ವೇಣೂರು: ಯುವವಾಹಿನಿ (ರಿ.) ವೇಣೂರು ಘಟಕದ ವತಿಯಿಂದ ರಕ್ಷಾ ಬಂಧನ ,ಗುರುನಮನ, ವಿದ್ಯಾರ್ಥಿವೇತನ ವಿತರಣಾ ಸಮಾರಂಭವು ದಿನಾಂಕ 26.08.2018 ರಂದು ಮೂಡುಕೋಡಿ ಯೋಗೀಶ್ ಪೂಜಾರಿಯವರ ಮನೆಯಲ್ಲಿ ಜರಗಿತು ಅಧ್ಯಕ್ಷತೆಯನ್ನು ಘಟಕ ಅಧ್ಯಕ್ಷರಾದ ನಿತೀಶ್ ಎಚ್ ವಹಿಸಿದ್ದರು , ಪ್ರಧಾನ ಭಾಷಣಕಾರರಾಗಿ ಆಗಮಿಸಿದ ಜಯ ಪೂಜಾರಿ ನಾರಾವಿ ಮಾತನಾಡುತ್ತಾ ರಕ್ಷಾ ಬಂಧನದ ಮೂಲಕ ಯುವಕರಲ್ಲಿ ಸಹೋರತೆ ಗಟ್ಟಿಯಾಗುತ್ತದೆ, ವಿದ್ಯಾರ್ಥಿವೇತನ ನೀಡುವ ಮೂಲಕ ಗುರುನಮನ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನಿತೀಶ್ ಎಚ್ ಮಾತನಾಡುತ್ತಾ ನಮ್ಮ ಘಟಕವು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು ಇದೀಗ ಅಶಕ್ತ ಸಮಾಜ ಬಾಂಧವರ ನೆರವಿಗೆ ನೂರು ಜನರನ್ನು ಒಳಗೊಂಡ ಸೇವಾ ಯೋಜನೆ ವಾಟ್ಸಪ್ ಗ್ರೂಪ್ ರಚಿಸಿದ್ದು ತಮ್ಮೆಲರ ಸಹಕಾರ ಬೇಕು ಎಂದರು. ರಕ್ಷಾ ಬಂಧನ ಕಾರ್ಯಕ್ರಮ ನಂತರ ಗುರುಜಯಂತಿಯ ಪ್ರಯುಕ್ತ ಪ್ರತಿಭಾನ್ವಿತ ವಿಧ್ಯಾರ್ಥಿನಿ ದೀಕ್ಷಾ ಪೂಜಾರಿ ಇವರಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು . ವೇದಿಕೆಯಲಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ರಾಕೇಶ್ ಕುಮಾರ್ ಮೂಡುಕೋಡಿ ,ವಲಯ ಬಿಲ್ಲವ ಸಂಘದ ಅಧ್ಯಕ್ಷರಾದ ಪೂವಪ್ಪ ಪೂಜಾರಿ ,ಕೇಂದ್ರ ಸಮಿತಿಯ ನಾಮ ನಿರ್ದೇಶಿತ ಸದಸ್ಯ ಯೋಗೀಶ್ ಪೂಜಾರಿ ಉಪಸ್ಥಿತರಿದ್ದರು . ಉಪಾಧ್ಯಕ್ಷ ಅರುಣ್ ಕೋಟ್ಯಾನ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಸತೀಶ್ ಪಿ. ಎನ್. ಸ್ವಾಗತಿಸಿ ಹರೀಶ್ ಪಿ. ಎಸ್. ಧನ್ಯವಾದ ಸಲ್ಲಿಸಿದರು .