ಹಳೆಯಂಗಡಿ : ಕಟ್ಟೋಣ ನಾವು ಹೊಸ ನಾಡೊಂದನು…ಶಾಂತಿ ಸಹಬಾಳ್ವೆಯ ಬೀಡೊಂದನು… ಹೆಜ್ಜೆ ಮೇಲೆ ಹೆಜ್ಜೆ ಇಡುತ ಕುಣಿವ ಯುವಜನರ ದಂಡು, ಜೊತೆಗೆ ಹುಚ್ಚೆಬ್ಬಿಸೋ ನಾಸಿಕ್ ಬ್ಯಾಂಡು… ಹಳೆಯಂಗಡಿ ಗಣೇಶೋತ್ಸವದಲ್ಲಿ ಜನಮನ ಸೆಳೆದ ಯುವವಾಹಿನಿ ತಂಡಕ್ಕೆ ಜೈ ಹೋ .
ದಿನಾಂಕ 15-09-2018 ರಂದು ನಡೆದ ಹಳೆಯಂಗಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವದ ಶೋಭಯಾತ್ರೆಯಲ್ಲಿ ಯುವವಾಹಿನಿ (ರಿ) ಹಳೆಯಂಗಡಿ ಘಟಕದ ಸದಸ್ಯರಿಂದ “ನಾಸಿಕ್ ಬ್ಯಾಂಡ್ ” ಕಾರ್ಯಕ್ರಮ ಏರ್ಪಡಿಸಲಾಯಿತು.
60 ಸದಸ್ಯರ ದಂಡು ,ಹಳದಿ ಬಣ್ಣದ ಜರ್ಸಿ ಟಿ-ಶರ್ಟ್ ಸಮವಸ್ತ್ರದಲ್ಲಿ ಕಂಗೊಳಿಸಿದ ಯುವ ತಂಡ, ಸತತ 8 ಗಂಟೆಗಳ ಕಾಲ ನಿರಂತರ ನಾಸಿಕ್ ಬ್ಯಾಂಡ್ ಪ್ರದರ್ಶನ ಸರ್ವರ ಮನಸೂರೆಗೊಂಡಿತು.