ಯವವಾಹಿನಿಯ (ರಿ) ಕಂಕನಾಡಿ ಘಟಕದ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರುಗಳ 163ನೇ ಜನ್ಮದಿನದ ಪ್ರಯುಕ್ತ ದಿನಾಂಕ 10.09.2017ರಂದು ಗೋರಿಗುಡ್ಡೆ ಕಿಟ್ಟೆಲ್ ಮೆಮೋರಿಯಲ್ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ರಾಜೀವ ಪೂಜಾರಿ, ಉದಯಶಂಕರ್ ಮತ್ತು ರೇವತಿ ಟೀಚರ್ ಇವರು ತೀರ್ಪುಗಾರರಾಗಿ ಭಾಗವಹಿಸಿದರು ಹಾಗೂ ಈ ಸ್ಪರ್ಧೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಹಾಗೂ ಯುವವಾಹಿನಿ ಕಂಕನಾಡಿ ಘಟಕದ ಸದಸ್ಯರಿಗೆ ಅಟೋಟ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಯುವವಾಹಿನಿ ಕಂಕನಾಡಿ ಘಟಕದ ಅಧ್ಯಕ್ಷರಾದ ಗೋಪಾಲ್ ಎಂ. ಪೂಜಾರಿ ಸ್ವಾಗತಿಸಿದರು, ಕಾರ್ಯದರ್ಶಿ ಮೋಹನ್ ಜಿ.ಅಮೀನ್ ಧನ್ಯವಾದ ನೀಡಿದರು