ಉಪ್ಪಿನಂಗಡಿ : ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಜಗತ್ತಿಗೆ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳಿಂದ ಸ್ಥಾಪಿತ ಕುದ್ರೋಳಿ ಗೋಕರ್ಣನಾಥ- ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾ ಮಹೋತ್ಸವದ ಸುಸಂದರ್ಭದಲ್ಲಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನಾಚರಣೆ ಪ್ರಯುಕ್ತ ಉಪ್ಪಿನಂಗಡಿ ಯುವವಾಹಿನಿ ಘಟಕದ ವತಿಯಿಂದ ಎಂಡೋ ಪೀಡಿತ, ಅಶಕ್ತ ಮಕ್ಕಳ ಮನೆಗಳಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಗ್ರೀಷ್ಮ ಬೆದ್ರೋಡಿ, ಪ್ರಜ್ಞಾ ವಳಾಲು, ರೂಪೇಶ್ ಮಣ್ಣಂಗಳ- ವಳಾಲು, ಸುರೇಶ್ ಕಾಂಚನ ಕ್ರಾಸ್ ಬಳಿ ಮತ್ತು ಪ್ರತೀಕ್ ಶಿವಾರು ಹೀಗೆ ವಿವಿಧ ಪಂಗಡಗಳ ಅಶಕ್ತ ಮಕ್ಕಳ ಮನೆಗಳಿಗೆ ಭೇಟಿ ನೀಡಿ ಆಹಾರ ಸಾಮಗ್ರಿ ನೀಡಲಾಯಿತು.
ಉಪ್ಪಿನಂಗಡಿ ಯುವವಾಹಿನಿ ಘಟಕದ ಅಧ್ಯಕ್ಷರಾದ ಶ್ರೀ ಸೋಮಸುಂದರ್ ಕೊಡಿಪ್ಪಾನ ಇವರೊಂದಿಗೆ ಕೇಂದ್ರ ಸಮಿತಿಯ 2ನೇ ಉಪಾಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ಪಡ್ಪು, ಕೇಂದ್ರ ಸಮಿತಿ ನಿರ್ದೇಶಕರು ಶ್ರೀ ಅಜಿತ್ ಕುಮಾರ್ ಪಾಲೇರಿ, ಘಟಕದ ಮಾಜಿ ಅಧ್ಯಕ್ಷರು ಶ್ರೀ ಚಂದ್ರಶೇಖರ ಸನೀಲ್, ಮನೋಹರ್ ಕುಮಾರ್ ಅಟಾಲು, ಹರೀಶ್ ಪಾಲೆತ್ತಡಿ, ಜನಾರ್ದನ ನೂಜ, ಉಪಾಧ್ಯಕ್ಷರಾದ ಶ್ರೀ ಪುನೀತ್ ವಿ.ಡಿ, ನಿರ್ದೇಶಕರಾದ ಅಂಕಿತ್ ಎಂ. ಜಿ. ನಾಣ್ಯಪ್ಪ ಕೋಟ್ಯಾನ್ ಸದಸ್ಯರುಗಳಾದ ಮೋನಪ್ಪ ಡೆಂಬಲೆ, ಶ್ರೀಧರ್ ಬರೆಮೇಲು ಹಾಗೂ ಸದಾನಂದ ಶಿಬಾರ್ಲ ಜೊತೆಯಲ್ಲಿದ್ದರು.