ಮಂಗಳೂರು: ಸ್ತ್ರೀ.. ಸಹನೆ, ತಾಳ್ಮೆ, ಸಂಯಮದಿಂದ ಜೀವನದುದ್ದಕ್ಕೂ ಅದೆಷ್ಟೋ ಪಾತ್ರ ನಿರ್ವಹಿಸುವ ಯಶಸ್ವಿ ರಾಯಭಾರಿ. ಹೆಣ್ಣು ಅಗತ್ಯವಾಗಿ ಸ್ವಾವಲಂಬಿ.. ಶಿಕ್ಷಿತ.. ಉದ್ಯೋಗಸ್ಥ.. ಸಬಲೆ.. ಸಂಘಟಿತಳಾಗಿ ಸಂಸಾರದಲ್ಲಿ, ಸಮಾಜದಲ್ಲಿ ನಾನಾ ರೀತಿಯ ಸಂಬಂಧ ನಿಭಾಯಿಸಿಕೊಂಡು.. ಹೇಗೆ.. ಏಕೆ.. ಹೊಂದಾಣಿಕೆಯಿಂದ ಸಂಸಾರದ ಗುಟ್ಟು ಕಾಪಾಡಬೇಕು. ಪುರುಷ ಸಮಾಜವ ಜರಿಯದೆ.. ಅವರೊಟ್ಟಿಗೆ ಹೇಗೆ ಒಗ್ಗೂಡಬೇಕು.. ಪ್ರಸ್ತುತ ಸಮಾಜಕ್ಕೆ ಇದರ.. ಅಗತ್ಯತೆ ಏನು? ಕೂಡು ಕುಟುಂಬ, ಅವಿಭಕ್ತ ಕುಟುಂಬ ಎರಡಕ್ಕೂ ಸಮಾನತೆಯ ಅಗತ್ಯವಿದೆ.. ಮಹಿಳೆ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಬಗ್ಗೆಲ್ಲ ಒತ್ತು ಕೊಟ್ಟು ಕಾಪಾಡಿಕೊಳ್ಳಬೇಕು. ಪ್ರತಿಯೊಬ್ಬ ಮಹಿಳೆಯರಿಗೂ ಜೀವವಿಮೆ, ಆರೋಗ್ಯ ವಿಮೆ ಮಾಡಿಸುವ ಬಗ್ಗೆ ಜಾಗೃತಿ ಮೂಡಿಸಿದರು. ಹಾಗೇ ಕ್ರಿಯಾತ್ಮಕ, ಧನಾತ್ಮಕ ವಿಚಾರಧಾರೆ ಮೂಡಿಸುವ ಮುಖಾಂತರ ಮುಕ್ತ ಸಂವಾದದ ಮೂಲಕ ಮಹಿಳಾಮಣಿಯರನ್ನು ಮನರಂಜಿಸಿ ಸಂವೇದನೆ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿ ಜೆ. ಪಿ ನಾರಾಯಣಸ್ವಾಮಿ ಪ್ರತಿಷ್ಠಾನ, ಬೆಂಗಳೂರಿನ ಕೋಶಾಧಿಕಾರಿ ಕುಸುಮ ಅಜಯ್ ಪ್ರೇರಣಾತ್ಮಕವಾಗಿ ಮನಸೂರೆಗೊಳ್ಳುವಂತೆ ನಡೆಸಿಕೊಟ್ಟರು.
ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಸಂವೇದನೆ ಮಾಹಿತಿ ಕಾರ್ಯಾಗಾರ ದಿನಾಂಕ 17-03-2024 ರಂದು ರವಿವಾರ ಶ್ರೀಮತಿ ಚೆನ್ನಮ್ಮ ಜಾರಪ್ಪ ಮೆಮೋರಿಯಲ್ ಹಾಲ್, ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಮಂಗಳೂರಿನಲ್ಲಿ ಜರುಗಿತು.
ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಜರುಗಿದ ಸಮಾರಂಭದ ಉದ್ಘಾಟಕರಾಗಿ ಶ್ರೀ ಗೋಕರ್ಣನಾಥೇಶ್ವರ ಕಾಲೇಜು, ಮಂಗಳೂರು, ಆಡಳಿತ ಮಂಡಳಿ ಅಧ್ಯಕ್ಷರಾದ ವಸಂತ ಕಾರಂದೂರು ದೀಪ ಪ್ರಜ್ವಲನೆಗೈದು ಶುಭ ಹಾರೈಸಿದರು.
ಅಧ್ಯಕ್ಷರು, ಯುವವಾಹಿನಿ(ರಿ.) ಕಂಕನಾಡಿ ಘಟಕ ಲೋಕೇಶ್ ಅಮೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಯುವವಾಹಿನಿ(ರಿ.) ಕೇಂದ್ರ ಸಮಿತಿ ಮಂಗಳೂರು ಅಧ್ಯಕ್ಷರು ಹರೀಶ್ ಕೆ. ಪೂಜಾರಿ, ಡಾ. ಸುಚಿತ್ರ ಸೊರಕೆ, ಪ್ರೊಫೆಸರ್ ಆಫ್ ಪ್ಯಾಥೊಲೊಜಿ ಮಂಗಳೂರು, ಜಯಾನಂದ. ಎಂ. ವಿಭಾಗೀಯ ಸಂಚಾಲಕರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಜೆ.ಪಿ ನಾರಾಯಣಸ್ವಾಮಿ ಪ್ರತಿಷ್ಠಾನ(ರಿ.) ಬೆಂಗಳೂರು, ಸಂಪನ್ಮೂಲ ವ್ಯಕ್ತಿಯಾಗಿ ಪೋಷಕರು ಜೆ.ಪಿ ನಾರಾಯಣ ಸ್ವಾಮಿ ಪ್ರತಿಷ್ಠಾನ(ರಿ.) ಬೆಂಗಳೂರು ಕೋಶಾಧಿಕಾರಿ ಕುಸುಮ ಅಜಯ್, ಜೆ.ಪಿ.ಎನ್ ಪ್ರತಿಷ್ಠಾನ ತುಮಕೂರು ಜಿಲ್ಲಾ ಮಹಿಳಾ ಘಟಕದ ಸಂಚಾಲಕಿ ಪ್ರಭಾ ವಸಂತ್, ಯುವವಾಹಿನಿ(ರಿ.) ಕೇಂದ್ರ ಸಮಿತಿ ಮಂಗಳೂರು ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ, ಯುವವಾಹಿನಿ(ರಿ.) ಕೇಂದ್ರ ಸಮಿತಿ ಮಂಗಳೂರು ಮಹಿಳಾ ಸಂಘಟನಾ ನಿರ್ದೇಶಕಿ ನಯನಾ ಸುರೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಹಿಳಾ ಸ್ವಾವಲಂಬನೆಯ ಸವಾಲುಗಳು ಮಾಹಿತಿ ಕಾರ್ಯಾಗಾರ ಸಮಾರೋಪ ಸಮಾರಂಭದಲ್ಲಿ ಯುವವಾಹಿನಿ(ರಿ.) ಕೇಂದ್ರ ಸಮಿತಿ ಮಂಗಳೂರು ಹರೀಶ್ ಕೆ. ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶೈಲೇಂದ್ರ ವೈ. ಸುವರ್ಣ, ಆಡಳಿತ ನಿರ್ದೇಶಕರು ಎಸ್.ಆರ್.ಮಸಾಲಾ(ಪ್ರೈ.) ಲಿಮಿಟೆಡ್ ಮಂಗಳೂರು ಹಾಗೂ ಗೌರವಾಧ್ಯಕ್ಷರು ಜೆ.ಪಿ ನಾರಾಯಣ ಪ್ರತಿಷ್ಠಾನ(ರಿ.) ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಮಿತಿ, ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟ ಮಂಗಳೂರು ಅಧ್ಯಕ್ಷರು ಚಂಚಲ ತೇಜೋಮಯ, ಯುವವಾಹಿನಿ(ರಿ.) ಕಂಕನಾಡಿ ಅಧ್ಯಕ್ಷರು ಲೋಕೇಶ್ ಅಮೀನ್, ಮಹಿಳಾ ಸಂಘಟನಾ ನಿರ್ದೇಶಕಿ ಯುವವಾಹಿನಿ(ರಿ.) ಕೇಂದ್ರ ಸಮಿತಿ ಮಂಗಳೂರು ನಯನ ಸುರೇಶ್, ಕಾರ್ಯದರ್ಶಿ ಯುವವಾಹಿನಿ(ರಿ.) ಕಂಕನಾಡಿ ಘಟಕ ಮಮತಾ ತೇಜ್ ಪಾಲ್ ಉಪಸ್ಥಿತರಿದ್ದರು.
ಸನ್ಮಾನ ಸಮಾರಂಭ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಆದರ್ಶ ವ್ಯಕ್ತಿತ್ವದಿ ಸಾಧನೆಗೈದ ಮೂವರು ಗುರುಶಿಷ್ಯ – ಶಿಕ್ಷಕಿ ಸಾಧಕರನ್ನು ಸನ್ಮಾನಿಸಲಾಯಿತು. ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಪ್ರಾಂಶುಪಾಲೆ ಡಾ. ಆಶಾಲತಾ, ಜನಮೆಚ್ಚಿದ ಶಿಕ್ಷಕಿ ರಮಣಿ ಉಮೇಶ್, ದೈಹಿಕ ಶಿಕ್ಷಕಿ – ಯೋಗ ಗುರು ಜಯಶ್ರೀರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಯನ ಸುರೇಶ್ ಕಾರ್ಯಕ್ರಮದ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಪ್ರಜ್ಞಾ ಓಡಿಲ್ನಾಳ ನಿರೂಪಿಸಿದರು. ಜಗದೀಶ್ಚಂದ್ರ ಚಂದ್ರ ಡಿ.ಕೆ ಧನ್ಯವಾದ ಸಮರ್ಪಣೆಗೈದರು.