ಕೂಳೂರು : ಒಳ್ಳೆಯ ಆರಂಭ, ಒಳ್ಳೆಯ ಅಂತ್ಯ, ನಡುವೆ ಹೂರಣ ಅದೇ ಭಾಷಣ. ಎಂದು ಅಂತರರಾಷ್ಟ್ರೀಯ ಮಟ್ಟದ ಜೆಸಿಎ ತರಬೇತುದಾರರಾದ ಸುಧಾಕರ್ ಕಾರ್ಕಳ ತಿಳಿಸಿದರು.
ಅವರು ದಿನಾಂಕ 23.06.19 ರಂದು ಯುವವಾಹಿನಿ ಕೂಳೂರು ಘಟಕದ ವತಿಯಿಂದ ನಡೆದ ಯುವಚೈತನ್ಯ- 2019-20 ಈ ಕಾರ್ಯಕ್ರಮದಲ್ಲಿ ಮಾತನಾಡಿದ ಇವರು ಬಿಲ್ಲವ ಸಮುದಾಯದ ಉದ್ಧಾರಕ್ಕಾಗಿ ತಾನು ಇಂತಹ ತರಬೇತಿ ಕಾರ್ಯಕ್ರಮ ನಡೆಸಿಕೊಂಡು ಬಂದಿರುವುದಾಗಿಯೂ, ಮುಂದಿನ ದಿನಗಳಲ್ಲಿ ನಮ್ಮ ಸಮುದಾಯದವರೂ ಉತ್ತಮ ತರಬೇತುದಾರರಾಗಬೇಕು ಎಂದು ಆಶಿಸಿದರು. ಇವರ ಜೊತೆ ಇನ್ನೋರ್ವ ಜೆಸಿಎ ತರಬೇತುದಾರರಾದ ಗೋಪಕುಮಾರ್ ಮಲ್ಲೇಳಿ ಉಪಸ್ಥಿತರಿದ್ದರು. ಇಬ್ಬರೂ ಸೇರಿ ದೀಪ ಬೆಳಗಿಸುವುದರ ಮೂಲಕ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ತರಬೇತಿ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ಸದಸ್ಯರಿಗೂ , ಭಾಷಣ ಮಾಡುವಾಗ ಆಗುವ ಬದಲಾವಣೆ ಅದಕ್ಕೆ ಕಾರಣ, ಸಭಾ ಕಂಪನ ಹಾಗೂ ಅದನ್ನು ಹೇಗೆ ಹೋಗಲಾಡಿಸುವುದು ಎಂಬುದರ ಬಗ್ಗೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯ ತನಕ ತುಂಬಾ ಚೆನ್ನಾಗಿ ತರಬೇತಿ ನೀಡಿದರು. ಘಟಕದ ಅಧ್ಯಕ್ಷರು ಹಾಗೂ ಸದಸ್ಯರು ಎಲ್ಲರೂ ಸೇರಿ ಸುಧಾಕರ್ ಕಾರ್ಕಳ ಇವರನ್ನು ಸನ್ಮಾನಿಸಲಾಯಿತು ಹಾಗೂ ಗೋಪಕುಮಾರ್ ಮಲ್ಲೇಳಿ ಇವರಿಗೆ ಸ್ಮರಣಿಕೆ ಕೊಟ್ಟು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರಾದ ಭಾಸ್ಕರ ಕೋಟ್ಯಾನ್, ಘಟಕದ ಸಲಹೆಗಾರರಾದ ನೇಮಿರಾಜ್, ನಿಕಟಪೂರ್ವ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಮಾಜಿ ಅಧ್ಯಕ್ಷರು ಪುಷ್ಪರಾಜ್ ಕುಮಾರ್, ಉಪಾಧ್ಯಕ್ಷೆ ಪವಿತ್ರ. ಯು. ಅಮೀನ್, ಕಾರ್ಯದರ್ಶಿ ಮಧುಶ್ರೀ ಪ್ರಶಾಂತ್ ಹಾಗೂ 29 ಮಂದಿ ಸದಸ್ಯರು ಉಪಸ್ಥಿತರಿದ್ದರು. ಅಧ್ಯಕ್ಷರು ಎಲ್ಲರನ್ನೂ ಸ್ವಾಗತಿಸಿದರು. ಸಂಚಾಲಕ ಲತೀಶ್ ಪೂಜಾರಿ ವಂದಿಸಿದರು.