ರವಿರಾಜ್ ಅಜ್ರಿ -ವಿಶುಕುಮಾರ್ ಎಂಬ ಬರಹಗಾರನ ಕಥೆ-6

ವಿಶುಕುಮಾರ್ ಹೀಗೊಂದು ನೆನಪು…..ಬಹುವ್ಯಕ್ತಿತ್ವದ ವಿಶು ತಂದೆಯ ಬಳುವಳಿ

             ದೋಗ್ರ ಪೂಜಾರಿ

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರುವುದಕ್ಕಿಂತ ಹತ್ತು ವರ್ಷ ಮೊದಲೇ ವಿಶುಕುಮಾರ್ ಹುಟ್ಟಿದ್ದು. ಆಗಿನ ಸಮಾಜದ ವ್ಯವಸ್ಥೆಯನ್ನು ನಾವು ಇಲ್ಲಿ ಗಮನಿಸಬೇಕಾಗುತ್ತದೆ. ಭೂಮಾಲೀಕರು, ವರ್ಣದ್ವೇಷದ ಪ್ರಭಾವವಿದ್ದ ಕಾಲ. ದೇಶದ ಸ್ವತಂತ್ರಕ್ಕಾಗಿ ಇಂಗ್ಲೀಷರ ವಿರುದ್ಧ ಹೋರಾಟದ ದಿನಗಳು. ಆದರೆ ವಿಶುಕುಮಾರ್ ಮನೆತನ ಅಂಥ ಸಂದಿಗ್ಧತೆಗೆ ಒಳಪಟ್ಟಿರಲಿಲ್ಲ.
ದೋಗ್ರ ಪೂಜಾರಿ ಅವರು ಯಕ್ಷಗಾನ ಕಲಾರಸಿಕರು. ಅವರ ಆಡಳಿತದಲ್ಲಿದ್ದುದು 10 ಮುಡಿ ಗೇಣಿ ಬರುವ ವರ್ಗದಾರರು. ಅವಳಿ ಜಿಲ್ಲೆ( ಉಡುಪಿ- ಮಂಗಳೂರು) ಗಳಲ್ಲಿ ಬಿಲ್ಲವ ಸಮಾಜದವರು ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದ್ದರೂ, ಕೈ ಬೆರಳೆಣಿಕೆಯಷ್ಟು ವರ್ಗದಾರ ಧನಿಕರಾಗಿದ್ದರು. ಉಳಿದವರು ಕೃಷಿ ಗೇಣಿದಾರರು ಹಾಗೂ ಕಾರ್ಮಿಕರಾಗಿದ್ದರು.
10 ಮುಡಿ ಗೇಣಿಯಲ್ಲಿ ತಿಂಗಳಿಗೆ ಸರಾಸರಿ ೧ ಮುಡಿಯೂ ಬರುವುದಿಲ್ಲ. ಇದರಲ್ಲಿ ಊಟ, ಬಟ್ಟೆ-ಬರೆ ಇತರ ಖರ್ಚುಗಳಿಗೆ ಏನು ಸಿಗುತ್ತದೆ. ಇದನ್ನರಿತ ದೋಗ್ರ ಪೂಜಾರಿಯವರು ಇತರ ಸಂಪಾದನೆಗೆ ಸಣ್ಣ ಹೋಟೆಲ್ ಉದ್ದಿಮೆ ನಡೆಸಿಕೊಂಡು ಬಂದಿರುವುದು. ಕಲೆಯನ್ನು ಹವ್ಯಾಸಿಯಾಗಿ ಬೆಳೆಸಿಕೊಂಡು ಬಂದರು.
ಬಹಳ ಸೂಕ್ಷ್ಮಮತಿ ವಿಶುಕುಮಾರ್. ಆಗಿನ್ನು ಅವರು ವಿಶುಕುಮಾರ್ ಆಗಿರಲಿಲ್ಲ. ತಂದೆ ಇಟ್ಟ ಹೆಸರು ವಿಶ್ವನಾಥ್. ತನ್ನ ಆರನೆ ವಯಸ್ಸಿಗೆ ಉರ್ವದ ಸಿದ್ದಿ ಶಾಲೆಗೆ ಸೇರಿದರು. ಅದು ೧೯೪೩ .
ಆ ನಂತರ 1950 ರಲ್ಲಿ ಬೊಕ್ಕಪಟ್ಣ ಶಾಲೆಯಲ್ಲಿ ಇ. ಎಸ್. ಎಸ್. ಸಿ. ಪಾಸು ಮಾಡಿದರು. ಆ ಬಳಿಕ ಉರ್ವ ಕೆನರಾ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ. ಅಲ್ಲಿ ಮೂರು ವರ್ಷ ಕಲಿಕೆ. ೧೯೫೪ ರಲ್ಲಿ ಎಸ್. ಎಸ್. ಎಲ್. ಸಿ ಮುಗಿಸಿದರು.
ಎಸ್. ಎಸ್. ಎಲ್. ಸಿ ಮುಗಿಯಿತು? ಮುಂದೇನು? ಕಾಲೇಜಿಗೆ ಸೇರಲು ಮನಸ್ಸಿದ್ದರೂ ದುಡ್ಡಿಗೆ ತಾಪತ್ರಯ. ದೊಡ್ಡ ಸಂಸಾರ. ತಂದೆಗೆ ಸಹಾಯ ಮಾಡಲು ವಿಶುಕುಮಾರ್ ನಿಂತರು. ತಮ್ಮದೇ ಹೋಟೆಲ್ ನಲ್ಲಿ ಸಪ್ಲೈ ಮಾಡುವುದರ ಜತೆಗೆ ಗ್ಲಾಸು, ಪ್ಲೇಟು ತೊಳೆದರು!
ಈ ನಡುವೆ ಮಂಗಳೂರಿನ ಹಂಚಿನ ಕಾರ್ಖಾನೆಯಲ್ಲಿ ಲೆಕ್ಕ ಗುಮಾಸ್ತನಾಗಿ ಕೆಲಸ. ಆವಾಗಲೇ ಅವರಿಗೆ ರಾಜ್ಯ ಸರಕಾರದ ಮುಜರಾಯಿ( ದತ್ತಿ) ಇಲಾಖೆಯಲ್ಲಿ ಕೆಲಸ ಸಿಕ್ಕಿತು. ಅದು 1957 ರಲ್ಲಿ.
ಬರವಣಿಗೆಯ ನಂಟು ಅಂಟಿದ್ದು:
ಹೈಸ್ಕೂಲು ಓದುವಾಗಲೇ ಬರವಣಿಗೆಯ ನಂಟು ಹಿಡಿದದ್ದು. ಸೂಕ್ಷ್ಮಮತಿಯಾದ ವಿಶುಕುಮಾರ್, ತನ್ನ ಸಮಾಜದ ಅಂಕು-ಡೊಂಕುಗಳನ್ನು ಗಮನಿಸುತ್ತಿದ್ದರು. ತನ್ನ ಅಭಿಪ್ರಾಯ, ಅನಿಸಿಕೆಗಳನ್ನು ಲೇಖನಗಳ ಮೂಲಕ ಇಳಿಸಲು ಹೊರಟರು. ಇದು ಅವರಿಗೆ ಉತ್ತಮ ಸಾಧನವಾಯಿತು. ತನ್ನ ನಿಜ ಹೆಸರಿನಲ್ಲಿ ಲೇಖನಗಳನ್ನು ಬರೆಯಲು ಅವರಿಗೆ ಹಿಂಜರಿಕೆ. ಆಗ ಕಾವ್ಯ ನಾಮ ಹುಟ್ಟಿಕೊಂಡಿದ್ದು!
ಮದರಾಸಿನ ” ಚಂದಮಾಮ” ಮಕ್ಕಳ ಮಾಸ ಪತ್ರಿಕೆಗೆ ‘ ದುಷ್ಟ ಶಾಸನ ‘ ಎಂಬ ಕಥೆಯನ್ನು ‘ ಸುಶರ’ ಹೆಸರಲ್ಲಿ ಕಳುಹಿಸಿದ್ದರು. ಅದು ಅಲ್ಲಿ ಪ್ರಕಟವಾಯಿತು. ಅದು ಅವರ ಮೊದಲ ಕಥೆ. ವಿಶುಕುಮಾರ್ ಅದನ್ನು ನೋಡಿ ಬಹಳ ಸಂಭ್ರಮ ಪಟ್ಟರು. ( ಇಲ್ಲಿ ಒಂದು ಮಾತು ‘ ಚಂದಮಾಮ’ ದ ಬಗ್ಗೆ ಹೇಳಲು ಇಚ್ಛೆ ಪಡುತ್ತೇನೆ. ಕನ್ನಡ ‘ ಚಂದಮಾಮ’ ದ ಮೂಲ ತೆಲುಗು ಚಂದಮಾಮ. ತೆಲುಗು ಚಂದಮಾಮದಲ್ಲಿ ಪ್ರಕಟವಾದ ಕಥೆಗಳನ್ನು ಕನ್ನಡ ‘ ಚಂದಮಾಮ’ ಕ್ಕೆ ಅನುವಾದಿಸುತ್ತಾರೆ. ಈ ಕೆಲಸವನ್ನು ‘ ನವಗಿರಿನಂದ’ ಮಾಡುತ್ತಿದ್ದರು. ಅವರ ಮೂಲ ಹೆಸರು ರಂಗರಾವ್. ಅವರು ಉಡುಪಿ ಜಿಲ್ಲೆಯ ಹೊಸಬೆಟ್ಟಿನವರು. ಕನ್ನಡದಲ್ಲಿ ಕಥೆಗಳು ಬಂದಿದ್ದರೆ, ಆಯ್ಕೆ ಮಾಡಿ ‘ ಚಂದಮಾಮ’ ದಲ್ಲಿ ಪ್ರಕಟಿಸುತ್ತಿದ್ದರು) .
ಆ ನಂತರ ವಿಶುಕುಮಾರ್ ” ಸುದರ್ಶನ” ಹೆಸರಿನಲ್ಲೂ ಕಥೆಗಳನ್ನು ಬರೆಯುತ್ತಿದ್ದರು. ‘ ಶಕುಂತಲಾ- ದುಷ್ಯಂತ’ ನಾಟಕವನ್ನು ಹೈಸ್ಕೂಲ್ ನಲ್ಲಿರುವಾಗಲೇ ಬರೆದು, ಗೆಳೆಯರ ಜತೆಗೂಡಿ ಶಾಲಾ ವಾರ್ಷಿಕೋತ್ಸವದಲ್ಲಿ ಪ್ರದರ್ಶಿಸಿದ್ದರು. ಇದು ಎಲ್ಲರ ಮೆಚ್ಚುಗೆಯನ್ನು ಗಳಿಸಿತು. ನಾಟಕದಲ್ಲಿ ದುಷ್ಯಂತನ ಪಾತ್ರವನ್ನು ಮಾಡಿ, ಪ್ರಶಸ್ತಿಯನ್ನು ಕೂಡ ಪಡೆದರು.
” ಮಿಸ್ಟರ್ ಬಾಂಬೆ” ಎಂಬ ತುಳು ನಾಟಕವನ್ನು ಬರೆದು, ಶಾಲೆಯಲ್ಲಿ ಪ್ರದರ್ಶನ ಕಂಡು, ಭಾರೀ ಮೆಚ್ಚುಗೆ ಪಡೆದರು.
ಬಹುಮುಖ ಪ್ರತಿಭೆ:
ಏನೋ ಗೊತ್ತಿಲ್ಲ. ವಿಶುಕುಮಾರ್ ಗೆ ಎಲ್ಲಾ ಕಲೆಯಲ್ಲೂ ಕಲಿಯಲು ಆಸಕ್ತಿ. ತಂದೆಯಿಂದ ಬಂದ ರಕ್ತಗುಣವಿರಬೇಕು. ಕಲಿಕೆಯ ಬಗ್ಗೆ ಪ್ರಯತ್ನವನ್ನು ಕೂಡ ಪಡುತ್ತಿದ್ದರು. ಅದರಲ್ಲಿ ಹಿಂಜರಿಕೆಯಿರುತ್ತಿರಲಿಲ್ಲ. ಸಂಗೀತದಲ್ಲೂ ಆಸಕ್ತಿ. ಹಾಡುತ್ತಿದ್ದರು. ಮಂಗಳೂರಿನ ಬೊಕ್ಕಪಟ್ಣದ ಕಾಂತಪ್ಪ ಮಾಸ್ಟರ್ ಅವರಿಂದ ತಬಲಾ, ಕೊಳಲು, ಹಾರ್ಮೋನಿಯಂ, ವಯೋಲಿನ್ ಕಲಿತು ಪರಣತಿ ಸಂಪಾದಿಸಿದ್ದರು.
ಹಾಗೇ ಮಂಗಳೂರಿನ ನೃತ್ಯ ಶಿಕ್ಷಕ ವಿಠಲ್ ಮಾಸ್ಟರ್ ರಿಂದ ಭರತನಾಟ್ಯವನ್ನು ಕಲಿತರು. ಅಲ್ಲಿ ಏರ್ಪಡಿಸಿದ ಪ್ರದರ್ಶನಗಳಲ್ಲಿ ಪಾಲುಗೊಂಡು ಮೆಚ್ಚುಗೆ ಗಳಿಸಿದರು! ಈ ವಿಠಲ್ ಮಾಸ್ಟರ್ ನಟಿ ಕಲ್ಪನಾ ಅವರ ಗುರು ಕೂಡ ಆಗಿದ್ದರು!
ವಿಶುಕುಮಾರ್ ಅಭಿರುಚಿ ಒಂದೇ ಎರಡೇ – ಚಿತ್ರಕಲೆಯಲ್ಲೂ ಆಸಕ್ತಿ. ರೇಖಾಚಿತ್ರ ಬಿಡಿಸುತ್ತಿದ್ದರು. ಸ್ವಲ್ಪ ಸಮಯ ಶಿಲ್ಪ ಚಿತ್ರ ಬಿಡಿಸಲು ಕಲಿಯಲು ಪ್ರಯತ್ನ ಪಟ್ಟರು. ಚಿತ್ರಕಲೆಗೆ ಸೀತಮ್ಮ ಎಂಬ ಟೀಚರ್ ಅವರಿಗೆ ಗುರುವಾಗಿದ್ದರು.
ಇದೆಲ್ಲಾ ಕಲಾಸಕ್ತಿಯಾದರೇ- ಹೊರಗಡೆ ಮೈದಾನದಲ್ಲೂ ವಿಶುಕುಮಾರ್ ಮುಂದು! ಉತ್ತಮ ಕ್ರಿಕೆಟು ಪಟು. ಮಂಗಳೂರಿನ ಆಸುಪಾಸುಗಳಲ್ಲಿ ಕ್ರಿಕೆಟ್ ಪಂದ್ಯಾವಳಿಗಳು ನಡೆಯುತ್ತಿದ್ದರೆ, ತಮ್ಮ ತಂಡವನ್ನು ಕೊಂಡು ಹೋಗಿ ಭಾಗವಹಿಸಿ, ಗೆದ್ದು ಪ್ರಶಸ್ತಿಯನ್ನು ತಂದುಕೊಟ್ಟಿದ್ದಾರೆ.
ಇಂಥ ವಿಶುಕುಮಾರ್ – ಗುಣ ಸ್ವಭಾವ ಹೇಗೆಂದು ನಮ್ಮನ್ನು ಕಾಡುತ್ತಿರುವ ಪ್ರಶ್ನೆ. ” ನಮ್ಮ ಅಣ್ಣಾ …ತುಂಬಾ ಒಳ್ಳೆಯವನು. ಶಾಂತ ಸ್ವಭಾವದವನು. ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ. ನಮ್ಮೊಡನೆ ತುಂಬಾ ಪ್ರೀತಿಯಿತ್ತು. ಸಲುಗೆಯಿಂದ ನಡೆದುಕೊಳ್ಳುತ್ತಿದ್ದರು .ಪೋಕರಿ, ಕೀಟಲೆ ಅಂಥ ಸ್ವಭಾವವಿರಲಿಲ್ಲ” ಎನ್ನುತ್ತಾರೆ ಅವರ ಸಹೋದರಿಯರು.
ಇದಕ್ಕೆ ಒತ್ತುಕೊಡುತ್ತಾರೆ ಅವರ ಸಹೋದರ ಬಿ. ದಾಮೋದರ ನಿಸರ್ಗ ಕೂಡ. ದಾಮೋದರ ನಿಸರ್ಗ ಅವರು, ವಿಶುಕುಮಾರ್ ನಿರ್ದೇಶನದ ” ಕರಾವಳಿ” ಹಾಗೂ ” ಅಖಂಡ ಬ್ರಹ್ಮಚಾರಿ”- ಚಿತ್ರಗಳ ನಿರ್ಮಾಪಕರೂ ಆಗಿದ್ದಾರೆ. ” ಅಣ್ಣಾ ಶಾಂತ ಸ್ವಭಾವದವರು. ಬಾಲ್ಯದಲ್ಲಿ ಯಾರ ತಂಟೆಗೂ ಹೋಗುತ್ತಿರಲಿಲ್ಲ ” ಎನ್ನುತ್ತಾರೆ.
ಹಾಗಾದರೆ, ವಿಶುಕುಮಾರ್ ‘ ಕಾಂಟ್ರವರ್ಸಿ ‘ ಬರವಣಿಗೆಗೆ ಹೇಗೆ ಇಳಿದರು. ನಮ್ಮ ಮುಂದಿನ ಪ್ರಶ್ನೆಗೆ- ದಾಮೋದರ ಉತ್ತರ:
ತುಂಬಾ ಯೋಚಿಸಿ, ನಿಧಾನವಾಗಿ ಹೇಳಿದರು :
” ಸುತ್ತಲಿನ ಸಮಾಜವೇ ಕಾರಣ. ಅಣ್ಣಾ ಬಹಳ ಸೂಕ್ಷ್ಮವಾಗಿ ಅವನ್ನೆಲ್ಲಾ ಗಮನಿಸುತ್ತಾರೆ. ‘ ಭಗವಂತನ ಆತ್ಮಕಥೆ ‘ ಅವರು ಬರೆದ ಒಂದು ಕಾದಂಬರಿ ಇದಕ್ಕೆ ಉತ್ತಮ ಉದಾಹರಣೆ. ರಾಜ್ಯ ಸರಕಾರದ ‘ ದತ್ತಿ ಇಲಾಖೆ’ ಯಲ್ಲಿ ಅವರು ಕೆಲಸ ಮಾಡುತ್ತಿದ್ದರು. ದೇವಾಲಯಗಳ ಆಡಳಿತದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಅನಾಚಾರಗಳ ಬಗ್ಗೆ ನೊಂದು ಬರೆದ ಸತ್ಯ ಘಟನೆಗಳೇ ಅವರ ಕಾದಂಬರಿಗಳ ಮೂಲವಸ್ತುಗಳು ” ಎಂದು ಹೇಳಿದರು.
ನಿಜ.
ವಿಶುಕುಮಾರ್ ರ ಒಬ್ಬ ಆತ್ಮ ಸ್ನೇಹಿತರೊಬ್ಬರು ನನ್ನಲ್ಲಿ ಹೇಳಿದರು: ” ನೋಡುವಾಗ, ದುರಹಂಕಾರದ ಹಾಗೇ ಕಂಡು ಬಂದರೂ ತಂದೆ ದೋಗ್ರ ಪೂಜಾರಿಯವರ ಒಳ್ಳೆ ಗುಣಗಳು ವಿಶುಕುಮಾರರಲ್ಲಿ ಬಳುವಳಿಯಾಗಿ ಬಂದಿದೆ ” ಎಂದರು.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!