ಕಂಕನಾಡಿ :- ನಮ್ಮ ಸಮಾಜದ ಯುವ ಸಮುದಾಯ ಮುಖ್ಯವಾಹಿನಿಯ ಜೊತೆಗೂಡಿ ಸಮಾಜಮುಖಿ ಚಿಂತನೆಗಳೊಂದಿಗೆ ಉತ್ತಮ ಸಮಾಜ ನಿರ್ಮಿಸುವಲ್ಲಿ ಶ್ರಮಿಸಬೇಕಾಗಿದೆ ಎಂದು ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಇದರ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ತಿಳಿಸಿದರು. ಅವರು ದಿನಾಂಕ 19 ಜೂನ್ 2022 ಭಾನುವಾರ ಕಂಕನಾಡಿಯ ಉಜ್ಜೋಡಿ ಮಾರುತಿ ಕಾಂಪ್ಲೆಕ್ಸ್ ನ ಮಹಡಿಯಲ್ಲಿ ಶುಭಾರಂಭಗೊಂಡ ಯುವವಾಹಿನಿ (ರಿ.) ಕಂಕನಾಡಿ ಘಟಕದ ನೂತನ ಕಛೇರಿಯನ್ನು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ ಘಟಕದ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಘಟಕದ ನೂತನ ಕಛೇರಿಯ ಉದ್ಘಾಟನೆಯನ್ನು ಉಜ್ಜೋಡಿ ಹೌಸ್ ನ ಲಕ್ಷ್ಮೀ ಮಾರಪ್ಪನವರು ದೀಪ ಬೆಳಗಿಸಿ ಶುಭ ಹಾರೈಸಿದರು. ಘಟಕದ ಅಧ್ಯಕ್ಷರಾದ ನಯನ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ರವಿ ಕೊಂಡಾಣ, ಕಟ್ಟಡದ ಮಾಲೀಕರಾದ ಸುರೇಶ್ ಉಜ್ಜೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಮಾರಂಭದಲ್ಲಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು, ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು, ಉಜ್ಜೋಡಿ ಶ್ರೀ ಮಹಾಂಕಾಳಿ ಸೇವಾ ಸಮಿತಿಯ ಗೌರವಾಧ್ಯಕ್ಷರು, ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತಿಲಿನ ಪದಾಧಿಕಾರಿಗಳು, ಜಪ್ಪಿನಮೊಗರು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಕಂಕನಾಡಿ ಗರೋಡಿ ಬಿಲ್ಲವ ಸೇವಾ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು, ಕನಕರ ಬೆಟ್ಟು ಗರೋಡಿ ಕ್ಷೇತ್ರದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದು ಶುಭ ಹಾರೈಸಿದರು. ಮಂಗಳೂರು ಘಟಕದ ಸದಸ್ಯರು ರಸಮಂಜರಿ ಕಾರ್ಯಕ್ರಮ ನೀಡಿ ಅಭಿನಂದಿಸಿದರು. ಘಟಕದ ಅಧ್ಯಕ್ಷರಾದ ನಯನ ಸುರೇಶ್ ಎಲ್ಲರನ್ನೂ ಸ್ವಾಗತಿಸಿದರು. ರಚನ ಶೇಖರ್ ಪ್ರಾರ್ಥಿಸಿದರು. ಮೇಘ ಹಾಗೂ ದೇವಕಿ ಕಿಶೋರ್ ಕಾರ್ಯಕ್ರಮ ನಿರೂಪಿಸಿದರು. ಘಟಕದ ಕಾರ್ಯದರ್ಶಿ ಲೋಕೇಶ್ ಅಮೀನ್ ಧನ್ಯವಾದಗೈದರು.