ಉಪ್ಪಿನಂಗಡಿ: ಯುವವಾಹಿನಿ(ರಿ.) ಉಪ್ಪಿನಂಗಡಿ ಘಟಕದ ವತಿಯಿಂದ ಬ್ರಹ್ಮಾವರದ ಕಿಂಗ್ ಆಫ್ ಕಿಂಗ್ಸ್ ರೆಸಾರ್ಟ್ ಗೆ ಒಂದು ದಿನದ ಪ್ರವಾಸ ಕಾರ್ಯಕ್ರಮವನ್ನು 26-05-2024ರ ಆದಿತ್ಯವಾರ ಹಮ್ಮಿಕೊಳ್ಳಲಾಗಿತ್ತು.
ಪ್ರವಾಸ ಸಂಚಾಲಕರು ಗುಣಕರ ಅಗ್ನಾಡಿಯವರ ಮಾರ್ಗದರ್ಶನದಲ್ಲಿ ಘಟಕದ ಅಧ್ಯಕ್ಷರಾದ ಸೋಮಸುಂದರ್, ಪ್ರವಾಸ ನಿರ್ದೇಶಕರಾದ ನಾಣ್ಯಪ್ಪ ಪೂಜಾರಿ ಮತ್ತು ಕಾರ್ಯದರ್ಶಿ ಅನಿತಾ ಸತೀಶ್ ಇವರುಗಳು ಮುಂದಾಳತ್ವ ವಹಿಸಿಕೊಂಡಿದ್ದರು.
ಸದಸ್ಯರುಗಳು ತಮ್ಮ ಕುಟುಂಬದ ಜೊತೆಗೂಡಿ ಒಟ್ಟು 66 ಮಂದಿ ಪ್ರವಾಸಿಗರು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದಿಂದ ಶುಭ ಲಕ್ಷ್ಮೀ ಹಾಲಿಡೇಸ್ ಲಕ್ಸುರಿ ಬಸ್ಸಿನಲ್ಲಿ ಹೊರಟು, ರೆಸಾರ್ಟ್ ನಲ್ಲಿ ಉಪಹಾರವನ್ನು ಮುಗಿಸಿ ಎಲ್ಲರೂ ಬೆಳಿಗ್ಗೆಯಿಂದ ಸಂಜೆ ತನಕ ದ್ವೀಪ ಕಿನಾರೆಯಲ್ಲಿ ವಾಲಿಬಾಲ್, ಹಗ್ಗಜಗ್ಗಾಟ, ತ್ರೋಬಲ್, ಈಜು, ಬೋಟಿಂಗ್ ಅಲ್ಲದೆ ಕ್ರಿಕೆಟ್, ಜೋಕಾಲಿ ಮುಂತಾದ ಕ್ರೀಡೆಗಳಲ್ಲಿ ತೊಡಗಿಸಿಕೊಂಡರು. ಮಕ್ಕಳೆಲ್ಲರೂ ನೀರಿನಲ್ಲಿ ಕುಣಿದು ಕುಪ್ಪಳಿಸಿದರು.
ಅಪರಾಹ್ನ ಚಾ ತಿಂಡಿಯ ನಂತರ ಎಲ್ಲರೂ ಒಟ್ಟಾಗಿ ರೈನ್ ಡ್ಯಾನ್ಸ್ ನಲ್ಲಿ ಪಾಲ್ಗೊಂಡು, ನಂತರ ಪ್ರವಾಸ ಮತ್ತು ಯುವವಾಹಿನಿಯ ಧ್ಯೇಯಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಸಲಾಯಿತು.
ಬಸ್ಸಿನಲ್ಲಿ ಅಂತ್ಯಾಕ್ಷರಿ, ರಸಪ್ರಶ್ನೆ, ಹಾಡು ಹಾಗೂ ಇತರ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ರೆಸಾರ್ಟ್ ನಲ್ಲಿ ಉತ್ತಮವಾದ ಆಹಾರವನ್ನು ಸವಿದು ಆನಂದಮಯವಾಗಿ ದಿನವನ್ನು ಕಳೆದೆವು.
ದಾರಿಮಧ್ಯೆ ಹಿತವಾದ ಭೋಜನ ಆಸ್ವಾದಿಸಿಕೊಂಡು ರಾತ್ರಿ ಬಸ್ಸಿನಿಂದ ಇಳಿಯುವಾಗ ಒಟ್ಟಾಗಿ ಅನುಭವಿಸಿದ ಖುಷಿ ಮತ್ತು ಬೇರೆ ಬೇರೆ ಗಾಡಿಗಳಲ್ಲಿ ಹೊರಟಾಗ ತುಸು ಬೇಸರದೊಂದಿಗೆ ಬೀಳ್ಕೊಟ್ಟರು.