ಬೆಳ್ತಂಗಡಿ: ಯುವವಾಹಿನಿ(ರಿ.) ಬೆಳ್ತಂಗಡಿ ಘಟಕದ ವತಿಯಿಂದ ದಿನಾಂಕ 16-03-2024 ಶನಿವಾರ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಸ್ತ್ರಿ,ಕುಟುಂಬದ ಅಸ್ತಿತ್ವ ಸಶಕ್ತ ಸಮಾಜದ ಆಧಾರ ಎಂಬ ಶೀರ್ಷಿಕೆಯಡಿಯ ಕಾರ್ಯಕ್ರಮವು ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿಯಲ್ಲಿ ಜರುಗಿತು.
ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಜಾನಕಿ ಪಣಕಜೆ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಖ್ಯಾತ ನಿರೂಪಕಿ ಹಾಗೂ ಬರಹಗಾರರಾದ ರೇಣುಕಾ ಕಣಿಯೂರು ಮಹಿಳೆ ಮತ್ತು ಆಕೆಯ ವಿವಿಧ ರೀತಿಯ ಶಕ್ತಿಯ ಬಗ್ಗೆ ಸವಿವರವಾಗಿ ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮುಳಿಯ ಜ್ಯುವೆಲ್ಲರ್ಸ್ ಸಂಸ್ಥೆಯ ವ್ಯವಸ್ಥಾಪಕ ಅಶೋಕ್ ಬಂಗೇರ ಸಂಸ್ಥೆಯ ವತಿಯಿಂದ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟು ಶುಭ ಕೋರಿದರು.
ಸಭೆ ಅಧ್ಯಕ್ಷತೆಯನ್ನು ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷರು ಸದಾಶಿವ ಊರ ವಹಿಸಿದ್ದರು. ಬೆಳ್ತಂಗಡಿ ಘಟಕದ ಮಹಿಳಾ ನಿರ್ದೇಶಕಿ ಲೀಲಾವತಿ ವಸಂತ ಪೂಜಾರಿ ಭಾಷಣಗೈದರು.
ಈ ಸಂದರ್ಭದಲ್ಲಿ ಮಹಿಳೆಯರಿಗೆ ಘಟಕದ ವತಿಯಿಂದ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಬೇಬಿಂದ್ರ ಮತ್ತು ಸುಜಾತ ಅಣ್ಣಿ ಪೂಜಾರಿ ಪ್ರಾರ್ಥನೆಗೈದರು. ಲೀಲಾವತಿ ವಸಂತ ಪೂಜಾರಿ ಪ್ರಸ್ತಾವನೆಗೈದರು. ಸುಧಾ ರಮಾನಂದ ಹಾಗೂ ಜತೀಕ್ಷ ಕಾರ್ಯಕ್ರಮ ನಿರೂಪಿಸಿದರು. ಸುಜಾತಾ ಅಣ್ಣಿ ಪೂಜಾರಿ ಧನ್ಯವಾದ ಸಮರ್ಪಣೆಗೈದರು.