ಯುವಸಿಂಚನ : ನವೆಂಬರ್ 2018

ಸೀಮೋಲ್ಲಂಘನ : ನೆಕ್ಕಿತಪುಣಿ ಗೋಪಾಲಕೃಷ್ಣ ಬೆಂಗಳೂರು

ನೆಕ್ಕಿತಪುಣಿ ಗೋಪಾಲಕೃಷ್ಣ ಬೆಂಗಳೂರು

1987ರಲ್ಲಿ ಜನ್ಮತಾಳಿದ ಬಿಲ್ಲವ ಸಮಾಜದ ಯುವಶಕ್ತಿಯ ಸಂಚಯವಾದ ಯುವವಾಹಿನಿ ಇಂದು 31ರ ಹರೆಯದಲ್ಲಿ ರಾಜ್ಯಾದ್ಯಂತ 32 ಘಟಕಗಳನ್ನು ಸ್ಥಾಪಿಸುವ ಮೂಲಕ ಬಿಲ್ಲವ ಸಮಾಜದ ಭರವಸೆಯಾಗಿ ಬೆಳೆಯುತ್ತಿರುವುದು ಸಮಾಜದ ಬಂಧುಗಳೆಲ್ಲರೂ ಸಂತೋಷ ಮತ್ತು ಅಭಿಮಾನ ಪಡುವಂತಾಗಿದೆ. ನಮ್ಮ ಸಮಾಜದಲ್ಲಿ 1908ರ ವರೆಗೆ ಸಂಘಟನೆಯೆಂಬುದು ಇರಲಿಲ್ಲ. ಊರಲ್ಲಿ ಪರಂಪರಾಗತವಾಗಿ ಬಂದ ಗುರಿಕಾರರೇ ಆಯಾಯ ಊರು, ಗ್ರಾಮಗಳಲ್ಲಿನ ಸಮಾಜದಲ್ಲಿನ ಸಮಸ್ಯೆಗಳನ್ನು ಅಧಿಕಾರಯುತವಾಗಿ ಪರಿಹರಿಸುತ್ತಿದ್ದರು. ಇಂತಹ ಗುರಿಕಾರರ ಗುತ್ತು ಬರ್ಕೆ ಮನೆಗಳು ಸಾಮಾಜಿಕ ಮತ್ತು ಧಾರ್ಮಿಕ ವ್ಯಾಜ್ಯಗಳಿಗೆ ನ್ಯಾಯದಾನವನ್ನು ಮಾಡುತ್ತಿದ್ದರು. ಆಚಾರ, ವಿಚಾರ, ಸಂಪ್ರದಾಯ, ಸಂಸ್ಕೃತಿ, ಆರಾಧನೆ ಉತ್ಸವಗಳೆಲ್ಲದರಲ್ಲೂ ಗುರಿಕಾರನ ಸಲಹೆ ಸೂಚನೆ ಆದೇಶಗಳನ್ನು ಯಾರೂ ಪ್ರಶ್ನಿಸುತ್ತಿರಲಿಲ್ಲ. ಹೆಚ್ಚಿನ ಗುರಿಕಾರರು ಅವಿದ್ಯಾವಂತರಾಗಿದ್ದರೂ ನ್ಯಾಯ, ಧರ್ಮ, ಪ್ರಾಮಾಣಿಕತೆ ಮತ್ತು ಉತ್ತರದಾಯಿತ್ವಗಳಿಗೆ ಬದ್ಧರಾಗಿರುತ್ತಿದ್ದರು. ಇಂದು ಕಾಲಚಕ್ರ ಉರುಳುತ್ತಾ ಅದಕ್ಕೆ ಅನುಸಾರವಾಗಿ ವ್ಯವಸ್ಥೆಗಳು ಬದಲಾಗುತ್ತಿವೆ. ನಮ್ಮವರು ವಿದ್ಯಾವಂತರಾಗುತ್ತಿದ್ದಾರೆ. ವೈಜ್ಞಾನಿಕ ಬದುಕಿನ ನಾಗಾಲೋಟಕ್ಕೆ ಸರಿಯಾಗಿ ನೂತನ ವ್ಯವಸ್ಥೆಗೆ ತಮ್ಮ ಬದುಕನ್ನು ಸರಿಹೊಂದಿಸಿ ಮುಂದುವರಿಯಲು, ಕಾಲ ವ್ಯವಸ್ಥೆ ಮತ್ತು ಅಸ್ತಿತ್ವಗಳ ಮಧ್ಯೆ ಸೆಣಸುತ್ತಿದ್ದಾರೆ.

1908ರಲ್ಲಿ ಮಂಗಳೂರಿಗೆ ಆಗಮಿಸಿದ ಬ್ರಹ್ಮಶ್ರೀ ನಾರಾಯಣಗುರುಗಳು ಕುದ್ರೋಳಿಯಲ್ಲಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಅಸ್ತಿಭಾರ ಹಾಕಿದ ಸಂದರ್ಭದಲ್ಲಿಯೇ ಸಮಾಜದ ಸಮಗ್ರ ಅಭಿವೃದ್ಧಿಗೆ ಸಂಘಟನೆಯ ಶಕ್ತಿಗಾಗಿ ಶಿವಭಕ್ತಿ ಯೋಗ ಸಂಘ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. 1912ರಲ್ಲಿ ಶ್ರೀ ಗೋಕರ್ಣನಾಥ ದೇವಸ್ಥಾನವನ್ನು ಪ್ರತಿಷ್ಠಾಪಿಸಿದ ಗುರುಗಳು ಬಿಲ್ಲವ ಸಮಾಜವನ್ನು ಧಾರ್ಮಿಕ ಗುಲಾಮಗಿರಿಯಿಂದ ಬಿಡುಗಡೆಗೊಳಿಸಿ ಕರಾವಳಿ ಜಿಲ್ಲೆಗಳಲ್ಲಿ ಒಂದು ಮನ್ವಂತರಕ್ಕೆ ಮುನ್ನುಡಿ ಬರೆದರು.
ಬಿಲ್ಲವ ಸಮಾಜದ ಇತಿಹಾಸದಲ್ಲಿ ಇದೊಂದು ಸುವರ್ಣ ಅಧ್ಯಾಯವಾಯಿತು. ಇದರ ಹಿಂದಿನ ರೂವಾರಿ ಸಾಹುಕಾರ ಕೊರಗಪ್ಪನವರು ಇದೇ ಅವಕಾಶವನ್ನು ಉಪಯೋಗಿಸಿ ಬಿಲ್ಲವರ ಯೂನಿಯನ್ ಎಂಬ ಸಂಸ್ಥೆಯನ್ನು ತನ್ನ ಮಿತ್ರರೊಡಗೂಡಿ ಪ್ರಾರಂಬಿಸಿ 1912 ರಿಂದ 1944ರ ವರೆಗೆ ಅದರ ಅಧ್ಯಕ್ಷರಾಗಿ ಮುಂದೆ ಅಧ್ಯಕ್ಷ ಕೊರಗಪ್ಪರೆಂದೇ ಗುರುತಿಸಿಕೊಂಡರು. ಆದ್ದರಿಂದ ಸಾಹುಕಾರ್ ಕೊರಗಪ್ಪ ಮತ್ತು ಅವರ ಜೊತೆಯಲ್ಲಿ ಸಮಾಜದ ಸಂಘಟನೆಗೆ ಶ್ರಮಿಸಿದ ಜಾರಪ್ಪ ನಾಯ್ಕ, ಬಿ. ಸೋಮಪ್ಪ , ಶೆಡ್ಡೆ ಐತಪ್ಪ ಪೂಜಾರಿ, ಕೊಡಿಯಾಲಬೈಲ್ ಸೋಮಯ ಮೇಸ್ತ್ರಿ, ಸಾಹುಕಾರ್ ಗಿರಿಯಪ್ಪ ಮುಂತಾದ ನಮ್ಮ ಪೂರ್ವಜರು ಪ್ರಾತಃ ಸ್ಮರಣೀಯರೆಂದರೆ ತಪ್ಪಾಗಲಾರದು. ದಾಮೋದರ ಆರ್.ಸುವರ್ಣರವರು ಯೂನಿಯನ್ ಅಧ್ಯಕ್ಷರಾಗಿದ್ದ ಸಮಯದಲ್ಲಿ ಜಿಲ್ಲೆಯಲ್ಲಿ ಹಲವಾರು ಸಂಘಗಳ, ಗುರುಮಂದಿರಗಳ ಉದಯಕ್ಕೆ ಕಾರಣರಾಗಿ ನಾರಾಯಣಗುರುಗಳ ಸಂದೇಶ ಯಾತ್ರೆಯನ್ನು ಮಾಡಿ ಗುರುಗಳ ಬಗ್ಗೆ ಸಮಾಜಕ್ಕೆ ಅರಿವು ಮೂಡಿಸಿ ಸಮಾಜದಲ್ಲಿ ಸಂಘಟನಾ ಜಾಗೃತಿಗೆ ಕಾರಣರಾದರು.

1908ರಿಂದ ಪ್ರಾರಂಭವಾದ ನಮ್ಮ ಸಾಮಾಜಿಕ ಕಾಳಜಿ, ನೂರಾರು ಸಂಘಗಳು, ಗುರುಮಂದಿರಗಳು, ಕಲ್ಯಾಣಮಂಟಪ, ಬೆರಳೆಣಿಕೆಯ ವಿದ್ಯಾಸಂಸ್ಥೆಗಳು ಹೀಗೆ ತಾಲೂಕು, ಜಿಲ್ಲೆ, ರಾಜ್ಯ ಮತ್ತು ಅಂತರರಾಜ್ಯ ಮಟ್ಟದಲ್ಲಿ ಸ್ಥಾಪಿತವಾಯಿತು. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲೂ ಸಮಾಜ ಹಲವಾರು ಏಳುಬೀಳುಗಳನ್ನು ಅನುಭವಿಸಿತು. ಬಿ. ಜನಾರ್ದನ ಪೂಜಾರಿಯವರು ಲೋಕಸಭಾ, ರಾಜ್ಯಸಭಾ ಸದಸ್ಯರಾಗಿ, ಕೇಂದ್ರ ಸಚಿವರಾಗಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡರು.
ನಮ್ಮ ಸಮಾಜದಿಂದ ಹಲವಾರು ಮಂದಿ ವಿಧಾನಸಭೆ, ವಿಧಾನ ಪರಿಷತ್ ಸದಸ್ಯರಾದರು. ರಾಜ್ಯದಲ್ಲಿ ಮಂತ್ರಿಗಳಾದರು. ಇತ್ತೀಚೆಗಿನ ಒಂದು ಮಾಮೂಲಿ ಮಾತೆಂದರೆ ಯಾವುದೇ ಸಮಾಜದ ಅಭಿವೃದ್ಧಿಗೆ ರಾಜಕೀಯ ಶಕ್ತಿ ಬೇಕೆನ್ನುವುದು. ನಮ್ಮ ಸಮಾಜವು ರಾಜಕೀಯ ಶಕ್ತಿಯನ್ನು ಪಡೆದುಕೊಂಡಿತು. ಆದರೆ ಆ ರಾಜಕೀಯ ಶಕ್ತಿಯಿಂದ ಸಮಾಜ ಏನನ್ನು ಪಡೆದುಕೊಂಡಿದೆ ಎನ್ನುವ ಬಗ್ಗೆ ನಾವೆಲ್ಲರೂ ಆತ್ಮಾವಲೋಕನ ಮಾಡುವ ಅಗತ್ಯವಿದೆ. ರಾಜ್ಯದ ಇತರ ಸಮಾಜದ ರಾಜಕೀಯ ನಾಯಕರುಗಳು ಸಮಾಜದ ಪ್ರಶ್ನೆ ಬಂದಾಗ ಪಕ್ಷ ಭೇದವಿಲ್ಲದೆ ಎಲ್ಲರೂ ಒಟ್ಟಾಗುತ್ತಾರೆ. ಆದರೆ ನಮ್ಮ ಸಮಾಜದಲ್ಲಿ …? ಮುಖ್ಯವಾಗಿ ನಮ್ಮ ಸಮಾಜದ ಸಂಘಗಳ ಮುಖಂಡರುಗಳು ಪ್ರಾರಂಭದಿಂದಲೇ ಎರಡನೇ ಮತ್ತು ಮೂರನೇ ಹಂತದ ನಾಯಕತ್ವದ ಸೃಷ್ಠಿಗೆ ಪ್ರಯತ್ನವನ್ನೇ ಮಾಡಿಲ್ಲ. ಯುವಜನತೆಗೆ ಜವಾಬ್ದಾರಿ ವಹಿಸುವುದಾಗಲೀ ಸಾಮಾಜಿಕವಾಗಿ ಅವರನ್ನು ಮುಂಚೂಣಿಗೆ ತರುವ ಕೆಲಸವಾಗಲೀ ಮಾಡಿಲ್ಲ. ನಮ್ಮ ರಾಜಕೀಯ ನೇತಾರರೂ ಕೂಡಾ ಇದೇ ಧೋರಣೆಯನ್ನು ಅವಲಂಬಿಸಿದರು. ಇದರಿಂದಾಗಿ ನಮ್ಮ ಯುವಶಕ್ತಿ ಇತರ ಸಮಾಜದ ಮತ್ತು ಹಲವು ಪಟ್ಟಭದ್ರ ಹಿತಾಸಕ್ತಿಗಳ ಸ್ವಾರ್ಥ ಸಾಧನೆಗೆ ಆಯುಧಗಳಾಗಿ ತಮ್ಮ ಅಮೂಲ್ಯವಾದ ಬದುಕನ್ನು ದುರಂತಕ್ಕೆ ತಳ್ಳಿದರು. ಇವೆಲ್ಲವನ್ನೂ ದೂರಿಕರಿಸುವ ನಿಟ್ಟಿನಲ್ಲಿ ವಿದ್ಯೆ, ಉದ್ಯೋಗ, ಸಂಪರ್ಕಗಳೆಂಬ ಮೂರು ಮುಖ್ಯ ಧ್ಯೇಯ ವಾಕ್ಯಗಳೊಂದಿಗೆ ಅಂಕುರಿಸಿದ ಯುವವಾಹಿನಿ ತನ್ನ 31ನೇ ಸಂವತ್ಸರದಲ್ಲಿ 32 ಘಟಕಗಳನ್ನು ನಾರಾಯಣಗುರುವರ್ಯರು ಸ್ಥಾಪಿಸಿದ SNDPY ಮಾದರಿಯಲ್ಲಿ ಸಾಧಿಸಿದೆ. ಯುವವಾಹಿನಿಯ ಕೇಂದ್ರ ಸಮಿತಿಯು ಸೇರಿದಂತೆ ಎಲ್ಲಾ ಘಟಕಗಳಲ್ಲೂ ಒಂದೇ ವರ್ಷದ ಅವಧಿಯ ಪದಾಧಿಕಾರಿಗಳಿದ್ದು, ಪ್ರತಿ ವರ್ಷ ಪದಾಧಿಕಾರಿಗಳು ಬದಲಾಗುತ್ತಿರುವ ಕಾರಣ ಅರ್ಹತೆಯುಳ್ಳ ಯುವಕ ಯುವತಿಯರ ಪ್ರತಿಭೆ ಪ್ರಕಟವಾಗಲು ಸಾಧ್ಯವಾಗಿದೆ. ನಾಯಕತ್ವವನ್ನು ಬೆಳೆಸಲು ಅವಕಾಶವಿದೆ. ನಾಯಕತ್ವಕ್ಕೆ ಅನುಗುಣವಾಗಿ ಕಾರ್ಯಕ್ರಮಗಳು ಜನಮೆಚ್ಚುವ ರೀತಿಯಲ್ಲಿ ಹಮ್ಮಿಕೊಳ್ಳುತ್ತಿದ್ದಾರೆ. ಇಲ್ಲಿ ವ್ಯಕ್ತಿಪೂಜೆ, ಏಕ ಚಕ್ರಾಧಿಪತ್ಯಕ್ಕೆ ಅವಕಾಶವಿಲ್ಲ. ಎಲ್ಲವೂ ಯುವವಾಹಿನಿಯ ಉಪನಿಬಂಧನೆಗಳಂತೆ ಏಕ ರೂಪದಲ್ಲಿ ಅನುಷ್ಠಾನಗೊಳ್ಳುವ ಕಾರಣ ಸಾಮಾಜಿಕ ಶಿಸ್ತು ಪ್ರಶಂಸನೀಯವಾಗಿದೆ.
ಯುವಶಕ್ತಿಯೆಂಬುದು ಬೆಂಕಿ ಇದ್ದಂತೆ. ಅದನ್ನು ಅದುಮಿಟ್ಟರೆ ಅದು ಜ್ವಾಲಾಮುಖಿಯಾಗಬಹುದು. ಹಿರಿಯರು ಸಂಯಮದಿಂದ ಚೈತನ್ಯ ನೀಡಿ ನಿಭಾಯಿಸಿದರೆ ನಮ್ಮೆಲ್ಲರ ಮನೆ ಬೆಳಗುವ ಜ್ಯೋತಿಯಾಗಬಹುದು.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!