ಯುವವಾಹಿನಿ(ರಿ) ಪುತ್ತೂರು ಘಟಕ

ಯುವ ಪ್ರತಿಭೆಯನ್ನು ಗುರುತಿಸಿ, ನಾಯಕತ್ವ ಮೂಡಿಸಿ-ಯಶವಂತ ಪೂಜಾರಿ

ಯುವವಾಹಿನಿ ಸಂಸ್ಥೆಯು ಶಿಸ್ತುಬದ್ಧ ಹಾಗೂ ಕ್ರಮಬದ್ಧ ಸಂಸ್ಥೆ ಎನಿಸಿದ್ದು ಅದು ಸಮಾಜಕ್ಕೆ ಅನೇಕ ಕೊಡುಗೆಗಳನ್ನು ನೀಡುತ್ತಾ, ಸಹಕರಿಸುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಗ್ರಾಮವಾರು ಯುವವಾಹಿನಿ ಸಂಘವನ್ನು ರಚಿಸಿ ಯುವಜನತೆಯಲ್ಲಿನ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಿ ಅವರಲ್ಲಿ ನಾಯಕತ್ವ ಮೂಡಿಸಿ ಅವರನ್ನು ಸತ್ಪ್ರಜೆಗಳನ್ನಾಗಿ ಮಾಡುವತ್ತ ಶ್ರಮಿಸಬೇಕಾಗಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ನಿಯೋಜಿತ ಅಧ್ಯಕ್ಷ  ಯಶವಂತ ಪೂಜಾರಿರವರು ಹೇಳಿದರು.
ಅವರು ದಿನಾಂಕ: 30.07.2017  ರಂದು ಬಪ್ಪಳಿಗೆ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಡೆದ 2017-18ನೇ ಸಾಲಿನ ಯುವವಾಹಿನಿ ಪುತ್ತೂರು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧನೆ ಮಾಡುತ್ತಾ ಮಾತನಾಡಿದರು. ವಿದ್ಯೆ, ಉದ್ಯೋಗ ಮತ್ತು ಸಂಪರ್ಕವೆಂಬ ನಾರಾಯಣಗುರುಗಳ ತತ್ವದಂತೆ ಯುವವಾಹಿನಿ ಸದಸ್ಯರು ಕೆಲಸ ಮಾಡುತ್ತಿದ್ದಾರೆ. ಕೋಟಿ-ಚೆನ್ನಯ ಕ್ರೀಡಾಕೂಟವನ್ನು ಪ್ರಪ್ರಥಮವಾಗಿ ಆರಂಭಿಸಿದ್ದು ಪುತ್ತೂರು ಘಟಕವಾಗಿದೆ. ಅಲ್ಲದೆ ಆಟಿಕೂಟ ಕಾನ್ಸೆಪ್ಟ್ ತಯಾರು ಮಾಡಿದ್ದು ಕೂಡ ಯುವವಾಹಿನಿ ಆಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ ಎಂದ ಅವರು ವ್ಯಾವಾಹಾರಿಕವಾಗಿ ಜಯಂತ್‍ರವರು ಮೇಲುಗೈ ಸಾಧಿಸಿದಂತೆ ಬಿಲ್ಲವ ಸಮುದಾಯವನ್ನು ಕೂಡ ಮೇಲೆತ್ತುವಲ್ಲಿ ಅವರ ಪಾತ್ರ ಮಹತ್ತರವಾದುದು. ವಿದ್ಯಾರ್ಥಿ ಸಂಘಟನೆ ಮಾಡಿಕೊಂಡು ಸಮುದಾಯದ ವಿದ್ಯಾರ್ಥಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರವಲ್ಲಿ ಜಯಂತ್‍ರವರು ಬಹಳಷ್ಟು ಶ್ರಮಿಸಿದ್ದಾರೆ. ಯುವವಾಹಿನಿ ಘಟಕವು ವೈದ್ಯಕೀಯ ನೆರವು ನೀಡುವುದಾಗಲಿ, ಸಾಮಾಜಿಕ ಹಾಗೂ ಸಾಂಸ್ಕøತಿಕವಾಗಲಿ ಎಲ್ಲದರಲ್ಲೂ ಮುಂಚೂಣಿಯಲ್ಲಿದೆ. ಯುವವಾಹಿನಿ ಸದಸ್ಯರು ಪ್ರತಿಯೊಂದು ಘಟಕಗಳಲ್ಲಿನ ಸದಸ್ಯರೊಂದಿಗೆ ನಿರಂತರ ಸಂಪರ್ಕವನ್ನು ಇಟ್ಟುಕೊಂಡು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತಾಗಲಿ ಎಂದು ಅವರು ಹೇಳಿದರು.
ಯುವವಾಹಿನಿ ರಾಜಕೀಯರಹಿತ ಸಂಘಟನೆ-ಜಯಂತ್ ನಡುಬೈಲು:
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಜಯಂತ್ ನಡುಬೈಲುರವರು ಮಾತನಾಡಿ, ಯುವವಾಹಿನಿಯು ರಾಜಕೀಯರಹಿತ ಸಂಘಟನೆಯಾಗಿದ್ದು ಇಲ್ಲಿನ ಯುವಸಮುದಾಯದ ಒಗ್ಗಟ್ಟು ಯಾವುದೇ ಕ್ಷೇತ್ರದಲ್ಲಿ ಕಂಡು ಬರುವುದಿಲ್ಲ. ಯುವವಾಹಿನಿ ಸಂಘಟನೆ ವಿದ್ಯೆಗೆ ಮತ್ತು ಉದ್ಯೋಗ ಕ್ಷೇತ್ರಕ್ಕೆ ಯುವಸಮುದಾಯವನ್ನು ಉತ್ತೇಜಿಸುವ ಕೆಲಸವನ್ನು ಮಾಡುತ್ತಿದೆ. ವಿದ್ಯೆಯನ್ನು ಗಮನದಲ್ಲಿಟ್ಟುಕೊಂಡು ಶೈಕ್ಷಣಿಕ ಕ್ಷೇತ್ರದಲ್ಲಿ ಆರ್ಥಿಕವಾಗಿ ಹಿಂದುಳಿದ ಸಮುದಾಯದಲ್ಲಿನ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಟ್ರಸ್ಟ್ ಮೂಲಕ ದತ್ತು ತೆಗೆದುಕೊಂಡು ಓದಿಗೆ ಅವಕಾಶ ಕಲ್ಪಿಸಿಕೊಟ್ಟಿರುವುದು ಶ್ಲಾಘನೀಯವಾಗಿದೆ ಎಂದ ಅವರು ಯುವವಾಹಿನಿ ಯುವಕರ ಕೂಟವಾಗಿದೆ. ಯಾರಿಗೆ ರಕ್ತದ ಅವಶ್ಯಕತೆವಿದೆಯೋ ಅವರಿಗೆ ವರ್ಷದ 365 ದಿನವೂ ಸ್ಪಂದಿಸುವ ಮೂಲಕ ಪ್ರಧಾನ ಪಾತ್ರ ವಹಿಸುತ್ತಿದೆ ಎಂದರು. 51 ಗ್ರಾಮ ಸಮಿತಿಗಳಲ್ಲೂ ಧಾರ್ಮಿಕ, ಸಾಮಾಜಿಕ, ಆರ್ಥಿಕ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಯುವಸಮುದಾಯ ಮುಂದೆ ಬರಬೇಕು ಎಂದು ಅವರು ಹೇಳಿದರು.

ಯುವವಾಹಿನಿಗೆ ಸೇರಿ ಭವಿಷ್ಯ ಉತ್ತಮ ಕಂಡುಕೊಳ್ಳಿ-ಜಯಂತ್ ಕೆಂಗುಡೇಲು:

ನಿರ್ಗಮನ ಅಧ್ಯಕ್ಷ ಜಯಂತ್ ಪೂಜಾರಿ ಕೆಂಗುಡೇಲುರವರು ಮಾತನಾಡಿ, ಬಿಲ್ಲವ ಸಂಘ, ಯುವವಾಹಿನಿ ಸಂಘ ದೇವಾಲಯವಿದ್ದಾಗೆ. ವಿದ್ಯೆ ಕಡಿಮೆ ಇದ್ದರೂ ಗ್ರಾಮ ಸಮಿತಿಯಲ್ಲಿ ಕೆಲಸ ಮಾಡಿಕೊಂಡಿದ್ದ ನನಗೆ ಅನುಭವದ ಕೊರತೆಯ ನಡುವೆಯೂ ಯುವವಾಹಿನಿ ಸಂಘಟನೆಯಲ್ಲಿ ಸೇರಿಸಿ ಅಧ್ಯಕ್ಷರನ್ನಾಗಿ ಮಾಡಿ ನನ್ನಲ್ಲಿ ಸಮಾಜಮುಖಿ ಚಿಂತನೆಯನ್ನು ಮನಸ್ಸಿನಲ್ಲಿ ಭಿತ್ತಿದವರು ಜಯಂತ್ ನಡುಬೈಲುರವರು. ಬಿಲ್ಲವ ಸಮುದಾಯದ ಯುವಕರು ವಿದ್ಯೆ ಇದ್ದೂ ಕೂಡ ಇಂದು ದಾರಿ ತಪ್ಪುತ್ತಿದ್ದಾರೆ ಎಲ್ಲೆಡೆ ಟೀಕೆ ವ್ಯಕ್ತವಾಗಿದೆ. ಯುವಕರು ರಾಜಕೀಯ ಪ್ರಭಾವಕ್ಕೆ ಒಳಗಾಗದೆ ಯುವವಾಹಿನಿ, ಬಿಲ್ಲವ ಸಂಘಕ್ಕೆ ಸೇರಲು ಮುಕ್ತ ಅವಕಾಶವಿದ್ದು ಭವಿಷ್ಯದ ಜೀವನವನ್ನು ಕಂಡುಕೊಳ್ಳಿ ಎಂದ ಅವರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತನ್ನ ಅಧ್ಯಕ್ಷಾವಧಿಯಲ್ಲಿ ಸಹಕರಿಸಿದ ಪ್ರತಿಯೊಬ್ಬರನ್ನೂ ಸ್ಮರಿಸಿ, ಮುಂದಿನ ಅಧ್ಯಕ್ಷರ ತಂಡಕ್ಕೆ ಶುಭ ಕೋರಿದರು.
ಸಮಾಜದ, ಸಮುದಾಯದ ಏಳಿಗೆಗೋಸ್ಕರ ಕೈಜೋಡಿಸಿ-ಉದಯ ಕುಮಾರ್:
ಪದಗ್ರಹಣ ಸ್ವೀಕರಿಸಿದ ನೂತನ ಅಧ್ಯಕ್ಷ ಉದಯ ಕುಮಾರ್ ಕೋಲಾಡಿರವರು ಮಾತನಾಡಿ, ಸಮಾಜದ ಒಳಿತಿಗೋಸ್ಕರ, ಸಮುದಾಯದ ಏಳಿಗೆಗೋಸ್ಕರ ಸಂಘಟನೆಗೆ ಪ್ರತಿಯೊಬ್ಬರೂ ಕೈಜೋಡಿಸುವಂತಾಗಬೇಕು. 18ರಿಂದ 48ರ ವಯಸ್ಸಿನವರಿಗೆ ಯುವವಾಹಿನಿ ಅಥವಾ ಬಿಲ್ಲವ ಸಂಘಕ್ಕೆ ಸೇರಿಕೊಂಡು ಸಂಘಟನೆಯ ಬಲವರ್ಧನೆಗೆ ಸಹಕರಿಸುವಂತಾಗಬೇಕು ಎಂದ ಅವರು ಮುಂದಿನ ದಿನಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ. ಅದರಲ್ಲಿ ಪ್ರಥಮ ಕಾರ್ಯಕ್ರಮವಾದ ವಿದ್ಯಾರ್ಥಿಗಳಿಗೆ ಸರಕಾರಿ ಹಾಗೂ ಖಾಸಗಿಯಾಗಿ ದೊರೆಯುವ ಶೈಕ್ಷಣಿಕ ಸವಲತ್ತುಗಳ ಮಾಹಿತಿ ಕಾರ್ಯಕ್ರಮವನ್ನು ಮುಂದಿನ ತಿಂಗಳಿನಲ್ಲಿ ಹಮ್ಮಿಕೊಂಡಿದ್ದೇವೆ. ಆದ್ದರಿಂದ ಎಲ್ಲರ ಸಹಕಾರದಿಂದ ಸಂಘಟನೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಿದ್ದೇನೆ ಎಂದು ಅವರು ಹೇಳಿದರು.
ಸ್ಮರಣಿಕೆ ನೀಡಿ ಗೌರವ:
ಯುವವಾಹಿನಿ ಆರಂಭವಾದಾಗಿನಿಂದ ಇಂದಿನವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಶೀನಪ್ಪ ಪೂಜಾರಿ(ಸ್ಥಾಪಕಾಧ್ಯಕ್ಷ), ಚಂದ್ರಶೇಖರ್ ಎನ್.ಎಸ್.ಡಿ, ವೀರಪ್ಪ ಪೂಜಾರಿ, ಚಂದ್ರಕಾಂತ ಶಾಂತಿವನ, ಅಶೋಕ್ ಕುಮಾರ್ ಸಂಪ್ಯ, ಬಿ.ಟಿ ಮಹೇಶ್ಚಂದ್ರ ಸಾಲಿಯಾನ್, ಕಿರಣ್ ಬಸಂತಕೋಡಿ, ಪ್ರಭಾಕರ್ ಸಾಲಿಯಾನ್, ಜಯಂತ್ ನಡುಬೈಲು, ಹೊನ್ನಪ್ಪ ಪೂಜಾರಿ ಕೈಂದಾಡಿ, ಕೇಶವ ಪೂಜಾರಿ ಬೆದ್ರಾಳ, ಜಯಂತ್ ಬಾಯಾರು, ನಾಗೇಶ್ ಬಲ್ನಾಡು, ಶಶಿಧರ್ ಕಿನ್ನಿಮಜಲುರವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡುವ ಮೂಲಕ ನಿರ್ಗಮನ ಅಧ್ಯಕ್ಷ ಜಯಂತ್ ಕೆಂಗುಡೇಲುರವರು ಗೌರವಿಸಿದರು.
ಪುತ್ತೂರು ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ ಪೂಜಾ ವಸಂತ್, ಪುತ್ತೂರು ವಿದ್ಯಾರ್ಥಿ ಸಂಘದ ಅಧ್ಯಕ್ಷ ರಜತ್ ಕುಮಾರ್ ಎನ್.ಎಸ್.ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವವಾಹಿನಿ ಸಂಚಾಲಕ ಕೇಶವ ಪೂಜಾರಿ ಬೆದ್ರಾಳ ಸ್ವಾಗತಿಸಿ, ನೂತನ ಕಾರ್ಯದರ್ಶಿ ವಿಶ್ವಜಿತ್ ಅಮ್ಮುಂಜ ವಂದಿಸಿದರು. ಹರೀಶ್ ಶಾಂತಿ ಪ್ರಾರ್ಥಿಸಿದರು. ನಿರ್ಗಮನ ಕಾರ್ಯದರ್ಶಿ ಉದಯ ಕೋಲಾಡಿ ವರದಿ ವಾಚಿಸಿದರು. ಮಾಜಿ ಅಧ್ಯಕ್ಷ ಶಶಿಧರ್ ಕಿನ್ನಿಮಜಲು ಹಾಗೂ ದೇವಿಕಾ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.
2017-18ನೇ ಸಾಲಿನ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದ ಅಧ್ಯಕ್ಷ ಉದಯ ಕುಮಾರ್ ಕೋಲಾಡಿ, ಕಾರ್ಯದರ್ಶಿ ವಿಶ್ವಜಿತ್ ಅಮ್ಮುಂಜ, ಕೋಶಾಧಿಕಾರಿ ಗೌರೀಶ್ ನರಿಮೊಗರು, ಉಪಾಧ್ಯಕ್ಷ ಹರೀಶ್ ಶಾಂತಿ, ಜೊತೆ ಕಾರ್ಯದರ್ಶಿ ರವೀಂದ್ರ ಸಂಪ್ಯ, ಸಂಚಾಲಕ ಜಯಂತ್ ಬಾಯಾರು, ನಿರ್ದೇಶಕರುಗಳಾದ ಬ್ರಹ್ಮಶ್ರೀ ನಾರಾಯಣಗುರು ತತ್ವ ಪ್ರಚಾರ ನಿರ್ದೇಶಕ ಅಣ್ಣಿ ಪೂಜಾರಿ, ಸಂಪರ್ಕ ಮತ್ತು ಸಂಘಟನೆ ನಿರ್ದೇಶಕ ಅವಿನಾಶ್ ಹಾರಾಡಿ, ಕುಟುಂಬ ಮತ್ತು ಆರೋಗ್ಯ ನಿರ್ದೇಶಕ ತಿಮ್ಮಪ್ಪ ಸುವರ್ಣ, ವ್ಯಕ್ತಿತ್ವ ವಿಕಸನ ನಿರ್ದೇಶಕ ಉಮೇಶ್ ಸಂಪ್ಯ, ಕ್ರೀಡಾ ನಿರ್ದೇಶಕ ಪ್ರಶಾಂತ್ ಪಲ್ಲತ್ತಡ್ಕ, ಉದ್ಯೋಗ ಮತ್ತು ಭವಿಷ್ಯ ನಿರ್ದೇಶಕ ನವೀನ್, ಸಮಾಜ ಸೇವೆ ನಿರ್ದೇಶಕ ಸುರೇಶ್ ಸಂಪ್ಯ, ಸಾಹಿತ್ಯ ಮತ್ತು ಸಾಂಸ್ಕøತಿಕ ನಿರ್ದೇಶಕ ಸಮಿತ್ ಪರ್ಪುಂಜ, ವಿದ್ಯಾನಿಧಿ ಸಂಚಾಲಕ ಗಣೇಶ್ ಬೊಳ್ಳಗುಡ್ಡೆ, ಮಹಿಳಾ ಪ್ರತಿನಿಧಿ ಪೂಜಾ ವಸಂತ್, ಪತ್ರಿಕೆ ಮತ್ತು ಪ್ರಚಾರ ನಿರ್ದೇಶಕ ಅನೂಪ್ ನರಿಮೊಗರು ಹಾಗೂ ಗುಣಕರ್‍ರವರಿಗೆ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ನಿಯೋಜಿತ ಅಧ್ಯಕ್ಷ  ಯಶವಂತ ಪೂಜಾರಿ ಪ್ರತಿಜ್ಞಾ ವಿಧಿ ಭೋಧಿಸಿದರು 

ಹೃದ್ರೋಗದಿಂದ ಬಳಲುತ್ತಿರುವ ನವ್ಯಶ್ರೀ ಎಂಬ ಬಾಲಕಿಗೆ ಮತ್ತು ವಿದ್ಯೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅಂಜಲಿ ಎಂಬ ವಿದ್ಯಾರ್ಥಿಗೆ ಯುವವಾಹಿನಿ ವತಿಯಿಂದ ಸಹಾಯಧನವನ್ನು ಹಸ್ತಾಂತರಿಸಲಾಯಿತು ಅಲ್ಲದೆ ಯುವವಾಹಿನಿ ಮಾಜಿ ಅಧ್ಯಕ್ಷರುಗಳಿಗೆ ಈ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!