ವಿಟ್ಲ: ವಿಟ್ಲ ಕಸಬಾ ಭಾಗದ ಚಂದಳಿಕೆ ನಿವಾಸಿ ದಾಮೋದರ ಪೂಜಾರಿ ಪತ್ನಿ ಗೀತಾ ಕಿಡ್ನಿ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಆರ್ಥಿಕವಾಗಿ ತುಂಬಾ ಕಷ್ಟದಲ್ಲಿದ್ದು ಕಿಡ್ನಿ ಮರುಜೋಡಣೆಗಾಗಿ ಯುವವಾಹಿನಿ ವಿಟ್ಲ ಘಟಕದ ನೆರವು ಕೋರಿದ್ದರು.
ಯುವವಾಹಿನಿ (ರಿ.) ವಿಟ್ಲ ಘಟಕದ ವತಿಯಿಂದ ದಿನಾಂಕ 11/3/2024 ರಂದು 10,000/- ಸಹಾಯಧನವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಯುವವಾಹಿನಿ (ರಿ.) ಘಟಕದ ಅಧ್ಯಕ್ಷರಾದ ರಾಜೇಶ್ ವಿಟ್ಲ ಸಮಾಜ ಸೇವಾ ನಿರ್ದೇಶಕರಾದ ಧನಲಕ್ಷ್ಮಿ ರಾಜೇಶ್, ಜೊತೆ ಕಾರ್ಯದರ್ಶಿ ಯಶೋಧರ ಪಟ್ಲ ಮತ್ತು ನಯನ, ಶ್ಯಾಮಲಾ ಉಪಸ್ಥಿತರಿದ್ದರು.
ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ “ಅಂತರಾಷ್ಟ್ರೀಯ ಮಹಿಳೆಯರ ದಿನ” ವನ್ನಾಗಿ ಆಚರಿಸುತ್ತಾರೆ. ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮಿಸಲಿರದೇ , ಅದು ರಾಷ್ತ್ಟ್ರೀಯ, ಜನಾಂಗೀಯ, ಭಾಷಾವಾರು, ಸಾಂಸ್ಕ್ರತಿಕ, ಆರ್ಥಿಕ ಅಥವಾ ರಾಜಕೀಯ ಕ್ಷೇತ್ರವಾಗಲಿ, ಎಲ್ಲದರಲ್ಲೂ ಛಾಪನ್ನ ಮೂಡಿಸಿದ್ದಾರೆ. ಮಹಿಳೆಯರ ಪ್ರಗತಿಯನ್ನು ಗುರುತಿಸಿ ಮಾರ್ಚ್ 8 ರಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಗೀತಾ ದಾಮೋದರ ಪೂಜಾರಿಯವರಿಗೆ ಅರ್ಪಿಸಲಾಗಿದೆ. ವಿಟ್ಲ ಘಟಕದಲ್ಲೂ ವಿಶೇಷವಾಗಿ ಆಚರಿಸಿ ಅಂದಿನ ದಿನವನ್ನು ಅರ್ಥಪೂರ್ಣ ಗೊಳಿಸಿ ಸಂಭ್ರಮಿಸಲಾಯಿತು.