ಯುವವಾಹಿನಿ (ರಿ) ಬಜ್ಪೆ ಘಟಕದ ಆಶ್ರಯದಲ್ಲಿ ಬಿಸು ಪರ್ಬ

ಸಮಾಜದಲ್ಲಿ ಪ್ರೀತಿ, ವಿಶ್ವಾಸ ,ಶಾಂತಿಯನ್ನು ಬಲಪಡಿಸುವಲ್ಲಿ ಹಬ್ಬಗಳು ದಾರಿದೀಪ : ಯಶವಂತ ಪೂಜಾರಿ

 

ಬಜ್ಪೆ : ಜಾಗತೀಕರಣದ ಭರಾಟೆಯಲ್ಲಿ ನಮ್ಮ ಸಂಸ್ಕೃತಿ ಸಂಪ್ರದಾಯಗಳು ನಶಿಸಿಹೋಗುವ ಕಾಲಘಟ್ಟದಲ್ಲಿ ಯುವವಾಹಿನಿಯು ಹಬ್ಬಗಳನ್ನು ಸಾಮೂಹಿಕವಾಗಿ ಆಚರಿಸುವ ಮೂಲಕ ಮುಂದಿನ ಯುವಜನತೆಗೆ ಸಂಸ್ಕೃತಿ, ಸಂಸ್ಕಾರದ ಅರಿವು ಮೂಡಿಸಿದೆ. ಸಮಾಜದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ, ಶಾಂತಿಯನ್ನು ಬಲಪಡಿಸುವಲ್ಲಿ ಹಬ್ಬಗಳು ದಾರಿದೀಪವಾಗಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ ತಿಳಿಸಿದರು.

ಅವರು ದಿನಾಂಕ‌ 15.04.2018 ರಂದು ಬಜ್ಪೆ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ಯುವವಾಹಿನಿ (ರಿ) ಬಜ್ಪೆ ಘಟಕದ ಆಶ್ರಯದಲ್ಲಿ ಜರುಗಿದ ಬಿಸು ಪರ್ಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಪಗ್ಗು ತಿಂಗಳು ( ಎಪ್ರಿಲ್, ಮೇ ) ತುಳುವರಿಗೆ ವರ್ಷ ಆರಂಭದ ಮೊದಲ ದಿನ , ತುಳುವರ ಪ್ರಕಾರ ಮೀನ ಮಾಸ ಮುಗಿದು ಮೇಷ ಮಾಸದ ಸಂಕ್ರಮಣಕ್ಕೆ ಹೊಸ ವರ್ಷ ಆಚರಣೆ , ತುಳುವರು ಮೂಲತಃ ಕೃಷಿಕರು ಹೀಗಾಗಿ ಅವರ ಎಲ್ಲಾ ಹಬ್ಬಗಳು ಒಂದಿಲ್ಲೊಂದು ರೀತಿ ಕೃಷಿ ಸಂಸ್ಕೃತಿಯನ್ನು ಆಧರಿಸಿ ಆಚರಣೆಗೊಳ್ಳುತ್ತದೆ. ಬಿಸು ಪರ್ಬದಲ್ಲಿ ಕಣಿ ಇಡುವುದು, ಬುಳೆಕಾಣಿಕೆ ಒಪ್ಪಿಸುವುದು, ಎಣೇಲು ಬೆಸಾಯಕ್ಕೆ ಮುಹೂರ್ತ, ಕೈ ಬಿತ್ತ್ ಹಾಕುವುದು ಮುಂತಾದ ಆಚರಣೆ ಇದೆ. ಪಗ್ಗು ತಿಂಗಳೆಂದರೆ ಗಿಡ ಮರಗಳಲ್ಲಿ ಫಲಗಳು ಯಥೇಚ್ಛವಾಗಿ ಬೆಳೆದಿರುತ್ತದೆ ಅಲ್ಲದೆ ಬಿಸು ಕಣೆಗೆ ಅರ್ಪಿಸದೆ ಹೊಸಫಲವನ್ನು ತಿನ್ನಬಾರದೆಂಬ ನಂಬಿಕೆ ತುಳುವರಲ್ಲಿ ರೂಡಿಯಲ್ಲಿದೆ. ಹಬ್ಬ ಹರಿದಿನಗಳ‌ ಮಹತ್ವವನ್ನು ಅರಿತುಕೊಂಡು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ದಾಟಿಸುವ ಪ್ರಯತ್ನ ಯುವವಾಹಿನಿ ಮಾಡುತ್ತಿರುವುದು ಶ್ಲಾಘನೀಯ ಎಂದು ಕಲ್ಪವೃಕ್ಷದ ಸಸಿ ನೆಡುವ ಮೂಲಕ ಬಿಸುಪರ್ಬ ಉದ್ಘಾಟಿಸಿದ ಪ್ರಖ್ಯಾತ ವೈದ್ಯರು ಹಾಗೂ ಸಮಾಜಮುಖಿ ಚಿಂತಕರಾದ ಡಾ. ಅನುಸೂಯ ಬಿ.ಸಾಲ್ಯಾನ್ ಉಪನ್ಯಾಸ ನೀಡಿದರು.

ಯುವವಾಹಿನಿ (ರಿ) ಬಜ್ಪೆ ಘಟಕದ ಅಧ್ಯಕ್ಷರಾದ ದೇವರಾಜ್ ಅಮೀನ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥ ಪಾಲಕರಾದ ವಿಶ್ವನಾಥ ಪೂಜಾರಿ ರೆಂಜಾಳ ಇವರ ಸಮಾಜದ ವಿವಿಧ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು ಪೂಜಾ ಕಿರಣ್ ಸನ್ಮಾನ‌ ಪತ್ರ ವಾಚಿಸಿದರು.

ಆತ್ಮಶಕ್ತಿ ಸಹಕಾರಿ ಸಂಘದ ಅಧ್ಯಕ್ಷರಾದ ಚಿತ್ತರಂಜನ್ ಬೋಳಾರ್, ಚಲನಚಿತ್ರ ನಟಿ ನವ್ಯಾ ಪೂಜಾರಿ, ಬಜ್ಪೆ ಕರಂಬಾರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಉಪಾಧ್ಯಕ್ಷರಾದ ಜಗನ್ನಾಥ ಸಾಲ್ಯಾನ್, ಯುವವಾಹಿನಿ (ರಿ) ಬಜ್ಪೆ ಘಟಕದ ಸಲಹೆಗಾರರಾದ ರವಿಚಂದ್ರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವಿಶ್ವನಾಥ ಪೂಜಾರಿ ರೆಂಜಾಳ‌ ಪ್ರಸ್ತಾವನೆ ಮಾಡಿದರು. ಯುವವಾಹಿನಿ (ರಿ,) ಬಜ್ಪೆ ಘಟಕದ ನಿಕಟಪೂರ್ವ ಅಧ್ಯಕ್ಷರಾದ ಚಂದ್ರಶೇಖರ್ ಪೂಜಾರಿ ಸ್ವಾಗತಿಸಿದರು. ಕಾರ್ಯದರ್ಶಿ ಸುನೀತಾ ಧನ್ಯವಾದ ನೀಡಿದರು. ಮಾಜಿ ಅಧ್ಯಕ್ಷರಾದ ರವೀಂದ್ರ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು . ಸಭಾ ಕಾರ್ಯಕ್ರಮದ ಬಳಿಕ‌ ಘಟಕದ ಸದಸ್ಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

Leave a Reply

Your email address will not be published. Required fields are marked *

error: Content is protected !!