ಯುವಸಿಂಚನ :- ಜೂನ್ 2017

ಅಧ್ಯಕ್ಷರ ಮಾತು:- ಪದ್ಮನಾಭ ಮರೋಳಿ

ಪದ್ಮನಾಭ ಮರೋಳಿ :-ಅಧ್ಯಕ್ಷರು ಯುವವಾಹಿನಿ (ರಿ) ಕೇಂದ್ರ ಸಮಿತಿ ,ಮಂಗಳೂರು

ಆತ್ಮೀಯರೇ,
ಯುವವಾಹಿನಿಯ ಯುವಸಿಂಚನ ಓದುಗರಿಗೆ ನಮಿಸುತ್ತಾ, ಬಿಲ್ಲವ ಸಮಾಜದ ಯುವ ಸಂಘಟನೆಯಾದ ಯುವವಾಹಿನಿ 30ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಶುಭ ಘಳಿಗೆಯಲ್ಲಿ ನಾವಿದ್ದೇವೆ. ಇದೇ ಬರುವ ಅಗೋಸ್ಟ್ 6ರಂದು 30ನೇ ಸಮಾವೇಶಕ್ಕೆ ಉಪ್ಪಿನಂಗಡಿ ಘಟಕದ ಆತಿಥ್ಯದಲ್ಲಿ ತ್ರಿವೇಣಿ ಸಂಗಮವಾಗುವ ಪುಣ್ಯ ಭೂಮಿಯಾದ ಉಪ್ಪಿನಂಗಡಿಯಲ್ಲಿ ಬಿರುಸಿನ ಸಿದ್ಧತೆಗಳು ನಡೆಯುತ್ತಿದೆ. ಈ ವರುಷದಲ್ಲಿ ಎಲ್ಲಾ ಘಟಕಗಳು ಕ್ರಿಯಾತ್ಮಕವಾದ ವಿಶಿಷ್ಠ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರೊಂದಿಗೆ ಯುವವಾಹಿನಿಯು ನಿಂತ ನೀರಾಗದೆ ನಿರಂತರವಾಗಿ ಹರಿಯುತ್ತಾ ಸಮಾಜಮುಖಿ ಚಿಂತನೆಯೊಂದಿಗೆ ಕಾರ್ಯಚರಿಸುತ್ತಾ ಜನರ ಸಂಪರ್ಕದ ಕೊಂಡಿಯನ್ನು ವಿಶಾಲವಾಗಿ ವೃದ್ಧಿಸಿಕೊಂಡಿದೆ. ಮುಖ್ಯವಾಗಿ ನಮ್ಮ ಯುವ ಪೀಳಿಗೆಯನ್ನು ಹೆಚ್ಚೆಚ್ಚು ಆಕರ್ಷಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳು ಮೂಡಿಬರಬೇಕಾಗಿದೆ. “ಬದಲಾವಣೆ ಜಗದ ನಿಯಮ” ಅದಕ್ಕನುಗುಣವಾಗಿ ಮುಂದಿನ ದಿನಗಳಲ್ಲಿ ಬದಲಾವಣೆ ಸಹಿತ ಬೆಳವಣಿಗೆಗಳ ಬಗ್ಗೆ ಕನಸಿದೆ, ಚಿಂತನೆಯಿದೆ. ಸಮಾಜದ ಹಿರಿಯರು ಮತ್ತು ಹಿತಚಿಂತಕರೊಡನೆ ಸಮಾಲೋಚನೆ ಕಾರ್ಯಕ್ರಮವನ್ನು ಅನುಷ್ಠಾನ ಮಾಡುವ ಯೋಜನೆಗಳಿಗೆ ನಿಮ್ಮೆಲ್ಲರ ಸಲಹೆ, ಸಹಕಾರ, ಪ್ರೋತ್ಸಾಹ ಮತ್ತು ಮಾರ್ಗದರ್ಶನವನ್ನು ಬಯಸುತ್ತಿದ್ದೇವೆ.
ಸಮಾಜದ ಯಾವುದೇ ವಿದ್ಯಾರ್ಥಿಯು ಹಣದ ಕೊರತೆಯಿಂದ ತನ್ನ ವಿದ್ಯಾಭ್ಯಾಸ ಮೊಟಕುಗೊಳಿಸಬಾರದು ಎಂಬ ನಿಟ್ಟಿನಲ್ಲಿ ಯುವ ವಾಹಿನಿ ವಿದ್ಯಾನಿಧಿ ಟ್ರಸ್ಟ್ ರಚಿಸಿ ಕಾರ್ಯಾಚರಿಸುತ್ತಿದೆ. ಅದೆಷ್ಟೋ ವಿದ್ಯಾರ್ಥಿಗಳು ಆರ್ಥಿಕ ಮುಗ್ಗಟ್ಟಿನಿಂದ ತಮ್ಮ ವಿದ್ಯಾಭ್ಯಾಸವನ್ನು ಮುಂ ದುವರಿಸಲಾಗದ ಸ್ಥಿತಿಯಲ್ಲಿದ್ದಾರೆ. ಇವರೆಲ್ಲರ ಬೇಡಿಕೆಗಳನ್ನು ಪೂರೈಸಲು ಈ ವಿದ್ಯಾನಿಧಿ ಟ್ರಸ್ಟ್‍ಗೆ ಸಮಾಜದ ದಾನಿಗಳ ಸಹಕಾರ ಬಹಳ ಅಗತ್ಯವಾಗಿದೆ. ಸಮಾಜದ ಬಡವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಹೊಂದಿ ಸತ್ಪ್ರಜೆಗಳಾಗಿ ಮೂಡಿಬರಲು ತಮ್ಮೆಲ್ಲರ ತನು-ಮನ ಧನದ ಸಹಕಾರವನ್ನು ಯಾಚಿಸುತ್ತಾ, ನಾವೆಲ್ಲರೂ ನಾರಾಯಣ ಗುರುಗಳು ತೋರಿಸಿದ ಬೆಳಕಿನ ದಾರಿಯಲ್ಲಿ ಮುಂದುವರಿಯೋಣವೆಂದು ಹಾರೈಸುತ್ತೇನೆ.
ಆತ್ಮಾರ್ಥಂ ಜೀವಲೋಕೇಸ್ಮಿನ್ ಕೋ ನ ಜೀವತಿ ಮಾನವಃ |
ಪರಂ ಪರೋಪಕಾರಾರ್ಥಂ ಯೋ ಜೀವತಿ ಸ ಜೀವತಿ ||
ಜಗತ್ತಿನಲ್ಲಿ ಸ್ವಂತಕ್ಕಾಗಿ ಮಾತ್ರ ಎಲ್ಲ ಮನುಷ್ಯರೂ ಜೀವನ ಮಾಡುತ್ತಾರೆ. ಆದರೆ ಯಾರು ಪರರಿಗಾಗಿ ಜೀವಿಸುತ್ತಾರೋ ಅವರೇ ಚಿರಂಜೀವಿಗಳಾಗುತ್ತಾರೆ.
ಯುವವಾಹಿನಿಗೆ ಹೊಸ ಕಚೇರಿ ಮತ್ತು ಸಭಾಂಗಣವನ್ನು ಸಾಂಘಿಕ ಶಕ್ತಿಯಿಂದ ಮಾಡಿ, ಅದರ ಉದ್ಘಾಟನೆ ಮಾಡುವ ದಿನ “ಯುವ ಕಲೋತ್ಸವ 2017” ಹಮ್ಮಿಕೊಂಡು ಎಲ್ಲಾ ಕಾರ್ಯಗಳಲ್ಲಿ ಕೇಂದ್ರ ಸಮಿತಿಗೆ ಬೆನ್ನೆಲುಬಾಗಿ ನಿಂತು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಮಂಗಳೂರು ಘಟಕದ ಅಧ್ಯಕ್ಷರು, ಕೇಂದ್ರ ಸಮಿತಿಯ ಉಪಾಧ್ಯಕ್ಷರು, ಘಟಕದಲ್ಲಿರುವ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರುಗಳು ಮತ್ತು ಸರ್ವಸದಸ್ಯರುಗಳನ್ನು ಪ್ರಾಂಜಲ ಮನಸ್ಸಿನಿಂದ ಅಭಿನಂದಿಸುತ್ತೇನೆ. ಮಕ್ಕಳಿಗೆ ಬೇಸಿಗೆ ಶಿಬಿರ ಅಲ್ಲದೆ ಯುವಕ್ರೀಡಾ ಸಂಗಮ-2017 ಮತ್ತು ಯುವ ಕಲೋತ್ಸವ 2017 ಎರಡರಲ್ಲೂ ಭಾಗವಹಿಸಿ ಪ್ರಥಮ ಬಹುಮಾನವನ್ನು ತನ್ನದಾಗಿಸಿಕೊಂಡ ಮಂಗಳೂರು ಮಹಿಳಾ ಘಟಕದ ಅಧ್ಯಕ್ಷರು ಮತ್ತು ಸದಸ್ಯರುಗಳಿಗೆ ನನ್ನ ಪ್ರೀತಿಯ ನಮನಗಳು. “ಯುವ ಕಲೋತ್ಸವ 2017” ಇದರಲ್ಲಿ ಉತ್ತಮ ನಿರೂಪಣೆಯಲ್ಲಿ ಎರಡನೇ ಬಹುಮಾನ ಗಳಿಸಿದ, ಮಹಿಳೆಯರಿಗೆ ಚಾಕಲೇಟು, ಸ್ವಾಸ್ ಮತ್ತು ಆಭರಣ ತಯಾರಿ ಹಾಗೂ ಸೌಂದರ್ಯವರ್ಧಕ ಮೊದಲಾದ ತರಬೇತಿಗಳನ್ನು ನೀಡಿದ ಕಂಕನಾಡಿ ಘಟಕಕ್ಕೆ ನಲ್ಮೆಯ ವಂದನೆಗಳು. ಬಿಲ್ಲವ ಸಂಘದ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ಹಾಗೂ ಮಕ್ಕಳಿಗೆ ಪುಸ್ತಕ ವಿತರಣೆ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಹಳೆಯಂಗಡಿ ಘಟಕಕ್ಕೆ ವಂದನೆಗಳು. ಕ್ರೂಸ್ ಲಾಂಜ್‍ನಲ್ಲಿ “ತಮ್ಮನದ ಗಮ್ಮತ್” ಎಂಬ ವಿನೂತನ ಕಾರ್ಯಕ್ರಮ ಮಾಡಿದ ಹಾಗೂ 25ನೇ ತಾರೀಕಿಗೆ ಪದಗ್ರಹಣ ಕಾರ್ಯಕ್ರಮವನ್ನು ಹಮ್ಮಿಕೊಂಡ ಕೂಳೂರು ಘಟಕಕ್ಕೆ ಅಂತರಾಳದ ನಮನಗಳು. ಮಳೆಗಾಲ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಅಣೆಕಟ್ಟು ತೆರವುಗೊಳಿಸುವಿಕೆ, ಮಹಾಸಭೆ ಮತ್ತು ಪದಗ್ರಹಣವನ್ನು ಸನ್ಮಾನಗಳೊಂದಿಗೆ ಮಾಡಿದ ಅಡ್ವೆ ಘಟಕಕ್ಕೆ ಪ್ರೀತಿಯ ವಂದನೆಗಳು. ಸಂಪರ್ಕದ ನೆಲೆಯಲ್ಲಿ ಸಮಾಜ ಬಾಂಧವರನ್ನೆಲ್ಲ ಒಟ್ಟುಗೂಡಿಸಿ ಶನಿಪೂಜೆಯನ್ನು ಅದ್ಧೂರಿಯಾಗಿ ಮಾಡಿದ ಹೆಜಮಾಡಿ ಘಟಕಕ್ಕೆ ಮನತುಂಬಿದ ನಮನಗಳು. ಮುಂದಿನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಸನ್ಮಾನಗಳೊಂದಿಗೆ ಮಾಡಲು ಹೊರಟಿರುವ ಪಡುಬಿದ್ರಿ ಘಟಕಕ್ಕೆ ಹೃತ್ಪೂರ್ವಕ ವಂದನೆಗಳು. “ಯುವ ಕ್ರೀಡಾ ಸಂಗಮ 2017” ಅಂತರ್‍ಘಟಕ ಹಗ್ಗಜಗ್ಗಾಟ ಸ್ಪರ್ಧೆಯನ್ನು ಗುಣಮಟ್ಟದಲ್ಲಿ ಯಾವೊಂದು ರಾಷ್ಟ್ರೀಯ ಕ್ರೀಡಾಕೂಟಗಳಿಗೂ ಕಡಿಮೆ ಇಲ್ಲವೆಂಬಂತೆ ಆಯೋಜನೆ ಮಾಡಿ ತೋರಿಸಿ ಜನಮೆಚ್ಚುಗೆ ಪಡೆದ ಉಡುಪಿ ಘಟಕಕ್ಕೆ ಪ್ರೀತಿಯ ವಂದನೆಗಳು. ಕುಟುಂಬ ಸಮ್ಮಿಲನ ಕಾರ್ಯಕ್ರಮವನ್ನು ಮೈಸೂರಿನ ಜಿಆರ್‍ಎಸ್ ಪ್ಯಾಂಟೆಸಿ ಪಾರ್ಕ್ ಇಲ್ಲಿ ಮನೋರಂಜನೆಯೊಂದಿಗೆ ಆಯೋಜನೆ ಮಾಡಿದ ಪುತ್ತೂರು ಘಟಕಕ್ಕೆ ನಲ್ಮೆಯ ನಮನಗಳು. ಯುವಕಲೋತ್ಸವದಲ್ಲಿ ಭಾಗವಹಿಸಿ ಸಮಾಧಾನಕರ ಬಹುಮಾನ ಪಡೆದ ಹಾಗೂ 21 ತಾರೀಕಿಗೆ ಮಹಿಳೆಯರಿಗೆ ಚಾಕಲೇಟು, ಸ್ವಾಸ್ ಮತ್ತು ಆಭರಣ ತಯಾರಿ ತರಬೇತಿಯನ್ನು ಹಮ್ಮಿಕೊಂಡ ಕೊಲ್ಯ ಘಟಕಕ್ಕೆ ಅಭಿನಂದನೆಗಳು. ಶೇಣಿ ಗರಡಿಯಲ್ಲಿ ಗಿಡನೆಡುವ ಮೂಲಕ ವನಮಹೋತ್ಸವ ಮತ್ತು ಸ್ಥಳೀಯ ಬಿಲ್ಲವ ಸಂಘದೊಂದಿಗೆ ಸೇರಿ ಪ್ರತಿಭಾ ಪುರಸ್ಕಾರವನ್ನು ಮಾಡಿದ ಸುಳ್ಯ ಘಟಕಕ್ಕೆ ಆತ್ಮೀಯ ವಂದನೆಗಳು. ಯುವವಾಹಿನಿಯ ವಾರ್ಷಿಕ ಸಮಾವೇಶದ ಆತಿಥ್ಯವನ್ನು ವಹಿಸಿ ಸಮಾವೇಶವನ್ನು ವಿಶೇಷ ರೀತಿಯಲ್ಲಿ ಮಾಡುವರೇ ಚಿಂತನ-ಮಂಥನ ಸಭೆಗಳನ್ನು ನಡೆಸಿಕೊಂಡು ತಯಾರಿ ನಡೆಸುತ್ತಿರುವ ಉಪ್ಪಿನಂಗಡಿ ಘಟಕದ ಅಧ್ಯಕ್ಷರು ಮತ್ತು ಸರ್ವಸದಸ್ಯರುಗಳಿಗೆ ಪ್ರೀತಿಪೂರ್ವಕ ನಮನಗಳು. ಅಪಘಾತದಲ್ಲಿ ಮೃತಪಟ್ಟ ಯುವವಾಹಿನಿ ಸದಸ್ಯರಾದ ಚಂದ್ರಹಾಸ ಬರಮೇಲು ಅವರ ಕುಟುಂಬಕ್ಕೆ 50,000/- ರೂಪಾಯಿಗಳ ಧನಸಹಾಯ ನೀಡಿದ ಬೆಳ್ತಂಗಡಿ ಘಟಕಕ್ಕೆ ಆತ್ಮೀಯ ವಂದನೆಗಳು. “ಯುವ ಕ್ರೀಡಾಸಂಗಮ-2017”ರಲ್ಲಿ ಭಾಗವಹಿಸಿ ಮೊದಲ ಬಹುಮಾನ ಗಳಿಸಿದ ಕಟಪಾಡಿ ಘಟಕಕ್ಕೆ ನಮನಗಳು. ಬಿಲ್ಲವ ಸಮಾಜದ ಕಟ್ಟುಪಾಡುಗಳ ಬಗ್ಗೆ ಮಹಿತಿ ಶಿಬಿರ ಮತ್ತು ಘಟಕದ ಮಾಜಿ ಅಧ್ಯಕ್ಷರುಗಳ ಸಭೆ ನಡೆಸಲು ತಯಾರಿ ಮಾಡುತ್ತಿರುವ ಸುರತ್ಕಲ್ ಘಟಕಕ್ಕೆ ಆತ್ಮೀಯ ವಂದನೆಗಳು. ಸ್ಥಳೀಯ ಬಿಲ್ಲವ ಸಂಘದೊಂದಿಗೆ ಬಡಕುಟುಂಬಕ್ಕೆ ಮನೆ ನಿರ್ಮಾಣ ಮಾಡಿಕೊಡುವ ಕಾರ್ಯದಲ್ಲಿ ಘಟಕದಿಂದ ಹಂಚುಗಳನ್ನು ಒದಗಿಸಿದ ಹಾಗೂ ಯುವ ಕಲೋತ್ಸವ – 2017ರಲ್ಲಿ 3ನೇ ಬಹುಮಾನ ಗಳಿಸಿದ ಸಸಿಹಿತ್ಲು ಘಟಕಕ್ಕೆ ಪ್ರೀತಿಪೂರ್ವಕ ನಮನಗಳು. ಮಕ್ಕಳ ಬೇಸಿಗೆ ಶಿಬಿರವನ್ನು ಸರಕಾರಿ ಸಂಸ್ಥೆಗಳ ಸಹಕಾರದೊಂದಿಗೆ ಅತ್ಯಂತ ಯಶಸ್ವಿಯಾಗಿ ಮಾಡಿದ ಹಾಗೂ ಪದಗ್ರಹಣ ಕಾರ್ಯಕ್ರಮದಲ್ಲಿ ಹಿರಿಯರನ್ನು ಸನ್ಮಾನಿಸಿದ ಹಾಗೂ ಕಿರಿಯರನ್ನು ಪ್ರೋತ್ಸಾಹಿಸಿದ ಯಡ್ತಾಡಿ ಘಟಕಕ್ಕೆ ಪ್ರೀತಿಯ ಅಭಿನಂದನೆಗಳು.
ಯುವ ಕಲೋತ್ಸವ-2017ರಲ್ಲಿ 2ನೇ ಬಹುಮಾನವನ್ನು ಗಳಿಸಿದ ಹಾಗೂ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ಯಶಸ್ವಿಯಾಗಿ ಮಾಡಿದ ಬಜ್ಪೆ ಘಟಕಕ್ಕೆ ಶುಭಾಶಯಗಳು. ‘ಯುವ ಕ್ರೀಡಾ ಸಂಗಮ-2017’ರಲ್ಲಿ 2ನೇ ಬಹುಮಾನ ಮತ್ತು ಪದಗ್ರಹಣ ಕಾರ್ಯಕ್ರಮವನ್ನು ಬಹಳ ಅರ್ಥಪೂರ್ಣವಾಗಿ ನೆರವೇರಿಸುವರೇ ಸಿದ್ಧತೆ ನಡೆಸುತ್ತಿರುವ ಬಂಟ್ವಾಳ ಘಟಕಕ್ಕೆ ಮನದಾಳದ ನಮನಗಳು. ಮಹಾಸಭೆಯನ್ನು ಮಾಡಿ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡುವುದರೊಂದಿಗೆ ತಾ. 14-6-2017ರಂದು ಪದಗ್ರಹಣ ಕಾರ್ಯಕ್ರಮವನ್ನು ಸನ್ಮಾನಗಳೊಂದಿಗೆ ಮಾಡಿದ ಮೂಲ್ಕಿ ಘಟಕಕ್ಕೆ ಅಂತರಾಳದ ನಮನಗಳು. ನಿರಂತರವಾಗಿ ಸಭೆಗಳನ್ನು ನಡೆಸುತ್ತಾ ಸಮಾಜದ ಬಗ್ಗೆ ಚಿಂತನೆ ಮಾಡುತ್ತಿರುವ ಬೆಳುವಾಯಿ ಘಟಕಕ್ಕೆ ನಲ್ಮೆಯ ವಂದನೆಗಳು. ಯುವವಾಹಿನಿ ವೆಬ್‍ಸೈಟ್‍ನಲ್ಲಿ ಬಹಳ ಉತ್ತಮ ರೀತಿಯಲ್ಲಿ ಹೊಸ ವಿಶ್ವಾಸದೊಂದಿಗೆ ವರದಿಗಳನ್ನು ನೀಡುತ್ತಿರುವುದಲ್ಲದೆ ವೆಬ್‍ಸೈಟನ್ನು ಹೆಚ್ಚು ಹೆಚ್ಚು ಜನರು ವೀಕ್ಷಿಸುವಂತೆ ಪ್ರಯತ್ನ ಮಾಡುತ್ತಿರುವ ರಾಜೇಶ್ ಸುವರ್ಣರವರಿಗೆ ಕೃತಜ್ಞತೆಗಳು. “ಯುವ ಕ್ರೀಡಾ ಸಂಗಮ-2017” ಒಂದು ಉತ್ತಮ ಅಂತರ್‍ಘಟಕ ಸ್ಪರ್ಧೆಯಾಗಿ ಮೂಡಿ ಬರಲು ಶ್ರಮ ವಹಿಸಿದ ಕೇಂದ್ರ ಸಮಿತಿಯ ಕ್ರೀಡಾ ನಿರ್ದೇಶಕರಾದ ರಘುನಾಥ್ ಮಾಬಿಯಾನ್‍ರವರಿಗೆ ವಂದನೆಗಳು. ಯುವಸಿಂಚನ ಮಾಸ ಪತ್ರಿಕೆ ಉತ್ತಮವಾಗಿ ಮೂಡಿಬರಲು ಶ್ರಮಿಸುತ್ತಿರುವ ಸಿಂಚನ ಸಂಪಾದಕರಾದ ಗಂಗಾಧರ್ ಪೂಜಾರಿಯವರಿಗೆ ಪ್ರೀತಿಪೂರ್ವಕ ವಂದನೆಗಳು. ಯುವವಾಹಿನಿಯ ನೂತನ ಕಚೇರಿ ಮತ್ತು ಸಭಾಂಗಣ ಉದ್ಘಾಟನೆಯಲ್ಲಿ ಪಾಲ್ಗೊಂಡ ಎಲ್ಲಾ ಘಟಕಗಳ ಅಧ್ಯಕ್ಷರುಗಳು ಮತ್ತು ಸದಸ್ಯರುಗಳಿಗೆ ಹಾಗೂ ಸಮಾಜ ಬಾಂಧವರಿಗೆ ಮನದಾಳದ ವಂದನೆಗಳನ್ನು ಸಲ್ಲಿಸುತ್ತಾ ಮುಂದೆಯೂ ನಿಮ್ಮ ಸಹಕಾರ ಇದೇ ರೀತಿ ಇರಲಿ ಎಂದು ಹಾರೈಸುತ್ತೇನೆ.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!