ಯುವವಾಹಿನಿ (ರಿ.) ಅಡ್ವೆ ಘಟಕದ ವತಿಯಿಂದ ಆಟಿಡೊಂಜಿ ದಿನ

ಆಟಿಡೊಂಜಿ ದಿನದಂತಹ ಕಾರ್ಯಕ್ರಮಗಳು ಇದೀಗ ಹಬ್ಬದ ವಾತವರಣವನ್ನು ಸೃಷ್ಟಿಸಿದೆ- ವಾಮನ ಕೋಟ್ಯಾನ್

ಅಡ್ವೆ: ಹಿಂದಿನ ಕಾಲದ ಪದ್ದತಿಯನ್ನು ಇಂದಿನ ಜನಾಂಗಕ್ಕೆ ಪರಿಚಯಿಸುವ ಸಲುವಾಗಿ ಆಟಿಡೊಂಜಿ ದಿನ ದಂತಹ ಕಾರ್ಯಕ್ರಮಗಳು ಇದೀಗ ಆಟಿ ತಿಂಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಸುತ್ತಿದೆ. ಈಗಿನ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಇಂತಹ ಕಾರ್ಯಕ್ರಮಗಳು ತುಳುನಾಡಿನ ಸಂಸ್ಕೃತಿಯನ್ನು ಎತ್ತಿ ಹಿಡಿಯುವಲ್ಲಿ ಜೀವ ತುಂಬುತ್ತಿದ್ದು, ಮುಂದಿನ ಪೀಳಿಗೆಗಳು ನಮ್ಮ ಕೃಷಿ ಬದುಕನ್ನು ಟಿವಿ ಪರದೆ ಮೇಲೆ ನೋಡುವಂತಾಗದಿರಲಿ ಎಂದು ಸಾಹಿತಿ, ಹೆಜಮಾಡಿ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ವಾಮನ ಕೋಟ್ಯಾನ್ ನಡಿಕುದ್ರು ನುಡಿದರು. ಅವರು ಯುವವಾಹಿನಿ (ರಿ.) ಅಡ್ವೆ ಘಟಕದ ವತಿಯಿಂದ ದಿನಾಂಕ 12-08-2018 ರಂದು ಅಡ್ವೆ “ಆನಂದಿ ಸಭಾ ಭವನ” ದಲ್ಲಿ ನಡೆದ “ಆಟಿಡೊಂಜಿ ದಿನ” ಕಾರ್ಯಕ್ರಮದಲ್ಲಿ “ಆಟಿದ ಮದಿಪು” ನೀಡುತ್ತಾ ಈ ಮಾತುಗಳನ್ನಾಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಅಡ್ವೆ ಶ್ರೀ ಬ್ರಹ್ಮ ಬೈದರ್ಕಳ ಸೇವಾ ಸಮಿತಿ ಇದರ ಅಧ್ಯಕ್ಷರಾದ ಶ್ರೀ ಸುಂದರ ಯು. ಸುವರ್ಣರವರು “ತುಪ್ಪೆಗೆ ಸಿರಿ ಜೋಡಿಸುವುದರ” ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಇದರ ಉಪಾಧ್ಯಕ್ಷರಾದ ಶ್ರೀ ನರೇಶ್ ಕುಮಾರ್ ಸಸಿಹಿತ್ಲು ಮಾತನಾಡಿ “ಇಂತಹ ಕಾರ್ಯಕ್ರಮದ ನೆಪದಲ್ಲಾದರು ನಾವೆಲ್ಲ ಒಂದಾಗುತ್ತಿದ್ದು, ಎಲ್ಲಾ ಮನೆಗಳ ಅಡುಗೆ ಪದಾರ್ಥಗಳು ಒಟ್ಟಿಗೆ ಸೇರಿಸಿ ಎಲ್ಲರೂ ಒಂದೇ ಮನೆಯವರ ತರಹ ಊಟ ಮಾಡುವುದೇ ಒಂದು ಖುಷಿಯ ಸಂಗತಿ” ಎಂದು ನುಡಿದರು.


ಈ ವರ್ಷದ “ಆಟಿದ ತಮ್ಮನ” ದ‌ ಗೌರವವನ್ನು‌ ಬ್ರಹ್ಮಶ್ರೀ ನಾರಯಣ ಗುರು ಮಂದಿರ ಪಡುಬಿದ್ರಿ ಇದರ ಅರ್ಚಕರಾದ ಶ್ರೀ ಚಂದ್ರಶೇಖರ ಶಾಂತಿ‌ ಇವರಿಗೆ ನೀಡಲಾಯಿತು. ಗೌರವವನ್ನು ಸ್ವೀಕರಿಸಿದ ಶ್ರೀಯುತರು, ಇಂದಿನ ಕಾಲದಲ್ಲಿ ಆಯುರ್ವೇದ ಪದ್ದತಿಯು ನಶಿಸುತ್ತಿದ್ದು, ಆಯುರ್ವೇದ ಗಿಡಗಳ ಪರಿಚಯದ ಅಗತ್ಯತೆಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ‌ ಮೆಸ್ಕಾಂ ಕಾಪು ಇದರ ಸಹಾಯಕ ಇಂಜಿನಿಯರ್ ಶ್ರೀಮತಿ ಜಯಸ್ಮಿತಾ, ಎ.ಪಿ.ಎಂ.ಸಿ. ಸದಸ್ಯರಾದ‌ ಶ್ರೀ ನವೀನ್ ಚಂದ್ರ ಸುವರ್ಣ, ಶ್ರೀ ನವೀನ್ ಜೆ. ಕರ್ಕೇರ‌ ಭಾರತ್ ಬ್ಯಾಂಕ್ ಮುಂಬಯಿ, ಶ್ರೀ ಸದಾಶಿವ ಕೋಟ್ಯಾನ್ ಭ್ಯಾಂಕ್ ಆಫ್ ಬರೋಡ ಮಂಗಳೂರು ಇವರುಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪರಿಸರದ ವಿವಿಧ ಶಾಲೆಗಳಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು. ಅಲ್ಲದೇ ಕಳೆದ ಸುಮಾರು ವರ್ಷಗಳಿಂದ ಎಷ್ಟೋ ಕಾರ್ಯಕ್ರಮಗಳಿಗೆ ಹುಲಿ ವೇಷ ಹಾಗೂ ಮರಗಾಲು‌ ಸೇವೆ ಮಾಡುತ್ತಿರುವ ಶ್ರೀ ಅಶೋಕ್ ಪೂಜಾರಿ ಮತ್ತು ಸುಮಾರು ವರ್ಷಗಳಿಂದ ಪೋಸ್ಟ್ ಮ್ಯಾನ್ ವೃತ್ತಿ ಮಾಡುತ್ತಿರುವ ಶ್ರೀ ವಿಠ್ಠಲ ಪೂಜಾರಿಯವರನ್ನು ಗುರುತಿಸಿ ಗೌರವಿಸಲಾಯಿತು.


ವೇದಿಕೆಯಲ್ಲಿ ವಿವಿಧ ಬಗೆಯ ಆಯುರ್ವೇದ ಗಿಡಗಳನ್ನು ಜೋಡಿಸಿದ್ದು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತ್ತು.‌ ಕಾರ್ಯಕ್ರಮದ ಸಂಚಾಲಕರಾದ ಶ್ರೀ ಲಕ್ಷ್ಮಣ್ ಕೋಟ್ಯಾನ್ ಮತ್ತು‌ ಶ್ರೀಮತಿ ಅಮಿತಾ ಶ್ರೀಧರ್ ಉಪಸ್ಥಿತರಿದ್ದರು. ಘಟಕದ ಅಧ್ಯಕ್ಷರಾದ ಶ್ರೀ ಜಿತೇಶ್‌ ಜೆ. ಕರ್ಕೇರ ಸ್ವಾಗತಿಸಿ, ಮಾಜಿ ಅಧ್ಯಕ್ಷ ಶ್ರೀ ಪ್ರವೀಣ್ ಕುಮಾರ್ ಪ್ರಸ್ತಾವಿಸಿದರು. ಕಾರ್ಯದರ್ಶಿ ಶ್ರೀ ಪ್ರಸನ್ನ ಕುಮಾರ್ ವಂದಿಸಿದರು.‌ ಶ್ರೀ ವಿನೀಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ತದ ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ‌ಗಳು ನಡೆಯಿತು. ಸಭಾ ಕಾರ್ಯಕ್ರಮದ ಮುನ್ನ “ಶ್ರೀ ಅಮೃತವರ್ಷಿಣಿ ಮಹಿಳಾ ವೃಂದ” ಅಡ್ವೆ ಇವರಿಂದ ಭಜನಾ ಕಾರ್ಯಕ್ರಮ ನಡೆದಿತ್ತು. ಮಧ್ಯಾಹ್ನದ ಊಟಕ್ಕೆ ಘಟಕದ ಸದಸ್ಯರು ಹಾಗೂ ಊರಿನ ಮಹಿಳೆಯರು ತಯಾರಿಸಿದ ಒಟ್ಟು 27 ಬಗೆಯ ಖಾದ್ಯಗಳನ್ನು ಬಡಿಸಲಾಗಿತ್ತು.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 25-12-2024
ಸ್ಥಳ : ಯುವವಾಹಿನಿ ಸಭಾಂಗಣ ಊರ್ವಸ್ಟೋರ್

ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು

ದಿನಾಂಕ : 21-12-2024
ಸ್ಥಳ : ಹೆಚ್. ಎಂ. ಆಡಿಟೋರಿಯಂ ಉಪ್ಪಿನಂಗಡಿ

ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕ

ದಿನಾಂಕ : 22-12-2024
ಸ್ಥಳ : ಶ್ರೀ ಜಯದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣ ಕಡಬ

ಯುವವಾಹಿನಿ (ರಿ.) ಕಡಬ ಘಟಕ

ದಿನಾಂಕ : 20-12-2024
ಸ್ಥಳ : ಶ್ರೀ ಬ್ರಹ್ಮ ಬೈದರ್ಕಳ ಗರಡಿ ಅಡ್ವೆ

ಯುವವಾಹಿನಿ (ರಿ) ಅಡ್ವೆ ಘಟಕ

ದಿನಾಂಕ : 29-12-2024
ಸ್ಥಳ : ಸ್ಕೌಟ್ ಗೈಡ್ಸ್ ಕನ್ನಡ ಭವನ ಮೂಡುಬಿದಿರೆ

ಯುವವಾಹಿನಿ (ರಿ.) ಮೂಡುಬಿದಿರೆ ಘಟಕ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
error: Content is protected !!