ಮಂಗಳೂರು: ಕರಾವಳಿ ಕರ್ನಾಟಕದ ಅವಳಿ ಜಿಲ್ಲೆಗಳಲ್ಲಿ ಮೂವತ್ತು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿಯ 31 ನೇ ವಾರ್ಷಿಕ ಸಮಾವೇಶವು ದಿನಾಂಕ 05.08.2018 ರಂದು ಮಂಗಳೂರಿನ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್ ನಲ್ಲಿ ಸಂಪನ್ನಗೊಂಡಿತು.
ಸರಕಾರ ಮಾಡುವ ಕಾರ್ಯ ಯುವವಾಹಿನಿ ಮಾಡಿದೆ ಡಾ. ಜಯಮಾಲಾ
ಸಾಹಿತ್ಯ, ಸಮಾಜಿಕ, ಶೈಕ್ಷಣಿಕ, ಉದ್ಯೋಗ ಹೀಗೆ ವಿವಿಧ ಮಗ್ಗುಲುಗಳಲ್ಲಿ ಸಮಾಜಮುಖಿ ಕಾರ್ಯದಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡಿರುವ ಯುವವಾಹಿನಿಯ ಕಾರ್ಯಸಾಧನೆ ಇತರರಿಗೆ ಮಾದರಿ, ಸರಕಾರ ಮಾಡುವ ಕೆಲಸವನ್ನು ಯುವವಾಹಿನಿ ಮಾಡಿರುವುದು ಶ್ಲಾಘನೀಯ ಎಂದು ಯುವವಾಹಿನಿಯ ಮುಖವಾಣಿ 2018 ರ ಸಿಂಚನ ವಾರ್ಷಿಕ ವಿಶೇಷಾಂಕವನ್ನು ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಸಚಿವರಾದ ಡಾ.ಜಯಮಾಲ ಬಿಡುಗಡೆಗೊಳಿಸಿ ತಿಳಿಸಿದರು.
ಸಮುದಾಯದ ಹಿತವನ್ನು ಕಾಯ್ದುಕೊಂಡು ಮುನ್ನಡೆಯುವುದಕ್ಕಾಗಿ ಬಿಲ್ಲವ ಸಮಾಜದ ಜನರು ತಮ್ಮ ಮಕ್ಕಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉನ್ನತ ಹುದ್ದೆಗಳನ್ನು ಪಡೆಯುವುದಕ್ಕೆ ಸಜ್ಜುಗೊಳಿಸಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಡಾ.ಜಯಮಾಲಾ ಸಲಹೆ ನೀಡಿದರು.
ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳಲ್ಲಿ ಹೆಚ್ಚಿನ ಸಂಖ್ಯೆಯ ಬಿಲ್ಲವ ಯುವಕ, ಯುವತಿಯರು ಕಾಣಿಸುವಂತೆ ಆಗಬೇಕು. ಆ ಮೂಲಕ ಸಮುದಾಯಕ್ಕೆ ಶಕ್ತಿ ತುಂಬಬೇಕು. ಈ ದಿಸೆಯಲ್ಲಿ ಸಮುದಾಯದ ಜನರು ಗಂಭೀರವಾಗಿ ಯೋಚಿಸಬೇಕಾದ ಅಗತ್ಯವಿದೆ ಎಂದರು. ಬಿಲ್ಲವ ಸಮುದಾಯಕ್ಕೆ ಪ್ರಥಮ ನಾಯಕತ್ವ ನೀಡಿದವರು ಕೋಟಿ ಚೆನ್ನಯರು ಸತ್ಯದ ದಾರಿಯಲ್ಲಿ ಅನ್ಯಾಯವನ್ನು ಮೆಟ್ಟಿ ನಿಂತು ಸಮುದಾಯಕ್ಕೆ ಪ್ರಾಣವನ್ನೇ ಅರ್ಪಿಸಿದ ಮಹಾನಾಯಕರು, ಹಿಂದೆ ನಮ್ಮ ಸಮಾಜ (ಬಿಲ್ಲವ) ಅಸ್ಪೃಶ್ಯತೆ ಗೆ ಈಡಾಗಿತ್ತು ಹೆಣ್ಣಿಗೆ ಸೆರಗು ಹಾಕುವ ಅವಕಾಶವೇ ಇರಲಿಲ್ಲ ಇದಕ್ಕಾಗಿ ಹೋರಾಟದ ಹಾದಿಯನ್ನು ರೂಪಿಸಿದ ಬ್ರಹ್ಮಶ್ರೀ ನಾರಾಯಣಗುರುಗಳು ಅದರಲ್ಲಿ ಯಶಸ್ವೀಯೂ ಆದರು ಸಮಾಜದಲ್ಲಿದ್ದ ತಾರತಮ್ಯವನ್ನು ಈ ಎಲ್ಲಾ ಮಹಾ ನಾಯಕರು ಚಳುವಳಿ ಹೋರಾಟದ ಮೂಲಕ ಹೋಗಲಾಡಿಸಿ ದೈವರೂಪಿಗಳಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಸಮುದಾಯ ಮುನ್ನಡೆಯ ಬೇಕಾಗಿದೆ. ಈ ನಿಟ್ಟಿನಲ್ಲಿ ಈಗಿನ ಯುವಕರು ಭವಿಷ್ಯವನ್ನು ರೂಪಿಸಬೇಕಾಗಿದೆ.
ಸಂಸ್ಕೃತಿ, ಸಂಸ್ಕಾರ, ದೈವ, ಭೂತಾರಾಧನೆ, ನಾಗಾರಾಧನೆ, ನಂಬಿಕೆಗಳ ನಡುವೆಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆಗಳು ಇನ್ನೂ ಜೀವಂತವಾಗಿದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಇನ್ನೂ ಯಾವ ಸ್ತರದಲ್ಲಿದ್ದೇವೆ, ಎಷ್ಟು ಮಂದಿಗೆ ಉದ್ಯೋಗ ನೀಡಲು ಸಾದ್ಯವಾಗಿದೆ, ಎಸ್.ಎಸ್.ಎಲ್.ಸಿ, ಪಿಯುಸಿ ಯಲ್ಲಿ ಜಿಲ್ಲೆಯಲ್ಲಿ ಅದರಲ್ಲೂ ಹೆಣ್ಣು ಮಕ್ಕಳು ಅತೀ ಹೆಚ್ಚು ಅಂಕ ಪಡೆಯುತ್ತಾರೆ, ಆದರೆ ಕೆಲವೇ ಮಂದಿ ಉನ್ನತ ಶಿಕ್ಷಣಕ್ಕೆ ಹೋಗುತ್ತಾರೆ ಉಳಿದವರ ಭವಿಷ್ಯವೇನು ? ಆದ್ದರಿಂದ ಸಮುದಾಯದ ಯುವಕರು ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಗೆ ಬರಬೇಕು , ಉನ್ನತ ಸ್ಥಾನಕ್ಕೆ ಹೋದ ಬಳಿಕ ಒಬ್ಬರಿಗೊಬ್ಬರು ಸಹಕಾರ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಬೇಕಾದಷ್ಟು ಯೋಜನೆಗಳಿವೆ, ಸಮಾಜದ ಹೆಣ್ಣು ಮಕ್ಕಳು ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು
ಬ್ರಹ್ಮಶ್ರೀ ನಾರಾಯಣಗುರು ಜಯಂತಿ ರಾಜ್ಯ ಮಟ್ಟದ ಕಾರ್ಯಕ್ರಮ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯಲಿದೆ, ಜಿಲ್ಲಾ ಮಟ್ಟದಲ್ಲಿ ಕೂಡಾ ಅತ್ಯುತ್ತಮ ರೀತಿಯಲ್ಲಿ ವ್ಯವಸ್ಥೆ ಗೊಳಿಸಬೇಕು ಎಂದು ಸಚಿವೆ ಡಾ. ಜಯಮಾಲಾ ತಿಳಿಸಿದರು
ಶಿಕ್ಷಣದ ಮೂಲಕ ಬೆಳೆಯಬೇಕು : ಕೋಟ ಶ್ರೀನಿವಾಸ ಪೂಜಾರಿ
ಅಭಿನಂದನೆ ಸ್ವೀಕರಿಸಿ, ಯುವವಾಹಿನಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ‘ಕೂಲಿಯ ಮಗ ಕೂಲಿಯೇ ಆಗಬೇಕು, ವೈದ್ಯರ ಮಗ ವೈದ್ಯನೇ ಆಗಬೇಕು ಎಂಬ ಅಲಿಖಿತ ನಿಯಮ ಹಿಂದೆ ಇತ್ತು. ಈಗ ಹಾಗೆ ಇಲ್ಲ. ಶಿಕ್ಷಣವನ್ನು ಸಾಧನವಾಗಿ ಬಳಸಿಕೊಂಡು ನಮ್ಮ ಸಮುದಾಯದ ಮಕ್ಕಳು ವೈದ್ಯರು, ಎಂಜಿನಿಯರ್‌ಗಳು, ಅಧಿಕಾರಿಗಳು ಆಗಬೇಕು’ ಎಂದು ಅವರು ಹೇಳಿದರು.
ಒಂದು ಕಾಲಘಟ್ಟದಲ್ಲಿ ನಮ್ಮವರಿಗೆ ತೆಂಗಿನಕಾಯಿ ಚಿಪ್ಪಿನಲ್ಲಿ ಕುಡಿಯಲು ನೀರು ಕೊಡಲಾಗುತ್ತಿತ್ತು. ಹೆಣ್ಣುಮಕ್ಕಳು ರವಿಕೆ, ಮೇಲುವಸ್ತ್ರ ಧರಿಸದಂತಹ ಸ್ಥಿತಿ ಇತ್ತು. ನಾರಾಯಣ ಗುರುಗಳ ಹೋರಾಟದ ಮೂಲಕ ನಮ್ಮ ಸಮುದಾಯಕ್ಕೆ ಶಕ್ತಿ ದೊರೆಯಿತು. ಈಗ ನಾವು ಸಂಘರ್ಷ ಎದುರಿಸಿ ಬದುಕುವುದನ್ನು ಕಲಿತಿದ್ದೇವೆ. ಈ ಹಾದಿ ನಮ್ಮ ಮಕ್ಕಳನ್ನು ರಕ್ಷಿಸಿ, ಸರಿಯಾದ ಹಾದಿಯಲ್ಲಿ ಬೆಳೆಸುವುದಕ್ಕೆ ಬಳಕೆ ಆಗಬೇಕು’ ಎಂದು ಅವರು ಹೇಳಿದರು.
ಬಿಲ್ಲವ ಸಮುದಾಯ ಎರಡನೇ ತಲೆಮಾರಿನ ನಾಯಕರನ್ನು ಬೆಳೆಸುವ ಕೆಲಸ ಆರಂಭಿಸಬೇಕು. ಈಡಿಗರು ಮತ್ತು ಬಿಲ್ಲವರಿಗೆ ಪ್ರತ್ಯೇಕವಾದ ನಿಗಮ ಸ್ಥಾಪಿಸಬೇಕೆಂಬ ಬೇಡಿಕೆ ರಾಜ್ಯ ಸರ್ಕಾರದ ಮುಂದಿದೆ. ಜತೆಗೆ 10 ಕೋಟಿ ರೂ ಅನುದಾನ ನೀಡಬೇಕು ಎಂದು ರಾಜ್ಯ ಸರಕಾರವನ್ನು ಈ ಹಿಂದೆಯೇ ಅಗ್ರಹಿಸಿದ್ದೇನೆ. ಕೋಟಿ ಚೆನ್ನಯರ ಗರಡಿ ಮತ್ತಷ್ಟು ಅಭಿವೃದ್ದಿ ಆಗಬೇಕಿದೆ, ಗರಡಿ ಇರುವಂತಹ ಹೆಚ್ಚಿನ ಜಾಗಗಳಿಂದು ವಿವಾದದಲ್ಲಿದೆ ಎಂದರು.ಸಮುದಾಯದ ಜನರು ಸ್ವಾಭಿಮಾನದಿಂದ ತಲೆ ಎತ್ತಿ ನಡೆಯುವಂತಹ ವಾತಾವರಣ ನಿರ್ಮಿಸಲು ಎಲ್ಲರೂ ಒಗ್ಗೂಡಬೇಕು ಎಂದು ಹೇಳಿದರು.
ಬಿಲ್ಲವರು ಜಾತಿವಾದಿಗಳಲ್ಲ: ನವೀನ್‌ಚಂದ್ರ ಡಿ.ಸುವರ್ಣ
ಸಮಾರಂಭ ಉದ್ಘಾಟಿಸಿದ ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್‌ಚಂದ್ರ ಡಿ.ಸುವರ್ಣ ಮಾತನಾಡಿ, ‘ಬಿಲ್ಲವರು ಜಾತಿವಾದಿಗಳು ಎಂಬ ಆರೋಪವನ್ನು ಕೆಲವರು ಮಾಡುತ್ತಿದ್ದಾರೆ. ನಾವು ಸಮುದಾಯದ ಒಳಗಿನವರ ಅಭಿವೃದ್ಧಿಗಾಗಿ ಮಾಡುತ್ತಿರುವ ಕೆಲಸಗಳನ್ನು ಕಂಡು ಹೀಗೆ ಹೇಳಲಾಗುತ್ತಿದೆ. ಮನೆಯಿಂದಲೇ ಸುಧಾರಣೆ ಆರಂಭವಾಗಬೇಕು ಎಂಬ ಮಾತಿನಂತೆ ನಮ್ಮ ಸಮುದಾಯ ಕೆಲಸ ಮಾಡುತ್ತಿದೆ. ಬಿಲ್ಲವರು ಯಾವತ್ತೂ ಜಾತಿವಾದಿಗಳಲ್ಲ’ ಎಂದರು. ಮಂಗಳೂರಿನಲ್ಲಿ 2004 ರಲ್ಲಿ ನಡೆದ ಸಮಾವೇಶದಲ್ಲಿ ಬಿಲ್ಲವ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯಕ್ಕೆ ಇತ್ತಾಯಿಸಲಾಗಿತ್ತು, ಬಿಲ್ಲವ ಮಹಿಳೆಯೊರ್ವರು ಇದೇ ಪ್ರಥಮ ಬಾರಿಗೆ ಸಚಿವೆಯಾಗುವ ಮೂಲಕ ಹಳೆ ಬೇಡಿಕೆ ಸಾಕಾರಗೊಂಡಿದೆ.
ಬಿಲ್ಲವ ಸಮುದಾಯದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕು. ಸಮುದಾಯದ ಮಹಿಳೆಯರಿಗೆ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ಸಿಗಬೇಕು. ಗ್ರಾಮೀಣ ಪ್ರದೇಶದಲ್ಲಿ ಸಮುದಾಯದ ಜನರು ಇನ್ನೂ ಹಿಂದುಳಿದಿದ್ದಾರೆ. ಅವರ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಬೇಕು. ಯಾರನ್ನೂ ದ್ವೇಷಿಸದೇ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ಸಮಾಜದವರು ಒಟ್ಟಾಗಿ ಸಹಬಾಳ್ವೆ ಯಿಂದ ಮುನ್ನಡೆಯಬೇಕಾಗಿದೆ, ಪ್ರೀತಿ, ವಿಶ್ವಾಸದ ನಂಬಿಕೆಯಿಂದ ಈ ಸಹಬಾಳ್ವೆ ಸಕಾರವಾಗಬೇಕು, ಈ ನಿಟ್ಟಿನಲ್ಲಿ ನಮ್ಮ ಸಮುದಾಯದ ಮಕ್ಕಳು ತಪ್ಪು ಮಾಡಿದಾಗ ಅವರನ್ನು ಸರಿದಾರಿಗೆ ಕರೆತರುವ ಕೆಲಸ ಮಾಡಬೇಕು.
ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಯಶವಂತ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್.ಸಾಯಿರಾಮ್, ದಿವಾಕರ್ ಕನ್‌ಸ್ಟ್ರಕ್ಷನ್ಸ್ ಮಾಲೀಕ ದಿವಾಕರ್, ಚಿತ್ರನಟ ಅರವಿಂದ ಬೋಳಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಕಾಟಿಪಳ್ಳ ನಾರಾಯಣರು ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಸಾಧು ಪೂಜಾರಿ ಇವರಿಗೆ 2018 ನೇ ಸಾಲಿನ ಯುವವಾಹಿನಿ ಸಾಧನಾ ಶ್ರೀ ಪ್ರಶಸ್ತಿ , ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ 2018 ನೇ ಸಾಲಿನ ಯುವವಾಹಿನಿ ಸಾಧನಾ ಶ್ರೇಷ್ಠ ಪ್ರಶಸ್ತಿ, ರವಿ ಕಕ್ಯಪದವು, ಸಂಪತ್ ಬಿ.ಸುವರ್ಣ, ಡಾ.ಮುರಳಿಕೃಷ್ಣ ಹಾಗೂ ಗುರುರಾಜ್ ಇವರಿಗೆ 2018 ನೇ ಸಾಲಿನ ಯುವವಾಹಿನಿ ಯುವ ಸಾಧನಾ ಪುರಸ್ಕಾರ ಹಾಗೂ .ಬಿ.ಟಿ.ಮಹೇಶ್ಚಂದ್ರ, ಉಮಾಶ್ರೀಕಾಂತ್ , ಶ್ರೇಯಸ್ ಇವರಿಗೆ
ಇವರಿಗೆ ಯುವವಾಹಿನಿ ಸಾಧಕ ಪುರಸ್ಕಾರ ಪ್ರದಾನ ಮಾಡಲಾಯಿತು.
ಯುವವಾಹಿನಿ ಕೇಂದ್ರ ಸಮಿತಿಯ 2018-19 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜರುಗಿತು.
ಸಂದರ್ಭಕ್ಕೆ ಒಪ್ಪುವಂತಹ ಸಾಹಿತ್ಯದಿಂದ ಕೂಡಿದ ಇಂಪಾದ ಹಾಡುಗಳು ಹಾಗೂ ಶಿಸ್ತು , ಸಮಯ ಪ್ರಜ್ಞೆ , ಹೀಗೆ ಹಲವು ಹೊಸತನದಿಂದ ಕೂಡಿದ ಕಾರ್ಯಕ್ರಮ ಸರ್ವರ ಪ್ರಶಂಸೆಗೆ ಪಾತ್ರವಾಯಿತು.2017-18 ನೇ ಸಾಲಿನಲ್ಲಿ ಸಹಕಾರ ನೀಡಿದ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರು, ನಿರ್ದೇಶಕರು, ಸಂಘಟನಾ ಕಾರ್ಯದರ್ಶಿಗಳು, ಸಂಪಾದಕರು ಹಾಗೂ ಸಂಚಾಲಕರಿಗೆ ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ ಸ್ಮರಣಿಕೆ ನೀಡಿ ಗೌರವಿಸಿದರು
ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ ವಾರ್ಷಿಕ ವರದಿ ಮಂಡಿಸಿದರು, ಸಮಾವೇಶ ನಿರ್ದೇಶಕ ಹರೀಶ್ ಕೆ.ಪೂಜಾರಿ ಸ್ವಾಗತಿಸಿದರು, ಸಮಾವೇಶ ಸಂಚಾಲಕ ನವೀನ್ ಚಂದ್ರ ಧನ್ಯವಾದ ನೀಡಿದರು. ಉಪಾಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು ಹಾಗೂ ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು
ಮರೆಯುವಂತಿಲ್ಲ 31ನೆ ವಾರ್ಷಿಕ ಸಮಾವೇಶದ ಸುಮದುರಕ್ಷಣ
ಬದಲಾಗುತ್ತಿರುವ ಕಾಲ ಘಟ್ಟದಲ್ಲಿ ಹೊಸತನಗಳೊಂದಿಗೆ ಯುವ ಸಮುದಾಯ ಯುವವಾಹಿನಿಯ ಜೊತೆ ಕೈ ಜೋಡಿಸುವ ಪ್ರೇರಣೆಯೊಂದಿಗೆ ಸಮಾವೇಶವು ಸಂಪನ್ನಗೊಂಡಿದೆ.
Program was nice and equalent to Army program.
Time and descipline was managed properly.
Program was nice and was equalent to Army program.
Time and descipline was managed well.
Nice programme
Is it really Yuvavahini ! I wonder it is the same.
Memorable one. I wish in the future also we shall do it.
ಯುವವಾಹಿನಿ ವಾರ್ಷಿಕ ಕಾರ್ಯಕ್ರಮಕ್ಕೆ ಎಲ್ಲಾ ಕಾರ್ಯಕ್ರಮದಂತೆ ಒಂದು ಸಾಮಾನ್ಯ ಕಾರ್ಯಕ್ರಮ ಅಂಥ ನಿರೀಕ್ಷೆ ಇಟ್ಟುಕೊಂಡು ಬಂದು ನೋಡಿದರೆ ಅಲ್ಲಿ ನನಗೆ ಎದುರಾಗಿದ್ದೇ ಎಲ್ಲವೂ ಅನಿರೀಕ್ಷಿತ..
ಒಂದು ಅದ್ಯಕ್ಷ ಮತ್ತು ಕಾರ್ಯದರ್ಶಿಯು ತಮ್ಮ ಸೇವಾವಧಿಯ ಸಮಾಜಮುಖಿ ಕಾರ್ಯಗಳು ಮತ್ತು ದೂರದೃಷ್ಠಿ, ಪರಿಕಲ್ಪನೆಯನ್ನು ಸಮಾಜಕ್ಕೆ ಅತ್ಯಧ್ಭುತವಾಗಿ ತೋರಿಸಿಕೊಡುವಂಥಹ ಕಾರ್ಯಕ್ರಮ ಅದಾಗಿತ್ತು…
ಸಂಘಟಣಾ ಶಿಸ್ತಿನ ಕಾಶಿ ಅದಾಗಿತ್ತು..
ಪರಸ್ಪರ ಸಹೋದರತ್ವದ ಭಾವನೆಗಳು ಅಲ್ಲಿತ್ತು..
ಸಂಘಟನೆಗಾಗಿ ತನ್ನನ್ನು ತಾನು ಅರ್ಪಿಸಿಕೊಳ್ಳುವಂಥಹ ಮನೋಭಾವನೆ ಅಲ್ಲಿ ಶೃಷ್ಠಿಯಾಗುತ್ತಿತ್ತು..
ವೇದಿಕೆಯ ಪರದೆ ಸರಿಯುತ್ತಿದ್ದಂತೇ ನನ್ನ ಹೆಮ್ಮೆಯ ಯುವವಾಹಿನಿ ಕುಟುಂಬದ ಶಿಸ್ತಿನ ಸಿಪಾಯಿಗಳ ದಂಡು ಕಣ್ಣಿಗೆ ಸಾಕ್ಷಿಯಾಗಿತ್ತು..
ಹೊಸತನದಿಂದ ಕೂಡಿದ ಕಾರ್ಯಕ್ರಮ ನಿರೂಪಣೆ ಮನೋಹರವಾಗಿತ್ತು..
ಯುವವಾಹಿನಿ ನಡೆದುಬಂದ ದಾರಿಯ ಒಂದು ಝಲಕ್ ನೋಡಿದ ಸಭಿಕರ ಹರ್ಷೋದ್ಘಾರ ಮುಗಿಲುಮುಟ್ಟಿತ್ತು..
ಬ್ರಹ್ಮ ಶ್ರೀ ನಾರಾಯಣಗುರುಗಳ ಸಂದೇಶ ಮತ್ತು ತತ್ವಾದರ್ಶವನ್ನು ಮೈಗೂಡಿಸಿಕೊಂಡು ಇನ್ನಷ್ಟು ಹೆಚ್ಚು ಹೆಚ್ಚು ಸಮಾಜಕ್ಕೆ ಅರ್ಪಿಸಿಕೊಳ್ಳುವ ತುಡಿತ ನಮ್ಮ ಸದಸ್ಯರುಗಳ ಮುಖದಲ್ಲಿ ಬಾಸವಾಗುತ್ತಿತ್ತು..
ನಾನೊರ್ವ ಒಂದು ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ನನ್ನ ಜವಬ್ದಾಯಿಯ ಬಗ್ಗೆ ನಿಜವಾದ ಅರಿವು ಮೂಡಿದ ಕಾರ್ಯಕ್ರಮ ಅದಾಗಿತ್ತು..
ರಾಜೇಶಣ್ಣನ ಕಲಾನೈಪುಣ್ಯತೆಯನ್ನು ಎತ್ತಿ ತೋರಿಸಿದ ವೇದಿಕೆ ಅದಾಗಿತ್ತು..
ಎಲ್ಲಕ್ಕಿಂಥಲೂ ಹೆಚ್ಚಾಗಿ ನಾನೂ ಕೂಡ ಆ ಸಂಘಟನೆಯ ಓರ್ವ ಸದಸ್ಯ ಎಂಬ ಹೆಮ್ಮೆಯಿಂದ,ಗತ್ತಿನಿಂದ ಬೀಗುತ್ತಿದ್ದ ಕ್ಷಣ ಅಲ್ಲಿ ನನ್ನ ಪಾಲಿಗಿತ್ತು…
ಒಟ್ಟಾರೆಯಾಗಿ ಹೇಳಬೇಕಾದರೆ ಅಂಥಹ ಅಧ್ಭುತ ಕಾರ್ಯಕ್ರಮದ ಮೂಲಕ ಸಮಾಜದ ಎಲ್ಲಾ ಸಂಘಟನೆಗಳಿಗೂ ಕೂಡ ಒಂದು ಪ್ರೇರಣೆ, ಮಾರ್ಗದರ್ಶನವಾಗಿದೆ ಎಂಬುದು ವಾಸ್ತವ ಸತ್ಯದ ಮಾತು ನನ್ನದು..
ಅಭಿನಂದನೆಗಳು ಯಶವಂತ್ ಸರ್ ಮತ್ತು ರಾಜೇಶ್ ಸುವರ್ಣ ಸರ್ ಮತ್ತು ಯುವವಾಹಿನಿ ಕುಟುಂಬ..
Very nice function.