ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು

ಪದ್ಮನಾಭ ಮರೋಳಿ : ಅಧ್ಯಕ್ಷರು 2016-17

ಆತ್ಮೀಯರೇ,
ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಆದರ್ಶಗಳ ಬೆಳಕಿನಡಿಯಲ್ಲಿ ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಮೂರು ಮುಖ್ಯ ಧ್ಯೇಯದೊಂದಿಗೆ ನಿಸ್ವಾರ್ಥ ಹಾಗೂ ಅರ್ಪಣಾ ಮನೋಭಾವದ ಸದಸ್ಯರ ಕೂಡುವಿಕೆಯೊಂದಿಗೆ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಮಹಾನ್ ಸಂಸ್ಥೆಯೇ ಯುವವಾಹಿನಿ.
ನವೋಲ್ಲಾಸದ ನವ ಚೈತನ್ಯದಿಂದ 30ನೇ ಸಮಾವೇಶದ ವಿಶಿಷ್ಟ ಕಾರ್ಯಕ್ರಮದ ಅಂಗಳದಲ್ಲಿ ನಾವಿದ್ದೇವೆ. ದಿನಾಂಕ 30-07-2016ರಂದು ಪೊಡವಿಗೂಡೆಯ ಶ್ರೀಕೃಷ್ಣನ ನಾಡಾದ ಉಡುಪಿಯಲ್ಲಿ ಅಧ್ಯಕ್ಷನಾಗಿ ಪ್ರಮಾಣ ವಚನ ಸ್ವೀಕರಿಸಿದ ನಾನು ಸಮಾಜದ ನೋವಿನೊಂದಿಗೆ ನೊಂದಿದ್ದೇನೆ, ನಲಿವಿನೊಡನೆ ಕುಣಿದಿದ್ದೇನೆ ಹಾಗೂ ಎಲ್ಲರ ಸಲಹೆ, ಸಹಕಾರ, ಮಾರ್ಗದರ್ಶನ ಮತ್ತು ಪ್ರೋತ್ಸಾಹದಿಂದ ನನ್ನ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿದ್ದೇನೆ ಎನ್ನುವ ಸಂತೋಷ ನನಗಿದೆ. ಯುವವಾಹಿನಿಯಿಂದ ನನ್ನ ವ್ಯಕ್ತಿತ್ವ ವಿಕಸನಗೊಂಡು, ಹೆಚ್ಚಿನ ಅನುಭವ ಮತ್ತು ಪ್ರಯೋಜನಗಳಿಂದ ಹೊಸ ದಿಸೆಯತ್ತ ಸಾಗಿದೆ. ಇದರ ಮುಂದೆ ನಾನು ಮಾಡಿದ ಸಾಧನೆ ಅತ್ಯಲ್ಪವಾದುದು. ಎಲ್ಲಾ ಘಟಕಗಳ ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರೊಡನೆ ಸಂಪರ್ಕ, ಹಲವಾರು ಮನದಾಳದ ಸಮಾಜದ ಮೇಲಿರುವ ಪ್ರೀತಿ, ಯುವವಾಹಿನಿ ಕುಟುಂಬದ ಮಮತೆ, ಹಿರಿಯರ ಆಶೀರ್ವಾದದೊಂದಿಗೆ ಮಾರ್ಗದರ್ಶನ, ಕಿರಿಯರ ಪ್ರೋತ್ಸಾಹದ ನುಡಿಮುತ್ತುಗಳು ಮತ್ತು ಯುವಜನರ ಧೈರ್ಯ ನನ್ನನ್ನು ಇನ್ನು ಮುಂದೆಯೂ ಸ್ಪೂರ್ತಿಯಿಂದ ಕೆಲಸ ಮಾಡುವ ಚೈತನ್ಯ ನೀಡಿರುತ್ತದೆ.
ವರ್ಷವಿಡೀ ಎಲ್ಲಾ ಘಟಕಗಳು ವಿಭಿನ್ನ ಕಾರ್ಯಕ್ರಮಗಳನ್ನು ನೀಡಿವೆ. ಬೆಳ್ತಂಗಡಿ ಘಟಕದವರ ‘ಡೆನ್ನನ ಡೆನ್ನನ’, ಯುವವಾಹಿನಿಯ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಒಂದು ಹೊಸ ಚರಿತ್ರೆಯನ್ನು ನಿರ್ಮಾಣ ಮಾಡಿದೆ. ಸಂಚಾಲಕರಾದ ಸಂಪತ್ ಸುವರ್ಣ ಮತ್ತು ಬೆಳ್ತಂಗಡಿ ಘಟಕದ ಸರ್ವಸದಸ್ಯರು ಅಭಿನಂದನಾರ್ಹರು. ಯುವವಾಹಿನಿಗೊಂದು ಅತ್ಯಂತ ಸುಸಜ್ಜಿತವಾದ ಸಭಾಂಗಣ ಮತ್ತು ಕಚೇರಿಯನ್ನು ಒದಗಿಸಿಕೊಡುವಲ್ಲಿ ಮಂಗಳೂರು ಘಟಕದ ಸಾಧನೆ ಮತ್ತು ಎಲ್ಲಾ ಘಟಕದವರ ಸಹಕಾರ ಅವಿಸ್ಮರಣೀಯವಾದುದು. ಪುತ್ತೂರು, ಬೆಳುವಾಯಿ ಮೂಲ್ಕಿ ಘಟಕಗಳು ರಕ್ತದಾನದ ಮೂಲಕ ಮಾಡಿದ ಸಮಾಜಸೇವೆ, ಬೆಳ್ತಂಗಡಿ, ಮುಲ್ಕಿ, ಪುತ್ತೂರು, ಪಣಂಬೂರು, ಕೂಳೂರು, ಮಂಗಳೂರು, ಬಂಟ್ವಾಳ, ಮಂಗಳೂರು ಮಹಿಳಾ ಘಟಕಗಳು ನಡೆಸಿದ ಉಚಿತ ವೈದ್ಯಕೀಯ ಶಿಬಿರ ಮತ್ತು ಆರೋಗ್ಯ ಮಾಹಿತಿಗಳು, ಅಡ್ವೆ ಘಟಕದ ಪಶುಗಳಿಗೆ ಉಚಿತ ಕಾಲುಬಾಯಿ ಲಸಿಕಾ ಶಿಬಿರ, ನಿಡ್ಡೋಡಿ ಘಟಕದಿಂದ 3 ಬಡ ಕುಟುಂಬಗಳಿಗೆ ಆರೋಗ್ಯ ನಿಧಿ ವಿತರಣೆ, ಬೆಳ್ತಂಗಡಿ ಘಟಕದಿಂದ 10,000/-, ಹೆಜಮಾಡಿ ಘಟಕದಿಂದ 10,000/-, ಪಣಂಬೂರು ಘಟಕದಿಂದ 26,500/-, ಉಪ್ಪಿನಂಗಡಿ ಘಟಕದಿಂದ 10,000/- ವೈದ್ಯಕೀಯ ಚಿಕಿತ್ಸೆಗೆ ಧನಸಹಾಯ ಇವೆಲ್ಲವುಗಳು ಯುವವಾಹಿನಿಗೆ ಸಮಾಜದ ಮೇಲಿರುವ ಸ್ಪಂದನೆಯನ್ನು ತೋರಿಸುತ್ತದೆ. ಯಡ್ತಾಡಿ ಮತ್ತು ಮಂಗಳೂರು ಮಹಿಳಾ ಘಟಕಗಳು ನಡೆಸಿದ ಬೇಸಿಗೆ ಶಿಬಿರಗಳ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಣೆ, ಕೇಂದ್ರ ಸಮಿತಿಯ ವಿದ್ಯಾರ್ಥಿ ಟ್ರಸ್ಟ್‍ನಿಂದ ಹಾಗೂ ಮಂಗಳೂರು, ಮುಲ್ಕಿ, ಪುತ್ತೂರು ಘಟಕಗಳ ‘ವಿದ್ಯಾರ್ಥಿಗಳ ದತ್ತು ಸ್ವೀಕಾರ’, ಉಪ್ಪಿನಂಗಡಿ, ಹಳೆಯಂಗಡಿ, ಪಣಂಬೂರು, ಪಡುಬಿದ್ರಿ, ಹೆಜಮಾಡಿ, ಯಡ್ತಾಡಿ, ಅಡ್ವೆ, ಬಜ್ಪೆ, ಬೆಳುವಾಯಿ, ಮಂಗಳೂರು ಮಹಿಳಾ, ಕಂಕನಾಡಿ, ಕೂಳೂರು, ಸುಳ್ಯ, ಬೆಳ್ತಂಗಡಿ ಮತ್ತು ಬಂಟ್ವಾಳ ಘಟಕಗಳಿಂದ ವಿದ್ಯಾರ್ಥಿ ವೇತನ ಮತ್ತು ಕಲಿಕಾ ಸಾಮಾಗ್ರಿ ವಿತರಣೆ, ಪ್ರೇರಣಾ ಶಿಬಿರಗಳು ಹಾಗೂ ಮಕ್ಕಳಹಬ್ಬ ಮೊದಲಾದ ಕಾರ್ಯಕ್ರಮಗಳು ವಿದ್ಯಾ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ತೋರಿಸುತ್ತದೆ. ಸುರತ್ಕಲ್, ಪಣಂಬೂರು, ಮಂಗಳೂರು, ಕಂಕನಾಡಿ, ಹೆಜಮಾಡಿ, ಸಸಿಹಿತ್ಲು, ಹಳೆÀಯಂಗಡಿ, ಪುತ್ತೂರು, ಅಡ್ವೆ, ಕೂಳೂರು, ಯಡ್ತಾಡಿ, ಪಡುಬಿದ್ರಿ ಘಟಕಗಳು ನಡೆಸಿದ ಗುರುಜಯಂತಿ ಪ್ರಯುಕ್ತ ಕಾರ್ಯಕ್ರಮಗಳು ಗುರುವರ್ಯರ ತತ್ಪಾರ್ದಶಗಳ ಮೇಲಿರುವ ನಂಬಿಕೆಯನ್ನು ತಿಳಿಸುತ್ತದೆ. ಕುಟುಂಬದ ಆಧಾರ ಸ್ತಂಭವಾಗಿದ್ದ ಸದಸ್ಯನ ಅಕಾಲ ಮೃತ್ಯುವಿನಿಂದ ಕಂಗಾಲಾದ ಬಡಕುಟುಂಬಕ್ಕೆ ಬೆಳ್ತಂಗಡಿ ಘಟಕದಿಂದ ನೀಡಿದ ರೂ. 50,000/- ಧನಸಹಾಯ ಆದರ್ಶವಾದುದು.
ಮುಲ್ಕಿ, ಹಳೆಯಂಗಡಿ, ಮಂಗಳೂರು ಮಹಿಳಾ, ಅಡ್ವೆ, ಬಜ್ಪೆ, ಬಂಟ್ವಾಳ, ಪುತ್ತೂರು, ಹೆಜಮಾಡಿ, ಉಡುಪಿ, ಕೂಳೂರು ಘಟಕಗಳು ನಡೆಸಿದ ‘ಆಟಿಡೊಂಜಿ ದಿನ’, ‘ಸೋಣದ ಸಂಭ್ರಮ’, ಬಿಸು ಪರ್ಬ, ತುಳುವೆರೆ ತುಡರ್ ಪರ್ಬ, ತುಳುವೆರೆ ತುಳಸೀ ಪರ್ಬ, ನಮ್ಮ ಮನೆಹಬ್ಬ ದೀಪಾವಳಿ ಕಾರ್ಯಕ್ರಮಗಳು ತುಳುನಾಡಿನ ಶ್ರೇಷ್ಠ ಪರಂಪರೆ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವ ಪ್ರಯತ್ನವಾಗಿದೆ. ಮುಲ್ಕಿ, ಮಂಗಳೂರು ಮಹಿಳಾ ಮತ್ತು ಸುಳ್ಯ ಘಟಕಗಳು ನಡೆಸಿದ ವನಮಹೋತ್ಸವ ಕಾರ್ಯಕ್ರಮಗಳು ಯುವವಾಹಿನಿಯ ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸುತ್ತದೆ. ಮಂಗಳೂರು, ಮಂಗಳೂರು ಮಹಿಳಾ, ಉಪ್ಪಿನಂಗಡಿ, ಬಂಟ್ವಾಳ, ಸುರತ್ಕಲ್, ಸಸಿಹಿತ್ಲು, ಕೂಳೂರು ಹಾಗೂ ಉಡುಪಿ ಘಟಕಗಳಿಂದ ನಡೆಸಲ್ಪಟ್ಟ ವ್ಯಕ್ತಿತ್ವ ವಿಕಸನ, ಭಾಷಣ ಕಲೆ, ನಾಯಕತ್ವ, ಸಭಾಕಂಪನ, ಶಿಬಿರ ನಿವಾರಕ, ಶಿಬಿರ ನಿವಾರಕ, ವೃತ್ತಿ ಕೌಶಲ್ಯ, ಸೌಂದರ್ಯ ವೃದ್ಧಿ ತರಬೇತಿ ಹಾಗೂ ಮಾಹಿತಿ ಶಿಬಿರಗಳು ಯುವವಾಹಿನಿಯ ಯುವ ನಾಯಕರುಗಳನ್ನು ತಯಾರು ಮಾಡುವ ಪ್ರಯತ್ನಗಳು, ಹೆಜಮಾಡಿ, ಅಡ್ವೆ, ಮಂಗಳೂರು,ಹಳೆಯಂಗಡಿ ಮತ್ತು ಪುತ್ತೂರು ಘಟಕಗಳ ಸಾರ್ವಜನಿಕ ಶನಿಪೂಜೆ, ಸತ್ಯನಾರಾಯಣ ಪೂಜೆ, ಯಕ್ಷಗಾನ ತಾಳಮದ್ದಲೆ, ಯಕ್ಷಗಾನ ತರಬೇತಿ, ಶಿವಗಿರಿ ತೀರ್ಥಾಟನಂ ಕಾರ್ಯಕ್ರಮಗಳು, ಹೆಚ್ಚಿನ ಘಟಕಗಳಿಂದ ನಡೆದ ಶಿವಗಿರಿ ಯಾತ್ರೆ, ಧಾರ್ಮಿಕ ಕ್ಷೇತ್ರಗಳ ಸಂದರ್ಶನಗಳು ಯುವವಾಹಿನಿಯ ಧಾರ್ಮಿಕ ಪ್ರಜ್ಞೆಯನ್ನು ತೋರಿಸುತ್ತದೆ.ಸಂಪರ್ಕ ನೆಲೆಯಲ್ಲಿ ಎಲ್ಲಾ ಘಟಕಗಳಿಂದ ಪ್ರವಾಸ, ಸ್ನೇಹ ಮಿಲನ, ತಮ್ಮನದ ಗಮ್ಮತ್, ಬೆಳದಿಂಗಳ ಊಟ, ಕುಟುಂಬ ಮಿಲನ ಕಾರ್ಯಕ್ರಮಗಳು ಸಮಾಜದ ಜನರ ಸಂಪರ್ಕದ ಕೊಂಡಿಯನ್ನು ಬಲಪಡಿಸುತ್ತಾ ಬಂದಿರುತ್ತದೆ. ಸರಕಾರದ ವತಿಯಿಂದ ನಡೆದ ನಾರಾಯಣ ಗುರುಜಯಂತಿ ಆಚರಣೆಯಲ್ಲಿ ವಾಹನ ಜಾಥಾದೊಂದಿಗೆ ಮಂಗಳೂರಿನ ಎಲ್ಲಾ ಘಟಕಗಳ ಪಾಲ್ಗೊಳ್ಳುವಿಕೆ, ಗುರುಜಯಂತಿ ಅಂಗವಾಗಿ ಪುತ್ತೂರು ಘಟಕದಿಂದ ಸರಕಾರಿ ಆಸ್ಪತ್ರೆಗೆ 6 ಪ್ಯಾನ್ ವಿತರಣೆ, ಅಡ್ವೆ ಘಟಕದ “ಹೆತ್ತವರೊಂದಿಗೆ ಈ ದಿನ”, ಸುರತ್ಕಲ್ ಮತ್ತು ಕಂಕನಾಡಿ ಘಟಕದಿಂದ ಗುರುಸ್ಮರಣೆ, ಬೆಳ್ತಂಗಡಿ, ಪಣಂಬೂರು ಮತ್ತು ಕೂಳೂರು ಘಟಕದಿಂದ “ನಾರಾಯಣ ಗುರು ತತ್ವ ಅನುಷ್ಠಾನದಲ್ಲಿ ನಮ್ಮ ಸಮಾಜ” ಎನ್ನುವ ಕಾರ್ಯಕ್ರಮ, ನಾರಾಯಣಗುರು ಭಾವಚಿತ್ರ ವಿತರಣೆ ಇವೆಲ್ಲವು ಗುರುಗಳ ತತ್ವಗಳ ಅಡಿಯಲ್ಲಿ ಯುವವಾಹಿನಿಯ ಸಾಧನೆಗಳು. ಸುರತ್ಕಲ್ ಘಟಕದ ಸದಸ್ಯರಿಗೆ ಕ್ರೀಡೋತ್ಸವ, ನಿಡ್ಡೋಡಿ, ಬೆಳುವಾಯಿ ಹಾಗೂ ಹೆಜಮಾಡಿ ಘಟಕದಿಂದ ಗ್ರಾಮಸ್ಥರಿಗೆ ಕ್ರೀಡಾಕೂಟ, ಮಹಿಳಾ ಘಟಕದಿಂದ ಮಹಿಳೆಯರಿಗೆ ಅಂತರ್‍ಘಟಕ ಕ್ರೀಡಾಕೂಟ, ಕ್ರೀಡಾ ಕ್ಷೇತ್ರದ ಸಾಧನೆಗಳು.
ಕೇಂದ್ರ ಸಮಿತಿಯ ನಿರ್ದೇಶಕರಿಂದ “ಆಂತರ್ಯ” ಎಂಬ ಮಹಿಳಾ ದಿನಾಚರಣೆಯ ಕಾರ್ಯಕ್ರಮ, ಯುವ ಕ್ರೀಡಾ ಸಂಗಮ-2017, ಪುತ್ತೂರಿನಲ್ಲಿ ಬೃಹತ್ ಆರೋಗ್ಯ ಶಿಬಿರ, ಕೂಳೂರಿನ ‘ಅಭಿವ್ಯಕ್ತಿ’ ಬಂಟ್ವಾಳದ ‘ಅನ್ವೇಷಣಾ 2016” ಶ್ರೇಷ್ಠ ಕಾರ್ಯಕ್ರಮಗಳು.
ವಿಶೇಷ ಕಾರ್ಯಕ್ರಮವಾಗಿ ವರುಷಕ್ಕೊಂದು ಮನೆ ಹರುಷಕ್ಕೊಂದು ನೆಲೆ ಎಂಬ ನಿಟ್ಟಿನಲ್ಲಿ ಹೆಜಮಾಡಿ, ಉಡುಪಿ, ಬಂಟ್ವಾಳ ಘಟಕದಿಂದ ಬಡ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕಂಕನಾಡಿ ಘಟಕದಿಂದ ಮಹಾಂಕಾಳಿ ದೈವಸ್ಥಾನಕ್ಕೆ 50 ಕುರ್ಚಿಗಳ ವಿತರಣೆ, ಮಹಿಳಾ ಘಟಕದಿಂದ ಯಶಸ್ವೀ ವಧು-ವರರ ಸಮಾವೇಶ, ಸಸಿಹಿತ್ಪು, ಉಪ್ಪಿನಂಗಡಿ ಹಾಗೂ ಅಡ್ವೆ ಘಟಕದಿಂದ ಮನೆ ನಿರ್ಮಾಣಕ್ಕೆ ತಲಾ 10,000/- ರೂಪಾಯಿಗಳ ಧನಸಹಾಯ, ಹಲವು ಘಟಕಗಳಿಂದ ಶ್ರದ್ಧಾ ಕೇಂದ್ರ ಮತ್ತು ಶಾಲಾ ವಠಾರಗಳ ಸ್ವಚ್ಛತಾ ಕಾರ್ಯಕ್ರಮ, ನಾರಾಯಣ ಗುರು ರಸ್ತೆ ನಾಮಕರಣ ಮಾಡುವರೇ ಹಳೆಯಂಗಡಿ ಘಟಕದ ಸಹಕಾರ ಈ ಎಲ್ಲಾ ಕಾರ್ಯಗಳು ಸಾಮಾಜಿಕ ನೆಲೆಯಲ್ಲಿ ಮೂಡಿ ಬಂದಿವೆ. ಈ ಎಲ್ಲಾ ಕಾರ್ಯಕ್ರಮಗಳನ್ನು ಮಾಡುತ್ತಿರುವ ಯುವವಾಹಿನಿ ಸಮಾಜದ ಜನರಿಗೆ ಸ್ಪೂರ್ತಿಯಾಗಿ, ಆಸರೆಯಾಗಿ ನೆರಳಾಗಿ ಇದ್ದು ಬಿಲ್ಲವ ಸಮಾಜದ ಅಂತರ್‍ಗಂಗೆಯಾಗಿ ಹರಿಯುತ್ತಿದೆ.
ಯುವವಾಹಿನಿಯ ‘ಯುವ ಸಿಂಚನ’ ಪ್ರತಿ ತಿಂಗಳು ಹೊರ ತರುವಲ್ಲಿ ಹಾಗೂ ವಿಶೇಷಾಂಕವನ್ನು ವಿಶಿಷ್ಟ ರೀತಿಯಲ್ಲಿ ಬರುವಂತೆ ಶ್ರಮಿಸಿದ ದಿನಕರ ಡಿ. ಬಂಗೇರ, ಗಂಗಾಧರ ಪೂಜಾರಿ ಹಾಗೂ ಸಂಪಾದಕ ಮಂಡಳಿಯವರಿಗೆ, ಯುವವಾಹಿನಿ ವೆಬ್‍ಸೈಟನ್ನು ಸುಂದರವಾಗಿ ವಿನ್ಯಾಸಗೊಳಿಸಿ ಉದ್ಘಾಟನೆ ಮಾಡಿದ್ದಲ್ಲದೆ ಅದನ್ನು ಹೆಚ್ಚೆಚ್ಚು ಜನರು ವೀಕ್ಷಿಸುವಂತೆ ಹಗಲಿರುಳು ಶ್ರಮಿಸುತ್ತಿರುವ ರಾಜೇಶ್ ಸುವರ್ಣರಿಗೆ, ವಿಶೇಷಾಂಕಕ್ಕೆ ಜಾಹೀರಾತು ಸಂಗ್ರಹ ಮಾಡಿದ ಹರೀಶ್ ಪಚ್ಚನಾಡಿ, ಮೋಹನ್‍ರಾಜ್ ಮತ್ತು ಎಲ್ಲಾ ಘಟಕದವರಿಗೆ, ಯೋಗ್ಯ ಸಾಧಕರನ್ನು ಗುರುತಿಸಿ ಸನ್ಮಾನ ಮಾಡುವಲ್ಲಿ ಕೆಲಸ ಮಾಡಿದ ಸಂಚಾಲಕರು ಹಾಗೂ ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಮತ್ತು ಅವರ ತಂಡಕ್ಕೆ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಯಶವಂತ ಪೂಜಾರಿ, ಕಾರ್ಯದರ್ಶಿ ನಿತೇಶ್ ಕರ್ಕೇರ, ಕೋಶಾಧಿಕಾರಿ ದಯಾನಂದ ಮತ್ತು ಎಲ್ಲಾ ಪದಾಧಿಕಾರಿಗಳಿಗೆ ಹಾಗೂ ಕೇಂದ್ರ ಸಮಿತಿಯ ಕೆಲಸ ಕಾರ್ಯಗಳಲ್ಲಿ ಸಹಕರಿಸಿದ ಎಲ್ಲಾ ಸದಸ್ಯರುಗಳಿಗೆ ನನ್ನ ಅಂತಃರಾಳದ ನಮನಗಳು. ನನ್ನನ್ನು ಪ್ರೋತ್ಸಾಹಿಸಿದ ಯುವವಾಹಿನಿಯ ಗೌರವಾನ್ವಿತ ಸಲಹೆಗಾರರಿಗೆ, ಮಾಜಿ ಅಧ್ಯಕ್ಷರುಗಳಿಗೆ, ಘಟಕಗಳ ಹಾಲಿ ಹಾಗೂ ಮಾಜಿ ಅಧ್ಯಕ್ಷರುಗಳಿಗೆ ಹಾಗೂ ಯುವವಾಹಿನಿಯ ಸರ್ವಸದಸ್ಯರುಗಳಿಗೆ ನನ್ನ ಆತ್ಮೀಯ ವಂದನೆಗಳು.
ಮನುಷ್ಯನ ಶೋಧ ಪ್ರಜ್ಞೆ ಹಾಗೂ ಬದುಕಿನ ಪ್ರತಿಯೊಂದು ಆಯಾಮದಲ್ಲೂ ಎತ್ತರಕ್ಕೇರಬೇಕೆಂಬ ತುಡಿತ ಆತನನ್ನು ಹೊಸ ಹೊಸ ರಂಗದಲ್ಲಿ ತೊಡಗಿಸಿಕೊಳ್ಳಲು, ಹೊಸದನ್ನು ಸಾಧಿಸಲು ಪ್ರೇರಣೆ ನೀಡುತ್ತದೆ. ಯಾವುದೇ ವಿಷಯದ ಬಗ್ಗೆ ಆಳವಾದ ಜ್ಞಾನ, ಯಾವುದೇ ಸುದ್ಧಿ ವಿಷಯಗಳ ಬಗ್ಗೆ ವಿವೇಚಿಸುವುದು ಒಳ್ಳೆಯದು. ಬಿಲ್ಲವ ಸಮಾಜದ ಜನರನ್ನು ಹಲವಾರು ಸಮಸ್ಯೆಗಳು ಕಾಡುತ್ತಿದೆ. ಇದಕ್ಕೆ ಪರಿಹಾರ ದುರಾಭ್ಯಾಸ ದೂರವಿಡುವುದು, ದುಂದುವೆಚ್ಚ ಮಾಡದಿರುವುದು, ಉನ್ನತ ವಿದ್ಯೆಯ ಗಳಿಕೆ, ಸಂಸ್ಕøತಿ ಮತ್ತು ಸಂಸ್ಕಾರಗಳನ್ನು ಮೈಗೂಡಿಸಿಕೊಳ್ಳುವುದು. ಸಮಾಜದ ನೇತಾರರು ಪರಸ್ಪರ ಕಚ್ಚಾಡುವುದನ್ನು ಬಿಟ್ಟು ಸಮಾಜದ ಕುಂದುಕೊರತೆಗಳ ಬಗ್ಗೆ ಆಳವಾದ ಅಧ್ಯಯನ ಮಾಡುವುದರೊಂದಿಗೆ ಸೂಕ್ತವಾದ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ. ಈ ದಿಸೆಯಲ್ಲಿ ಎಲ್ಲಾ ನಾಯಕರು ಒಂದೇ ಛತ್ರದಡಿಯಲ್ಲಿ ಬಂದು ಒಗ್ಗಟ್ಟಿನಿಂದ ಶ್ರಮಿಸಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ನಾಯಕರು ತಮ್ಮ ಒಣ ಪ್ರತಿಷ್ಠೆಯನ್ನು ಬಿಟ್ಟು ಸಮಸ್ತ ಬಿಲ್ಲವ ಸಮಾಜದ ಒಳಿತಿಗೋಸ್ಕರ ಟೊಂಕಕಟ್ಟಿ ನಿಲ್ಲುವ ಮುಖೇನ ಈ ಸಮಾಜದ ಗತವೈಭವವನ್ನು ಮರಳಿ ತರುವಲ್ಲಿ ಯಶಸ್ವಿಯಾಗಬೇಕಾಗಿದೆ. ಈ ದಿಸೆಯಲ್ಲಿ ನಾವೆಲ್ಲರೂ ಮುಂದುವರಿಯೋಣ ಎಂದು ಆಶಿಸುತ್ತಾ ಯುವವಾಹಿನಿಗೆ ನಿಮ್ಮೆಲ್ಲರ ಸಲಹೆ, ಸಹಕಾರ, ಪ್ರೋತ್ಸಾಹ ಮತ್ತು ಮಾರ್ಗದರ್ಶನರೊಂದಿಗೆ ಆಶೀರ್ವಾದವನ್ನು ಬೇಡುತ್ತಾ ವಿರಮಿಸುತ್ತಿದ್ದೇನೆ.
ನಮಸ್ಕಾರ
– ಪದ್ಮನಾಭ ಮರೋಳಿ
ಅಧ್ಯಕ್ಷರು, ಯುವವಾಹಿನಿ (ರಿ), ಕೇಂದ್ರ ಸಮಿತಿ ಮಂಗಳೂರು

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!