ಅಡ್ವೆ : ಯುವವಾಹಿನಿ (ರಿ) ಅಡ್ವೇ ಘಟಕದ ಉಪಾಧ್ಯಕ್ಷರಾದ ವರುಣ್ ಕುಮಾರ್ ಇವರ ಸಂಬಂಧಿಕರಾದ ಸಂತೋಷ್ ಕುಮಾರ್ ಅಡ್ವೇ ಇವರು, ಕಾರ್ಕಳ ತಾಲೂಕಿನ ಕುಕ್ಕುಂದೂರಿನ ನೆಲ್ಲಿ ಗುಡ್ಡೆಯ ನಿವಾಸಿಯಾದ ದಿ. ಪ್ರೇಮಾನಂದ ರವರ ಪುತ್ರನಾದ ಪಂಚಮ್ ಇತ್ತೀಚೆಗೆ ನಡೆದ ರಸ್ತೆ ಅಪಘಾತದಲ್ಲಿ ತಲೆಗೆ ತೀವ್ರವಾದ ಪೆಟ್ಟಾಗಿದ್ದು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಂತೋಷ್ ಕುಮಾರ್ ಇವರು ನಮ್ಮ ಘಟಕದಿಂದ ಸಹಾಯ ಹಸ್ತವನ್ನು ಕೇಳಿಕೊಂಡಿದ್ದಾರೆ.
ಇವರ ಮೊರೆಯನ್ನು ಸ್ವೀಕರಿಸಿ ನಮ್ಮ ಘಟಕದ, ಅಧ್ಯಕ್ಷರು, ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಹಾಗೂ ಎಲ್ಲಾ ಸದಸ್ಯರು ಸೇರಿ ತಮ್ಮಿಂದ ಆದಷ್ಟು ಧನ ಸಹಾಯವನ್ನು ದಿ. 15-09-2024 ರಂದು ಅಡ್ವೇ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಇಲ್ಲಿ ಗರಡಿಯ ಅರ್ಚಕರೊಂದಿಗೆ ಅಧ್ಯಕ್ಷರು, ಸದಸ್ಯರೆಲ್ಲರೂ ಸೇರಿ ಇವರಿಗೆ ಹತ್ತಾಂತರಿಸಲಾಯಿತು.