ಯುವವಾಹಿನಿ(ರಿ) ಕೇಂದ್ರ ಸಮಿತಿ, ಮಂಗಳೂರು

ಸಾಧು ಪೂಜಾರಿ – ಅಧ್ಯಕ್ಷರು -2000-01

ಉಡುಪಿ ಜಿಲ್ಲೆ, ಕಾರ್ಕಳ ತಾಲೂಕು, ಮುಡಾರು ಗ್ರಾಮದಲ್ಲಿ 08-05-1961 ರಂದು ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಜೆಗೋಳಿ, ಪ್ರೌಢ ಶಿಕ್ಷಣವನ್ನು ಸರಕಾರಿ ಜೂನಿಯರ್ ಕಾಲೇಜು, ಕಾರ್ಕಳ, ಪದವಿ ಪೂರ್ವ ಶಿಕ್ಷಣವನ್ನು ಸರಕಾರಿ ಕಾಲೇಜು ಮಂಗಳೂರು ಹಾಗೂ ಡಿಪ್ಲೋಮ ಇನ್ ಕೆಮಿಕಲ್ ಇಂಜಿನೀಯರಿಂಗ್ ಶಿಕ್ಷಣವನ್ನು ಸರಕಾರಿ ಪಾಲಿಟೆಕ್ನಿಕ್, ಮಂಗಳೂರು ಇಲ್ಲಿ ಪ್ರಥಮ ಶ್ರೇಣಿಯಲ್ಲಿ ಪಡೆದರು.

1983 ರಲ್ಲಿ ಮಂಗಳೂರು ರಾಸಾಯನಿಕ ಮತ್ತು ರಸಗೊಬ್ಬರ ಕಾರ್ಖಾನೆಯಲ್ಲಿ ಉದ್ಯೋಗವನ್ನು ಪಡೆದು, ಇಲ್ಲಿ ಪ್ರಸಕ್ತ ಉತ್ಪಾದನಾ ವಿಭಾಗದಲ್ಲಿ ಶಿಪ್ಟ್ ಇಂಜಿನೀಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 1987 ರಲ್ಲಿ ಸ್ಥಾಪಿತವಾದ ಯುವವಾಹಿನಿಯ ಸ್ಥಾಪಕ ಸದಸ್ಯನಾಗಿದ್ದು 1992 ರಲ್ಲಿ ಮಂಗಳೂರು ಘಟಕದ ಅಧ್ಯಕ್ಷರಾಗಿ, 1998 ರಲ್ಲಿ ಕೇಂದ್ರ ಸಮಿತಿಯ ಉಪಾಧ್ಯಕ್ಷರಾಗಿ, 1998-99 ಹಾಗೂ 1999-2000 ಈ ಎರಡು ವರ್ಷಗಳಲ್ಲಿ ’ಸಿಂಚನ’ ಮಾಸ ಪತ್ರಿಕೆಯ ಸಂಪಾದಕರಾಗಿ, 2000-2001 ನೇ ಸಾಲಿನಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ, 2010-2012 ನೇ ಸಾಲಿನಲ್ಲಿ “ವಿಶುಕುಮಾರ್ ದತ್ತಿನಿಧಿ”ಯ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸುತ್ತ, “ಸಿಂಚನ” ಮಾಸಿಕ ಮತ್ತು ವಿಶೇಷಾಂಕಗಳಿಗೆ ನಿರಂತರ ದುಡಿಯುತ್ತಾ, ಸಾಹಿತ್ಯಾಭಿಮಾನಿಯಾಗಿ, ಸಾಹಿತ್ಯ ಪೋಷಕರಾಗಿ ಸ್ಥಳೀಯ ಸಾಹಿತಿಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ತಮ್ಮ ನೆರವನ್ನು ನೀಡಿರುತ್ತಾರೆ. ಸಾಹಿತ್ಯ ರಚನೆ ಹಾಗೂ ಓದುವಿಕೆಯ ಹವ್ಯಾಸದೊಂದಿಗೆ, ನಾಟಕದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿರುವುದು ಇವರ ಪ್ರೌಢಿಮೆಗೆ ಒಂದು ಉದಾಹರಣೆ.

ಮಡದಿ ಶ್ರೀಮತಿ ಶಾಂತ ಎಸ್. ಪೂಜಾರಿ ಹಾಗೂ ತನ್ನ ಇಬ್ಬರು ಮಕ್ಕಳಾದ ಸುಸ್ಮಿತಾ ಹಾಗೂ ಸಂಹಿತಾ (ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು)ರನ್ನೊಳಗೊಂಡ ಸಂತೃಪ್ತ ಕುಟುಂಬ ಇವರದ್ದು.

ಕೇಂದ್ರ ಸಮಿತಿಯ ಅಧ್ಯಕ್ಷರಾಗಿದ್ದಾಗ ಆಧ್ಯಾತ್ಮಿಕತೆಯ ಒಂದು ಅಂಗವಾದ ವೈದಿಕ ವಿಧಿ ವಿಧಾನಗಳ ಅನುಷ್ಠಾನದಲ್ಲಿ ನಿರತರಾದ ಬಿಲ್ಲವ ಸಮಾಜದ ಶಾಂತಿಗಳನ್ನು ಸಂಪರ್ಕಿಸಿ, ಸಮಾವೇಶ ಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬ್ರಹ್ಮಶ್ರೀ ನಾರಾಯಣ ಗುರುವರ್ಯರ 146 ನೇ ಜಯಂತಿಯ ಅಂಗವಾಗಿ ದಿನಾಂಕ 13-08-2000 ನೇ ಆದಿತ್ಯವಾರ ಯುವವಾಹಿನಿ ಕೇಂದ್ರ ಸಮಿತಿಯ ಸುರತ್ಕಲ್ ಘಟಕದ ಸಹಯೋಗದೊಂದಿಗೆ ಮುಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದ ರುಕ್ಕರಾಮ ಸಾಲ್ಯಾನ್ ಸಭಾಗ್ರಹದಲ್ಲಿ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಬಿಲ್ಲವ ಸಮಾಜದಲ್ಲಿ ಒಂದು ರೀತಿಯಲ್ಲಿ ಸಂಚಲನ ಮೂಡಿಸಿದ ’ಶಾಂತಿಗಳ ಸಮಾವೇಶ’ ಅತ್ಯಂತ ಯಶಸ್ವಿಯಾಗಿತ್ತು.

2000 ರಲ್ಲಿ ಯುವವಾಹಿನಿಯ ಪದಾಧಿಕಾರಿಗಳ ಆಯ್ಕೆಗಾಗಿ ಚುನಾವಣಾ ನೀತಿಸಂಹಿತೆಯನ್ನು ರಚಿಸಲಾಯಿತು. ಬೈಲಾ ತಿದ್ದುಪಡಿಗೆ ಚಾಲನೆ ನೀಡಲಾಯಿತು. ಹಾಗೂ ತಿದ್ದುಪಡಿಯಾದ ಬೈಲಾವನ್ನು ಅಂಗೀಕರಿಸಲಾಯಿತು ಕಟಪಾಡಿ ಘಟಕದ ಸಹಯೋಗದೊಂದಿಗೆ (5-11-2000 ರಂದು) ’ವಿಶ್ವ ವೈಭವ’ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ, ಪುತ್ತೂರಿನಲ್ಲಿ ಕೋಟಿ- ಚೆನ್ನಯ ಕ್ರೀಡಾಕೂಟ, ಮಂಗಳೂರಿನಲ್ಲಿ ’ಸುಗ್ಗಿ 2001’ ಜಾನಪದ ಸ್ಪರ್ಧಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಗಿತ್ತು.

’ಬಾಂಧವ್ಯ-2000’ ಅಂತರ್‌ಘಟಕ ಕ್ರೀಡಾ ಕೂಟ ಹೆಜಮಾಡಿ ಘಟಕದ ಸಹಯೋಗದಲ್ಲಿ ನಡೆಸಲಾಗಿತ್ತು. (3-2-2000) ಯುವವಾಹಿನಿಯ ಆಯ್ದ ಸದಸ್ಯರನ್ನು ಸಂಪನ್ಮೂಲ ವ್ಯಕ್ತಿಗಳ ತರಬೇತಿಗಾಗಿ AIM Insight ಗೆ ಕಳಿಸಲಾಗಿದ್ದು ಪ್ರೊ| ಸನ್ನಿ ತೆರಪ್ಪನ್‌ರಿಂದ ತರಗತಿಯನ್ನು ನಡೆಸಲಾಗಿತ್ತು.

ಕೇಂದ್ರ ಸಮಿತಿಯ ನಿರ್ದೆಶನವನ್ನು ಮೀರಿ ನಿಯಮ ಬಾಹಿರವಾಗಿ ಚಟುವಟಿಕೆಗಳಲ್ಲಿ ತೊಡಗಿದ್ದ ಬಂಟ್ವಾಳ ತಾಲೂಕು ಘಟಕದ ಕಾರ್ಯಕಾರಿ ಸಮಿತಿಯನ್ನು ವಜಾಗೊಳಿಸಿ ಕೇಂದ್ರ ಸಮಿತಿಯು ನೇರವಾಗಿ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಿದ್ದು ಮುಂದೆ ಈ ಘಟಕವು ಕೇಂದ್ರ ಸಮಿತಿಯೊಂದಿಗೆ ಉತ್ತಮ ಬಾಂಧವ್ಯವನ್ನು ಇರಿಸಿಕೊಂಡು ಸಕ್ರಿಯ ಘಟಕಗಳಲ್ಲಿ ಒಂದಾಗಿದೆ.

ಹೊಸ್ಮಾರು ಬಲ್ಯೊಟ್ಟುವಿನ ವೈದಿಕ ವಿದ್ಯಾಪೀಠಕ್ಕೆ ಸಣ್ಣ ಮಟ್ಟಿನ ದೇಣಿಗೆಯನ್ನು ನೀಡಿ ಪ್ರೋತ್ಸಾಹಿಸಲಾಗಿದೆ.

ಕೋಣಾಜೆ ಗ್ರಾಮ ಚಾವಡಿಯ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿ ಮಂಗಳೂರಿನಿಂದ ಕೋಣಾಜೆಗೆ ಶೋಭಾಯಾತ್ರೆಯಲ್ಲಿ ಸಾಗಿದಾಗ ಈ ಶೋಭಾಯಾತ್ರೆಯ ನೇತೃತ್ವವನ್ನು ಯುವವಾಹಿನಿ ವಹಿಸಿಕೊಂಡು ಯಶಸ್ವಿಯಾಗಿ ನಡೆಸಿಕೊಟ್ಟಿತ್ತು. ಶ್ರೀ ಕ್ಷೇತ್ರ ಕೊಂಚಾಡಿಯ ಶ್ರೀ ದುರ್ಗಾ ಪರಮೇಶ್ವರಿ ನಾಗಕನ್ನಿಕಾ ದೇವಸ್ಥಾನ, ಮಾಲೆಮಾರ್, ಶ್ರೀ ನವ ದುರ್ಗಾಂಬಿಕಾ ದೇವಸ್ಥಾನ ಇವುಗಳ ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದೆ.

ವಿಳಾಸ: ಸಿ-140, ಎಂ.ಸಿ.ಎಫ್. ಕಾಲನಿ, ಕುಂಜತ್ತಬೈಲ್, ಮಂಗಳೂರು- 575015 Ph: 9448549899
E-mail: sadhupoojary1961@yahoo.co.in

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ

ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆ

ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆಯನ್ನು ದಿನಾಂಕ 11-03-2025 ಮಂಗಳವಾರದಂದು ನಗರದ ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಬಹಳ ಅರ್ಥಪೂರ್ಣಾವಾಗಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ...

Sunday, 06-04-2025

ಯುವವಾಹಿನಿ (ರಿ) ಮಂಗಳೂರು ಘಟಕದ ಪದಗ್ರಹಣ ಸಮಾರಂಭ

ಸಮಾಜ ಸೇವೆ ಹಾಗೂ ವೈಯಕ್ತಿಕ ಬದುಕಿನಲ್ಲಿ ಸಮನ್ವಯ ಇದ್ದರೆ ಮಾತ್ರ ಯಶಸ್ಸು ಸಾಧ್ಯ ದಿನಾಂಕ 25-2-2025 : ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಯುವವಾಹಿನಿ (ರಿ) ಮಂಗಳೂರು ಘಟಕದ 2025-26 ನೇ ಸಾಲಿನ ನೂತನ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾದ ಶ್ರೀ...

Sunday, 06-04-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
error: Content is protected !!