ಉಡುಪಿಯ ಶ್ರೀ ಕಿಶೋರ್ ಮತ್ತು ಶ್ರೀಮತಿ ಪ್ರೇಮಲತಾ ದಂಪತಿಗಳ ಸುಪುತ್ರಿ. ಕಲ್ಯಾಣಪುರ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಕುಮಾರಿ ಪ್ರತೀಕ್ಷಾ ಕೆ. ಇವರು ವಾಲಿಬಾಲ್ ಕ್ರೀಡೆಯಲ್ಲಿ ಮಿಂಚುತ್ತಿರುವ ಧ್ರುವತಾರೆ. ಓರ್ವ ಪ್ರತಿಭಾನ್ವಿತ ವಾಲಿಬಾಲ್ ಆಟಗಾರ್ತಿಯಾಗಿ ಹಲವು ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳ ಸರಮಾಲೆಯನ್ನು ಕೊರಳಿಗೆ ಹಾಕಿಕೊಂಡಿರುವ ಸಾಧಕಿ ಇವರು 2014ರಲ್ಲಿ ನಡೆದ ಪ್ರೌಢಶಾಲಾ ವಿಭಾಗದ ರಾಜ್ಯಮಟ್ಟದ ವಾಲಿಬಾಲ್ ಕ್ರೀಡಾಕೂಟದಲ್ಲಿ ಪ್ರಥಮ, 2015 ರಲ್ಲಿ ಬೆಂಗಳೂರಿನಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ವಾಲಿಬಾಲ್ ಕ್ರೀಡಾಕೂಟದಲ್ಲಿ ದ್ವಿತೀಯ, 2016ರಲ್ಲಿ ಮಂಗಳೂರಿನಲ್ಲಿ ನಡೆದ 62ನೇ ಭಾರತೀಯ ರಾಷ್ಟ್ರೀಯ ಗೇಮ್ಸ್ ಫೆಡರೇಶನ್ 2016-17ರ 19ವರ್ಷ ವಯೋಮಿತಿಯ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಹಾಗೂ 2017ರಲ್ಲಿ ಮಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ವಾಲಿಬಾಲ್ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನವನ್ನು ಗಳಿಸಿದ ಸಾಧನೆ ಇವರದು.ಅಲ್ಲದೆ ಕಲ್ಯಾಣಪುರ ಜೇಸಿ ಸಂಸ್ಥೆಯಿಂದ ‘ಖೇಲ್ ರತ್ನ’ ಪ್ರಶಸ್ತಿ, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರಾಡಳಿತ ವತಿಯಿಂದ ‘ಶಿವಾನುಗ್ರಹ ಪ್ರಶಸ್ತಿ’, ಉಡುಪಿ ಜಿಲ್ಲಾಡಳಿತದಿಂದ ಜಿಲ್ಲಾ ಗಣರಾಜ್ಯೋತ್ಸವ ಆಚರಣಾ ಸಮಿತಿಯಿಂದ ರಾಷ್ಟ್ರಮಟ್ಟದ ಸಾಧಕರಿಗೆ ಅಭಿನಂದನಾ ಸ್ಮರಣಿಕೆ, ಪದವಿ ಪೂರ್ವ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ವತಿಯಿಂದ ‘ಕ್ರೀಡಾಸಾಧಕ’ ಪ್ರಶಸ್ತಿ ಪಡೆದಿರುವುದು ಇವರ ಸಾಧನೆಗಳಿಗೆ ಕೈಗನ್ನಡಿ. ಇವರಿಂದ ಇನ್ನಷ್ಟು ಸಾಧನೆಗಳು ಮೂಡಿ ಬರಲಿ ಎಂದು ಹಾರೈಸುತ್ತಾ ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ (ರಿ) ಉಪ್ಪಿನಂಗಡಿ ಘಟಕದ ಆತಿಥ್ಯದಲ್ಲಿ ದಿನಾಂಕ 06.08.2017 ರಂದು ಉಪ್ಪಿನಂಗಡಿಯ ಎಚ್ ಎಮ್.ಆಡಿಟೋರಿಯಂ ಇಲ್ಲಿ ಜರುಗಿದ ಯುವವಾಹಿನಿಯ 30ನೇ ವಾರ್ಷಿಕ ಸಮಾವೇಶದ ಸುಸಂದರ್ಭದಲ್ಲಿ ‘ಯುವವಾಹಿನಿ ಪ್ರತಿಭಾ ಪುರಸ್ಕಾರ’-2017ನೀಡಿ ಗೌರವಿಸುತ್ತಿದೆ.
ಈ ಸಂದರ್ಭದಲ್ಲಿ ಕರ್ನಾಟಕ ಸರಕಾರದ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಶ್ರೀ ಕೆ.ವಸಂತ ಬಂಗೇರ, ಐ ಎಪ್ ಎಸ್ ಅಧಿಕಾರಿ ಶ್ರೀ ದಾಮೋದರ ಎ.ಟಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಶಯನಾ ಜಯಾನಂದ,ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರಾದ ಶ್ರೀ ಜಯಂತ ನಡುಬೈಲು, ಕಾಸರಗೋಡು ಸರಕಾರಿ ಕಾಲೇಜು ಸಹ ಪ್ರಾಧ್ಯಾಪಕರಾದ ಡಾ.ರಾಜೇಶ್ ಬೆಜ್ಜಂಗಳ,ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಮರೋಳಿ, ಸಮಾವೇಶ ನಿರ್ದೇಶಕರಾದ ಡಾ.ಸದಾನಂದ ಕುಂದರ್, ಕಾರ್ಯದರ್ಶಿ ನಿತೇಶ್ ಜೆ.ಕರ್ಕೇರಾ ಸ್ವಾಗತ ಸಮಿತಿಯ ಅಧ್ಯಕ್ಷರಾದ ಡಾ.ರಾಜಾರಾಮ್, ಯುವವಾಹಿನಿ ಉಪ್ಪಿನಂಗಡಿ ಘಟಕದ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಉಪಸ್ಥಿತರಿದ್ದರು