ಯುವಸಿಂಚನ :- ಆಶಯ ಜೂನ್ 2017

ಸಾಮಾಜಿಕ ಆತ್ಮ ಶೋಧನೆ – ಪ್ರೊ| ಮೋಹನ್ ಕೋಟ್ಯಾನ್

ಪ್ರೊ| ಮೋಹನ್ ಕೋಟ್ಯಾನ್

ಒಂದು ಸಮಾಜಕ್ಕೆ ಆತ್ಮಶಕ್ತಿಯೆಂಬುದು ಇದೆಯೇ? ಅದು ಜೀವಂತ ಸಮಾಜವಾದರೆ ಖಂಡಿತವಾಗಿಯೂ ಆತ್ಮಶಕ್ತಿ ಇರಲೇಬೇಕು. ಬೌಧಿಕ ವಿಕಾಸ, ಯೋಚನಾ ಶಕ್ತಿಯ ಉತ್ಕ್ರಾಂತಿಯೇ ಆತ್ಮಶಕ್ತಿಗೆ ಮೂಲ. ವಿಜ್ಞಾನದಲ್ಲಿ ಜೀವ-ನಿರ್ಜೀವ ವಸ್ತುಗಳನ್ನು ವಿಶ್ಲೇಷಿಸುತ್ತಾ ಜೀವ ಇರುವ ವಸ್ತುವಿನ ಗುಣಗಳಲ್ಲಿ ಪುನರುತ್ಪತ್ತಿ (multiplication)  ಪ್ರತಿ ಸ್ಪಂದನೆ (Respose to stimuli),  ಸದಾ ಚಟುವಟಿಕೆ(biological activities)  ಮತ್ತು ಬೆಳವಣಿಗೆ(growth) ಪ್ರಾಮುಖ್ಯವಾದವುಗಳೆಂಬುದನ್ನು ಗುರುತಿಸಿದೆ. ಆದರೆ ಮಾನವನ ಬಗ್ಗೆ ಇಷ್ಟೇ ಸಾಲದು. ಆತನಿಗೆ ಯೋಚನಾಶಕ್ತಿಯೊಂದಿದೆ. ತನ್ನ ಬೇಕು ಬೇಡಗಳನ್ನು ವಿವೇಚಿಸಬಲ್ಲ. ಇಂತಹ ವಿವೇಚನಾಶೀಲ ಜನಸಮುದಾಯ ಸಮಾಜವಾಗಿ ಬೆಳೆದಾಗ ಅಂತಹ ಜನಸಮುದಾಯಕ್ಕೆ ಜೀವಂತ ಹಾಗೂ ಆತ್ಮಶಕ್ತಿ ಇದೆ ಎನ್ನಬಹುದು. ವಿವೇಚನಾರಹಿತ ಜನಸಮುದಾಯ ಖಂಡಿತವಾಗಿಯೂ ಜೀವಂತ ಸಮಾಜವಾಗಿ ಬೆಳೆಯದು.
ಬಿಲ್ಲವ ಸಮಾಜ ಜೀವಂತ ಸಮಾಜವಾಗುಳಿಯಬೇಕಾದರೆ ಕಾಲ ಕಾಲಕ್ಕೆ ಸಮಷ್ಟಿ ಸಮಾಜದ ಆತ್ಮಶೋಧನಾ ಕಾರ್ಯ ನಡೆಯಬೇಕು. ಸಮಾಜಕ್ಕೆ ಸರಿಯಾದ ದಿಕ್ಕಿನಲ್ಲಿ ಮಾರ್ಗದರ್ಶನ ಮಾಡಬಲ್ಲ ಯುವಸಂಘಟನೆಗಳ ಅಥವಾ ನೇತಾರರ ದೂರದೃಷ್ಟಿತ್ವ (vision) ದೊರಕಬೇಕು. ಜನಸಮುದಾಯದ ಒಳಮನಸ್ಸನ್ನು ತಿದ್ದಿತೀಡುವ ಚಾಕಚಕ್ಯತೆ ಬೇಕು. ಇದಕ್ಕೆ ನಿದರ್ಶನ ಇಂದಿರಾ ಗಾಂಧಿಯವರ ಹೆಸರಿನಲ್ಲಿ ದೇವರಾಜ ಅರಸುರವರು ಚಾಲ್ತಿಯಲ್ಲಿ ತಂದ ಭೂ ಮಸೂದೆ ಕಾಯಿದೆ. ಅಂದಿನ ಬಿಲ್ಲವ ಸಮಾಜದ ಬೆಂದು ಬೆಂಡಾದ ಮನದಾಳಕ್ಕೆ ಇದು ಎಷ್ಟು ಸಾಂತ್ವನ ನೀಡಿದೆ ಎಂದರೆ ಬಡ ಜನತೆ ಮುಖ್ಯವಾಗಿ ಬಿಲ್ಲವ ಸಮಾಜ “ಅಮ್ಮ, ಅಮ್ಮ ಇಂದಿರಮ್ಮ ಈರ್ ಎಂಕ್ಲೆ ದೇವೆರಮ್ಮ” ಎಂದು ಮನತುಂಬಿ ಹಾಡಿತು.
ಆದರೆ ಇಂದು ನಮ್ಮ ದೃಷ್ಟಿ ಭೌತಿಕ ಸ್ತರದಲ್ಲಿ ಮಾತ್ರ ಉಳಿಯುವಂತಾಗಿದೆ. ಅದನ್ನೂ ಮೀರಿ ನಿಲ್ಲುವ ಚಿಂತನೆಯನ್ನು ಸಮಾಜಕ್ಕೆ ನೀಡುವತ್ತ ದೃಷ್ಟಿ ಹರಿಸೋಣ.
ಶ್ರೀ ನಾರಾಯಣ ಗುರುಗಳನ್ನು ಬಿಲ್ಲವ ಸಮಾಜ ತಮ್ಮ ಕುಲಗುರುವಾಗಿ ಮನಸ್ಸಾ ಸ್ವೀಕರಿಸಿದೆ. ಶ್ರೀ ಗುರುಗಳು ನಮ್ಮ ಸಮಾಜಕ್ಕೆ ಎರಡು ಜೋಳಿಗೆ ಗಳನ್ನು ಬಿಟ್ಟು ಹೋದರು. ಒಂದು ಜೋಳಿಗೆಯಲ್ಲಿ “ಸಂಘಟಿತರಾಗಿ ಬಲಯುತರಾಗಿರಿ, ವಿದ್ಯಾವಂತರಾಗಿ ಸ್ವತಂತ್ರರಾಗಿರಿ” ಯಾಕೆಂದರೆ ಜಗತ್ತಿನಲ್ಲಿ ಒಂದೇ ಜಾತಿ, ಅದುವೇ ಮಾನವ ಜಾತಿ. ಒಂದೇ ಧರ್ಮ, ಅದುವೇ ಮಾನವ ಧರ್ಮ. ಒಂದೇ ದೇವರು ಅದುವೇ ಸರ್ವಾಂತರ್ಯಾಮಿಯಾದ ಸರ್ವಶಕ್ತಿ ಭಗವಂತ ಎಂಬ ತತ್ವವನ್ನು ಜಗತ್ತಿಗೆ ಸಾರಲು ನೀವು ಬಲಯುತರಾಗಿ ನಿರ್ಭೀತರಾಗಬೇಕು ಎಂಬ ಸಂದೇಶವನ್ನು ಸಾರಿದ ಜೋಳಿಗೆಯದು. ಅದನ್ನು ಬಿಲ್ಲವ ಸಮಾಜದ ಅಂದಿನ ಹಿರಿಯರು ಸವಾಲಾಗಿ ಸ್ವೀಕರಿಸಿದರು; ಅದರಂತೆ ನಡೆದರು.
ನಂತರ ದಿನಗಳಲ್ಲಿ ನಾವು ಮಾಡಿದ್ದಾದರೂ ಏನು? ಇನ್ನೂರೈವತ್ತಕ್ಕೂ ಹೆಚ್ಚು ಸಂಘಟನೆಗಳು ಜನ್ಮ ತಾಳಿದರೂ ನಮ್ಮ ಒಗ್ಗಟ್ಟಿಗೆ ಕಿಮ್ಮತ್ತೂ ಬೆಲೆ ಇಲ್ಲ. ಇತ್ತೀಚೆಗಿನ ರಾಜಕೀಯ ಫಲಿತಾಂಶವೇ ಅದಕ್ಕೆ ಸಾಕ್ಷಿ. ಈ ಬಗ್ಗೆ ವಿಶ್ಲೇಷಣೆ ಬೇಡ. ಆದರೆ ಸಂಭವಿಸಿದ ಘಟನೆ ಮಾತ್ರ ಸತ್ಯ. ಪ್ರತೀ ಸಂಘಟನೆಗಳಲ್ಲೂ ವಿಭಜನೆಯ ಬೀಜ ಸುಪ್ತವಾಗಿ ಅಡಗಿದೆ. ಇನ್ನೂ ವಿದ್ಯಾವಂತರಾಗಿರಿ ಹಾಗೂ ನಿರ್ಭೀತರಾಗಿ ಎಂಬ ಗುರುಗಳ ವಾಣಿಯನ್ನೂ ಪ್ರಾಮುಖ್ಯವಾಗಿ (serious) ನಮ್ಮ ಸಮಾಜ ತೆಗೆದುಕೊಳ್ಳದಿರುವುದು ಶೋಚನೀಯ. ಕೇವಲ ಡಿಗ್ರಿ ಗಳಿಕೆಯಲ್ಲೇ ತೃಪ್ತಿ ಪಡುವ ಹಾಗೂ ಅಂತವರೊಡನೆ ಮಾತನಾಡಲಾಗದಂತಹ ಅಹಂನಿಂದ ಬೀಗುವ ಒಂದು ವರ್ಗವನ್ನೇ ಸೃಷ್ಟಿಸುವ ವರ್ತುಲ ಈ ಸಮಾಜದಲ್ಲಿ ಉದ್ಭವವಾಗಿದೆ. ಬಹುಸಂಖ್ಯಾತ ಬಿಲ್ಲವ ಜನತೆಗೆ ಈ ವರ್ಗದಿಂದ ಕೊಡುಗೆ ಬಹಳಷ್ಟು ಕಡಿಮೆ. ಸ್ವತಂತ್ರರಾಗಿರಿ ಎಂದರೆ ಈ ಸಮಾಜದಿಂದ ದೂರಸರಿಯಿರಿ ಎಂಬ ಅರ್ಥ ಅಲ್ಲ ತಾನೇ! ಬಿಲ್ಲವ ಸಮಾಜದ ಹಲವಾರು ಪ್ರತಿಭಾವಂತರು ಸತ್ಯವನ್ನು ಹೇಳಲು ಹೆದರುತ್ತಾರೆ. ಯಾಕೆಂದರೆ ಸತ್ಯ ಹೇಳಿದರೆ ಅವರನ್ನು ಒಂದು ವರ್ಗದ ಹೊಗಳು ಭಟ್ಟ ಎನ್ನುತ್ತಾರೆಂಬ ಭಯ. ಆದುದರಿಂದಲೇ ಅವರೆಲ್ಲಾ ಮೌನಕ್ಕೆ ಶರಣು. ಇದು ಆರೋಗ್ಯಕರ ಸಮಾಜದ ಲಕ್ಷಣದ ಚಿಹ್ನೆಯಲ್ಲ. ಸತ್ಯ ಧರ್ಮದ ರಕ್ಷಣೆಗೆ ಹೆಸರಾದ ಕೋಟಿ-ಚೆನ್ನಯರು ಹುಟ್ಟಿದ ಸಮಾಜದ ಚಿಂತಕರಿಗೆ ಸತ್ಯದ ಬಗ್ಗೆ ಯೋಚಿಸಲು ಭಯ; ಎಂತಹ ವಿಪರ್ಯಾಸ.
ವಿದ್ಯೆಯಿಂದ ಸ್ವತಂತ್ರರಾಗಿರಿ ಎಂದರೆ ಭಯ ಮುಕ್ತರಾಗಿರಿ ಎಂಬ ಅರ್ಥ ಇಂದು ಕಳೆಗುಂದಿದೆ. ವಿದ್ಯೆಯ ಬಗ್ಗೆ ಗರ್ವ ತಾಳಬೇಕಾದ ಈ ಸಮಾಜದಲ್ಲಿ ಆಡಳಿತ ನಡೆಸುವ ರಂಗವಾದ IAS, IPS ಪಾಸಾದವರು ಬೆರಳೆಣಿಕೆಯಲ್ಲೂ ಇಲ್ಲ. ಶ್ರೀ ಗುರುಗಳು ಕೊಟ್ಟ ಪ್ರಥಮ ಜೋಳಿಗೆ ಇಂದು ಬರಿದಾಗಿದೆ. “ಸಂಘಟನೆಯಿಂದ ಬಲಯುತರಾಗಿರಿ ವಿದ್ಯೆಯಿಂದ ಸ್ವತಂತ್ರರಾಗಿರಿ” ಎಂಬುದನ್ನು ನಾವು ಸಾಕ್ಷಾತ್ಕಾರ ಮಾಡಬಲ್ಲೆವು! ಈ ಬಗ್ಗೆ ಆತ್ಮಶೋಧನೆಯಾಗಲಿ.
ಶ್ರೀಗುರುಗಳು ನೀಡಿದ ಎರಡನೇ ಜೋಳಿಗೆಯ ಬಗ್ಗೆ ದೃಷ್ಟಿ ಹಾಯಿಸಿದ ಬಿಲ್ಲವರನ್ನು ಕಾಣಲು ಹಗಲಿನಲ್ಲೂ ದೀಪ ಹಿಡಿದು ಹುಡುಕಬೇಕು, ಆಗ ಅಲ್ಲಲ್ಲಿ ಕೆಲವರಾದರೂ ಕಾಣಸಿಗಲು ಸಾಧ್ಯ. ಶ್ರೀ ಗುರುಗಳ ತತ್ವಾದರ್ಶಗಳನ್ನು ಅಧ್ಯಯನ ಮಾಡಲು ಶ್ರೀ ನಾರಾಯಣಗುರು ಅಧ್ಯಯನ ಪೀಠವನ್ನು ಮಂಗಳೂರಿನ ವಿಶ್ವ ವಿದ್ಯಾಲಯದಲ್ಲಿ ಸ್ಥಾಪಿಸಬೇಕೆಂಬ ಯುವವಾಹಿನಿಯ ಆಕಾಂಕ್ಷೆ ಈಡೇರಿದೆ. ಇದು ನಮ್ಮ ಸಮಾಜದ ಎರಡನೇ ಹಂತದ ಬೌದ್ಧಿಕ ಪ್ರಗತಿಗೆ ಮಹಾನ್‍ಶಕ್ತಿಯನ್ನು ಒದಗಿಸಬಲ್ಲದು.
ಜನ ಸಮುದಾಯದ ಒಳಮನಸ್ಸನ್ನು ತಿದ್ದಿ ತೀಡಬಲ್ಲ ಅಧ್ಯಾತ್ಮ ಮಾರ್ಗದರ್ಶನದ ಬಹಳಷ್ಟು ನುಡಿಗಳು ಶ್ರಿ ಗುರುಗಳ ತಾತ್ವಿಕ ಚಿಂತನೆಯ ಪುಸ್ತಕದಲ್ಲಿದೆ. ಒಂದು ಸಮಾಜವು ಭೌತಿಕ ಅವಶ್ಯಕತೆಗಳನ್ನು ಮಾತ್ರ ನೀಗಿಸುವಲ್ಲಿ ತನ್ನ ಪ್ರಯತ್ನವನ್ನು ಕೇಂದ್ರೀಕರಿಸಿದರೆ ಸಾಲದು. ಆಧ್ಯಾತ್ಮಿಕವಾಗಿ, ನೈತಿಕವಾಗಿ ಶ್ರೀ ನಾರಾಯಣಗುರುಗಳ ತತ್ವಾದರ್ಶಗಳ ಸಾರವನ್ನು ತಿಳಿಯಬೇಕು. ಹಿಂದೊಮ್ಮೆ ತಮೋಗುಣದಿಂದ ತುಂಬಿದ್ದ ಬಿಲ್ಲವ ಸಮಾಜ ಆರಾಧನೆಯ ಕ್ರಮಗಳಲ್ಲಿ ಮನೆ ಮನೆಯಲ್ಲೂ ಭೂತಾರಾಧನೆ, ಅಸುರ ಕ್ರಿಯೆಯಾದ ಪ್ರಾಣಿಬಲಿ, ಸುರಾಪಾನ, ಕೋಳಿ ಅಂಕ, ಜೂಜು, ವೇಶ್ಯಾವೃತ್ತಿ ತಾಂಡವವಾಡುತ್ತಿದ್ದು ಕೊಲೆಯನ್ನೂ ಮಾಡಲು ಹೇಸದ, ಚಿಕ್ಕಪುಟ್ಟ ಮಾತಿಗೂ ಜಗಳ ಕಾಯುವ ಮಂದಿಯಿಂದ ತುಂಬಿತ್ತು. ಭೂತಗಳ ಉಪಟಳಗಳಿಗೆ ಹೆದರಿದ ಮನೋಸ್ಥಿತಿಯಿಂದ ಭಯಭೀತರಾದ ಎಷ್ಟೋ ಕುಟುಂಬಗಳು ಪ್ರೊಟೆಸ್ಟೆಂಟ್‍ರಾಗಿ ಪರಿವರ್ತಿತರಾಗಿ ಸಾಂತ್ವನ ಕಂಡವರಿದ್ದರು.
ಇಂತಹ ನೈತಿಕ ಅಧಃಪತನದಿಂದ ಉದ್ಧರಿಸಿದ ಶ್ರೀಗುರುಗಳ ಚಿಂತನೆಯಿಂದ ಇಪ್ಪತ್ತನೇ ಶತಮಾನದ ಪ್ರಾರಂಭದಲ್ಲಿ ಶ್ರೀ ಗೋಕರ್ಣನಾಥ ಕ್ಷೇತ್ರ ಸ್ಥಾಪನೆಯಿಂದ ಬಹಳಷ್ಟು ಪರಿವರ್ತನೆಯನ್ನು ಕಂಡಿದೆ. ಸಮಾಜಕ್ಕೆ ಆಧ್ಯಾತ್ಮಿಕ, ನೈತಿಕ ಬಲ ತಂದಿದೆ.
ಆಧುನಿಕ ಸಮಾಜ ಶಾಸ್ತ್ರದಲ್ಲಿ ಒಂದು ಮಾತು ಹೀಗಿದೆ More external material prosperity does not have the intensive strength to sustain a civilisaiton for long. The inner invisible treasure of the supra – material mind, intelligence and heart is what makes the society really healthy and prosperous.

ಕೇವಲ ಬಾಹ್ಯಾಡಂಭರದ ಭೌತಿಕ ಪ್ರಗತಿ ಪಡೆದ ಜನ ಸಮುದಾಯ ತನ್ನ ಸಂಸ್ಕøತಿಯನ್ನು ಅಂತರಾಳದಲ್ಲಿ ಹುದುಗಿಡಲು ಶಕ್ತವಾಗದು. ಬಾಹ್ಯವಾಗಿ ಗೋಚರಿಸದಿದ್ದರೂ ತನ್ನ ಅಂತರ್ಯದ ಸಂಪತ್ತಾಗಿ ಹುದುಗಿರುವ ತನ್ನ ಸಮಾಜದ ಬಗೆಗಿನ ಪ್ರೀತಿ-ವಿಶ್ವಾಸ, ಮಾನಸಿಕ ಸ್ಪಂದನ, ಹೃದಯ ಸಿರಿವಂತಿಕೆ ಇವು ಮಾತ್ರ ಒಂದು ಆರೋಗ್ಯವಂತ ಸಮಾಜದ ಸಮಷ್ಟಿ ಏಳಿಗೆಗೆ ಸಾಧನವಾಗಬಲ್ಲದು.
ಬಿಲ್ಲವ ಸಮಾಜದ ಮಾನಸಿಕತೆ ಬಿಲ್ಲವರಿಗೇ ಆಶ್ಚರ್ಯ ಉಂಟು ಮಾಡುತ್ತದೆ. ಈ ಸಮಾಜದ ಜನಸಮುದಾಯವನ್ನು ಹಲವಾರು ಸಮಸ್ಯೆ ಕಾಡುತ್ತಿದ್ದು ಅದಕ್ಕೆಲ್ಲಾ ಪರಿಹಾರ ರೂಪದಲ್ಲಿ ಕುಟುಂಬದ ಸ್ವಾವಲಂಬನೆಯಾಗಬೇಕಾಗಿದೆ. ಇದರೊಂದಿಗೆ ದುರಾಭ್ಯಾಸದ ಚಟ ವರ್ಜನೆ, ದುಂದು ವೆಚ್ಚದ ಮನೋವೃತ್ತಿಯಲ್ಲಿ ಹಿಡಿತ, ವಿದ್ಯೆ ಗಳಿಕೆ, ವೈಯಕ್ತಕ ಹಾಗೂ ಸಾಮಾಜಿಕ ಸಂಸ್ಕøತಿಯ ಪುನರುತ್ಥಾನವಾಗಬೇಕು. ಈ ಮೂಲಭೂತ ಅಭಿವೃದ್ಧಿ ಕಾರ್ಯದತ್ತ ನಮ್ಮ ಸಂಘಟನೆಗಳಿಗೆ ಏಕಮುಖೇನ (common minimum program) ಮಾರ್ಗದರ್ಶನ ನೀಡಬಲ್ಲ ದೃಷ್ಟಾರ ಹುಟ್ಟಿ ಬರುವುದಾದರೆ ಬಿಲ್ಲವ ಸಮಾಜದ ಅಭಿವೃದ್ಧಿ ಸಾಧ್ಯ. ಇಲ್ಲದಿದ್ದರೆ ಕ್ಷುಲ್ಲಕ ಮತಬೇಧಗಳೆಂಬ   ಕಬಂಧ ಬಾಹು ಸಮಾಜವನ್ನೂ ನುಂಗಿ ಹಾಕಬಹುದು. ಶ್ರೀಗುರುಗಳ ತಾತ್ವಿಕ ವಿಚಾರಗಳಲ್ಲಿ ಮನಸ್ಸನ್ನು ಇಡದ, ವಿಶಾಲ ದೃಷ್ಟಿಯನ್ನೂ ಬಿಟ್ಟವರು ಬಿಲ್ಲವ ಸಮಾಜದ ನೇತೃತ್ವವನ್ನು ಕೊಂಡುಕೊಳ್ಳಲು ಹಾತೊರೆಯುವ ಪ್ರವೃತ್ತಿ ಸಲ್ಲದು. ನೇತಾರರು ಪರಸ್ಪರ ಕಾದಾಡಿದರೆ ಬಿಲ್ಲವ ಸಮಾಜ ಬಡವಾಗಬಹುದೆಂಬ ಎಚ್ಚರ ನಮ್ಮದಾಗಬೇಕು. ಈ ಮಾತು ಕಹಿಯಾದರೂ ಸತ್ಯ.
ಬಿಲ್ಲವ ಸಮಾಜವನ್ನು ಮೇಲೆತ್ತಲು ಅಪಾರವಾದ ಹುಮ್ಮಸ್ಸು ಸಂಕಲ್ಪ ಇರುವ ನಾಯಕತ್ವ ದೊರೆತಾಗ ಸಮಾಜದ ಸಮಷ್ಟಿ ಜನ ಪ್ರೋತ್ಸಾಹ ನೀಡುವ ದಿಕ್ಕಿನಲ್ಲಿ ನಮ್ಮ ಚಿಂತನೆ ಹರಿಯಲಿ. ಈ ಬಗ್ಗೆ “ಬಿಲ್ಲವ ಚಿಂತನ” ಕಾರ್ಯಕ್ರಮ ಪ್ರತೀ ತಾಲೂಕುಗಳಲ್ಲಿ ನಮ್ಮ ಸಂಘಟನೆಯ ಒಕ್ಕೂಟದಲ್ಲಿ ನಡೆಯಲಿ. ಸಂವಾದ ಕಾರ್ಯಕ್ರಮಗಳೂ ಜರಗಲಿ. ಸಮಾಜ ಸಂಘಟನೆ ಬಗ್ಗೆ ಎಚ್ಚರ ಸದಾ ಹಸಿರಾಗಲಿ. ಹಾಗೆ ಆ ಚಿಂತನೆಯಲ್ಲಿ ಮೂಡಿ ಬಂದ ಕಾರ್ಯಸೂಚಿ ಕಾರ್ಯಗತವಾಗಲಿ.
ಇಂತಹ ಸಮಾಜ ಸೃಷ್ಟಿಗೆ ಶ್ರೀ ನಾರಾಯಣಗುರುಗಳ ತತ್ವಾದರ್ಶನದ ಅಧ್ಯಯನ, ಅನುಷ್ಠಾನ ಪ್ರತೀ ಮಂದಿರಗಳ ಮೂಲಕ ಆಗಲಿ. ಪ್ರತೀ ಮನೆಗಳಲ್ಲೂ ಈ ಬಗ್ಗೆ ಪಠನವಾಗಲಿ, ಸುಸಂಸ್ಕøತ ಪೀಳಿಗೆ ಬಿಲ್ಲವರ ಸಮಾಜದಲ್ಲಿ ಮೂಡಲಿ. ಈ ಬಗ್ಗೆ ಅಧ್ಯಯನದ ಅವಶ್ಯಕತೆಯಾಗುವಲ್ಲಿ ರಭಸ ಮೂಡಲಿ ಎಂಬುದೇ ನಮ್ಮೆಲ್ಲರ ಆಶಯ.

One thought on “ಸಾಮಾಜಿಕ ಆತ್ಮ ಶೋಧನೆ – ಪ್ರೊ| ಮೋಹನ್ ಕೋಟ್ಯಾನ್

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!