ಯುವವಾಹಿನಿ(ರಿ.) ಬಜ್ಪೆ ಘಟಕದ ಆತಿಥ್ಯದಲ್ಲಿ

ವಿಶುಕುಮಾರ್ ಪರಿಚಯ- ಸರಣಿ ಕಾರ್ಯಕ್ರಮ ಮಾಲಿಕೆ 23

ಬಜ್ಪೆ : ದಿನಾಂಕ 20.01.2019 ಆದಿತ್ಯವಾರ ಸಂಜೆ 05.00 ಕ್ಕೆ ಸರಿಯಾಗಿ ವಿಶುಕುಮಾರ್ ಪರಿಚಯ ಸರಣಿ ಕಾರ್ಯಕ್ರಮವನ್ನು ಯುವವಾಹಿನಿ(ರಿ.) ಬಜ್ಪೆ ಘಟಕದ ಆತಿಥ್ಯದಲ್ಲಿ ನಡೆಸಲಾಯಿತು. ವಿಶುಕುಮಾರ್ ಪರಿಚಯ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಕಿಶೋರ್ ಬಿಜೈ ಇವರು ಆಗಮಿಸಿ, ವಿಶು ಕುಮಾರ್‌ರವರ ಸಂಪೂರ್ಣ ಪರಿಚಯವನ್ನು ಸಭೆಯ ಮುಂದಿಟ್ಟರು. ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಕಾರ್ಯದರ್ಶಿಯಾದ ದಿನೇಶ್ ಸುವರ್ಣ ರಾಯಿ ಇವರು ಫೆಬ್ರವರಿ ತಿಂಗಳಲ್ಲಿ ನಡೆಯುವ ವಿಶುಕುಮಾರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ವಿವರ ಸಭೆಯ ಮುಂದಿಟ್ಟರು. ಘಟಕದ ನಿಕಟಪೂರ್ವ ಅಧ್ಯಕ್ಷರಾದ ದೇವರಾಜ್ ಅಮೀನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನೂತನ ಅಧ್ಯಕ್ಷರಾದ ಸಂಧ್ಯಾ ಕುಳಾಯಿ ಉಪಸ್ಥಿತರಿದ್ದರು. ನಿಕಟಪೂರ್ವ ಅಧ್ಯಕ್ಷರಾದ ದೇವರಾಜ್ ಅಮೀನ್ ಸ್ವಾಗತಿಸಿದರು. ಕಾರ್ಯದರ್ಶಿ ರೋಹಿತ್ ಕುಮಾರ್ ಧನ್ಯವಾದ ಸಮರ್ಪಿಸಿದರು.

Leave a Reply

Your email address will not be published. Required fields are marked *

error: Content is protected !!