ಯುವಸಿಂಚನ - ಏಪ್ರಿಲ್ 2017

ಅಧ್ಯಕ್ಷರ ಮಾತು – ಪದ್ಮನಾಭ ಮರೋಳಿ

ಕಲಿಯುತ್ತಿರುವ ಮಕ್ಕಳೆಲ್ಲರೂ ವಾರ್ಷಿಕ ಪರೀಕ್ಷೆಗಳನ್ನು ಎದುರಿಸುತ್ತಿರುವಂತಹ ಸಮಯದಲ್ಲಿ ನಾವಿದ್ದೇವೆ. ಇಂತಹ ಸಮಯದಲ್ಲಿ ಹೆತ್ತವರ ಪಾತ್ರ ಬಹಳ ಮುಖ್ಯವಾದುದು. ನಾವು ಮಕ್ಕಳಿಗೆ ಓದು ಓದು ಎನ್ನುವುದನ್ನು ಬಿಟ್ಟರೆ ಬೇರೇನ್ನನ್ನೂ ಮಾಡುವುದಿಲ್ಲ. ಓದುವ ಮಕ್ಕಳಿರುವ ಮನೆಯವರು ಕೆಲವು ಶಿಷ್ಠಾಚಾರಗಳನ್ನು ಪಾಲಿಸಬೇಕಾದ ಅನಿವಾರ್ಯತೆ ಇದೆ. * ಮಕ್ಕಳಿಗೆ ಓದಲು ಶಾಂತವಾದ ಪರಿಸರವನ್ನು ಒದಗಿಸಬೇಕು. * ಮಕ್ಕಳು ಓದುವ ಸಮಯದಲ್ಲಿ ಆದಷ್ಟು ಟಿ.ವಿ. ಬಂದ್ ಮಾಡಿದರೆ ಒಳ್ಳೆಯದು. * ಮಕ್ಕಳು ಓದುತ್ತಿರುವಾಗ ನಾವು ಕೂಡಾ ಯಾವುದಾದರು ಪುಸ್ತಕ ಅಥವಾ ಪೇಪರ್ ಹಿಡಿದುಕೊಂಡು ಅವರ ಹತ್ತಿರ ಓದುತ್ತಾ ಕುಳಿತುಕೊಳ್ಳಬೇಕು. * ಮಕ್ಕಳು ಓದುತ್ತಿರುವ ಸಮಯದಲ್ಲಿ ನಾವು ಬೇರೆಯವರೊಂದಿಗೆ ಮನೆಯಲ್ಲಿ ಹರಟೆ ಹೊಡೆಯುತ್ತಿದ್ದರೆ ಅದು ಅವರ ಏಕಾಗ್ರತೆಗೆ ಭಂಗ ತರುತ್ತದೆ. ಓದುತ್ತಿರುವ ಸಮಯದಲ್ಲಿ ನಾವು ಅವರಿಗೆ ನೀರು, ಲಘು ಪಾನೀಯ ಹಾಗೂ ಅವರಿಗೆ ಇಷ್ಟವಾದ ತಿಂಡಿಗಳನ್ನು ನೀಡುತ್ತಿರುವುದರ ಜೊತೆಗೆ ಅವರನ್ನು ಪ್ರೋತ್ಸಾಹಿಸಿ ಆತ್ಮ ವಿಶ್ವಾಸ ತುಂಬುವ ಕೆಲಸ ಮಾಡಬೇಕು.

ಆಯಾಯ ಘಟ್ಟದಲ್ಲಿ ಮಕ್ಕಳಿಗೆ ಸರಿಯಾದ ದಾರಿಯಲ್ಲಿ ನಿರ್ಧಾರ ತೆಗೆದುಕೊಳ್ಳುವಂತೆ ಹೆತ್ತವರು ಸಹಕರಿಸಬೇಕು ಹಾಗೂ ಅವರ ಅಭಿರುಚಿಗಳನ್ನು ಅರಿತು, ಅವರಿಗೆ ಹೆಚ್ಚಿನ ಆಸಕ್ತಿ ಇರುವ ಕ್ಷೇತ್ರದಲ್ಲಿ ಮುಂದಿನ ವಿದ್ಯಾಭ್ಯಾಸ ಪಡೆಯುವಂತೆ ನೋಡಿಕೊಂಡಲ್ಲಿ ಅವರ ಜೀವನವು ಸುಖಮಯವಾಗಲು ಸಾಧ್ಯವಿದೆ.

ವಿದ್ಯಾ ದದಾತಿ ವಿನಯಂ ವಿನಯಾದ್ಯಾತಿ ಪಾತ್ರತಾಮ್|
ಪಾತ್ರತ್ವಾದ್ ಧನಮಾಪ್ನೋತಿ ದನಾದ್ಧರ್ಮಸ್ತತಃ ಸುಖಮ್||

(ವಿದ್ಯೆಯಿಂದ ವಿನಯ, ವಿನಯದಿಂದ ಯೋಗ್ಯತೆ, ಯೋಗ್ಯತೆಯಿಂದ ಹಣ, ಹಣದಿಂದ ಧರ್ಮ, ಧರ್ಮದಿಂದ ಸುಖ.)

ವಿದ್ವತ್ವಂ ಚ ನೃಪತ್ವಂ ಚ ನೈವ ತುಲ್ಯಂ ಕದಾಚನ|
ಸ್ವದೇಶೇ ಪೂಜ್ಯತೇ ರಾಜಾ ವಿದ್ವಾನ್ ಸರ್ವತ್ರ ಪೂಜ್ಯತೇ||

(ವಿದ್ಯೆ ಮತ್ತು ಅರಸೊತ್ತಿಗೆಗಳು ಒಂದಕ್ಕೊಂದು ಸರಿಹೊಂದಲಾರವು. ಅರಸನಿಗೆ ತನ್ನ ದೇಶದಲ್ಲಿ ಮಾತ್ರ ಗೌರವ ಇಲ್ಲವೆ ಮನ್ನಣೆ. ಆದರೆ ವಿದ್ಯಾವಂತನಿಗೆ ಎಲ್ಲೆಡೆಯೂ ಮರ್ಯಾದೆ.)

ಪದಗ್ರಹಣ ಕಾರ್ಯಕ್ರಮದಲ್ಲಿ ಇತರ ನಾಲ್ಕು ಘಟಕಗಳು ಸಾಂಸ್ಕೃತಿಕ ಪ್ರದರ್ಶನ ನೀಡುವಂತೆ ಮಾಡಿದ್ದಲ್ಲದೆ, ಸಾಧಕರನ್ನು ಸನ್ಮಾನಿಸುವುದ ಮೂಲಕ ವಿಶಿಷ್ಟ ರೀತಿಯಲ್ಲಿ ಯಶಸ್ವಿ ಕಾರ್ಯಕ್ರಮವನ್ನು ಮಾಡಿದಂತಹ ಮಂಗಳೂರು ಘಟಕಕ್ಕೆ ಪ್ರೀತಿಯ ನಮನಗಳು. ಸ್ತನ ರೋಗಿಗಳ ಮಾಹಿತಿ ಶಿಬಿರವನ್ನು ಯಶಸ್ವಿಯಾಗಿ ಮಾಡಿದ ಹಾಗೂ ಪದಗ್ರಹಣ ಸಮಾರಂಭವನ್ನು ಹಮ್ಮಿಕೊಂಡ ಮಂಗಳೂರು ಮಹಿಳಾ ಘಟಕಕ್ಕೆ ಮನದಾಳದ ವಂದನೆಗಳು. ಶಿವಗಿರಿ ಯಾತ್ರೆಯನ್ನು ಮಾಡಿದ, ಪದಗ್ರಹಣ ಕಾರ್ಯಕ್ರಮವನ್ನು ಸನ್ಮಾನಗಳೊಂದಿಗೆ ಮಾಡಿದ್ದಲ್ಲದೆ ವಾರ್ಷಿಕ ವರದಿಯನ್ನು ವಿಶಿಷ್ಟ ರೀತಿಯಲ್ಲಿ ಪ್ರಚುರ ಪಡಿಸಿದ ಕಂಕನಾಡಿ ಘಟಕಕ್ಕೆ ಅಭಿನಂದನೆಗಳು. ವಿಶ್ವ ಮಹಿಳಾ ದಿನಾಚರಣೆಯನ್ನು ಬಹಳ ಅರ್ಥಪೂರ್ಣವಾದ ಕಾರ್ಯಕ್ರಮವನ್ನು ನೀಡುವುದರ ಮೂಲಕ ಮಾಡಿ ಎಲ್ಲರ ಮೆಚ್ಚುಗೆಯನ್ನು ಪಡೆದ ಕೂಳೂರು ಘಟಕಕ್ಕೆ ನಲ್ಮೆಯ ನಮನಗಳು. ವೆನ್ಲಾಕ್ ಆಸ್ಪತ್ರೆಯ ಹಿರಿಯ ಮೂತ್ರರೋಗ ತಜ್ಞರಾದ ಡಾ. ಸದಾನಂದ ಪೂಜಾರಿಯವರಿಂದ ಕಿಡ್ನಿ ವೈಫಲ್ಯ, ಕಿಡ್ನಿ ಸಂಬಂಧಿ ರೋಗಗಳು ಹಾಗೂ ತಡೆಗಟ್ಟುವರೇ ಮುಂಜಾಗ್ರತಾ ಕ್ರಮಗಳ ಬಗ್ಗೆ ಆರೋಗ್ಯ ಮಾಹಿತಿಯನ್ನು ನೀಡಿದಂತಹ ಪಣಂಬೂರು ಘಟಕಕ್ಕೆ ವಂದನೆಗಳು. ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಕೇಂದ್ರ ಸಮಿತಿಯ ವತಿಯಿಂದ ’ಆಂತರ್ಯ’- ಇದು ಮನದೊಳಗಿನ ಮಾತು ಎಂಬ ಮಹಿಳೆಯರ ಕಾರ್ಯಕ್ರಮವನ್ನು ಬಹಳ ವೈಶಿಷ್ಟ್ಯ ಪೂರ್ಣವಾಗಿ ಆಯೋಜನೆ ಮಾಡಿದ ಮಹಿಳಾ ಸಂಘಟನಾ ನಿರ್ದೇಶಕಿ ಗುಣವತಿ ರಮೇಶ್‌ರವರಿಗೆ ಆತ್ಮೀಯ ವಂದನೆಗಳು. ಈ ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದ ಸುರತ್ಕಲ್ ಘಟಕಕ್ಕೆ ಅಭಿನಂದನೆಗಳು. ಅಲ್ಲದೆ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ನನ್ನ ಕೃತಜ್ಞತೆಗಳು.

ನಿರಂತರವಾಗಿ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ, ’ಕೊಡೆ ಬುಡ್ಪಾಲೆ’ ನಾಟಕ ಪ್ರದರ್ಶನ ಹಾಗೂ ಬಿಸು ಪರ್ಬವನ್ನು ಆಚರಿಸಲು ಅಣಿಯಾಗುತ್ತಿರುವ ಬಜಪೆ ಘಟಕಕ್ಕೆ ಆತ್ಮೀಯ ವಂದನೆಗಳು. ಸಸಿಹಿತ್ಲು ಬಿಲ್ಲವ ಸಂಘದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ಸಸಿಹಿತ್ಲು ಘಟಕಕ್ಕೆ ಕೃತಜ್ಞತೆಗಳು. ವಾರ್ಷಿಕ ಮಹಾಸಭೆಯನ್ನು ನಡೆಸಿ ಮುಂದಿನ ಸಾಲಿಗೆ ಹೊಸ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಹಳೆಯಂಗಡಿ ಘಟಕಕ್ಕೆ ಅಭಿನಂದನೆಗಳು. ಬೇರೆಯವರ ಜಾಗದಲ್ಲಿ ವಾಸಿಸುತ್ತಿರುವ ಬಡಕುಟುಂಬಕ್ಕೆ ಆ ಜಾಗವನ್ನು ಧರ್ಮಾರ್ಥವಾಗಿ ಬಿಟ್ಟುಕೊಡುವ ಬಗ್ಗೆ ಜಾಗದ ವಾರೀಸುದಾರರ ಒಪ್ಪಿಗೆ ಪಡೆದು, ಅವರ ಹೆಸರಲ್ಲಿ ಜಾಗದ ಕಾಗದ ಪತ್ರಗಳನ್ನು ಮಾಡಿಸುವ ಕೆಲಸದಲ್ಲಿ ನಿರತರಾದ ಹಾಗೂ ಇನ್ನೊಂದು ಬಡಕುಟುಂಬದ ಮನೆಗೆ ವಿದ್ಯುದ್ದೀಪ ಅಲವಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿರುವ ಅಡ್ವೆ ಘಟಕಕ್ಕೆ ಪ್ರೀತಿಯ ನಮನಗಳು. ವರುಷಕ್ಕೊಂದು ಮನೆ ಹರುಷಕ್ಕೊಂದು ನೆಲೆ ಎಂಬ ನೆಲೆಯಲ್ಲಿ ಬಡಕುಟುಂಬಕ್ಕೆ ಮನೆ ನಿರ್ಮಾಣ ಮಾಡುತ್ತಿರುವ ಹೆಜಮಾಡಿ ಘಟಕಕ್ಕೆ ವಂದನೆಗಳು. ವಾರ್ಷಿಕ ಮಹಾಸಭೆಯನ್ನು ಕರೆದು ಮುಂದಿನ ಸಾಲಿಗೆ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ ಪಡುಬಿದ್ರಿ ಘಟಕಕ್ಕೆ ಆತ್ಮೀಯ ನಮನಗಳು.

ಬಡಕುಟುಂಬಕ್ಕೆ ಉಚಿತವಾಗಿ ಮನೆ ಕಟ್ಟಿಕೊಡುವ ಕೆಲಸವನ್ನು ತ್ವರಿತವಾಗಿ ಮಾಡುತ್ತಿರುವ ಹಾಗೂ ’ಯುವ ಕ್ರೀಡಾ ಸಂಗಮ’ ಎಂಬ ಅಂತರ್‌ಘಟಕ ಕ್ರೀಡಾ ಸ್ಪರ್ಧೆಯನ್ನು ಏರ್ಪಡಿಸಲು ಸಕಲ ತಯಾರಿಯನ್ನು ಮಾಡುತ್ತಿರುವ ಉಡುಪಿ ಘಟಕಕ್ಕೆ ಪ್ರೀತಿಯ ಅಭಿನಂದನೆಗಳು. ಗೆಜ್ಜೆಗಿರಿಯ ಸರ್ವಕಾರ್ಯದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿರುವ ಪುತ್ತೂರು ಘಟಕಕ್ಕೆ ಆತ್ಮೀಯ ವಂದನೆಗಳು. ಪ್ರತೀ ಸಭೆಯಲ್ಲೂ ಯುವವಾಹಿನಿಯ ಮಾಜಿ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳಿಂದ ಯುವವಾಹಿನಿಯ ಬಗ್ಗೆ ಮತ್ತು ಹಮ್ಮಿಕೊಳ್ಳಬಹುದಾದ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ಒದಗಿಸಿದ ಕೊಲ್ಯ ಘಟಕಕ್ಕೆ ವಂದನೆಗಳು. ಬಡ ಕುಟುಂಬಕ್ಕೆ ಮನೆ ಕಟ್ಟಿಕೊಡುವ ಕಾರ್ಯದಲ್ಲಿ ನಿರತರಾಗಿರುವ ಬಂಟ್ವಾಳ ಘಟಕಕ್ಕೆ ಅಭಿನಂದನೆಗಳು. ಕೊಲ್ಲೂರು, ಕಾಂತಬಾರೆ ಬೂದಬಾರೆ ಕ್ಷೇತ್ರದಲ್ಲಿ ನಡೆದ ನಾಗಮಂಡಲ ಸೇವೆಯಲ್ಲಿ ಆಹೋರಾತ್ರಿ ಕೆಲಸ ಹಾಗೂ ಹೊರೆಕಾಣಿಕೆ ಸಮರ್ಪಣೆ, ಕುಟುಂಬ ಸಮ್ಮಿಲನ ಕಾರ್ಯಕ್ರಮವನ್ನು ಸರಿತಟದಲ್ಲಿ ಅತ್ಯಂತ ಮನೋರಂಜನೆಯೊಂದಿಗೆ ಆಚರಣೆ ಮಾಡಿದ ಮೂಲ್ಕಿ ಘಟಕಕ್ಕೆ ಪ್ರೀತಿ ಪೂರ್ವಕ ನಮನಗಳು. ಯುವವಾಹಿನಿಯ ವಾರ್ಷಿಕ ಸಮಾವೇಶ ನಡೆಸುವ ಜವಾಬ್ದಾರಿಯನ್ನು ವಹಿಸಿಕೊಂಡು ಸಮಾವೇಶವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಉಪ್ಪಿನಂಗಡಿ ಘಟಕಕ್ಕೆ ಮನದಾಳದ ನಮನಗಳು. ಮೂಡುಕೋಡಿ ಗ್ರಾಮದವರಿಗೆ ನಾರಾಯಣ ಗುರು, ಕೋಟಿ ಚೆನ್ನಯ ಹಾಗೂ ನಾಗಬ್ರಹ್ಮರನ್ನು ಒಳಗೊಂಡ ಫೋಟೋ ವಿತರಣೆ, ಕನ್ಯಾಡಿಯಲ್ಲಿ ಭಜನಾ ಕಾರ್ಯಕ್ರಮ, ’ಯುವವಾಹಿನಿ ಟ್ರೋಫಿ’ ಕ್ರಿಕೆಟ್ ಪಂದ್ಯಾಟವನ್ನು ನಡೆಸಿ ಹಾಗೂ ಅದರ ಪ್ರವೇಶ ಶುಲ್ಕದ ಹಣ ಅಲ್ಲದೆ ಬೇರೆಯವರಿಂದ ಸಂಗ್ರಹ ಮಾಡಿ ಒಂದು ಗೌರವದ ಮೊತ್ತವನ್ನು ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತರಾದ ಯುವವಾಹಿನಿಯ ಸದಸ್ಯರಾದ ಚಂದ್ರಹಾಸ್ ಬರಮೇಲು ಅವರ ಕುಟುಂಬಕ್ಕೆ ಹಸ್ತಾಂತರಿಸುವ ಬಗ್ಗೆ ಯೋಜನೆ ಹಾಕಿಕೊಂಡಿರುವ ಬೆಳ್ತಂಗಡಿ ಘಟಕಕ್ಕೆ ಕೃತಜ್ಞತೆಗಳು. ಕಟಪಾಡಿ ಜಾತ್ರೆ ಸಮಯದಲ್ಲಿ ಘಟಕದ ಸದಸ್ಯರಿಂದಲೇ ಯಕ್ಷಗಾನ ಪ್ರದರ್ಶನ ನೀಡಿದ ಕಟಪಾಡಿ ಘಟಕಕ್ಕೆ ಆತ್ಮೀಯ ವಂದನೆಗಳು. ಮಕ್ಕಳಿಗೆ ಬೇಸಿಗೆ ಶಿಬಿರ ನಡೆಸಲು ತಯಾರಿ ನಡೆಸುತ್ತಿರುವ ಯಡ್ತಾಡಿ ಘಟಕಕ್ಕೆ ನಮನಗಳು.

ಯುವವಾಹಿನಿಯ ವೆಬ್‌ಸೈಟನ್ನು ಬಹಳ ಸುಂದರವಾಗಿ ವಿನ್ಯಾಸಗೊಳಿಸಿ ಬಿಡುಗಡೆ ಮಾಡಿದ್ದಲ್ಲದೆ, ಯುವವಾಹಿನಿಯ ಹೆಚ್ಚಿನ ಎಲ್ಲಾ ಕಾರ್ಯಕ್ರಮಗಳ ಸಚಿತ್ರ ವರದಿಗಳನ್ನು ಅಪ್‌ಲೋಡ್ ಮಾಡಿ ಹೆಚ್ಚಿನ ಸಂಖ್ಯೆಯ ಜನರು ಅದನ್ನು ವೀಕ್ಷಣೆ ಮಾಡುವಂತೆ ಪ್ರಯತ್ನ ಮಾಡಿದ, ಯುವವಾಹಿನಿಯ ಕಾರ್ಯಚಟುವಟಿಕೆಗಳನ್ನು ದೇಶ ವಿದೇಶಗಳಲ್ಲಿರುವ ನಮ್ಮ ಭಾಂದವರಿಗೆ ತೋರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೆಬ್‌ಸೈಟ್ ಸಂಪಾದಕರಾದ ರಾಜೇಶ್ ಸುವರ್ಣ ಮತ್ತವರ ತಂಡಕ್ಕೆ ನನ್ನ ಪ್ರೀತಿಯ ನಮನಗಳು. ತಮ್ಮ ಅಧ್ಯಕ್ಷೀಯ ಅವಧಿಯಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಹಾಕಿಕೊಂಡು ಜನರ ಸಂಪರ್ಕವನ್ನು ಮಾಡಿದ್ದಲ್ಲದೆ ಯುವವಾಹಿನಿಯ ಅಭಿವೃದ್ಧಿಯಲ್ಲಿ ಸಕ್ರಿಯ ಪಾತ್ರ ವಹಿಸಿದ ನಿಕಟಪೂರ್ವ ಅಧ್ಯಕ್ಷರುಗಳಾದ ಮಂಗಳೂರು ಘಟಕದ ಸುನಿಲ್ ಕುಮಾರ್ ಮತ್ತು ಕಂಕನಾಡಿ ಘಟಕದ ಹರೀಶ್ ಕೆ. ಸನಿಲ್‌ರವರಿಗೆ ಕೃತಜ್ಞತೆಗಳು.

ನಮಸ್ಕಾರ

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!