ಯುವವಾಹಿನಿಯ ಮುಖವಾಣಿ

ಯುವಸಿಂಚನ ಪತ್ರಿಕೆ ಬಿಡುಗಡೆ

ವಿಶಿಷ್ಟ ವಿನ್ಯಾಸದೊಂದಿಗೆ ವರ್ಣರಂಜಿತ ಪುಟಗಳನ್ನು ಒಳಗೊಂಡ ಯುವವಾಹಿನಿಯ ಮುಖವಾಣಿ ಯುವಸಿಂಚನ ಪತ್ರಿಕೆ ಎಲ್ಲರ ಮನಸ್ಸು ಗೆಲ್ಲಲಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅನುಷ್ಠಾನ ಸಮಿತಿಯ ಸಂಚಾಲಕರಾದ ಅಶೋಕ್ ಕುಮಾರ್ ತಿಳಿಸಿದರು
ಅವರು ದಿನಾಂಕ 10.09.2017 ರಂದು ಯುವವಾಹಿನಿ ಸಸಿಹಿತ್ಲು ಘಟಕದ ಆಶ್ರಯದಲ್ಲಿ ಸಸಿಹಿತ್ಲು ವೈಶಾಲಿ ರೆಸಾರ್ಟ್ ಇಲ್ಲಿ ಜರುಗಿದ ಯುವವಾಹಿನಿಯ 26 ಘಟಕಗಳ ಸಮನ್ವಯತೆ ಸ್ನೇಹಾನುಬಂಧ ಕಾರ್ಯಕ್ರಮದಲ್ಲಿ ಯುವಸಿಂಚನ ಪತ್ರಿಕೆ ಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.


ಎಲ್ಲರ ಸಲಹೆ ಸೂಚನೆ, ಮಾರ್ಗದರ್ಶನ ಹಾಗೂ ಸಹಕಾರದಿಂದ ಹೊಸ ವಿನ್ಯಾಸದಲ್ಲಿ ಯುವಸಿಂಚನ ಪತ್ರಿಕೆ ಬಿಡುಗಡೆಗೊಂಡಿದೆ ಎಂದು ಯುವಸಿಂಚನದ ನೂತನ ಸಂಪಾದಕರಾದ ಶುಭರಾಜೇಂದ್ರ ತಿಳಿಸಿದರು.ನಿಸ್ವಾರ್ಥದಿಂದ ದುಡಿದರೆ ಮಾತ್ರ ಸಮಾಜದ ಪರಿವರ್ತನೆ ಸಾದ್ಯ ,ಯುವವಾಹಿನಿ ಸಂಸ್ಥೆ ಅಂತಹ ವೇದಿಕೆಯನ್ನು ನಿರ್ಮಿಸಿಕೊಂಡು ಒಮ್ಮತದ ಕಾರ್ಯ ನಡೆಸುತ್ತಿದೆ ಹಾಗೂ ವಿದ್ಯೆ, ಉದ್ಯೋಗ, ಸಂಪರ್ಕದ ನೆಲೆಯಲ್ಲಿ ನಾವು ಮಾಡುವ ಕಾರ್ಯ ಸಮಾಜಕ್ಕೆ ಮಾದರಿಯಾಗಿರಬೇಕು ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ ತಿಳಿಸಿದರು.ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ 26 ವಿವಿಧ ಘಟಕಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಭಾಗವಹಿಸಿದ್ದರು.


ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಜಯಂತ ನಡುಬೈಲು, ನರೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ, ಜತೆ ಕಾರ್ಯದರ್ಶಿ ಚೇತನ್ ಕುಮಾರ್, ಕೋಶಾಧಿಕಾರಿ ಹರೀಶ್ ಕೆ.ಸನಿಲ್, ಸಾಂಸ್ಕೃತಿಕ ನಿರ್ದೇಶಕರಾದ ಭುವನೇಶ್ ಪಚ್ಚಿನಡ್ಕ, ಜಾಲತಾಣದ ಸದಸ್ಯರಾದ ಸುಜಿತ್ ಕುಮಾರ್, ಉದಯ ಅಮೀನ್ ಮಟ್ಟು, ಪ್ರಚಾರ ನಿರ್ದೇಶಕರಾದ ಮಾಧವ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

5 thoughts on “ಯುವಸಿಂಚನ ಪತ್ರಿಕೆ ಬಿಡುಗಡೆ

  1. ಬಹು ವರ್ಣದಿಂದ ಸಿಂಚನ ಉತ್ತಮ ವಾಗಿ ಮೂಡಿ ಬಂದಿದೆ.ಸಂಪಾದಕೀಯ ಮಂಡಳಿಗೆ ಅಭಿನಂದನೆಗಳು..

Leave a Reply

Your email address will not be published. Required fields are marked *

error: Content is protected !!