ಯುವವಾಹಿನಿ (ರಿ) ಹಳೆಯಂಗಡಿ ಘಟಕ

ಹಳೆಯಂಗಡಿ ಯುವವಾಹಿನಿಯ 2017-18 ನೇ ಸಾಲಿನ ಪದಗ್ರಹಣ ಸಮಾರಂಭ

ವಿದ್ಯೆ ಉದ್ಯೋಗ ಸಂಪರ್ಕ ಎಂಬ ಮೂರು ಮುಖ್ಯ ಉದ್ದೇಶಗಳೊಂದಿಗೆ ಹಳೆಯಂಗಡಿ ಯುವವಾಹಿನಿಯ ಸಮಾಜಮುಖಿ ಕಾರ್ಯ ಶ್ಲಾಘನೀಯವಾದುದು ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅದ್ಯಕ್ಷ ಪದ್ಮನಾಭ ಮರೋಳಿ ತಿಳಿಸಿದರು.

ಅವರು ದಿನಾಂಕ 16.04.2017 ನೇ ಆದಿತ್ಯವಾರ ಹಳೆಯಂಗಡಿ ಬ್ರಹ್ಮಶ್ರೀ ನಾರಾಯಣಗುರು ಸಭಾಗೃಹದಲ್ಲಿ ಜರುಗಿದ ಯುವವಾಹಿನಿ (ರಿ) ಹಳೆಯಂಗಡಿ ಘಟಕದ 2017-18 ನೇ ಸಾಲಿನ ನೂತನ ಪದಾದಿಕಾರಿಗಳ ಪದಪ್ರಧಾನ ನೆರವೇರಿಸಿ ಮಾತನಾಡಿದರು.

ಕಟೀಲು ಮೇಳದ ಸುಪ್ರಸಿದ್ಧ ಯಕ್ಷಗಾನ ಕಲಾವಿದ ರಾಮಚಂದ್ರ ಮುಕ್ಕ ಇವರು ಯಕ್ಷಗಾನ ತರಬೇತಿ ತರಗತಿಯನ್ನು ಉದ್ಘಾಟಿಸಿ, ಜಿಲ್ಲೆಯ ಗಂಡುಕಲೆಯಾದ ಯಕ್ಷಗಾನವನ್ನು ಉಳಿಸಿ ಬೆಳೆಸುವ ಹಳೆಯಂಗಡಿ ಯುವವಾಹಿನಿ ಶ್ರೇಷ್ಠ ಕಾರ್ಯ ಮಾಡಿದೆ ಎಂದು ತಿಳಿಸಿದರು.

ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಗೌರವಾದ್ಯಕ್ಷರಾದ ಗಣೇಶ್ ಬಂಗೇರ, ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅದ್ಯಕ್ಷರಾದ ಚಂದ್ರಶೇಖರ ನಾಣಿಲ್, ಜಿಲ್ಲಾ ಪಂಚಾಯತ್ ಸದಸ್ಯರಾದ ವಿನೋದ್ ಕುಮಾರ್ ಬೆಳ್ಳೂರು, ಹಳೆಯಂಗಡಿ ಯುವವಾಹಿನಿಯ ಸಲಹೆಗಾರರು ರವಿಚಂದ್ರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಳೆಯಂಗಡಿ ಯುವವಾಹಿನಿ ಅದ್ಯಕ್ಷರಾದ ದೀಪಕ್ ನಾಣಿಲ್ ಕಳೆದ ಒಂದು ವರ್ಷಗಳಲ್ಲಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ರಮೇಶ್ ಕುಮಾರ್ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಪ್ರಕಟಿಸಿದರು.

ಶರತ್ ಕುಮಾರ್ ನೇತೃತ್ವದ 2017-18ನೇ ಸಾಲಿನ ಪದಾಧಿಕಾರಿಗಳ ತಂಡವು ಸಂಘಟನೆಯನ್ನು ಸಮರ್ಥವಾಗಿ ಮುನ್ನಡೆಸುವ ಬಗ್ಗೆ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಕಟ್ಟಡ ಸಮಿತಿಯ ಕಾರ್ಯದರ್ಶಿ ಭಾಸ್ಕರ್ ಸಾಲ್ಯಾನ್ ಸ್ವಾಗತಿಸಿದರು. ಹಿಮಕರಾ ಟಿ.ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಅಧ್ಯಕ್ಷ ಬೃಜೇಶ್ ಕುಮಾರ್ ಧನ್ಯವಾದ ನೀಡಿದರು.

Leave a Reply

Your email address will not be published. Required fields are marked *

error: Content is protected !!