ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕ

ಹೆಣ್ಣಿಗೆ ಆತ್ಮ ಸ್ಥೈರ್ಯ ತುಂಬುವ ಕಾರ್ಯ ನಡೆಯಬೇಕು : ಲಕ್ಷ್ಮೀ ಪೈ

ಹೆಣ್ಣು ಎಂದಿಗೂ ಅಶಕ್ತಳಲ್ಲ ಅವಳ ರಕ್ಷಣೆಯನ್ನು ಮಾಡುವ ಸಾಮರ್ಥ್ಯ ಆಕೆಗೆ ಇದೆ.ಆದರೆ ಈ ಬಗ್ಗೆ ಹೆಣ್ಣಿಗೆ ಆತ್ಮ ಸ್ಥೈರ್ಯ ತುಂಬುವ ಕಾರ್ಯ ನಡೆಯಬೇಕು. ಸ್ರೀ ದುರ್ಗಾ ಶಕ್ತಿಯ ಪ್ರತಿರೂಪ ಪ್ರತಿ ಮಹಿಳೆಯರಲ್ಲಿಯೂ ದುರ್ಗೆಯ ಶಕ್ತಿ ಅಡಕವಾಗಿದೆ,ಅದನ್ನು ಜಾಗೃಗೊಳಿಸುವ ಕಾರ್ಯ ನಡೆಯಬೇಕಾಗಿದೆ ಎಂದು ರಣರಾಗಿಣಿ ಮಹಿಳಾ ಶಾಖೆಯ ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಕಾರರಾದ ಶ್ರೀಮತಿ ಲಕ್ಷ್ಮೀ ಪೈ ತಿಳಿಸಿದರು.
ಅವರು ದಿನಾಂಕ 05.08.2017 ರಂದು ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ಮಂಗಳೂರು ಯುವವಾಹಿನಿ ಸಭಾಂಗಣದಲ್ಲಿ ಜರುಗಿದ ರಣರಾಗಿಣಿ – ಮಹಿಳೆಯರ ಸ್ವರಕ್ಷಣೆಯ ಬಗ್ಗೆ ನಡೆದ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು
ಮಹಿಳೆಯರಿಗೆ ವಿವಿಧ ಆಪತ್ತು ಎದುರಾದಾಗ ತಮ್ಮನ್ನು ತಾವು ಹೇಗೆ ರಕ್ಷಿಸಬೇಕು ಎಂದು ಪ್ರಾತಕ್ಷಿಕೆಯ ಮೂಲಕ ತರಬೇತಿ ನೀಡಿದರು. ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಸದಸ್ಯೆಯರು ಈ ಕಾರ್ಯಾಗಾರದ ಪ್ರಯೋಜನ ಪಡೆದರು.ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಅದ್ಯಕ್ಷೆ ಸುಪ್ರೀತಾ ಪೂಜಾರಿ ಸ್ವಾಗತಿಸಿದರು.ಕಾರ್ಯದರ್ಶಿ ಸುನೀತಾ ವಂದಿಸಿದರು, ಶ್ರೀಮತಿ ಉಮಾ ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!