ಯುವವಾಹಿನಿ (ರಿ) ಬಜ್ಪೆಘಟಕದ ವತಿಯಿಂದ ಆಟಿದ ನೆಂಪು ಮತ್ತು ಪ್ರತಿಭಾ ಪುರಸ್ಕಾರ

ಆಟಿದ ನೆಂಪು ಯುವ ಜನಾಂಗದಲ್ಲಿ ಜಾಗ್ರತಿ ಮೂಡಿಸಿದೆ : ಪ್ರಭಾಕರ ನೀರುಮಾರ್ಗ

.

ಬಜ್ಪೆ: ವ್ಯವಸಾಯ ಮತ್ತು ಕೃಷಿಯೊಂದಿಗೆ ಆಟಿ ತಿಂಗಳಿಗೆ ಅತೀ ಹತ್ತಿರದ ಸಂಭಂದವಿದೆ. ಆಹಾರ ಅನುಷ್ಠಾನಗಳಲ್ಲಿ ಪ್ರತಿ ತಿಂಗಳಿಗೆ ಅದರದ್ದೇ ಆದ ಮಹತ್ವವಿದೆ. ಅದರಲ್ಲೂ ಪ್ರಕೃತಿ, ಭೂಮಿ ಮತ್ತು ನಮ್ಮ ಈ ಜೀವ, ದೇಹದ ನಡುವೆ ಅತೀಯಾದ ಸಂಭಂದವಿರುವುದು ಆಟಿ ತಿಂಗಳಲ್ಲಿ. ಈ ತಿಂಗಳಲ್ಲಿ ನಾವೇನನ್ನ ಆಹಾರ ಪಥ್ಯಗಳಾಗಿ ಸ್ವೀಕರಿಸುತ್ತೇವೆ, ಪ್ರಕೃತಿ ಭೂಮಿಗೂ ಅದನ್ನು ಉಣಬಡಿಸಿ ಸಮ ತೋಲನವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ. ಈ ಹಿಂದಿನ ದಿನ ಮಾನಗಳಲ್ಲಿ ಅವಶ್ಯವಾಗಿ ಆಟಿ ತಿಂಗಳಲ್ಲಿ ಸೇವಿಸಬೇಕಾದ ಆಹಾರವು ಔಷಧವಾಗಿ ಇಡೀ ವರುಷ ನಮ್ಮ ದೇಹ ಆರೋಗ್ಯಯುತವಾಗಿರುವಂತೆ ಕಾಪಾಡಿಕೊಳ್ಳಲಾಗುತಿತ್ತು. ಆದರೆ ಆಧುನಿಕ ಬದುಕಿನಲ್ಲಿ ಯಾಂತ್ರಿಕ ಜೀವನದಲ್ಲಿ ಪರಿಸ್ಥಿತಿಗಳು ಬದಲಾವಣೆಗೊಂಡು ಇಂದು ಔಷಧಗಳೇ ಆಹಾರವಾಗುವಂತಹ ಸ್ಥಿತಿಗೆ ನಾವು ತಲುಪಿದ್ದೇವೆ. ಇಂದಿನ ಯುವ ಜನಾಂಗ ಮತ್ತೊಮ್ಮೆ ಹಿಂದಿನ ದಿನಮಾನಗಳನ್ನು, ಆಚರಣೆಗಳನ್ನು, ಆಹಾರ ಪದ್ಧತಿಗಳನ್ನು ಅನುಷ್ಠಾನ ರೂಪದಲ್ಲಿ, ಆಟಿ ತಿಂಗಳ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಜಾಗೃತಿ ಅರಿವನ್ನು ಮೂಡಿಸಬೇಕಾಗಿದೆ. ಇಂದು ಗೆಣಸಿನ ಹೋಳುಗಳ ಮುಡಿಯನ್ನು ಅರಳಿಸುವುದರ ಮೂಲಕ ಹಿಂದಿನ ನೆನಪು ಮತ್ತು ಆಟಿಯನ್ನು ಅರ್ಥಪೂರ್ಣವಾಗಿ ಆಚರಿಸಿ ಬಹಳ ಸಂಭ್ರಮದಿಂದ ಈ ಕಾರ್ಯಕ್ರಮವನ್ನು ಉದ್ಘಾಟಿಸಿದ್ದೇನೆಂದು ಶ್ರೀ ಪ್ರಭಾಕರ ನೀರುಮಾರ್ಗ ಇವರು 12.08.2018ರಂದು ಬಜ್ಪೆ ಯುವವಾಹಿನಿ ಘಟಕ ಆಚರಿಸಿದ ಆಟಿದ ನೆಂಪು ಕಾರ್ಯಕ್ರಮದಲ್ಲಿ ನುಡಿದರು.

ಇಂದಿನ ಸ್ವಚ್ಚ ಭಾರತದ ಕಲ್ಪನೆ ನಮ್ಮ ಹಿರಿಯರಲ್ಲಿ ಆಟಿ ಹೊರಗೆ ಹಾಕುವ ಕಾರಣದಿಂದ ಈ ಹಿಂದೆಯೇ ಅದ್ಬುತವಾಗಿ ಮೇಳೈಸಿತ್ತು. ತುಳುವರಾದ ನಾವು ಆಟಿಗೆ ವಿಶೇಷವಾದ ಮಹತ್ವವನ್ನು ನೀಡಿ ಆರೋಗ್ಯಕ್ಕೆ ಒತ್ತು ಕೊಡಬೇಕಾಗಿದೆ. ಇಂದು ತುಳುವಿನ ಮೇಲೆಯೂ ಆಟಿ ಅದ್ಬುತವಾದ ಪರಿಣಾಮ ಬೀರಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿ ಉಪಾಧ್ಯಕ್ಷರಾದ ಡಾ. ರಾಜರಾಮ್ ಇವರು ಮುಖ್ಯ ಅತಿಥಿಯಾಗಿ ಆಗಮಿಸಿ ಹೇಳಿದರು.

ಇಂದು ತುಳು ಮಾತಾಡುವವರೆಲ್ಲಾ ದೊಡ್ಡ ದೊಡ್ಡ ಸ್ಟಾರ್ ಗಳಾಗುತ್ತಿದ್ದಾರೆ. ಅವರೆನ್ನೆಲ್ಲಾ ಆಟಿ ತಿಂಗಳಲ್ಲಿ ಗುರುತಿಸಲಾಗುತ್ತಿದೆ. ಆಟಿ ತಿಂಗಳ ಇಂತಹ ಕಾರ್ಯಕ್ರಮಗಳು ಸಮಾಜದ ಸ್ವಾಸ್ಯಕ್ಕೆ ವಿಶೇಷವಾದ ಒತ್ತನ್ನು ನೀಡುತ್ತಿರುವುದು ಶ್ಲಾಘನೀಯವೆಂದು ಉದಯೋನ್ಮುಖ ಭರವಸೆಯ ತುಳು ಚಲನಚಿತ್ರ ನಟ ಶ್ರೀ ಸುನಿಲ್ ನೆಲ್ಲಿಗುಡ್ಡೆ ಇವರು ಮುಖ್ಯ ಅಭ್ಯಾಗತರ ನೆಲೆಯಲ್ಲಿ ಹೇಳಿದರು.

ಯುವವಾಹಿನಿ ಬಜ್ಪೆ ಘಟಕ ನಡೆಸಿಕೊಂಡು ಬರುತ್ತಿರುವ ರಚನಾತ್ಮಕ, ಪ್ರೇರಕದಾಯಕ ಚಟುವಟಿಕೆಗಳು ಆಟಿದ ನೆಂಪು ಕಾರ್ಯಕ್ರಮದಲ್ಲೂ ಕಂಡುಬರುತ್ತಿದೆ. ಪ್ರತಿಭಾ ಪುರಸ್ಕಾರ, ಎಲೆ ಮರ ಕಾಯಿಗಳನ್ನು ಗುರುತಿಸುವುದು, ವಿದ್ಯಾರ್ಥಿ ವೇತನ ಇಂತಹ ಕಾರ್ಯಕ್ರಮಗಳಿಗೆ ಇಲ್ಲಿನ ಬಿಲ್ಲವ ಸಂಘ ಸದಾ ಬೆಂಬಲ ನೀಡುತ್ತದೆ ಎಂದು ಇಲ್ಲಿನ ಬಿಲ್ಲವ ಸಂಘದ ಜೊತೆ ಕಾರ್ಯದರ್ಶಿ ಶ್ರೀ ಶರತ್ ಸುವರ್ಣ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ನುಡಿದರು.

ಬಜ್ಪೆ ಯುವವಾಹಿನಿ ಘಟಕವು ಸಮಾಜಮುಖಿ ಕಾರ್ಯ ಚಟುವಟಿಕೆಗಳಲ್ಲಿ ಹೆಚ್ಚಾಗಿ ತನ್ನನ್ನು ತೊಡಗಿಸಿಕೊಂಡಿರುವುದು ಮಾತ್ರವಲ್ಲದೆ ಆಟಿದ ನೆಂಪು ಕಾರ್ಯಕ್ರಮಗಳನ್ನು ಸಂಘಟಿಸುವುದರ ಮೂಲಕ ಸಮಾಜದಲ್ಲಿ ಜಾಗೃತಿ ಮತ್ತು ಒಗಟ್ಟಿಗೆ ಶ್ರಮಿಸುತ್ತಿರುವುದು ಸಂತೋಷದಾಯಕ. ಈ ಘಟಕದ ಸಲಹೆಗಾರನಾಗಿರುವುದು ನನಗೆ ಹೆಮ್ಮೆಯೆನಿಸುತ್ತದೆ ಎಂದು ಕೇಂದ್ರ ಸಮತಿಯಿಂದ ನಿಯುಕ್ತಿಗೊಂಡಿರುವ ಬಜ್ಪೆ ಘಟಕದ ಸಲಹೆಗಾರರಾಗಿರುವ ಶ್ರೀ ರವಿಚಂದ್ರ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಹೇಳಿದರು.

ನನ್ನಿಂದಾಗಿ ಯುವವಾಹಿನಿ ಅನ್ನುವುದಕ್ಕಿಂತಲೂ ಯುವವಾಹಿನಿಯಿಂದಾಗಿ ನಾನು ಗುರುತಿಸಲ್ಪಡುವಂತಾಯಿತು. ನನ್ನ ಹಿರಿತನದಲ್ಲಿ ಇಡೀ ವರುಷ ಈ ಹಿಂದಿನವರೆಗೆ ನೀಡಿದಂತೆ ವಿಶೇಷ ಬೆಂಬಲ ಬಜ್ಪೆ ಘಟಕವೂ ನೀಡಿದ ಕಾರಣದಿಂದ ಕೇಂದ್ರದಲ್ಲಿ ಕಾರ್ಯಕ್ರಮವನ್ನು ಸುಸೂತ್ರವಾಗಿ ನಡೆಸಲು ನನಗೆ ಸುಲಭವಾಯಿತೆಂದು ಯುವವಾಹಿನಿ ಕೇಂದ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಚರಾದ ಶ್ರೀ ಯಶವಂತ ಪೂಜಾರಿಯವರು ತನ್ನ ಮನದಾಳದ ಮಾತುಗಳನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬಜ್ಪೆ ಮಾತೃ ಘಟಕದ ಮೂಲದಿಂದ ಬಂದಂತಹ ಮಂಗಳೂರು ಘಟಕದವರೂ ಆಗಿರುವ ಶ್ರೀ ಯಶವಂತ ಪೂಜಾರಿ ಇವರನ್ನು ಈ ಸಂದರ್ಭದಲ್ಲಿ ಬಜ್ಪೆ ಘಟಕದ ವತಿಯಿಂದ ಗೌರವಿಸಲಾಯಿತು.

ಆಟಿದ ನೆಂಪು ಕಾರ್ಯಕ್ರಮದ ಜೊತೆ ಜೊತೆಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನವನ್ನು ಪ್ರತಿಭಾವಂತ ಮತ್ತು ಬಡ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಹಿಂದು ರುದ್ರಭೂಮಿಯಲ್ಲಿ ಮುಕ್ತಿ ಕೊಡುವ ಸೇವೆಯನ್ನು ಮಾಡುತ್ತಿರುವ ಹಿರಿಯರಾದ ಶ್ರೀ ಮುತ್ತ ಇವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಯುವವಾಹಿನಿ ಬಜ್ಪೆ ಘಟಕದ ಸಕ್ರೀಯ ಸದಸ್ಯರೂ ಹಾಗೂ ಬಿ.ಎಸ್.ಎನ್.ಎಲ್.ನಲ್ಲಿ ಸುಧೀರ್ಘ 39 ವರುಷ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಶ್ರೀ ಆನಂದ್ ಇವರನ್ನು ಇದೇ ಸಂದರ್ಭದಲ್ಲಿ ಹಾರ್ದಿಕವಾಗಿ ಅಭಿನಂದಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸದರಿ ಘಟಕದ ಅಧ್ಯಕ್ಷರಾದ ಶ್ರೀ ದೇವರಾಜ್ ಅಮೀನ್ ಇವರು ಕಾರ್ಯಕ್ರಮದ ಉದ್ದೇಶವನ್ನು ಪಡಿಮೂಡಿಸಿ, ಸಹಕರಿಸಿದ ಎಲ್ಲರಿಗೆ ಅಭಿವಂದನೆಯನ್ನು ವ್ಯಕ್ತಪಡಿಸಿ, ಯುವವಾಹಿನಿಯ ಸಮಾಮುಖಿ ಕಾರ್ಯಗಳು ಜನರಿಗೆ ಪ್ರಯೋಜನಕಾರಿಯಾಗಿ ಒಟ್ಟು ಸಮ್ರದ್ಧತೆಗೆ ಹೇತುವಾಗಿದೆಯೆಂದು ತನ್ನ ಅಧ್ಯಕ್ಷ ಭಾಷಣದಲ್ಲಿ ವಿಸ್ತಾರಗೊಳಿಸಿದರು.

ಕಾರ್ಯಕ್ರಮದ ಸಂಚಾಲಕರಾದ ಶ್ರೀ ಪ್ರದೀಪ್ ಅಮೀನ್ ಇವರ ಮುತುವಜರ್ಜಿಯಲ್ಲಿ ವೇದಿಕೆಗೆ ಗ್ರಾಮ್ಯ ಸ್ಪರ್ಶವನ್ನು ನೀಡಲಾಯಿತು. ಮತ್ತು ಕಾರ್ಯಕ್ರಮವನ್ನು ಅಥಪೂರ್ಣವೆನಿಸುವಂತೆ ಮಾಡಲಾಗಿತ್ತು. ವೇದಿಕೆಯಲ್ಲಿ ಶ್ರೀಯುತರೂ ಉಪಸ್ಥಿತರಿದ್ದರು.

ಶ್ರೀಮತಿ ಉಷಾ ಸುವರ್ಣ ಹಾಗೂ ಕುಮಾರಿ ದೀಪಿಕ ಇವರುಗಳು ಪ್ರಾರ್ಥಿಸಿದರು. ಶ್ರೀಮತಿ ಕನಕಾ ಮೋಹನ್ ಸ್ವಾಗತಿಸಿದರು. ಶ್ರೀಮತಿ ಸಂಧ್ಯಾ ಕುಳಾಯಿ ಮತ್ತು ಶ್ರೀಮತಿ ಪೂಜಾ ಕಿರಣ್ ಸನ್ಮಾನ ಪತ್ರ ವಾಚಿಸಿದರು. ಶ್ರೀ ಚಂದ್ರಶೇಖರ್ ಪೂಜಾರಿ ವಿದ್ಯಾರ್ಥಿ ವೇತನದ ಫಲಾನುಭವಿಗಳ ಪಟ್ಟಿ ವಾಚಿಸಿದರು. ಕಾರ್ಯದರ್ಶಿ ಶ್ರೀಮತಿ ಸುನಿತಾ ವಂದಿಸಿದರು. ಶ್ರೀಮತಿ ಉಷಾ ಸುವರ್ಣ ರಸಪ್ರಶ್ನೆಯನ್ನು ನಡೆಸಿಕೊಟ್ಟರು. ಶ್ರೀಮತಿ ನಿರ್ಮಲಾ ಗೋಪಾಲ್ ಕಾರ್ಯಕ್ರಮ ನಿರ್ವಹಿಸಿದರು.

ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಘಟಕದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಶ್ರೀ ಕೃಷ್ಣ ಪೂಜಾರಿ ಈ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಮಧ್ಯಾಹ್ನದ ಭೋಜನದಲ್ಲಿ ತರಹೇವಾರಿ ಆಟಿ ತಿಂಡಿ ತಿನಿಸುಗಳನ್ನು ಘಟಕದ ಸದಸ್ಯರು ವ್ಯವಸ್ಥೆಗೊಳಿಸಿದರು. ಸಹ ಘಟಕಗಳ ಹಲವಾರು ಮಂದಿ ಅಧ್ಯಕ್ಷರುಗಳು,  ಪದಾಧಿಕಾರಿಗಳು, ಸದಸ್ಯರುಗಳು, ಕೇಂದ್ರ ಸಮತಿಯ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

One thought on “ಆಟಿದ ನೆಂಪು ಯುವ ಜನಾಂಗದಲ್ಲಿ ಜಾಗ್ರತಿ ಮೂಡಿಸಿದೆ : ಪ್ರಭಾಕರ ನೀರುಮಾರ್ಗ

  1. ತುಳುನಾಡಿನ ಸಂಸ್ಕತಿ, ಆಚಾರ ವಿಚಾರಗಳು ಜನಮಾನಸದಲ್ಲಿ
    ಶಾಶ್ವತವಾಗಿ ಉಳಿಯಲಿ..ಸೂಪರ್ ಕಾರ್ಯಕ್ರಮ..

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!