ಮಂಗಳೂರು: ಯುವವಾಹಿನಿ(ರಿ.) ಮಂಗಳೂರು ಮಹಿಳಾ ಘಟಕ ವತಿಯಿಂದ ನಡೆದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ದಿನಾಂಕ 17-06-2024 ರಂದು ಸಂಜೆ 4:00 ಗಂಟೆಗೆ ಕಾಪಿಕಾಡ್ ಶಾಲೆಯ ಬಳಿ ಇರುವ ಚಿಣ್ಣರ ತಂಗುಧಾಮದಲ್ಲಿ ಗಿಡ ನೆಟ್ಟು ಅದರ ಮಹತ್ವದ ಬಗ್ಗೆ ಮಕ್ಕಳಿಗೆ ಹಾಗೂ ಸದಸ್ಯರಿಗೆ ತಿಳಿಸುವ ಕಾರ್ಯಕ್ರಮ ನಡೆಯಿತು.
ವೃಕ್ಷಸ್ಥಪಸ್ವಿ ಮಾಧವ ಉಳ್ಳಾಲ ಮುಖ್ಯ ಅತಿಥಿಯಾಗಿದ್ದರು. ಮುಖ್ಯ ಅತಿಥಿಗಳಾದ ಮಾಧವ ಉಳ್ಳಾಲ್ ಗಿಡವನ್ನು ಘಟಕದ ಅಧ್ಯಕ್ಷರಿಗೆ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಗೊಂಡಿತು.
ಉದ್ಘಾಟಕರ ಮಾತಿನಲ್ಲಿ ಮಾಧವ್ ಉಳ್ಳಾಲ್ ರವರು ಕಾಡುಗಳು ಕ್ಷೀಣಿಸುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಗಿಡ ನೆಟ್ಟು ಬೆಳೆಸುವದರ ಅಗತ್ಯತೆಯ ಬಗ್ಗೆ ತಿಳಿಸಿದರು ಹಾಗೂ ಪ್ರತಿಯೊಂದು ಗಿಡಗಳು ಔಷಧೀಯ ಗುಣ ಹೊಂದಿದ್ದು ಮಕ್ಕಳಿಗೆ ಗಿಡಗಳ ಪರಿಚಯ ಮಾಡಿಕೊಡುವ ಅಗತ್ಯತೆ ಇದೆ ಎಂದರು. ಮಹಿಳಾ ಘಟಕದ ಸದಸ್ಯರಿಗೆ ಹಾಗೂ ತಂಗುಧಾಮದ ಮಕ್ಕಳಿಗೆ ಚಿಣ್ಣರ ತಂಗುಧಾಮದಲ್ಲಿ ಕೆಲ ವರುಷದ ಹಿಂದೆ ಅವರೇ ನೆಟ್ಟಂತಹ ಕೆಲವು ಗಿಡಗಳ ಪರಿಚಯ ಮಾಡಿಸಿ ಅವುಗಳ ವಿಶೇಷ ತೆಯನ್ನು ತಿಳಿಸಿದರು.
ಬಳಿಕ ಮಹಿಳಾ ಘಟಕ ಚಿಣ್ಣರ ತಂಗುಧಾಮದ ಮಕ್ಕಳು ಹಾಗೂ ಮೇಲ್ವಿಚಾರಕರು ಅತಿಥಿಗಳಾದ ಮಾಧವ್ ಉಳ್ಳಾಲ್ ಜತೆಗೂಡಿ ಗಿಡಗಳನ್ನು ಚಿಣ್ಣರ ತಂಗುಧಾಮದ ಆವರಣದಲ್ಲಿ ನೆಡಲಾಯಿತು. ತಂಗುಧಾಮದ ಮಕ್ಕಳಿಗೆ ಘಟಕದ ಸದಸ್ಯರಿಗೆ ಘಟಕದ ವತಿಯಿಂದ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.
ರವಿಕಲಾ ಯಶವಂತ್ ಇವರು ಅತಿಥಿಯಾದ ಮಾಧವ್ ಉಳ್ಳಾಲ್ ಇವರ ಕಿರು ಪರಿಚಯವನ್ನು ಸಭೆಯ ಮುಂದಿಟ್ಟರು. ಮಾಜಿ ಅಧ್ಯಕ್ಷರಾದ ವಿದ್ಯಾ ರಾಕೇಶ್ ಇವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಅಮಿತಾ ಗಣೇಶ್ ವಂದಿಸಿದರು.