ಮಂಗಳೂರು :- ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ದಿನಾಂಕ 20 ಸೆಪ್ಟೆಂಬರ್ 2022ರಂದು (ಅಭಿಯಂತರರ)ಇಂಜಿನಿಯರ್ ದಿನವನ್ನು ಯುವವಾಹಿನಿ ಸಭಾಂಗಣದಲ್ಲಿ ಆಚರಿಸಲಾಯಿತು. ಸಭೆಗೆ ಮೊದಲು ಭಜನೆಯೊಂದಿಗೆ ಗುರುಪೂಜೆ ಮಾಡಿ ಎಲ್ಲಾ ಸದಸ್ಯರಿಗೆ ಪ್ರಸಾದ ನೀಡಲಾಯಿತು. ಘಟಕದ ಅಧ್ಯಕ್ಷರಾದ ಗಣೇಶ್ ವಿ. ಕೋಡಿಕಲ್ ರವರು ಬಂದಂತಹ ಎಲ್ಲಾ ಮಾಜಿ ಅಧ್ಯಕ್ಷರನ್ನು, ಪದಾಧಿಕಾರಿಗಳನ್ನು, ಸದಸ್ಯರನ್ನು ಹಾಗೂ ಚಾರುಧಾಮ ಯಾತ್ರೆಯ ಯಾತ್ರಾರ್ಥಿಗಳನ್ನು ಆತ್ಮೀಯವಾಗಿ ಸಭೆಗೆ ಸ್ವಾಗತಿಸಿದರು. ಸಭೆಯಲ್ಲಿ ವಿಶ್ವ ವಿಖ್ಯಾತ ಮಂಗಳೂರು ದಸರಾ ಮಹೋತ್ಸವದಲ್ಲಿ ಘಟಕವು ಹಮ್ಮಿಕೊಂಡಿದ್ದ, ಕೌಂಟರ್ ಸೇವೆ, ಉಚಿತ ಶರಬತ್ತು ಸೇವೆ ಹಾಗೂ ಶಿವಗಿರಿ ತೀರ್ಥಾಟನಾ ಅರಿವಿನ ನಡಿಗೆ ಕಾರ್ಯಕ್ರಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆದು, ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಎಲ್ಲರು ಸಹಕರಿಸುವಂತೆ ಅಧ್ಯಕ್ಷರು ತಿಳಿಸಿದರು.
ಚಾರುಧಾಮ ಯಾತ್ರಾರ್ಥಿಗಳು ತಮ್ಮ ಅನಿಸಿಕೆ, ಅನುಭವಗಳನ್ನು ಸಭೆಯಲ್ಲಿ ಹಂಚಿಕೊಂಡರು. ಯಾತ್ರೆಗೆ ಸಹಕರಿಸಿದ ಪ್ರಸಿದ್ಧ ವಾಸ್ತುಶಾಸ್ತ್ರಜ್ಞ ರಾಜಕುಮಾರ್ ಹಾಗೂ ಬೊಳ್ಳಿ ಟೂರಿಸಂನ ಮಾಲಕರಾದ ಅರುಣ್ ರವರನ್ನು ಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಎಲ್ಲಾ ಯಾತ್ರಾರ್ಥಿಗಳಿಗೆ ಹೂ ನೀಡಿ ಗೌರವಿಸಲಾಯಿತು. (ಅಭಿಯಂತರರ) ಇಂಜಿನಿಯರ್ ದಿನದ ಪ್ರಯುಕ್ತ ಚಾರುಧಾಮ ಯಾತ್ರೆಯಲ್ಲಿ ಬಾಗವಹಿಸಿದ್ದ ಅಭಿಯಂತರಾದ ರಾಜೀವ್ ಅಮೀನ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ರಾಜೀವ್ ರವರು ಇಂಜಿನಿಯರ್ ದಿನದ ಆಚರಣೆಯ ಬಗ್ಗೆ ಸಭೆಯಲ್ಲಿ ಮಾತನಾಡಿ ಸಂತೋಷ ವ್ಯಕ್ತಪಡಿಸಿದರು. ಘಟಕದಲ್ಲಿರುವ ಅಭಿಯಂತರುಗಳಾದ ಗಳಾದ ಗಣೇಶ್ ವಿ. ಕೋಡಿಕಲ್, ಅಶೋಕ್ ಕುಮಾರ್, ಸಾಧು ಪೂಜಾರಿ, ಪ್ರಕಾಶ್ ಕುಮಾರ್, ಶ್ರವಣ್ ಕೂಳೂರು, ತಿಲಕ್ ರಾಜ್ ಸುವರ್ಣ ರವರನ್ನು ಗೌರವಿಸಲಾಯಿತು. ಘಟಕದ ಪ್ರಚಾರ ನೀರ್ದೆಶಕರಾಗಿದ್ದು, ಇಂಜಿನಿಯರಿಂಗ್ ವಿದ್ಯಾಭ್ಯಾಸದೊಂದಿಗೆ ಮನೆಯ ಜವಾಬ್ದಾರಿಯನ್ನು ವಹಿಸಿಕೊಂಡು, ಪಾರ್ಟ್ ಟೈಮಲ್ಲಿ ಕೆಲಸ ಮಾಡಿಕೊಂಡು, ಅದರೊಟ್ಟಿಗೆ ಬಿಡುವಿನ ಸಮಯದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ, ಈಗ ಉದ್ಯೋಗದ ನಿಮಿತ್ತ ಬೆಂಗಳೂರುಗೆ ಹೋಗಲಿರುವ ವಿಖ್ಯಾತ್ ಕೆ. ಎಸ್. ರವರನ್ನು ಶಾಲು ಹೊದಿಸಿ, ಫಲ ಪುಷ್ಪ, ಗುರುಪೂಜೆಯ ಪ್ರಸಾದ ನೀಡಿ ಆತ್ಮೀಯವಾಗಿ ಬೀಳ್ಕೊಡಲಾಯಿತು. ಘಟಕದ ಶೈಕ್ಷಣಿಕ ದತ್ತು ಸ್ವೀಕಾರ ನಿಧಿಗೆ ಆರ್ಥಿಕ ಸಹಾಯ (ದೇಣಿಗೆ) ನೀಡಿದ ಶೋಭಾ ಮಾಲೆಮಾರ್ ಮತ್ತು ಸತೀಶ್ ಎ. ರವರನ್ನು ಗೌರವಿಸಲಾಯಿತು.
ಕಾರ್ಯದರ್ಶಿ ಅಶೋಕ್ ಅಂಚನ್ ರವರು ಗತ ಸಭೆಯ ವರದಿಯನ್ನು ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಂಡರು. ಪ್ರವಾಸದ ಸಂಚಾಲಕರಾದ ಪ್ರವೀಣ್ ಸಾಲ್ಯಾನ್ ಕಿರೋಡಿಯವರು ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಎಲ್ಲರಿಗೂ ಘಟಕದ ವತಿಯಿಂದ ಸವಿಯಾದ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.