ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ ಉಡುಪಿ ಘಟಕದ ಆತಿಥ್ಯದಲ್ಲಿ ಉಡುಪಿಯ ಪುರಭವನದಲ್ಲಿ ದಿನಾಂಕ 31.07.2016 ರಂದು ಜರುಗಿದ ಯುವವಾಹಿನಿಯ 29ನೇ ವಾರ್ಷಿಕ ಸಮಾವೇಶದ ಸುಸಂದರ್ಭದಲ್ಲಿ ಸಾಮಾಜಿಕ ಕ್ಷೇತ್ರದ ಸಾಧನೆ ಗುರುತಿಸಿ ಶ್ರೀ ಶೈಲೇಂದ್ರ ವೈ.ಸುವರ್ಣ ಇವರಿಗೆ ಯುವವಾಹಿನಿ ಸಾಧನಾ ಶ್ರೀ ಪ್ರಶಸ್ತಿ 2016 ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ನಗರಸಭೆಯ ಅದ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಮಾಧವ ಬನ್ನಂಜೆ, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಮುಂಬಯಿ ಬಿಲ್ಲವ ಜಾಗೃತಿ ಬಳಗದ ಅದ್ಯಕ್ಷರಾದ ಎನ್.ಟಿ.ಪೂಜಾರಿ ಮುಂಬಯಿ, ಉದ್ಯಮಿ ಸಂತೋಷ್ ಪೂಜಾರಿ ಉಗ್ಗೆಲ್ ಬೆಟ್ಟು, ನಾವುಂದ ಸುಭೋದ ಸ್ಕೂಲ್ ಸಂಸ್ಥಾಪಕರಾದ ಎನ್.ಕೆ.ಬಿಲ್ಲವ ನಾವುಂದ, ಮೂಡಬಿದ್ರೆ ಎಕ್ಸಲೆಂಟ್ ಪಿ.ಯು.ಕಾಲೇಜು ಉಪನ್ಯಾಸಕರಾದ ಡಾ.ನವೀನ್ ಕುಮಾರ್ ಸೂರಿಂಜೆ, ಯುವವಾಹಿನಿ ಕೇಂದ್ರ ಸಮಿತಿ ಅದ್ಯಕ್ಷರಾದ ಸಂತೋಷ್ ಕುಮಾರ್, ಸಮಾವೇಶ ನಿರ್ದೇಶಕರಾದ ಪ್ರವೀಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಕೇಶವ ಸುವರ್ಣ ಉಪಸ್ಥಿತರಿದ್ದರು.