ಸಾಧು ಪೂಜಾರಿ :- ಸಂಚಾಲಕರು, ವಿಶುಕುಮಾರ್ ದತ್ತಿನಿಧಿ

ವಿಶುಕುಮಾರ್ ದತ್ತಿ ನಿಧಿ-2012

ಕನ್ನಡ ಸಾಹಿತ್ಯ ಲೋಕದಲ್ಲಿ ಶ್ರೇಷ್ಠ ಕತೆಗಾರರಾಗಿ, ಕಾದಂಬರಿಕಾರರಾಗಿ, ನಟರಾಗಿ, ನಾಟಕಕಾರರಾಗಿ, ನಿರ್ದೇಶಕರಾಗಿ, ಅಂಕಣ ಬರಹಗಾರರಾಗಿ, ಕನ್ನಡ, ತುಳು ಚಿತ್ರಗಳ ನಿರ್ದೇಶಕರಾಗಿ ಹೆಸರು ಮಾಡಿ ತಮ್ಮ ಅಲ್ಪ ಆಯುಷ್ಯದಲ್ಲಿಯೇ ಸಂದು ಹೋದ ನಮ್ಮ ನಾಡಿನ, ಬಿಲ್ಲವರ ಹೆಮ್ಮೆಯ ಕಣ್ಮಣಿ, ಧೀಮಂತ ಸಾಹಿತಿ ದಿ| ವಿಶುಕುಮಾರ್‌ರವರ ಸ್ಮರಣಾರ್ಥ ಯುವವಾಹಿನಿ (ರಿ) ಕೇಂದ್ರ ಸಮಿತಿಯು ‘ವಿಶುಕುಮಾರ್ ಪ್ರಶಸ್ತಿ’ ಯನ್ನು ಹುಟ್ಟುಹಾಕಿ ಕಳೆದ ಹತ್ತು ವರ್ಷಗಳಿಂದ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ನಮ್ಮ ಸಾಹಿತಿ ಮಿತ್ರರುಗಳ ಒತ್ತಾಸೆ, ಸಲಹೆಗಾರರ ಮಾರ್ಗದರ್ಶನದಲ್ಲಿ ’ವಿಶುಕುಮಾರ್ ದತ್ತಿನಿಧಿ’ಯನ್ನು ಸ್ಥಾಪಿಸಿ ಅದರ ಮೂಲಕ ಪ್ರತಿ ವರ್ಷ ವಿಶುಕುಮಾರ್‌ರವರ ಆಸಕ್ತಿಯ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ, ಪ್ರತಿಭಾವಂತ ಸಾಹಿತಿ, ಬರಹಗಾರರನ್ನು ಆಯ್ಕೆ ಸಮಿತಿಯ ಮೂಲಕ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಪ್ರಶಸ್ತಿ ಮೊತ್ತ ರೂ. 5000/- ವಿದ್ದು ಪ್ರಸಕ್ತ ಸಾಲಿನಿಂದ ಇದನ್ನು 10,000/-ಕ್ಕೆ ಏರಿಸಲಾಗಿದೆ.

2002 ರ ನವೆಂಬರ್ ೩ರಂದು ಮಂಗಳೂರಿನ ಕುದ್ರೋಳಿಯ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಕೊರಗಪ್ಪ ಸ್ಮಾರಕ ಸಭಾಂಗಣದಲ್ಲಿ ಪ್ರಥಮ ಬಾರಿಗೆ ‘ವಿಶುಕುಮಾರ್ ಸಂಸ್ಮರಣೆ’ ಯನ್ನು ಮಾಡಿದ ಬಳಿಕ ಅದರ ಯಶಸ್ಸಿನಿಂದ ಉತ್ತೇಜನಗೊಂಡು 6 ತಿಂಗಳಲ್ಲಿ ಈ ಪ್ರಶಸ್ತಿಯನ್ನು ಹುಟ್ಟು ಹಾಕಲಾಯಿತು. 2003 ಎಪ್ರಿಲ್ 27 ರಂದು ಮೊದಲ ’ವಿಶುಕುಮಾರ್ ಪ್ರಶಸ್ತಿ’ಯನ್ನು ಕಾದಂಬರಿ ವಿಭಾಗದಲ್ಲಿ ಆಯ್ಕೆ ನಡೆಸಿ, ಅತ್ಯುತ್ತಮ ಕಾದಂಬರಿಗಾಗಿ ಡಾ| ನಾ. ಮೊಗಸಾಲೆಯವರ ‘ಪಂಥ’ ಕಾದಂಬರಿಗೆ ನೀಡಲಾಯಿತು. ಆಗಿನ ಕನ್ನಡ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷರಾದ ಶ್ರೀ ಹರಿಕೃಷ್ಣ ಪುನರೂರುರವರು ಅಧ್ಯಕ್ಷತೆಯನ್ನು ವಹಿಸಿದ್ದು ಪ್ರಶಸ್ತಿ ಪ್ರದಾನ ಮಾಡಿದರು. ಹಿರಿಯ ಸಾಹಿತಿ, ಕವಿಗಳೂ ಆದ ಶ್ರೀ ಬಿ. ಎಂ. ಇದಿನಬ್ಬ, ಏರ್ಯ ಲಕ್ಷ್ಮೀ ನಾರಾಯಣ ಆಳ್ವರುಗಳು ಮುಖ್ಯ ಅತಿಥಿಗಳಾಗಿದ್ದರು. 2004 ರಲ್ಲಿ ಸಣ್ಣ ಕತೆಗಳ ವಿಭಾಗದಲ್ಲಿ ಬೆಂಗಳೂರಿನ ಅನಸೂಯದೇವಿಯವರಿಗೆ ‘ಉರಿಯ ಬೇಲಿ’ ಕಥಾ ಸಂಕಲನಕ್ಕಾಗಿ ಈ ಪ್ರಶಸ್ತಿ ನೀಡಲಾಯಿತು. 2005 ೫ರಲ್ಲಿ ಶ್ರೀನಿವಾಸ ಕಾರ್ಕಳರವರ ಕವನ ಸಂಕಲನ ‘ನೀಹಾರಿಕಾ’ ಈ ಪ್ರಶಸ್ತಿಯನ್ನು ಪಡೆಯಿತು. 2006 ರಲ್ಲಿ ಖ್ಯಾತ ರಂಗಕರ್ಮಿ, ಚಲನಚಿತ್ರ ನಿರ್ದೇಶಕ ಸದಾನಂದ ಸುವರ್ಣರಿಗೆ ಅವರ ನಾಟಕರಂಗ, ಸಿನಿಮಾ ಕ್ಷೇತ್ರದ ವಿಶಿಷ್ಠ ಕೊಡುಗೆಗಾಗಿ ನೀಡಲಾಯಿತು. 2008 ರಲ್ಲಿ ಪ್ರಭಾಕರ ನೀರುಮಾರ್ಗರವರ ಕಾದಂಬರಿ ’ಮಂಗಳೂರ ಕ್ರಾಂತಿ’ ಈ ಪ್ರಶಸ್ತಿಗೆ ಭಾಜನವಾಯಿತು. 2009 ರಲ್ಲಿ ಡಾ. ರಾಮಕೃಷ್ಣ ಗುಂದಿಯವರ ಕಥಾ ಸಂಕಲನ ’ಅತಿಕ್ರಾಂತ’ ಈ ಪ್ರಶಸ್ತಿಯನ್ನು ಪಡೆಯಿತು. 2010 ರಲ್ಲಿ ಜಾನಪದ ಕ್ಷೇತ್ರದಲ್ಲಿ ಮಾಡಿದ ಸಂಶೋದನೆ, ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಡಾ. ಅಮೃತ ಸೋಮೇಶ್ವರರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು. ೨೦೧೧ರಲ್ಲಿ ಯಕ್ಷಗಾನ ಹಿಮ್ಮೇಳ ಕಲಾವಿದ, ವಿಮರ್ಶಕ ಡಾ. ರಾಘವ ನಂಬಿಯಾರ್‌ರಿಗೆ ಈ ಪ್ರಶಸ್ತಿ ಸಂದಿತು.

2012 ನೇ ಸಾಲಿನ ವಿಶುಕುಮಾರ್ ಪ್ರಶಸ್ತಿಗಾಗಿ ಶಿಕ್ಷಣ, ಸಾಹಿತ್ಯ, ಪತ್ರಿಕಾರಂಗಕ್ಕೆ ನೀಡಿದ ಕೊಡುಗೆಗಾಗಿ ಹಿರಿಯ ಸಾಹಿತಿ ಪಾ. ಸಂಜೀವ ಬೋಳಾರ್‌ರವರನ್ನು ಆಯ್ಕೆ ಮಾಡಲಾಗಿದೆ. ನವೆಂಬರ್ 3 ರಂದು ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆದ ಯುವವಾಹಿನಿಯ ರಜತ ಮಹೋತ್ಸವ ಹಾಗೂ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷ ಶ್ರೀ ಪುಂಡಲೀಕ ಹಾಲಂಬಿ ಪ್ರಶಸ್ತಿ ಪ್ರದಾನ ಮಾಡಿದರು. ಮಾಜಿ ಅಧ್ಯಕ್ಷ (ಕಸಾಪ) ಶ್ರೀ ಹರಿಕೃಷ್ಣ ಪುನರೂರು, ತುಳುಕೂಟ (ರಿ) ಕುಡ್ಲ ಇದರ ಅಧ್ಯಕ್ಷ ಬಿ. ದಾಮೊದರ ನಿಸರ್ಗ, ಮುಂಬಯಿಯ ’ಅಕ್ಷಯ’ ಮಾಸ ಪತ್ರಿಕೆಯ ಸಂಪಾದಕ ಡಾ. ಈಶ್ವರ ಅಲೆವೂರು ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಶ್ರೀ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಉದಯೋನ್ಮುಖ ಸಾಹಿತಿಗಳಿಗೆ ನೀಡಲಾಗುವ ’ಪ್ರಭಾಕರ ನೀರ್‌ಮಾರ್ಗ ಯುವವಾಹಿನಿ ಸಾಹಿತ್ಯ ಪ್ರಶಸ್ತಿ’ಯನ್ನು ಉದಯೋನ್ಮುಖ ಬರಹಗಾರ್ತಿ ಕು| ಚಂದ್ರಿಕಾರವರಿಗೆ ನೀಡಿ ಗೌರವಿಸಲಾಯಿತು. ಅವರ ಮೊದಲ ಪ್ರಕಟಿತ ಕಾದಂಬರಿ ’ಸ್ವಪ್ನವಾಸ್ತವ’ವನ್ನು ಡಾ. ಈಶ್ವರ ಅಲೆವೂರುರವರು ಬಿಡುಗಡೆಗೊಳಿಸಿದರು.

ಯುವವಾಹಿನಿಯ ರಜತಮಹೋತ್ಸವದ ಅಂಗವಾಗಿ ಹಿರಿಯ ಸಾಹಿತಿ ಶ್ರೀ ಮುದ್ದು ಮೂಡುಬೆಳ್ಳೆಯವರು ಬರೆದ ’ಮಾನವತಾವಾದಿ ಜಗದ್ಗುರು ಶ್ರೀ ನಾರಾಯಣ’ ಎಂಬ ಪುಸ್ತಕವನ್ನು ಶ್ರೀ ಹರಿಕೃಷ್ಣ ಪುನರೂರು ಬಿಡುಗಡೆಗೊಳಿಸಿದರು. ಅದೇ ರೀತಿ ಶ್ರೀ ಬಿ. ತಮ್ಮಯ್ಯನವರ ’ಕಾಡಿನ ಹಕ್ಕಿ ಹಾಡಿತು’ ಎಂಬ ಕವನ ಸಂಕಲನವನ್ನು ಶ್ರೀ ಬಿ. ದಾಮೋದರ ನಿಸರ್ಗ ಬಿಡುಗಡೆಗೊಳಿಸಿದರು. ಯುವವಾಹಿನಿಯ ಹಿರಿಯ ಸದಸ್ಯ ಶ್ರೀ ಮಾಧವ ಅಂಚನ್ ಹೊರತಂದಿರುವ ಶ್ರೀ ನಾರಾಯಣ ಗುರುಗಳ ಭಕ್ತಿ ಗೀತೆಗಳ ಧ್ವನಿ ಮುದ್ರಣದ ಸಿ.ಡಿ.ಯನ್ನು ಸಮಾರಂಭದ ಅಧ್ಯಕ್ಷರಾದ ಶ್ರೀ ಉಮಾನಾಥ ಕೋಟ್ಯಾನ್ ಬಿಡುಗಡೆಗೊಳಿಸಿದರು. ಯುವವಾಹಿನಿಯ ರಜತ ಮಹೋತ್ಸವದ ಅಂಗವಾಗಿ ಏರ್ಪಡಿಸಲಾದ ರಾಜ್ಯಮಟ್ಟದ ಕಥಾ ಸ್ಪರ್ಧೆಯ ಬಹುಮಾನವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.
ವಿಶುಕುಮಾರ್ ದತ್ತಿನಿಧಿಯ ಇದುವರೆಗಿನ ಚಟುವಟಿಕೆ ಗಳನ್ನು ಸಂಕ್ಷಿಪ್ತವಾಗಿ ಈ ಕೆಳಗಿನಂತೆ ಪಟ್ಟಿ ಮಾಡಬಹುದು.

ವರ್ಷ: 2002 ಸ್ಥಳ : ಅಧ್ಯಕ್ಷ ಕೊರಗಪ್ಪ ಸ್ಮಾರಕ ಸಭಾ ಭವನ, ಕುದ್ರೋಳಿ – ವಿಶುಕುಮಾರ್ ಸಂಸ್ಮರಣಾ ಕಾರ್ಯಕ್ರಮ, ಬಿಡುಗಡೆಯಾದ ಪುಸ್ತಕಗಳು : ’ಮಿಂಚು ಹುಳ’ (ಸುಲೋಚನ ಪಚ್ಚನಡ್ಕ)

ವರ್ಷ: 2003 ಸ್ಥಳ : ಅಧ್ಯಕ್ಷ ಕೊರಗಪ್ಪ ಸ್ಮಾರಕ ಸಭಾ ಭವನ, ಕುದ್ರೋಳಿ, ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ- ಪ್ರಶಸ್ತಿ ಪಡೆದವರು : ಡಾ| ನಾ. ಮೊಗಸಾಲೆ (’ಪಂಥ’ ಕಾದಂಬರಿ). ಬಿಡುಗಡೆಯಾದ ಪುಸ್ತಕಗಳು : ’ದಳವಾಯಿ ದುಗ್ಗಣ್ಣ’ (ಪ್ರಭಾಕರ ನೀರ್‌ಮಾರ್ಗ), ’ಚಿಲುಮೆ’ (ಯುವವಾಹಿನಿ ಸುರತ್ಕಲ್)

ವರ್ಷ: 2004 ಸ್ಥಳ : ಹೆಜಮಾಡಿ ಬಿಲ್ಲವರ ಸಭಾಗೃಹ, ಹೆಜಮಾಡಿ. ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ-ಪ್ರಶಸ್ತಿ ಪಡೆದವರು : ಅನಸೂಯ ದೇವಿ, ಬೆಂಗಳೂರು (’ಉರಿಯ ಬೇಲಿ’ ಸಣ್ಣ ಕತೆಗಳು) ಬಿಡುಗಡೆಯಾದ ಪುಸ್ತಕ: ’ಹಣತೆ’, (ಬಿ. ತಮ್ಮಯ)

ವರ್ಷ: 2005 ಸ್ಥಳ: ಸಾರಂತಾಯ ಗರೋಡಿ ಕ್ಷೇತ್ರ, ಸಸಿಹಿತ್ಲು. ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ-ಪ್ರಶಸ್ತಿ ಪಡೆದವರು : ಶ್ರೀನಿವಾಸ ಕಾರ್ಕಳ (’ನಿಹಾರಿಕಾ’ ಕವನ ಸಂಕಲನ) ಬಿಡುಗಡೆಯಾದ ಪುಸ್ತಕ : ’ನಾರಾಯಣ ಗುರು ಭಜನೆ’ (ಬಿ. ತಮ್ಮಯ)

ವರ್ಷ: 2006 ಸ್ಥಳ: ಬಿಲ್ಲವ ಸಮಾಜ ಸೇವಾ ಸಂಘ (ರಿ) ಮೂಲ್ಕಿ. ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ-ಪ್ರಶಸ್ತಿ ಪಡೆದವರು : ಸದಾನಂದ ಸುವರ್ಣ (ಖ್ಯಾತ ರಂಗಕರ್ಮಿ, ಚಲನಚಿತ್ರ ನಿರ್ದೇಶಕ) ಬಿಡುಗಡೆಯಾದ ಪುಸ್ತಕ : ’ಚಿಂತನ ಮಂಥನ’ (ಬಿ. ತಮ್ಮಯ)

ವರ್ಷ: 2007 ಸ್ಥಳ: ರವೀಂದ್ರ ಕಲಾಭವನ, ಯುನಿವರ್ಸಿಟಿ ಕಾಲೇಜು, ಮಂಗಳೂರು. ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ-ಪ್ರಶಸ್ತಿ ಪಡೆದವರು : ಕುತ್ಪಾಡಿ ಆನಂದ ಗಾಣಿಗ (’ತವಕ ತಲ್ಲಣ’ ಅಂಕಣ ಬರಹ) ಬಿಡುಗಡೆಯಾದ ಪುಸ್ತಕಗಳು: ’ಬೊಗಸೆಯೊಳಗಿನ ಹನಿಗಳು’ (ಸುಕೇಶ್ ಎಸ್. ಮೂಡಬಿದ್ರೆ), ’ನಾರಾಯಣ ಗುರು’ (ಅಂಬಾತನಯ ಮುದ್ರಾಡಿ, ಸೌಮ್ಯ ಡಿ. ಶಾಂತಿ, ಉಡುಪಿ)

ವರ್ಷ: 2008 ಸ್ಥಳ: ಆರೂರು ಶ್ರೀ ಲಕ್ಷ್ಮೀನಾರಾಯಣ ಸಭಾಭವನ (ಪುರಭವನ), ಉಡುಪಿ. ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ-ಪ್ರಶಸ್ತಿ ಪಡೆದವರು : ಪ್ರಭಾಕರ ನೀರ್‌ಮಾರ್ಗ (’ಮಂಗಳೂರ ಕ್ರಾಂತಿ’ ಕಾದಂಬರಿ) ಬಿಡುಗಡೆಯಾದ ಪುಸ್ತಕ : ’ಇರ್‍ಲ್-ಪಗೆಲ್’ (ಕೆ.ಹೆಚ್. ಬಂಗೇರ, ಕಕ್ಯಪದವು)

ವರ್ಷ: 2009 ಸ್ಥಳ: ರುಕ್ಕರಾಮ ಸಾಲ್ಯಾನ್ ಸಭಾಗೃಹ ಬಿಲ್ಲವ ಸಮಾಜ ಸೇವಾ ಸಂಘ (ರಿ) ಮೂಲ್ಕಿ. ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ-ಪ್ರಶಸ್ತಿ ಪಡೆದವರು: ಡಾ. ರಾಮಕೃಷ್ಣ ಗುಂದಿ, ಅಂಕೋಲಾ (’ಅತಿಕ್ರಾಂತ’ ಕಥಾ ಸಂಕಲನ) ಬಿಡುಗಡೆಯಾದ ಪುಸ್ತಕ : ’ಕನಸುಗಣ್ಣಿನ ಹುಡುಗಿ’ (ಶಾರದಾ ತೆಂಕಕಾರಂದೂರು)

ವರ್ಷ: 2010 ಸ್ಥಳ: ಜೆ.ಎನ್.ಸಿ. ಸಭಾಂಗಣ, ಪಣಂಬೂರು. ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ-ಪ್ರಶಸ್ತಿ ಪಡೆದವರು: ಡಾ. ಅಮೃತ ಸೋಮೇಶ್ವರ (ಹಿರಿಯ ಸಾಹಿತಿ, ಜಾನಪದ ವಿದ್ವಾಂಸರು. ಬಿಡುಗಡೆಯಾದ ಪುಸ್ತಕ : ’ಕರಿಕೋಟು’ ಕಥಾ ಸಂಕಲನ (ಬಿ. ತಮ್ಮಯ)

ವರ್ಷ: 2011 ಸ್ಥಳ: ಬ್ರಹ್ಮಶ್ರೀ ನಾರಾಯಣಗುರು ಸಭಾಂಗಣ, ಗಾಣದಪಡ್ಪು, ಬಿ.ಸಿ.ರೋಡು. ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ-ಪ್ರಶಸ್ತಿ ಪಡೆದವರು : ಡಾ. ಕೆ.ಎಂ. ರಾಘವ ನಂಬಿಯಾರ್ (ಸಾಹಿತಿ, ಪ್ರಸಂಗ ಕರ್ತರು, ಯಕ್ಷಗಾನ ಹಿಮ್ಮೇಳ ಕಲಾವಿದರು) ಬಿಡುಗಡೆಯಾದ ಪುಸ್ತಕ: ’ತಿಂಗೊಲ್ದ ಬೊಲ್ಪು’ ಕಥಾ ಸಂಕಲನ (ನರೇಶ್ ಕುಮಾರ್ ಸಸಿಹಿತ್ಲು)

ವರ್ಷ: 2012 ಸ್ಥಳ: ಶ್ರೀ ಗೋಕರ್ಣನಾಥ ಕ್ಷೇತ್ರ, ಕುದ್ರೋಳಿ, ಮಂಗಳೂರು. ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ- ಪ್ರಶಸ್ತಿ ಪಡೆದವರು : ಪಾ. ಸಂಜೀವ ಬೋಳಾರ್ (ಸಾಹಿತಿ, ಪತ್ರಕರ್ತ, ಶಿಕ್ಷಕ). ಬಿಡುಗಡೆಯಾದ ಪುಸ್ತಕಗಳು : ’ಸ್ವಪ್ನವಾಸ್ತವ’ ಕಾದಂಬರಿ (ಕುಮಾರಿ ಚಂದ್ರಿಕಾ), ’ಮಾನವತಾವಾದಿ ಜಗದ್ಗುರು ಶ್ರೀ ನಾರಾಯಣ’ (ಮುದ್ದು ಮೂಡುಬೆಳ್ಳೆ), ’ಕಾಡಿನ ಹಕ್ಕಿ ಹಾಡಿತು’ ಕವನ ಸಂಕಲನ (ಬಿ. ತಮ್ಮಯ), ಜ್ಯೋತಿರ್ನಾದ-ಭಕ್ತಿಗೀತೆಗಳ ಧ್ವನಿ ಮುದ್ರಣ (ಮಾಧವ ಅಂಚನ್, ಸುರತ್ಕಲ್)

ವಿಶುಕುಮಾರ್ ಸಂಸ್ಮರಣಾ ಕಾರ್ಯಕ್ರಮ, ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭಗಳು ನಿರಂತರವಾಗಿ ನಡೆಯುವಂತೆ ವಿಶುಕುಮಾರ್ ದತ್ತಿನಿಧಿಗೆ ಇದುವರೆಗೆ ದೇಣಿಗೆ ನೀಡಿ ದತ್ತಿನಿಧಿಯನ್ನು ಬೆಳೆಸಿದ ದಾನಿಗಳನ್ನು ಈ ಮೂಲಕ ನೆನೆಯುತ್ತೇವೆ.

ಮಹಾಪೋಷಕರು : ಶ್ರೀ ಟಿ. ಶಂಕರ ಸುವರ್ಣ, ‘ಸುವರ್ಣ ದೀಪಾ’, ತುಂಬೆ, ಬಂಟ್ವಾಳ ತಾಲೂಕು, ಶ್ರೀ ಪುರಂದರ ಪೂಜಾರಿ, ಪಂಚಮಿ ಚಾರಿಟೇಬಲ್ ಟ್ರಸ್ಟ್, ಕಾರ್ಕಳ

ಪೋಷಕರು : ಶ್ರೀ ಪ್ರಭಾಕರ ನೀರ್‌ಮಾರ್ಗ, ಮಂಗಳ ಗಂಗೋತ್ರಿ, ಕೋಣಾಜೆ

ಮಹಾದಾನಿಗಳು : 1. ಶ್ರೀ ಸದಾನಂದ ಸುವರ್ಣ, ’ಸುವರ್ಣ ಗಿರಿ’, ಕೊಟ್ಟಾರ, ಮಂಗಳೂರು, 2. ಶ್ರೀ ಮುದ್ದುಮೂಡುಬೆಳ್ಳೆ, ಉದ್ಘೋಷಕರು, ಆಕಾಶವಾಣಿ, ಮಂಗಳೂರು, 3. ಶ್ರೀ ಶೀನ ಪೂಜಾರಿ, ’ಸುವರ್ಣ ನಿಲಯ’, ಬಜಾಲ್ ಕರ್ಮಾರ್, ಮಂಗಳೂರು, 4. ಶ್ರೀ ವಿಠಲ ಎಂ. ಪೂಜಾರಿ, ಪ್ರತಿಮಾ ನಿವಾಸ, ಬೆಂದೂರುವೆಲ್, ಮಂಗಳೂರು, 5. ಶ್ರೀ ಪಿ.ವಿ. ಶಬರಾಯ, ಲಕ್ಷ್ಮೀನಿವಾಸ, ಗುರುನಗರ, ಪದವಿನಂಗಡಿ, 6. ಶ್ರೀ ಬಿ.ಟಿ. ಸಾಲಿಯಾನ್ ದಂಪತಿಗಳು, ಗ್ಯಾಲಕ್ಸಿ ಅಪಾರ್ಟ್‌ಮೆಂಟ್ಸ್, ಆರ್ಯಸಮಾಜ ರೋಡು, 7. ಶ್ರೀ ಉಮಾ ನಾಥ ಕೋಟ್ಯಾನ್, ಶ್ರೀದುರ್ಗಾ ಪ್ರಸಾದ್, ಕಾವೂರು, 8. ಶ್ರೀ ಸದಾಶಿವ್ ಎಸ್. ಸಾಲಿಯಾನ್, ’ಆಶ್ರಯ’, ಸಾಲಿಸ್ ಬರಿ ಪಾರ್ಕ್, ಪುಣೆ, 9. ಡಾ. ಆಶಾಲತಾ ಎಸ್. ಸುವರ್ಣ, ಗೋಕರ್ಣನಾಥೇಶ್ವರ ಕಾಲೇಜು, ಮಂಗಳೂರು.

ದಾನಿಗಳು : 1. ಡಾ. ಅಮೃತ ಸೋಮೇಶ್ವರ, ’ಒಲುಮೆ’ ಕೋಟೆಕಾರ್, 2. ಶ್ರೀಮತಿ ಪ್ರೇಮಾ ನಾರಾಯಣ, ’ಪ್ರೇಮಾ ನಾರಾಯಣ ಸದನ’, ಕುಳಾಯಿ, ಹೊಸಬೆಟ್ಟು, ಮಂಗಳೂರು, 3. ಶ್ರೀ ಬಿ. ತಮ್ಮಯ, ’ಸುರಕ್ಷಾ’ ಕೈಕುಂಜೆ, ಬಂಟ್ವಾಳ, 4. ಶ್ರೀಮತಿ ಜಾನಕಿ ಬ್ರಹ್ಮಾವರ, ’ಪಾವನ’ ಹೇರೂರು, ಉಡುಪಿ, 5. ಶ್ರೀಮತಿ ಉಷಾರಾಣಿ ದಿವಾಕರ, ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳ, 6. ಶ್ರೀ ನಾಗ ಶಿರೂರು, ಜಾಸ್ಮಿನ್ ಪಾರ್ಕ್, ಕರಂಗಲಪಾಡಿ, ಮಂಗಳೂರು, 7. ಶ್ರೀ ಪಿ. ಸುರೇಶ್, ಎಂ.ಸಿ.ಎಫ್.ಲಿ., ಪಣಂಬೂರು, 8. ಶ್ರೀ ಯೋಗೇಶ್ ಹೆಜಮಾಡಿ, ಎಂ.ಸಿ.ಎಫ್.ಲಿ., ಪಣಂಬೂರು, 9. ಶ್ರೀ ಸೋಮಪ್ಪ ಡಿ. ಪಾಲನ್, ’ಅನುರಾಗ’, ಹೊಸಬೆಟ್ಟು, ಮಂಗಳೂರು.

ವಿಶುಕುಮಾರ್‌ರವರ ಹೆಸರನ್ನು ಸದಾ ನೆನಪಿನಲ್ಲಿಡುವ ಕೈಂಕರ್ಯದಲ್ಲಿ ನೀವೂ ನಮ್ಮೊಡನೆ ಕೈ ಜೋಡಿಸಬೇಕೆಂಬ ಅಪೇಕ್ಷೆ ನಮ್ಮದು. ನೀವು ಈ ಕೆಳಗಿನ ವಿಳಾಸಕ್ಕೆ ಚೆಕ್ ಯಾ ಡಿ.ಡಿ.ಗಳನ್ನೂ ಕಳಿಸಿ ನಮ್ಮೊಂದಿಗೆ ಸಹಕರಿಸಬಹುದು.

ವಿಳಾಸ: ಸಂಚಾಲಕರು, ವಿಶುಕುಮಾರ್ ದತ್ತಿ ನಿಧಿ ಸಂಚಾಲನ ಸಮಿತಿ, ಯುವವಾಹಿನಿ (ರಿ) ಕೇಂದ್ರ ಸಮಿತಿ, ಲಕ್ಷ್ಮಿನಾರಾಯಣ ಕಾಂಪ್ಲೆಕ್ಷ್, ಕೊಟ್ಟಾರ ಚೌಕಿ, ಮಂಗಳೂರು- 575 006

ಇಲ್ಲವೇ ಶ್ರೀ ಗೋಕರ್ಣನಾಥ ಕೋ- ಆಪರೇಟಿವ್ ಬ್ಯಾಂಕಿನ ಹಂಪನಕಟ್ಟಾ (ಮಂಗಳೂರು) ಶಾಖೆಯ ಉಳಿತಾಯ ಖಾತೆ ನಂಬ್ರ ೧೦೭೧೬ಗೆ ದೇಣಿಗೆಯನ್ನು ಕಳುಹಿಸಬಹುದು.

s

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!