ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು

ಯುವವಾಹಿನಿ ಸಾಧನಾಶ್ರೀ’ ಪ್ರಶಸ್ತಿ-2017 ಪುರಸ್ಕ್ರತ ಶ್ರೀ ಚಂದಯ್ಯ ಬಿ. ಕರ್ಕೇರಾ

ತಾವು ಪಟ್ಟ ಕಷ್ಟ ನಮ್ಮ ಮಕ್ಕಳಿಗೆ ಸಿಗದಿರಲಿ ಎಂದು ಆಶಿಸಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ ಅವರ ಜೀವನಕ್ಕಾಗಿ ಎಲ್ಲವನ್ನೂ ಧಾರೆ ಎರೆಯುವ ಹೆತ್ತವರನ್ನು ಈ ಸಮಾಜದಲ್ಲಿ ಕಂಡಿದ್ದೇವೆ, ಆದರೆ ಬಡತನದ ಬೇಹುದಿಯಲ್ಲಿ ಬೆಳೆಯುತ್ತಾ ಶಿಕ್ಷಣ ಪಡೆಯಲು ಈ ಸಮಾಜದಲ್ಲಿ ತಾನು ಕಂಡುಕೊಂಡ ಕಷ್ಟ ಇನ್ನೊಬ್ಬರಿಗೆ ಬರದಿರಲಿ ಎಂದು ಆಶಿಸಿ ಒಂದೆರಡು ವರುಷವಲ್ಲ ನಿರಂತರವಾದ ಐವತ್ತು ಸಂವತ್ಸರದಿಂದ ಎಲೆಮರೆಯ ಕಾಯಿಯಂತೆಯೇ ಉಳಿದು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಾ ಬಂದ ಅಪರೂಪದ ಸಾಧಕರ ಸಾಲಿನಲ್ಲಿ ಬರುವ ಮೇರು ವ್ಯಕ್ತಿತ್ವದ ವ್ಯಕ್ತಿ ಚಂದಯ್ಯ ಬಿ. ಕರ್ಕೇರಾ ಅವರು.
ಬೇಡುವವನ ತಟ್ಟೆಗೆ ಅನ್ನ ಹಾಕಿದರೆ ಆತನ ಒಂದು ದಿನದ ಹಸಿವನ್ನು ಮಾತ್ರ ನೀಗಬಹುದು ಆದರೆ, ಆತನಿಗೆ ಅನ್ನ ಸಂಪಾದಿಸುವ ಮಾರ್ಗ ಕಲಿಸಿದರೆ ಜೀವನ ಪರ್ಯಂತ ಆತನ ಹಸಿವು ನೀಗ ಬಹುದು ಎನ್ನುವ ದೂರದೃಷ್ಟಿತ್ವ ಹೊಂದಿದವರು ಚಂದಯ್ಯ ಬಿ. ಕರ್ಕೇರಾ ಅವರು.ಇಂದಿನ ಯುವ ಸಮುದಾಯಕ್ಕೆ ಇಲ್ಲವೇ ಜಿಲ್ಲೆಯ ಸಾಕಷ್ಟು ಮಂದಿಗೆ ಚಂದಯ್ಯ ಕರ್ಕೇರಾ ತೀರಾ ಅಪರೂಪದ ವ್ಯಕ್ತಿ ಅನಿಸಬಹುದು, ಹೌದು ಚಂದಯ್ಯ ಬಿ. ಕರ್ಕೇರಾ ಮೂಲತಃ ಮಂಗಳೂರು ತಾಲೂಕು ಸಸಿಹಿತ್ಲು ಗ್ರಾಮದವರಾಗಿದ್ದರೂ ವಿದ್ಯಾಭ್ಯಾಸ ಉದ್ಯೋಗ ಎಲ್ಲಕ್ಕೂ ಆಶ್ರಯಿಸಿಕೊಂಡಿದ್ದು ದೂರದ ಮುಂಬೈಯನ್ನು, ಅಲ್ಲಿದ್ದುಕೊಂಡೇ ಸಾವಿರಾರು ಮಂದಿಯ ಬಾಳಿನಲ್ಲಿ ಆಶಾಕಿರಣದ ಜ್ಯೋತಿಯನ್ನು ಹಚ್ಚಿದವರು.

1942ನೇ ಇಸವಿಯ ಜನವರಿ 1ರಂದು ಮುತ್ತು ಹೆಂಗ್ಸು ಮತ್ತು ಬಾಡ ಪೂಜಾರಿ ಇವರ ಸುಪುತ್ರನಾಗಿ ಜನಿಸಿದ ಚಂದಯ್ಯ ಬಿ. ಕರ್ಕೇರಾ ಅವರು ಪ್ರಾಥಮಿಕ ಶಿಕ್ಷಣವನ್ನು ಊರಿನಲ್ಲಿಯೇ ಪಡೆದುಕೊಂಡವರು, ಕಲಿಯುವ ಹಂಬಲ ಇನ್ನೂ ಇದ್ದರೂ ಕಲಿಸುವ ಕೈಗಳು ಶಕ್ತಿ ಕುಂದುತ್ತಿದ್ದ ಕಾರಣದಿಂದ ಕಲಿಯಬೇಕು ಸಾಧಿಸಬೇಕು ಎನ್ನುವ ಉತ್ಕ್ರಷ್ಟ ಆಸೆಯಲ್ಲಿ ಸೇರಿಕೊಂಡಿದ್ದು ಮುಂಬೈ ಎನ್ನುವ ಮಹಾನ್ ಮಾಯಾ ನಗರಿಯನ್ನು. ಕೆಲಸ ಮತ್ತು ರಾತ್ರಿ ಶಾಲೆಯ ಕಲಿಕೆಯ ಜೊತೆಗೆ ಮ್ಯಾನೇಜ್‍ಮೆಂಟ್‍ನಲ್ಲಿ ಡಿಪ್ಲೋಮಾ ಪದವಿಯನ್ನು ಪಡೆದುಕೊಂಡರು. ಅಲ್ಲಿಂದ ಮುಂದೆ ರಾಸಾಯನಿಕ ಉತ್ಪನ್ನ ಕಂಪೆನಿಯಲ್ಲಿ ಅಡ್ಮಿನ್ ಮ್ಯಾನೇಜರ್ ಆಗಿ ಸೇರಿಕೊಂಡ ಇವರು ನಿರಂತರವಾದ 15 ವರುಷಗಳ ಸೇವೆ ಸಲ್ಲಿಸಿದರು. ಸೇವೆಯ ಅವಧಿಯಲ್ಲಿ ಪ್ರತಿಯೊಂದು ದಿನವನ್ನೂ ಸಮಾಜದಲ್ಲಿ ತನ್ನಂತೆ ಕಲಿಯಲು ಕಷ್ಟ ಪಡುವವರ ಬಗ್ಗೆ ಯೋಚಿಸುತ್ತಾ ತನ್ನಂತಹ ಸ್ಥಿತಿ ಮತ್ತೊಬ್ಬರಿಗೆ ಬರದಿರಲೆಂದು ಇದಕ್ಕಾಗಿ ಕೆಲಸ ಮಾಡಲು ಆರಂಭಿಸಿದರು. ತನ್ನ ಕೆಲಸ ಮೊದಲಾಗಿ ತನ್ನ ಗ್ರಾಮದಿಂದಲೇ ಆರಂಭವಾಗಲೆಂದು ಯೋಚಿಸಿ ಇದಕ್ಕಾಗಿ ಸಂಘಟನೆಯ ಅಗತ್ಯತೆ ಅರಿತುಕೊಂಡರು. ದೇವರ ಭಯವೇ ಜ್ಞಾನದ ಆರಂಭ, ದೇವರ ಹೆಸರಿನಲ್ಲಿ ಸಂಘಟಿಸಿ ಆ ಮೂಲಕ ವಿದ್ಯೆಯ ಮಹತ್ವ ಸಾರೋಣ ಎಂದುಕೊಂಡು 1978ರಲ್ಲಿ ಹಿರಿಯರ ಜೊತೆ ಸೇರಿಕೊಂಡು ಸಸಿಹಿತ್ಲು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಸ್ಥಾಪಿಸಿದರು. (ಸಸಿಹಿತ್ಲು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘಕ್ಕೆ ಈ ಬಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ) ಆ ಮೂಲಕ ಮಕ್ಕಳ ಶಿಕ್ಷಣಕ್ಕಾಗಿ ಆರ್ಥಿಕ ನೆರವು ಒದಗಿಸುತ್ತಾ ಬಂದರು. ಹಂತಹಂತದಲ್ಲಿ ಮಂದಿರವನ್ನು ಬೆಳಗಿಸಿದಂತೆ ತಮ್ಮ ವೈಯಕ್ತಿಕ ಬದುಕಲ್ಲೂ ಅಭಿವೃದ್ಧಿ ಕಂಡುಕೊಂಡು ಕೆಲಸಕ್ಕೆ ರಾಜೀನಾಮೆ ನೀಡಿ ತಮ್ಮದೇ ಆದ ಸ್ವಂತ ಉದ್ದಿಮೆ ಆರಂಭಿಸಿದರು. ಬಟ್ಟೆಗಳಿಗೆ ಬಳಸುವ ಬಣ್ಣವನ್ನು ಉತ್ಪಾದಿಸುವ ಕಂಪೆನಿ ಆರಂಭಿಸಿದರು. ಮಹಾರಾಷ್ಟ್ರದ ತಾರಾಪುರದಲ್ಲಿ ಶ್ರೀ ಚಕ್ರ ಆರ್ಗನಿಕ್ ಪ್ರೈ.ಲಿ ಮತ್ತು ಗುಜರಾತ್‍ನ ಅಂಕ್ಲೇಶ್ವರದಲ್ಲಿ ಆಸ್ತಿಕ್ ಡೈಸ್ಟಫ್ಸ್ ಪ್ರೈ.ಲಿ ಎಂಬ ಕಂಪೆನಿ ಆರಂಭಿಸಿದರು.

ಅಲ್ಲಿಂದ ಮುಂದೆಂದೂ ಅವರು ಹಿಂದೆ ನೋಡಿದವರೇ ಅಲ್ಲ ಪ್ರತಿ ವರುಷ ಸಸಿಹಿತ್ಲು ಗ್ರಾಮದಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಸಸಿಹಿತ್ಲು ನಾರಾಯಣಗುರು ಸೇವಾ ಸಂಘದ ಮೂಲಕ ವಿದ್ಯಾರ್ಥಿ ವೇತನ ನೀಡಲು ಆರಂಭಿಸಿದರು. ಕಲಿಯಲು ಸಾಧ್ಯವೇ ಇಲ್ಲ ಎನ್ನುವ ವಿದ್ಯಾರ್ಥಿಗಳನ್ನು ದತ್ತು ಪಡೆದು ಶಿಕ್ಷಣ ನೀಡಿದರು. ಮಾರಕರೋಗಕ್ಕೆ ತುತ್ತಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಹಲವಾರು ಮಂದಿಯ ವೈದ್ಯಕೀಯ ವೆಚ್ಚಕ್ಕೆ ಧನ ಸಹಾಯ ನೀಡಿದರು. 2005ರಲಿ ್ಲತನ್ನ ಮುತುವರ್ಜಿಯಲ್ಲಿ ಮತ್ತು ತಾನೇ ಅಧಿಕ ಹಣ ಭರಿಸಿ ನಾರಾಯಣಗುರು ಮಂದಿರ ನಿರ್ಮಾಣ ಮಾಡಿದರಲ್ಲದೆ, ಬಡ ಕುಟುಂಬದ ಹೆಣ್ಣು ಮಕ್ಕಳ ಮದುವೆಗೆ ಕಷ್ಟ ಪಡುತ್ತಿರುವವರ ಕಂಡುಕೊಂಡು ಅಂತಹ ಕುಟುಂಬಗಳಿಗೆ ನೆರವಾಗಲಿ ಎನ್ನುವ ಕಾರಣಕ್ಕೆ 2015ರಲ್ಲಿ ಸಸಿಹಿತ್ಲು ನಾರಾಯಣಗುರು ಸಂಘದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಿ ಇದಕ್ಕಾಗಿ ಐದು ಲಕ್ಷ ಕೊಡುಗೆ ನೀಡಿದರು. ಮನೆಯೇ ಇಲ್ಲದ ಮಡಲಿನ ಶೆಡ್‍ನಲ್ಲಿ ಬದುಕುತ್ತಿದ್ದ ಕುಟುಂಬಕ್ಕೆ ಗೃಹ ನಿರ್ಮಾಣಕ್ಕೆ ತಾನೇ ಮೊದಲಾಗಿ 50 ಸಾವಿರ ಹಾಕಿ ಉಳಿದಂತೆ ದಾನಿಗಳನ್ನು ಸಂಪರ್ಕಿಸಿ 4.50 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಮನೆ ನಿರ್ಮಾಣ, ಇನ್ನೆರಡು ಮನೆ ನಿರ್ಮಾಣದ ಸಿದ್ಧತೆ, ಬೀಡಿ ಉದ್ಯಮ ನಶಿಸಲು ಆರಂಭವಾದಾಗ ತಾನೇ ಹೊಲಿಗೆ ಯಂತ್ರ ಖರೀದಿಸಲು ಸಹಾಯ ಮಾಡಿ ನಾರಾಯಣ ಗುರು ಸಂಘದಲ್ಲಿ ಹೊಲಿಗೆ ತರಬೇತಿ ಕೇಂದ್ರ ಆರಂಭಿಸಿದ್ದರು. ತಾನು ನೇರವಾಗಿ ಆರ್ಥಿಕ ನೆರವು ನೀಡಿ ಸಾಮಾಜಿಕ ಕೆಲಸ ನಡೆಸಿದರೆ ಎಲ್ಲಿ ತನ್ನ ಹೆಸರಿಗೆ ಪ್ರಚಾರ ಬರುತ್ತದೋ ಎಂದು ಅಂಜಿ ತನ್ನ ಎಲ್ಲಾ ಸೇವೆಯನ್ನೂ ನಾರಾಯಣಗುರು ಸಂಘದ ಹೆಸರಿನಲ್ಲಿ ನಡೆಸುತ್ತಾ ಬರುತ್ತಿದ್ದಾರೆ, ಸರಕಾರಿ ಶಾಲಾ ಮಕ್ಕಳಿಗೆ ಬ್ಯಾಗ್, ಕೊಡೆ, ಸಮವಸ್ತ್ರ, ಉಚಿತ ಟ್ಯೂಷನ್ ತರಗತಿ, ಉದ್ಯೋಗ ಬಯಸುವವರಿಗೆ ತನ್ನದೇ ಸಂಸ್ಥೆಯಲ್ಲಿ ಉದ್ಯೋಗ ಒದಗಿಸಿ, ಇಷ್ಟೇ ಅಲ್ಲದೆ ಮುಂಬೈ ಬಿಲ್ಲವರ ಅಸೋಸಿಯೇಶನ್ ಮೂಲಕವೂ ಸಾಮಾಜಿಕ ಕೆಲಸ ನಡೆಸುತ್ತಿರುವ ಇವರ ಕೆಲಸ ಕಾರ್ಯಗಳನ್ನು ಪಟ್ಟಿ ಮಾಡುತ್ತಾ ಹೋದರೆ ಅದು ಬೆಳೆಯುತ್ತಾ ಹೋದಿತು. ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಇದರ ಉಪಾಧ್ಯಕ್ಷರಾಗಿಯೂ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ (ರಿ) ಅಗ್ಗಿದಕಳಿಯ ಸಸಿಹಿತ್ಲು ಇದರ ಗೌರವಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿರುವ ಇವರು ನೇಪಥ್ಯದಲ್ಲಿಯೇ ಇದ್ದು ಸಾಧಕರೆನಿಸಿದವರು. ಇವರ ಸಾಧನೆ ಗುರುತಿಸಿ ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ (ರಿ) ಉಪ್ಪಿನಂಗಡಿ ಘಟಕದ ಆತಿಥ್ಯದಲ್ಲಿ ದಿನಾಂಕ 06.08.2017 ರಂದು ಉಪ್ಪಿನಂಗಡಿಯ ಎಚ್ ಎಮ್.ಆಡಿಟೋರಿಯಂ ಇಲ್ಲಿ ಜರುಗಿದ  ಯುವವಾಹಿನಿ 30ನೇ ವಾರ್ಷಿಕ ಸಮಾವೇಶದಲ್ಲಿ  “ಯುವವಾಹಿನಿ ಸಾಧನ ಶ್ರೀ ಪ್ರಶಸ್ತಿ” ನೀಡಿ ಗೌರವಿಸಲು ಸಂತೋಷ ಪಡುತ್ತಿದೆ.

ಈ ಸಂದರ್ಭದಲ್ಲಿ ಕರ್ನಾಟಕ ಸರಕಾರದ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಶ್ರೀ ಕೆ.ವಸಂತ ಬಂಗೇರ, ಐ ಎಪ್ ಎಸ್ ಅಧಿಕಾರಿ ಶ್ರೀ ದಾಮೋದರ ಎ.ಟಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಶಯನಾ ಜಯಾನಂದ ,ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರಾದ ಶ್ರೀ ಜಯಂತ ನಡುಬೈಲು, ಕಾಸರಗೋಡು ಸರಕಾರಿ ಕಾಲೇಜು ಸಹ ಪ್ರಾಧ್ಯಾಪಕರಾದ ಡಾ.ರಾಜೇಶ್ ಬೆಜ್ಜಂಗಳ,ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಮರೋಳಿ, ಸಮಾವೇಶ ನಿರ್ದೇಶಕರಾದ ಡಾ.ಸದಾನಂದ ಕುಂದರ್, ಕಾರ್ಯದರ್ಶಿ ನಿತೇಶ್ ಜೆ.ಕರ್ಕೇರಾ ಸ್ವಾಗತ ಸಮಿತಿಯ ಅಧ್ಯಕ್ಷರಾದ ಡಾ.ರಾಜಾರಾಮ್, ಯುವವಾಹಿನಿ ಉಪ್ಪಿನಂಗಡಿ ಘಟಕದ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!