ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಸಮಾಜ ಕಟ್ಟುವಲ್ಲಿ ಯುವವಾಹಿನಿಯ ಪಾತ್ರ ಮಹತ್ತರ : ಡಾ|ಯೋಗೀಶ್ ಕೈರೊಡಿ

ಮಂಗಳೂರು: ಸಮಾಜಮುಖಿ ಚಿಂತನೆಗಳೊಂದಿಗೆ ಸಮಾಜದ ಕಟ್ಟಕಡೆಯ ಕುಟುಂಬಗಳ ನಿರಂತರ ಭೇಟಿ, ಭವಿಷ್ಯದ ಸವಾಲುಗಳು ಹಾಗೂ ಅವರ ಮೂಲಭೂತ ಸಮಸ್ಯೆಗಳನ್ನು ಅರ್ಥೈಸಿಕೊಂಡು ಅವರಿಗೆ ಸ್ಪೂರ್ತಿಯಾಗಿ ಆರೋಗ್ಯ ಪೂರ್ಣ ಸಮಾಜ ಕಟ್ಟುವಲ್ಲಿ ಯುವವಾಹಿನಿ ಸಂಸ್ಥೆಯು ಕಳೆದ 36 ವರ್ಷಗಳಿಂದ ಅವಿರತವಾಗಿ ಶ್ರಮಿಸುತ್ತಿದ್ದು ಈ ನಿಟ್ಟಿನಲ್ಲಿ ಯುವವಾಹಿನಿಯ ಪಾತ್ರ ಮಹತ್ತರವಾದುದು ಎಂದು ಅಳ್ವಾಸ್ ಪದವಿ ಕಾಲೇಜಿನ ಉಪನ್ಯಾಸಕರಾದ ಡಾ|ಯೋಗೀಶ್ ಕೈರೊಡಿ ತಿಳಿಸಿದರು.

ಅವರು ದಿನಾಂಕ 24 ಮಾರ್ಚ್ 2024ರ ಭಾನುವಾರ ಯುವವಾಹಿನಿ ಸಭಾಂಗಣ ಉರ್ವಾಸ್ಟೋರ್ ಇಲ್ಲಿ ಜರಗಿದ ವಿವಿಧ ಘಟಕಗಳ ನೂತನ ಪದಾಧಿಕಾರಿಗಳ ತರಬೇತಿ ಕಾರ್ಯಗಾರ ಯಾನ-2024ರ ಸಮನ್ವಯಕಾರರಾಗಿ ಭಾಗವಹಿಸಿ ಮಾತನಾಡಿದರು.

ಕಾರ್ಯಗಾರದ ಉದ್ಘಾಟನೆಯನ್ನು ಯುವವಾಹಿನಿ ಕೇಂದ್ರ ಸಮಿತಿಯ ಸಲಹೆಗಾರರಾದ ಡಾ.ಎನ್. ಟಿ. ಆಂಚನ್ ನೆರವೇರಿಸಿ ಮಾತನಾಡಿ ಯುವ ಸಮುದಾಯ ಯುವವಾಹಿನಿಯ ಧೇಯೋದ್ದೇಶಗಳನ್ನು ಅರಿತುಕೊಂಡು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿದಾಗ ಸಂಘಟನೆ ಬಲಿಷ್ಠವಾಗಿ ರೂಪುಗೊಳ್ಳುತ್ತದೆ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ವಹಿಸಿದ್ದರು. ಕಾರ್ಯಗಾರದಲ್ಲಿ ಸಾಮಾಜಿಕ ರಂಗದಲ್ಲಿ ಯುವವಾಹಿನಿಯ ಪಾತ್ತದ ಬಗ್ಗೆ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ, ಬೆಳ್ತಂಗಡಿ ಇದರ ಅಧ್ಯಕ್ಷರಾದ ಸಂಪತ್ ಬಿ. ಸುವರ್ಣ ಹಾಗೂ ಕಾರ್ಪೊರೇಟ್ ವಕೀಲರಾದ ನವನೀತ್ ಡಿ. ಹಿಂಗಾಣಿ ತರಬೇತಿ ಕಾರ್ಯಾಗಾರ ನಡೆಸಿಕೊಟ್ಟರು.

ಯುವವಾಹಿನಿ ಅಂದು..ಇಂದು..ಮುಂದು ಎಂಬ ವಿಚಾರದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರುಗಳ ಜೊತೆಗೆ ಸಂವಾದ ಕಾರ್ಯಾಗಾರ ನಡೆಯಿತು.

ಸಂಸ್ಥೆಯ ಲೆಕ್ಕಪತ್ರ ನಿರ್ವಹಣೆಯ ಕುರಿತು ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ ಮಾಹಿತಿ ನೀಡಿದರು. ಯುವವಾಹಿನಿ ಕೇಂದ್ರ ಸಮಿತಿಯ ಪ್ರಥಮ ಉಪಾಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಯುವವಾಹಿನಿ ಮಾರ್ಗದರ್ಶಿ ಕುರಿತು ಹಾಗೂ ಬೈಲಾ ಮತ್ತು ಘಟಕಗಳು ಎದುರಿಸುತ್ತಿರುವ ಸವಾಲುಗಳು ಹಾಗೂ ಪರಿಹಾರಗಳ ಬಗ್ಗೆ ಕೇಂದ್ರ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ ಮಾಹಿತಿ ನೀಡಿದರು.
ಯುವವಾಹಿನಿ ಕೇಂದ್ರ ಸಮಿತಿಯ ವ್ಯಕ್ತಿತ್ವ ವಿಕಸನ ನಿರ್ದೇಶಕರಾದ ಅಜೀತ್ ಕುಮಾರ್ ಪಾಲೇರಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ ವಂದಿಸಿದರು. ಕೇಂದ್ರ ಸಮಿತಿಯ ದ್ವೀತಿಯ ಉಪಾಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಕಾರ್ಯಕ್ರಮ ನಿರ್ವಹಿಸಿದರು. ಕೇಂದ್ರ ಸಮಿತಿಯ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಸಂಘಟನಾ ಕಾರ್ಯದರ್ಶಿಗಳು ಉಪಸ್ಥಿತರಿದ್ದು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

error: Content is protected !!