ಮಾಣಿ: ಯುವವಾಹಿನಿ ಮಾಣಿ ಘಟಕದ ವತಿಯಿಂದ ಸದಸ್ಯರಿಗೆ ಒಂದು ದಿನದ ವ್ಯಕ್ತಿತ್ವ ವಿಕಸನ ಮತ್ತು ಪರಿಣಾಮಕಾರಿ ಭಾಷಣ ಕಲೆ ತರಬೇತಿ ಕಾರ್ಯಾಗಾರ ಯುವಸ್ಫೂರ್ತಿ-2017 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಲ್ಲಡ್ಕ ಬಿಳಿಯೂರಿನಲ್ಲಿದಿನಾಂಕ 19.11.2017 ರಂದು ನಡೆಸಲಾಯಿತು.
ಕಳೆಂಜ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೋಕ್ತೇಸರ ಚಂದಪ್ಪ ಪೂಜಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಯುವವಾಹಿನಿ ಮಾಣಿ ಘಟಕದ ಅಧ್ಯಕ್ಷ ರಾಜೇಶ್ ಪೂಜಾರಿ ಬಾಬನಕಟ್ಟೆ ಅನಂತಾಡಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಮಾಣಿ ಇದರ ಗೌರವಾಧ್ಯಕ್ಷ ಈಶ್ವರ ಪೂಜಾರಿ ಹಿರ್ತಡ್ಕ ಕಡೇಶಿವಾಲಯ, ಅಧ್ಯಕ್ಷ ನಾರಾಯಣ ಸಾಲಿಯಾನ್ ಅನಂತಾಡಿ, ನೇರಳಕಟ್ಟೆವ್ಯವಸಾಯ ಸೇವಾ ಸಹಕಾರಿ ಸಂಘ ಮಾಣಿ ಶಾಖೆಯ ವ್ಯವಸ್ಥಾಪಕ ಸಂಜೀವ ಪೂಜಾರಿ, ಘಟಕದ ಸಲಹೆಗಾರರಾದ ಪ್ರೇಮನಾಥ ಕೆ. ಪ್ರಗತಿಪರ ಕ್ರಷಿಕ ರುಕ್ಮಯ ಪೂಜಾರಿ ನೂಜೆ, ಸಂಘಟನ ಕಾರ್ಯದರ್ಶಿ ಸತೀಶ್ ಬಾಯಿಲ ಕೆಡಿ.ಪಿ.ಸದಸ್ಯೆ ಜಯಂತಿ ವಸಂತ ಪೂಜಾರಿ, ಮಾಣಿ ಘಟಕದ ಸಲಹೆಗಾರ ದಯಾನಂದ ಕೊಡಾಜೆ ಉಪಸ್ಥಿತರಿದ್ದರು.ಸಂಪನ್ಮೂಲ ವ್ಯಕ್ತಿಯಾಗಿ ಜೇಸಿಐ ರಾಷ್ಟ್ರೀಯ ತರಬೇತುದಾರ ರಾಮಚಂದ್ರ ರಾವ್ ಅವರು ವ್ಯಕ್ತಿತ್ವ ವಿಕಸನ, ಪರಿಣಾಮಕಾರಿಭಾಷಣ ಕಲೆ ಕುರಿತ ತರಬೇತಿ ನೀಡಿದರು.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ, ಪ್ರದಾನ ಕಾರ್ಯದರ್ಶಿ ರಾಜೇಶ್ ಸುವರ್ಣ ಬಂಟ್ವಾಳ, ಕೋಶಾಧಿಕಾರಿ ಹರೀಶ್ ಸನಿಲ್, ಯುವವಾಹಿನಿ (ರಿ) ಬಂಟ್ವಾಳ ಘಟಕದ ಅಧ್ಯಕ್ಷ ಲೋಕೇಶ್ ಸುವರ್ಣ ಅಲೆತ್ತೂರು ಶುಭಹಾರೈಸಿದರು. ವ್ಯಕ್ತಿತ್ವ ವಿಕಸನ ನಿರ್ದೇಶಕ ಸತೀಶ್ ಕೊಪ್ಪರಿಗೆ ಸ್ವಾಗತಿಸಿ, ಚೇತನ್ ಕುಮಾರ್ ಕಳಂಜ ಬಿಳಿಯೂರು ವಂದಿಸಿ ಮಾಣಿ ಯುವವಾಹಿನಿ ಘಟಕದ ಕಾರ್ಯದರ್ಶಿ ಪ್ರಶಾಂತ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.
IDEAL PROGRAMME