ಯುವವಾಹಿನಿ (ರಿ.) ಪಣಂಬೂರು-ಕುಳಾಯಿ ಘಟಕ

ಸ್ವಚ್ಚತಾ ಕಾರ್ಯಕ್ರಮ

ಪಣಂಬೂರು ಕುಳಾಯಿ :- ಯುವವಾಹಿನಿ (ರಿ.) ಪಣಂಬೂರು – ಕುಳಾಯಿ ಘಟಕ ಹಾಗು ನಾಗರಿಕ ಸಲಹಾ ಸಮಿತಿ ಸುರತ್ಕಲ್ ಇವರ ಜಂಟಿ ಆಶ್ರಯದಲ್ಲಿ ಎಂ ಆರ್ ಪಿ ಎಲ್ ಪ್ರಾಯೋಜಕತ್ವದಲ್ಲಿ ಕುಳಾಯಿ ಪರಿಸರದಲ್ಲಿ, ಇತ್ತೀಚಿಗೆ ನಮ್ಮನ್ನಗಲಿದ ಘಟಕದ ಗೌರವ ಸದಸ್ಯರಾದ ದಿl ಮಹಾಬಲ ಟಿ. ಸಾಲ್ಯಾನ್ ರವರ ಸ್ಮರಣಾರ್ಥವಾಗಿ ದಿನಾಂಕ 04 ಡಿಸೆಂಬರ್ 2022 ರಂದುಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಘಟಕದ ಸಮಾಜ ಸೇವಾ ನಿರ್ದೇಶಕರಾದ ಸುಧೀರ್ ರವರ ನಾಯಕತ್ವದಲ್ಲಿ, ಆರಂಭವಾದ ಸ್ವಚ್ಛತಾ ಕಾರ್ಯದಲ್ಲಿ ಅಧ್ಯಕ್ಷರಾದ ರಂಜನ್ ಕೆ.ಕೋಟ್ಯಾನ್, ಮಾಜಿ ಅಧ್ಯಕ್ಷರುಗಳಾದ ಪದ್ಮನಾಭ ಮರೋಳಿ, ಸಂಜೀವ ಸುವರ್ಣ, ಸುರೇಶ್ ಪೂಜಾರಿ ಹಾಗೂ ಹರೀಶ್ ಪೂಜಾರಿ, ಘಟಕದ ಉಪಾಧ್ಯಕ್ಷರಾದ ಧನಿಶ್, ಕಾರ್ಯದರ್ಶಿ ಯಶವಂತ್, ಕೋಶಾಧಿಕಾರಿ ಸಂದೀಪ್, ಪ್ರಚಾರ ನಿರ್ದೇಶಕರಾದ ನಿತಿನ್ ರಾಜ್ ಹಾಗೂ ಇತರರು ಕೈ ಜೋಡಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ನಾಗರಿಕರ ಹಿತರಕ್ಷಣಾ ವೇದಿಕೆಯ ವತಿಯಿಂದ , ಮನೆಯ ತ್ಯಾಜ್ಯ ವಸ್ತು ಗಳನ್ನು ಬಿಸಾಡದೆ ಯಾವ ರೀತಿಯಲ್ಲಿ ಗೊಬ್ಬರವಾಗಿ ಮಾರ್ಪಡಿಸಿ ತಮ್ಮ ಕೈ ತೋಟದ ಸಸ್ಯಗಳಿಗೆ ಬಳಸುವ ಸರಳ ವಿಧಾನಗಳನ್ನು ಸತೀಶ್ ದಯಾನಂದ್ ಪ್ರಾತ್ಯಕ್ಷತೆಯೊಂದಿಗೆ ತಿಳಿಸಿದರು. ನಂತರ ಎಲ್ಲರಿಗೂ ಬೆಳಗಿನ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

Leave a Reply

Your email address will not be published. Required fields are marked *

error: Content is protected !!