಮಾಜ ಸೇವಾ ಸಂಘದ ಸಭಾಗೃಹದಲ್ಲಿ ಏರ್ಪಡಿಸಲಾಯಿತು. ಸಭೆಯಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ, ಕಾರ್ಯದರ್ಶಿಯಾದ ರಾಜೇಶ್ ಸುವರ್ಣ, ಸಲಹೆಗಾರರಾದ ಲಕ್ಷ್ಮಣ ಸಾಲ್ಯಾನ್ ಹಾಗೂ ಸುನೀಲ್ ಕೆ. ಅಂಚನ್ , ನವೀನ್ ಚಂದ್ರರವರು ಉಪಸ್ಥಿತರಿದ್ದರು. ಕೇಂದ್ರ ಸಮಿತಿಯ ಅಧ್ಯಕ್ಷರು ಘಟಕಕ್ಕೆ ಸಲಹೆ ನೀಡಿದರು. ಸಭೆಯಲ್ಲಿ ಬಿಲ್ಲವ ಸಂಘದ ಗೌರವಾಧ್ಯಕ್ಷರು ಗಣೇಶ್ ಬಂಗೇರ, ಯುವವಾಹಿನಿ ನಿಕಟ ಪೂರ್ವ ಅಧ್ಯಕ್ಷರಾದ ದೀಪಕ್ ನಾನಿಲ್ ಉಪಸ್ಥಿತರಿದ್ದರು.
ಅಂದಿನ ಸಭೆಯಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮ ನಡೆಯಿತು. ವಿನಯ ಸಾಲ್ಯಾನ್Vestige Food Supplimentory (ಪೂರಕ ಆಹಾರ) Star Director ಆರೋಗ್ಯ ಪೂರಕ ಆಹಾರದ ಅಗತ್ಯ ಬಗ್ಗೆ ಮಾಹಿತಿ ನೀಡಿದರು.
ಮನುಷ್ಯನ ದೇಹಕ್ಕೆ ಬರುವ ರೋಗಗಳನ್ನು ತಡೆಗಟ್ಟುವ ಪೂರಕ ಆಹಾರಗಳು ಉದಾ:-ಕೊಲೆಸ್ಟ್ರಾಲ್, ಶುಗರ್, ಮಂಡಿ ನೋವು ಸಮಸ್ಯೆ, ನರದ ಸಮಸ್ಯೆ, ಚರ್ಮ ಅಲರ್ಜಿ, ಅಸ್ತಮ ಸಮಸ್ಯೆ, ಹೃದಯದ ಸಮಸ್ಯೆ, ಹೆಂಗಸರಲ್ಲಿ ಕಾಣಬರುವ ಗರ್ಭಕೋಶದ ಸಮಸ್ಯೆ, ಗ್ಯಾಸ್ ಟ್ರಬಲ್‌ನಂತಹ ಖಾಯಿಲೆಗಳು ಬರದ ಹಾಗೆ ತಡೆಗಟ್ಟುವ ಪೂರಕ ಪೌಷ್ಟಿಕ ಆಹಾರಗಳು ಇದರ ಬಗ್ಗೆ ಮಾಹಿತಿ ನೀಡಿದರು, ಹಾಗೂ ಜೀವನದಲ್ಲಿ ತನ್ನ ಕನಸನ್ನು ನನಸಾಗಿಸುವಂತಹ ಒಂದು ಸಂಸ್ಥೆ, ಇದರಲ್ಲಿ ತಾನೂ ಒಂದು ಉದ್ಯೋಗವನ್ನು ಸೃಷ್ಟಿಸಿಕೊಂಡು (ಒ.ಐ.ಒ ಬಿಸಿನೆಸ್ಸ್) ತನ್ನ ಆರ್ಥಿಕ ಗುಣಮಟ್ಟ ಹಾಗೂ ಉತ್ತಮವಾದ ಜೀವನ ಶೈಲಿಯನ್ನು ಮಾಡಿಕೊಳ್ಳುವಂತಹ Vestige ಸಂಸ್ಥೆಯ ಉದ್ದೇಶ ಎಂದು ತಿಳಿಸಿಕೊಟ್ಟರು.
ಮಾಸಿಕ ಸಭೆಯಲ್ಲಿ ಯುವವಾಹಿನಿ (ರಿ) ಹಳೆಯಂಗಡಿ ಘಟಕದ ಅಧ್ಯಕ್ಷರಾದ ಶರತ್ ಕುಮಾರ್ ಸ್ವಾಗತಿಸಿದರು. ಹಾಗೂ ಕೋಶಾಧಿಕಾರಿ ಹರೀಶ್ ಅಮೀನ್‌ರವರು ಧನ್ಯವಾದ ಅರ್ಪಿಸಿದರು.
Nice program…..