ಮಂಗಳೂರು : 04/08/2024 ರಂದು ಆದಿತ್ಯವಾರ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಕುಂಟಲ್ಪಾಡಿ ಇಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಸುಮಾರು 200ಕ್ಕಿಂತಲೂ ಹೆಚ್ಚು ಜನ ಪಾಲ್ಗೊಂಡಿದ್ದರು. ಬ್ರಹ್ಮಶ್ರೀ ನಾರಾಯಣ ಗುರುಗಳ ಆಶೀರ್ವಾದವನ್ನು ಪಡೆದು ನಂತರ ಘಟಕದ ಮಹಿಳಾ ಸದಸ್ಯರಿಂದ ಹಾಗೂ ಸಣ್ಣ ಮಕ್ಕಳಿಂದ ಜಾನಪದ ನೃತ್ಯ , ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಯಿತು. ನಂತರ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಘಟಕದ ಸದಸ್ಯರ ಮಕ್ಕಳಿಂದ ಪ್ರಾರ್ಥನೆ ನಡೆಸಿ ಘಟಕದ ಅಧ್ಯಕ್ಷರಾದ ಗಣೇಶ್ ಕೆ ಮಹಾಕಾಳಿ ಅವರು ಬಂದಂತಹ ಎಲ್ಲರನ್ನು ಸ್ವಾಗತಿಸಿದರು ನಂತರ ಉಪಾಧ್ಯಕ್ಷರಾದ ಸುಜಾತ ನವೀನ್ ರವರು ಪ್ರಾಸ್ತಾವಿಕ ನುಡಿಯನ್ನು ನುಡಿದರು ನಂತರ ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರು ಸೇರಿ ದೀಪ ಬೆಳಗಿಸಿ ತೆಂಗಿನ ಹೂವನ್ನು ಅರಳಿಸಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಬಂದಂತಹ ಶಕ್ತಿನಗರ ವಾರ್ಡಿನ ಕಾರ್ಪೊರೇಟರ್ ವನಿತ ಪ್ರಸಾದ್ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಇಂತಹ ಕಾರ್ಯಕ್ರಮಗಳು ನಡೆಯುತ್ತಿದ್ದರೆ ಮುಂದಿನ ಪೀಳಿಗೆಗಳಿಗೆ ತಮ್ಮ ಹಿರಿಯರು ನಡೆದು ಬಂದ ಜೀವನ ಶೈಲಿಯ ಬಗ್ಗೆ ಅರಿವು ಮೂಡುತ್ತದೆ ಎಂದು ತಿಳಿಸಿದರು.
ನಂತರ ಬಿಲ್ಲವ ಸಮುದಾಯಕ್ಕೆ ಸೇರಿದ ನಾಲ್ಕು ಜನ ಹಿರಿಯ ಮಹಿಳೆಯರಿಗೆ ನಮ್ಮ ಘಟಕದ ವತಿಯಿಂದ ಸನ್ಮಾನಿಸಲಾಯಿತು. ನಂತರ ಅತಿಥಿಗಳಾಗಿ ಬಂದ ಕೇಂದ್ರ ಸಮಿತಿಯ ಸದಸ್ಯರಾದ ವಿದ್ಯಾ ರಾಕೇಶ್ ರವರು ಆಟಿ ತಿಂಗಳ ವಿಶೇಷತೆಯನ್ನು ತುಂಬಾ ಅಚ್ಚುಕಟ್ಟಾಗಿ ತಿಳಿಸಿ ಹೇಳಿದರು. ನಂತರ ನಮ್ಮ ಸಂಸ್ಕೃತಿಯ ಬಗ್ಗೆ ಹಲವು ರಸಪ್ರಶ್ನೆಗಳನ್ನು ಬಂದಂತಹ ಜನರಿಗೆ ಕೇಳಿದರು. ಸರಿಯಾದ ಉತ್ತರವನ್ನು ನೀಡಿದವರಿಗೆ ಬಹುಮಾನ ಕೊಟ್ಟು ಪ್ರಶಂಸಿಸಲಾಯಿತು.
ನಂತರ ವೇದಿಕೆಯಲ್ಲಿದ್ದ ಕೇಂದ್ರ ಸಮಿತಿಯ ಕೋಶಾಧಿಕಾರಿಯದ ಹರೀಶ್ ಪಚ್ಚನಾಡಿಯವರು ನಮ್ಮ ಘಟಕದ ಬಗ್ಗೆ ಹಾಗೂ ಆಟಿಡೊಂಜಿ ದಿನದ ಕಾರ್ಯಕ್ರಮದ ಬಗ್ಗೆ ಉತ್ತಮ ಮಾತುಗಳನ್ನಾಡಿ ಶುಭಾಶಯ ಕೋರಿದರು. ನಂತರ ವೇದಿಕೆಯಲ್ಲಿದ್ದ ಮತ್ತೋರ್ವ ಅತಿಥಿಗಳಾದ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯಾದ ದೀಕ್ಷಿತ್ ಸಿ ಎಸ್ ರವರು ನಮ್ಮ ಘಟಕದ ಅಧ್ಯಕ್ಷರ ಹಾಗೂ ಸದಸ್ಯರ ಕಾರ್ಯ ವೈಖರಿ ಬಗ್ಗೆ ಹೊಗಳಿದರು.
ನಂತರ ನಮ್ಮ ಈ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಅಗ್ರಥ ಎಂಬ ತುಳು ಟೆಲಿ ಫಿಲಂನ ಆಡಿಯೋ ರಿಲೀಸ್ ಮಾಡಲಾಯಿತು.
ನಂತರ ಪದವು ಕಾರ್ಪೊರೇಟರ್ ಆದ ಕಿಶೋರ್ ಕೊಟ್ಟಾರಿಯವರು ನಮ್ಮ ಕಾರ್ಯಕ್ರಮಕ್ಕೆ ಆಗಮಿಸಿ ನಮ್ಮ ಕಾರ್ಯಕ್ರಮದ ಬಗ್ಗೆ ಹಿತವಚನ ನುಡಿದು ಶುಭ ಹಾರೈಸಿದರು. ವೇದಿಕೆಯಲ್ಲಿ ಶಕ್ತಿನಗರ ಕಾರ್ಪೊರೇಟರ್ ಆದ ವನಿತ ಪ್ರಸಾದ್, ಪದವು ಕಾರ್ಪೊರೇಟರ್ ಆದ ಕಿಶೋರ್ ಕೊಟ್ಟಾರಿ, ವಿದ್ಯಾ ರಾಕೇಶ್, ಕೇಂದ್ರ ಸಮಿತಿಯ ಕೋಶಾಧಿಕಾರಿಗಳಾದ ಹರೀಶ್ ಪಚನಾಡಿ ಮತ್ತು ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯಾದ ದೀಕ್ಷಿತ್ ಸಿ ಎಸ್ ಹಾಗೂ ನಮ್ಮ ಘಟಕದ ಅಧ್ಯಕ್ಷರಾದ ಗಣೇಶ್ ಕೆ ಮಹಾಕಾಳಿ , ಉಪಾಧ್ಯಕ್ಷರಾದ ತುಕಾರಾಂ, ಸ್ಥಾಪಕ ಅಧ್ಯಕ್ಷರಾದ ಶ್ರೀನಿವಾಸ್ ಪೂಜಾರಿ ಮತ್ತು ಕಾರ್ಯದರ್ಶಿಗಳಾದ ಅಕ್ಷತಾ ಚರಣ್ ರವರು ಉಪಸ್ಥಿತರಿದ್ದರು.
ನಂತರ ಈ ಕಾರ್ಯಕ್ರಮಕ್ಕೆ ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ k ಪೂಜಾರಿ, ಕೇಂದ್ರ ಸಮಿತಿಯ ಕಾರ್ಯದರ್ಶಿಗಳಾದ ಜಗದೀಶ್ ಚಂದ್ರ, ಸುರೇಶ್ ವಿಷು ಕುಮಾರ್ ಸಂಚಾಲಕರು, ಪ್ರಸಾದ್ ಪಾಲನ್, ಹಾಗೂ ಸತೀಶ್ ಪೂಜಾರಿ ಉಪಸ್ಥಿತರಿದ್ದರು. ನಂತರ ಬಂದಂತಹ ಅತಿಥಿಗಳಿಗೆ ವೀಳ್ಯ ಅಡಿಕೆ ಕೊಟ್ಟು ಶಾಲ್ ಹೊದಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿದ್ದ ಗಣ್ಯರಿಗೆ ಅಧ್ಯಕ್ಷರಾದ ಗಣೇಶ್ ಕೆ ಮಹಾಕಾಳಿ ಅವರು ನೆನಪಿನ ಕಾಣಿಕೆಯಾಗಿ ಹೂವಿನ ಗಿಡವನ್ನು ನೀಡಿದರು. ನಂತರ ಕೊನೆಯದಾಗಿ ಕಾರ್ಯದರ್ಶಿಗಳಾದ ಅಕ್ಷತ ಚರಣ್ ರವರು ಬಂದಂತಹ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.
ನಂತರ ಆಟಿಡೊಂಜಿ ದಿನದ ವಿಶೇಷ ಅಡುಗೆಯನ್ನು ಘಟಕದ ಸದಸ್ಯರು ತಮ್ಮ ಮನೆಯಲ್ಲಿಯೇ ತಯಾರಿಸಿ ತಂದಿದ್ದರು. ಅದನ್ನು ಬಂದಂತಹ ಎಲ್ಲಾ ಅತಿಥಿಗಳಿಗೆ ಉಣ ಬಡಿಸಲಾಯಿತು. ಈ ಕಾರ್ಯಕ್ರಮವನ್ನು ಪ್ರತೀಶ್ ಕುಮಾರ್ ರವರು ಅಚ್ಚುಕಟ್ಟಾಗಿ ಕಾರ್ಯನಿರ್ವಹಣೆ ಮಾಡಿದರು. ಇದರೊಂದಿಗೆ ನಮ್ಮ ಈ ಆಟಿಡೊಂಜಿ ದಿನದ ಕಾರ್ಯಕ್ರಮ ತುಂಬಾ ಯಶಸ್ಸಿನಿಂದ ಮುಕ್ತಾಯವಾಯಿತು.