ಬೆಳ್ತಂಗಡಿ: ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ ವತಿಯಿಂದ ಆಟಿದ ಕಮ್ಮೆನ – 2024 ದಿನಾಂಕ 10-08-2024 ನೇ ಶನಿವಾರ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಮೇಲಂತಸ್ತಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರು ಸದಾಶಿವ ಊರು ವಹಿಸಿದ್ದರು.
ವಾಸ್ತವಿಕವಾಗಿ ಮಾತನಾಡಿದ ಘಟಕದ ಮಾಜಿ ಅಧ್ಯಕ್ಷರು ಎಂ.ಕೆ ಪ್ರಸಾದ್ ಆಟಿಯ ವಿಶೇಷತೆ ಬಗ್ಗೆ ಹಿಂದಿನ ಕಾಲದ ಆಟಿಯ ತಿಂಗಳಿನ ಕಷ್ಟಗಳ ಬಗ್ಗೆ ಈಗಿನ ಯುವ ಪೀಳಿಗೆಗೆ ತಿಳಿ ಹೇಳುವುದು ಹಾಗೂ ಅಳಿವಿನಂಚಿನಲ್ಲಿರುವ ಸಂಸ್ಕೃತಿಯನ್ನು ಉಳಿಸುವುದು ಆದ್ಯ ಕರ್ತವ್ಯವಾಗಿದೆ ಎಂದು ಉಪನ್ಯಾಸನಿತ್ತರು.
ಪದಾಧಿಕಾರಿಗಳು ಮತ್ತು ಸದಸ್ಯರು ಆಟಿಯ ತಿಂಗಳಿನ ವಿಶೇಷತೆಯನ್ನು ಅನಿಸಿಕೆ ವ್ಯಕ್ತಪಡಿಸಿದರು ಹಾಗೂ ಯುವವಾಹಿನಿ ಸದಸ್ಯರು ಸೇರಿ ಸುಮಾರು 20 ಬಗೆಯ ವಿವಿಧ ತಿಂಡಿ ತಿನಸುಗಳನ್ನು ಮನೆಯಲ್ಲಿ ತಯಾರಿಸಿ ತಂದು ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಸದಸ್ಯರಿಗೆ ಚೆನ್ನಮನೆ ಆಟಗಳು ಮತ್ತು ಮನೋರಂಜನೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಸಮೀಕ್ಷ ಶಿರ್ಲಾಲ್ ನಿರೂಪಿಸಿದರು. ಕಾರ್ಯದರ್ಶಿ ಯಶೋಧರ ಮುಂಡಾಜೆ ವಂದಿಸಿದರು.