ಯುವ ಸಿಂಚನ : ಪದ್ಮನಾಭ ಮರೋಳಿ

ಅಧ್ಯಕ್ಷರ ಮಾತು

ಆತ್ಮೀಯರೇ,

ಶ್ರೀಕ್ಷೇತ್ರ ಗೆಜ್ಜೆಗಿರಿ, ದೇಯಿ ಬೈದ್ಯೆತಿ-ಕೋಟಿಚೆನ್ನಯ ಮೂಲಸ್ಥಾನ ಪುನರುತ್ಥಾನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಎಲ್ಲಾ ಬಿಲ್ಲವರು ಒಮ್ಮತದಿಂದ ಒಟ್ಟು ಸೇರಿ ನಾವೆಲ್ಲರೂ ಒಂದೇ ಛತ್ರದಡಿಯಲ್ಲಿ ಇರಲು ಒಲವುಳ್ಳರಾಗಿದ್ದೇವೆ ಎಂಬುವುದನ್ನು ತೋರಿಸಿಕೊಟ್ಟಿದ್ದೇವೆ. ಇದರಿಂದ ಎಲ್ಲಾ ಬಿಲ್ಲವ ಸಂಘಗಳ ಮುಖಂಡರುಗಳು ಒಟ್ಟು ಸೇರಿ ಚಿಂತನೆ ಮಾಡಬೇಕಾದ ಕಾಲ ಸನ್ನಿಹಿತವಾಗಿದೆ. ಹಿಂದೊಮ್ಮೆ ನಾವು ಈ ಉಭಯ ಜಿಲ್ಲೆಗಳಲ್ಲಿ ಪಡೆದಿದ್ದ ಪ್ರಾಬಲ್ಯವನ್ನು ಮರುಸ್ಥಾಪಿಸಬೇಕಾದ ಮಹತ್ತರವಾದ ಕೆಲಸ ನಮ್ಮೆಲ್ಲರ ಮುಂದಿದೆ. ಈ ದಿಸೆಯಲ್ಲಿ ನಾವೆಲ್ಲರೂ ಚಿಂತಿಸಿ ಸೂಕ್ತ ನಿರ್ಧಾರಗಳನ್ನು ತಳೆದು ನಮ್ಮ ಸಮಾಜದ ಅಭಿವೃದ್ಧಿಗೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡಬೇಕಾಗಿದೆ. ಅದಕ್ಕಾಗಿ ನಾವೆಲ್ಲರೂ ನಮ್ಮೊಳಗಿನ ಭೇದಗಳನ್ನು ಮರೆತು ಸಮಾಜದ ಒಳಿತಿಗೋಸ್ಕರ ಒಗ್ಗಟ್ಟಾಗಿರೋಣ ಮತ್ತು ಎಲ್ಲಾ ರಂಗಗಳಲ್ಲೂ ಯಶಸ್ಸನ್ನು ಗಳಿಸುವ ದಿಸೆಯಲ್ಲಿ ಮುನ್ನಡೆಯೋಣ.

ಆಲಬ್ಧಂ ಚೈವ ಲಿಪ್ಸೇತ ಲಬ್ಧಂ ರಕ್ಷೇದವೇಕ್ಷಯಾ|
ರಕ್ಷಿತಂ ವರ್ಧಯೇತ್ ಸಮ್ಯಗ್ ವೃದ್ಧಂ ಪಾತ್ರೇಷು ನಿಕ್ಷಿಪೇತ್||

ಇನ್ನೂ ಕೈಸೇರದೇ ಇದ್ದರೆ ಅದಕ್ಕೆ ಪ್ರಯತ್ನ ಮಾಡಬೇಕು. ಕೈ ಸೇರಿದ್ದನ್ನು ಜಾಗರೂಕತೆಯಿಂದ ರಕ್ಷಿಸಬೇಕು. ರಕ್ಷಿಸಿದ್ದನ್ನು ಬೆಳೆಯುವಂತೆ ನೋಡಿಕೊಳ್ಳಬೇಕು. ಹೀಗೆ ರಕ್ಷಿಸಿ ಬೆಳೆಸಿದ್ದನ್ನು ಯೋಗ್ಯ ಪಾತ್ರೆಯಲ್ಲಿಡಬೇಕು.

ಯುವವಾಹಿನಿಯ ಎಲ್ಲಾ ಘಟಕದವರು ಆದಷ್ಟು ಕಾರ್ಯಕ್ರಮಗಳನ್ನು ಬೇರೆ ಘಟಕದೊಂದಿಗೆ ಕೂಡಿ ಮಾಡಿದರೆ ಉತ್ತಮ ಅಥವಾ ತಮ್ಮ ಕಾರ್ಯಕ್ರಮದಲ್ಲಿ ಬೇರೆ ಘಟಕಗಳು ಸಕ್ರಿಯವಾಗಿ ಭಾಗವಹಿಸುವಂತಹ ಅವಕಾಶಗಳನ್ನು ನೀಡಿದರೆ ಇನ್ನೂ ಉತ್ತಮ, ದೊಡ್ಡ ಕಾರ್ಯಕ್ರಮ ಮಾಡುವಾಗ ಹತ್ತಿರದ ಮೂರು ನಾಲ್ಕು ಘಟಕಗಳು ಒಟ್ಟುಗೂಡಿ ಮಾಡಿದರೆ ಚೆಂದವಾಗಿರುತ್ತದೆ. ಯಾಕೆಂದರೆ ನಮ್ಮೊಳಗೆ ಸಂಪರ್ಕದ ಕೊಂಡಿಯು ಬೆಸೆದು ನಾವು ಎಲ್ಲರಿಗೂ ಪರಿಚಿತರಾಗುತ್ತೇವೆ ಹಾಗೂ ಇದು ಎಲ್ಲರ ಬೆಳವಣಿಗೆಗೆ ಪೂರಕವಾಗುತ್ತದೆ.

ಶಿವಗಿರಿ ಯಾತೆ, ಕೊಲ್ಯ ಹೊಸ ಘಟಕದ ಸ್ಥಾಪನೆ, ವಿಶೇಷ ರೀತಿಯಲ್ಲಿ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಾಗೂ ಪದಗ್ರಹಣ ಕಾರ್ಯಕ್ರಮವನ್ನು ಹಮ್ಮಿಕೊಂಡ ಮಂಗಳೂರು ಘಟಕಕ್ಕೆ ಮನತುಂಬಿದ ಅಭಿನಂದನೆಗಳು. ಶಿವಗಿರಿ ಯಾತ್ರೆ, ಕಾರ್ಮಿಕ ಶಿಕ್ಷಣ ಅಭಿವೃದ್ಧಿ ಮಂಡಳಿಯ ಸಹಕಾರದೊಂದಿಗೆ 4 ದಿನಗಳ ಅಸಂಘಟಿತ ಮಹಿಳಾ ಕಾರ್ಮಿಕರ ಕಾರ್ಯಾಗಾರ ಹಾಗೂ ದೇಯಿ ಬೈದ್ಯೆತಿ ಕ್ರೀಡಾಕೂಟವನ್ನು ಮಾಡಿದ ಮಂಗಳೂರು ಮಹಿಳಾ ಘಟಕಕ್ಕೆ ಪ್ರೀತಿಪೂರ್ವಕ ವಂದನೆಗಳು. ಉಜ್ಜೋಡಿಯಲ್ಲಿ ಭಜನಾ ಕಾರ್ಯಕ್ರಮ ಹಾಗೂ ಉಜ್ಜೋಡಿ ಜಾತ್ರೆ ಸಮಯದಲ್ಲಿ ನೀರಿನ ವ್ಯವಸ್ಥೆಯನ್ನು ನಿರ್ವಹಿಸಿರುವ, ಉಚಿತ ಟೈಲರಿಂಗ್ ತರಬೇತಿ ಶಿಬಿರ ಮಾಡಿದ ಬಿಲ್ಲವ ಸೇವಾ ಸಮಾಜ ಕಂಕನಾಡಿ ಗರೋಡಿ ಹಮ್ಮಿಕೊಂಡ ’ಕೋಟಿಚೆನ್ನಯ’ ಕ್ರೀಡಾಕೂಟದ ವಾಹನ ಜಾಥಾ ಹಾಗೂ ಗೆಜ್ಜೆಗಿರಿಯ ಶಿಲಾನ್ಯಾಸದ ವಾಹನ ಜಾಥಾದಲ್ಲಿ ಹೆಚ್ಚಿನ ಸದಸ್ಯರು ಭಾಗವಹಿಸಿ ಯಶಸ್ವಿಗೊಳಿಸಿದ ಕಂಕನಾಡಿ ಘಟಕಕ್ಕೆ ಹೃದಯಂತರಾಳದ ನಮನಗಳು. ಕಾನೂನು ಮಾಹಿತಿ ಶಿಬಿರ, ಗೆಜ್ಜೆಗಿರಿ ಶಿಲಾನ್ಯಾಸದ ವಾಹನ ಜಾಥಾದಲ್ಲಿ ಭಾಗವಹಿಸುವಿಕೆ, ಉಡುಪಿಯ ’ಪಿಕ್‌ನಿಕ್ ಪ್ಯಾರಡೈಸ್’ನಲ್ಲಿ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಮಾಡಿದ ಕೂಳೂರು ಘಟಕಕ್ಕೆ ಅಭಿನಂದನೆಗಳು. ವೈದ್ಯಕೀಯ ಮಾಹಿತಿ ಶಿಬಿರವನ್ನು ಹಮ್ಮಿಕೊಂಡ ಪಣಂಬೂರು ಘಟಕಕ್ಕೆ ವಂದನೆಗಳು. ವಿಶಿಷ್ಟ ರೀತಿಯಲ್ಲಿ ಪದಗ್ರಹಣ ಕಾರ್ಯಕ್ರಮ, ಯೋಗ ಮಾಹಿತಿ ಶಿಬಿರ ಮತ್ತು ಸ್ನೇಹ ಕುಟುಂಬ ಸಮ್ಮಿಲನ ಕಾರ್ಯಕ್ರಮವನ್ನು ಮಾಡಿದ ಸುರತ್ಕಲ್ ಘಟಕಕ್ಕೆ ಪ್ರೀತಿಪೂರ್ವಕ ನಮನಗಳು. ಪೂರ್ಕೋಡಿ ಸೋಮನಾಥ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ಕೆ ಒಂದು ದಿವಸ ಶ್ರಮದಾನವನ್ನು ಮಾಡಿದ ಹಾಗೂ ದೇಯಿಬೈದ್ಯೆತಿ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಬಜಪೆ ಘಟಕಕ್ಕೆ ಅಭಿನಂದನೆಗಳು.

ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದ ಸಸಿಹಿತ್ಲು ಘಟಕಕ್ಕೆ ವಂದನೆಗಳು. ಕಮಲಶಿಲೆ, ಮಂದಾರ್ತಿ, ಶಂಕರನಾರಾಯಣ ದೇವಸ್ಥಾನ ಮತ್ತು ಮಲ್ಪೆ ಬೀಚ್‌ಗೆ ಪ್ರವಾಸ ಕಾರ್ಯಕ್ರಮ ಮಾಡಿದ ಹಳೆಯಂಗಡಿ ಘಟಕಕ್ಕೆ ಪ್ರೀತಿಯ ಅಭಿನಂದನೆಗಳು. ಸಂಪರ್ಕದ ನೆಲೆಯಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ಮಾಡಿದ ಅಡ್ವೆ ಘಟಕಕ್ಕೆ ನಮನಗಳು. ಬಡಕುಟುಂಬಕ್ಕೆ ಮನೆ ನಿರ್ಮಿಸಿಕೊಡುವ ಕಾರ್ಯವನ್ನು ಭರದಿಂದ ಮಾಡುತ್ತಿರುವ ಹೆಜಮಾಡಿ ಘಟಕಕ್ಕೆ ಪ್ರೀತಿಯ ವಂದನೆಗಳು. ಪಡುಬಿದ್ರಿ ಬಿಲ್ಲವ ಮಹಿಳಾ ಮಂಡಳಿ ಹಮ್ಮಿಕೊಂಡ ಪ್ರಸ್ತುತ ಸಮಾಜದಲ್ಲಿ ಮಹಿಳೆಯರ ಪಾತ್ರ ಎನ್ನುವ ಕಾರ್ಯಕ್ರಮಕ್ಕೆ ಪೂರ್ಣ ರೂಪದ ಸಹಕಾರ ಹಾಗೂ ಸಂಪರ್ಕದ ನೆಲೆಯಲ್ಲಿ ಒಂದು ದಿನದ ಪಿಕ್‌ನಿಕ್ ಹಮ್ಮಿಕೊಂಡ ಪಡುಬಿದ್ರಿ ಘಟಕಕ್ಕೆ ಅಭಿನಂದನೆಗಳು. ಉದ್ಯಾವರದ ಈಂದ್‌ಬೈಲಿನ ಬಡಕುಟುಂಬದ ಶ್ರೀಮತಿ ಗಿರಿಜಾ ಇವರಿಗೆ ಉಚಿತವಾಗಿ ಮನೆಕಟ್ಟಿ ಕೊಡುವ ಕಾರ್ಯವನ್ನು ತ್ವರಿತವಾಗಿ ನಡೆಸುತ್ತಿರುವ ಉಡುಪಿ ಘಟಕಕ್ಕೆ ಮನತುಂಬಿದ ನಮನಗಳು. ಗೆಜ್ಜೆಗಿರಿಯ ಶಿಲಾನ್ಯಾಸ ಕಾರ್ಯಕ್ರಮದ ಯಶಸ್ಸಿಗೆ ಆಹೋರಾತ್ರಿ ದುಡಿದ ಮತ್ತು ಸಭಾ ಕಾರ್ಯಕ್ರಮದ ನಿರ್ವಹಣೆ, ಮಾಹಿತಿ ಕೇಂದ್ರ ಹಾಗೂ ವಾಹನ ಜಾಥಾದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಯುವವಾಹಿನಿ ಅಧ್ಯಕ್ಷರಿಂದ ಜಾಥಾಕ್ಕೆ ಚಾಲನೆಯನ್ನು ನೀಡಿರುವಂತಹ ಪುತ್ತೂರು ಘಟಕಕ್ಕೆ ಹೃದಯಸ್ಪರ್ಶಿ ಅಭಿನಂದನೆಗಳು. ಘಟಕದ ಉದ್ಘಾಟನೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಿದ ಮತ್ತು ದೇಯಿಬೈದ್ಯೆತಿ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಕೊಲ್ಯ ಘಟಕಕ್ಕೆ ಪ್ರೀತಿಯ ನಮನಗಳು. ಬಡಕುಟುಂಬಕ್ಕೆ ಮನೆ ನಿರ್ಮಿಸಿಕೊಡುವ ಕಾರ್ಯದಲ್ಲಿ ಘಟಕದ ಸದಸ್ಯರೊಂದಿಗೆ ಶ್ರಮದಾನಗೈಯುತ್ತಿರುವ ಬಂಟ್ವಾಳ ಘಟಕಕ್ಕೆ ಆತ್ಮೀಯ ವಂದನೆಗಳು. ಬಡ ಕುಟುಂಬಕ್ಕೆ ಮನೆಕಟ್ಟಲು ರೂ. 10,000/- ಧನಸಹಾಯ ಮಾಡಿದ ಉಪ್ಪಿನಂಗಡಿ ಘಟಕಕ್ಕೆ ಅಭಿನಂದನೆಗಳು.

ಗೆಜ್ಜೆಗಿರಿಯ ಶಿಲಾನ್ಯಾಸ ವಾಹನ ಜಾಥದಲ್ಲಿ ಭಾಗವಹಿಸುವುದರೊಂದಿಗೆ ಗೆಜ್ಜೆಗಿರಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಘಟಕಗಳಿಗೂ ನನ್ನ ಕೃತಜ್ಞತೆಗಳು.

ನಮಸ್ಕಾರ.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!