ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು

ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ (ರಿ.) 2016-17ನೇ ಸಾಲಿನ ವಾರ್ಷಿಕ ವರದಿ

ಪ್ರೇಮನಾಥ್ ಕೆ. ಬಂಟ್ವಾಳ; ಪ್ರಧಾನ ಕಾರ್ಯದರ್ಶಿ,ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ (ರಿ.)

ಬಂಧುಗಳೇ,
ಯುವವಾಹಿನಿಯ ಮೂರು ಮುಖ್ಯ ಧ್ಯೇಯಗಳಲ್ಲಿ ಒಂದಾದ “ವಿದ್ಯೆ”ಗೆ ಪೂರಕವಾಗಿ ಸ್ಥಾಪಿಸಲ್ಪಟ್ಟು ಕಾರ್ಯಚರಿಸುತ್ತಿರುವ ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ (ರಿ.), ಯುವವಾಹಿನಿ ಕೇಂದ್ರ ಸಮಿತಿಯ ಮಹತ್ವಾಕಾಂಕ್ಷೆಯ ಒಂದು ಯೋಜನೆ. ನಮ್ಮ ಸಮಾಜದ ವಿದ್ಯಾರ್ಥಿಗಳು ಆರ್ಥಿಕ ಕೊರತೆಯಿಂದಲೋ, ಮಾಹಿತಿಯ ಅಭಾವದಿಂದಲೋ ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಪೋಷಿಸುವ ಕೆಲಸವನ್ನು ಯುವವಾಹಿನಿ ಕಳೆದ ಹಲವು ವರ್ಷಗಳಿಂದ ನಿರ್ವಹಿಸುತ್ತಾ ಬಂದಿದೆ. ಪದವಿ, ಸ್ನಾತಕೋತ್ತರ ಪದವಿ, ವಿವಿಧ ವೃತ್ತಿಪರ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ನಮ್ಮ ವಿದ್ಯಾನಿಧಿಯಿಂದ ಆರ್ಥಿಕ ಧನಸಹಾಯ ಪಡೆದು ತಮ್ಮ ವಿದ್ಯಾರ್ಜನೆಯನ್ನು ಮುಂದುವರೆಸುತ್ತಿದ್ದಾರೆಂದು ತಿಳಿಸಲು ಸಂತೋಷಪಡುತ್ತೇವೆ.  ಸಮಾಜದ ಹಿತಚಿಂತಕರ, ಕೊಡುಗೈ ದಾನಿಗಳ ಸಹಕಾರದಿಂದ ಈ ಕೆಲಸ ಹಲವಾರು ವರ್ಷದಿಂದ ನಿರಂತರವಾಗಿ ನಡೆಯುತ್ತಿದೆ. ಹಾಗೆಯೇ ವಿದ್ಯಾರ್ಥಿಗಳಿಗೆ ವಿವಿಧ ಮೂಲಗಳಿಂದ ಲಭ್ಯವಾಗುವ ಆರ್ಥಿಕ ಸಹಾಯದ ಬಗ್ಗೆ ಮಾಹಿತಿಯನ್ನು ನೀಡುತ್ತಾ ಬಂದಿರುತ್ತದೆ. ಪೋಷಕರಿಗೆ ಮಾಹಿತಿ ಶಿಬಿರ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಶಿಬಿರಗಳನ್ನು ಕಾಲಕಾಲಕ್ಕೆ ನಡೆಸುತ್ತಾ ಬಂದಿರುತ್ತೇವೆ.  ಕಲಿಯಲು ಆಸಕ್ತಿ ಇದ್ದು ಶಿಕ್ಷಣ ವಂಚಿತರಾದ ಮಕ್ಕಳಿಗೆಲ್ಲಾ ವಿದ್ಯಾರ್ಥಿ ವೇತನ ಸೌಲಭ್ಯ ನೀಡಲಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ವಂಚಿತರಾದ ಮಕ್ಕಳ ಸಮೀಕ್ಷೆಯನ್ನು ನಡೆಸಿ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಾ ಬಂದಿದ್ದೇವೆ. ಈ ದಿಸೆಯಲ್ಲಿ ವಿದ್ಯಾನಿಧಿ ಟ್ರಸ್ಟ್ ಅರ್ಥಪೂರ್ಣ ಕೆಲಸವನ್ನು ನಿರ್ವಹಿಸುತ್ತಿದೆ.

ಯುವವಾಹಿನಿಯು ಪ್ರತಿವರ್ಷವೂ ಅರ್ಹ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಶಿಕ್ಷಣಕ್ಕೆ ನೆರವು ನೀಡುವುದು ಅಲ್ಲದೆ ಮಾನವ ವ್ಯಕ್ತಿತ್ವ ರೂಪುಗೊಳಿಸುವಿಕೆಯ ಬಗ್ಗೆ ಪ್ರೇರಣಾ ಶಿಬಿರ, ಪರೀಕ್ಷಾ ಪೂರ್ವ ತರಬೇತಿ ಶಿಬಿರ, ಮಕ್ಕಳ ಬೇಸಿಗೆ ಶಿಬಿರಗಳಂತ ಶಿಬಿರಗಳು, ಕೇಂದ್ರ ಸಮಿತಿ ಅಲ್ಲದೆ ಹೆಚ್ಚಿನ ಎಲ್ಲಾ ಘಟಕಗಳು ನಡೆಸುತ್ತಾ ಬಂದಿರುತ್ತವೆ. ಈ ಸಾಲಿನ ‘ಪ್ರೇರಣಾ-2017’ ದಿನಾಂಕ 08.01.2017 ನೇ ರವಿವಾರ ಬೆಳಿಗ್ಗೆ 9.30 ರಿಂದ ಅಪರಾಹ್ನ ಗಂಟೆ 1.30 ರ ವರೆಗೆ ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಗಾಂಧೀನಗರ ಮಂಗಳೂರು ಇಲ್ಲಿ ನಡೆಯಿತು. ಕಾರ್ಯಾಗಾರದ ಉದ್ಘಾಟನೆಯನ್ನು ಉರ್ವ ಅಶೋಕನಗರ ಬಿಲ್ಲವ ಸಂಘದ ಅಧ್ಯಕ್ಷರಾದ ಡಾ|| ಬಿ.ಜಿ ಸುವರ್ಣರವರು ನೆರವೇರಿಸಿದರು. ಅತಿಥಿಗಳಾಗಿ ಟ್ರಸ್ಟಿಗಳಾದ ಶ್ರೀ ಶೇಖರ ಪೂಜಾರಿ, ಶ್ರೀ ಸೂರ್ಯಪ್ರಕಾಶ್, ಶ್ರೀ ಜಯಂತ್ ನಡುಬೈಲು, ಶ್ರೀ ಸಂಜೀವ ಪೂಜಾರಿ ಇವರುಗಳು ಭಾಗವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ ಆತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ, ಡಾ. ಬಿ. ಗಂಗಾಧರ್ ಪ್ರಾಂಶುಪಾಲರು, ಶ್ರೀಗೋಕರ್ಣನಾಥೇಶ್ವರ ಕಾಲೇಜು ಮಂಗಳೂರು, ಶ್ರೀ ಬಿ. ತಮ್ಮಯ್ಯ, ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಗೌರವ ಪ್ರಧಾನ ಕಾರ್ಯದರ್ಶಿ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಶ್ರೀ ಪದ್ಮನಾಭ ಮರೋಳಿಯವರು ವಹಿಸಿದ್ದರು.

ಶೈಕ್ಷಣಿಕ ಕಾರ್ಯಾಗಾರ, ವ್ಯಕ್ತಿತ್ವ ವಿಕಸನ ಮತ್ತು ವೃತ್ತಿ ಮಾರ್ಗದರ್ಶನವನ್ನು ಸಂಪನ್ಮೂಲ ವ್ಯಕ್ತಿಯಾದ ಹಿರಿಯ ತರಬೇತುದಾರ ಶ್ರೀ ಅಭಿಜೀತ್ ಕರ್ಕೇರರು ಪ್ರೊಜೆಕ್ಟರ್ ಮೂಲಕ ಬಹಳ ಒಳ್ಳೆಯ ರೀತಿಯಲ್ಲಿ ನಡೆಸಿಕೊಟ್ಟರು. “ಯುವಜನತೆ ಮತ್ತು ಪೋಷಕರು” ಈ ಕಾರ್ಯಾಗಾರವನ್ನು ರಾಷ್ಟ್ರೀಯ ಜೆಸೀ ತರಬೇತುದಾರರಾದ ಶ್ರೀ ಬಿ. ರಾಮಚಂದ್ರರಾವ್ ರವರು ನಡೆಸಿಕೊಟ್ಟರು. ಆಡಳಿತ ಟ್ರಸ್ಟಿಗಳಾದ ಸಂತೋಷ್ ಕುಮಾರ್, ತರಬೇತಿ ಮತ್ತು ಅಭಿವೃದ್ಧಿ ಹಾಗೂ ಟ್ರಸ್ಟಿ ಶ್ರೀ ತಾರನಾಥ ಎಚ್.ಬಿ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪ್ರಸಕ್ತ ಸಾಲಿನಲ್ಲಿ 10 ಮಾಸಿಕ ಸಭೆ ಹಾಗೂ 2 ವಿಶೇಷ ಸಭೆ ನಡೆಸಲಾಗಿದೆ. ಟ್ರಸ್ಟ್ ಕಾರ್ಯವು ಸುಗಮವಾಗಲು ಸಮಿತಿಯನ್ನು ರಚಿಸಲಾಯಿತು. ಟ್ರಸ್ಟ್ ಅಧ್ಯಕ್ಷರಾಗಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಮರೋಳಿ, ಮ್ಯಾನೇಜಿಂಗ್ ಟ್ರಸ್ಟಿಯಾಗಿ ನಿಕಟಪೂರ್ವ ಅಧ್ಯಕ್ಷರಾದ ಸಂತೋಷ್ ಕುಮಾರ್, ಕಾರ್ಯದರ್ಶಿಯಾಗಿ ಮಾಜಿ ಅಧ್ಯಕ್ಷರಾದ ಪ್ರೇಮ್‍ನಾಥ್ ಕೆ., ಕೋಶಾಧಿಕಾರಿಯಾಗಿ ರಾಜೀವ ಪೂಜಾರಿ ಕೆ. ಇವರುಗಳು ಕಾರ್ಯನಿರ್ವಹಿಸುತ್ತಿದ್ದಾರೆ.  ಇತರ ಟ್ರಸ್ಟಿಗಳಾಗಿ * ಸ್ಟೂಡೆಂಟ್ ವೆಲ್‍ಫೇರ್ ಟ್ರಸ್ಟಿ ಶ್ರೀ ಸುಜೀತ್ ರಾಜ್ ಐ. ಸುರತ್ಕಲ್ * ತರಬೇತಿ ಮತ್ತು ಅಭಿವೃದ್ಧಿ ಪರಿಶೀಲನಾ ಟ್ರಸ್ಟಿ ಶ್ರೀ ತಾರನಾಥ ಎಚ್.ಬಿ, ಹೆಜಮಾಡಿ ವಿದ್ಯಾರ್ಥಿಗಳ ದತ್ತು ಸ್ವೀಕಾರ ಟ್ರಸ್ಟಿ ಶ್ರೀ ಅಶೋಕ್ ಕುಮಾರ್ ಇಂಜಿನಿಯರ್, ಮಂಗಳೂರು , ಹಾಸ್ಟೆಲ್ ಮತ್ತು ಶಿಕ್ಷಣ ಸಂಸ್ಥೆ ಟ್ರಸ್ಟಿ ಶ್ರೀ ಜಿ. ಪರಮೇಶ್ವರ ಪೂಜಾರಿ, ಮಂಗಳೂರು , ಕಾರ್ಯಕ್ರಮ ಮತ್ತು ಆರ್ಥಿಕ ಸಾರ್ವಜನಿಕ ಸಂಪರ್ಕ ಟ್ರಸ್ಟಿ ಶ್ರೀ ಅಶೋಕ್ ಕುಮಾರ್, ಮಂಗಳೂರು ಇವರನ್ನು ಮೂರು ವರ್ಷಗಳ ಅವಧಿಗೆ ಕೆಲಸ ಮಾಡಲು ಅನುಕೂಲವಾಗುವಂತೆ ಆಯ್ಕೆ ಮಾಡಲಾಗಿದೆ.  ಕೇಂದ್ರ ಸಮಿತಿಯ ಖಾತೆಯಿಂದ ವಿದ್ಯಾನಿಧಿ ಟ್ರಸ್ಟ್ ಖಾತೆಗೆ ರೂ. 25,000/- ವರ್ಗಾಯಿಸಲಾಗಿದೆ. ಟ್ರಸ್ಟಿನ ಬ್ಯಾಂಕ್ ಖಾತೆಯನ್ನು ಭಾರತ್ ಕೊ. ಅಪರೇಟಿವ್ ಬ್ಯಾಂಕ್ ಸುರತ್ಕಲ್‍ನಲ್ಲಿ ತೆರೆಯಲಾಗಿದೆ. ಹಾಗೂ ಚಂದ್ರಶೇಖರ (ಎಂ.ಸಿ.ಎಫ್.)ರವರನ್ನು ಗೌರವ ಟ್ರಸ್ಟಿಯಾಗಿ ಸೇರ್ಪಡೆಗೊಳಿಸಲಾಯಿತು. ಟ್ರಸ್ಟ್ ವತಿಯಿಂದ ಈ ಸಾಲಿನಲ್ಲಿ 14 ವಿದ್ಯಾರ್ಥಿಗಳನ್ನು ದತ್ತು ಪಡೆಯುವುದೆಂದು ನಿರ್ಣಯಿಸಲಾಗಿದೆ. ಹಾಗೆಯೇ 12 ವಿದ್ಯಾರ್ಥಿಗಳನ್ನು ದತ್ತು ಪಡೆಯಲಾಗಿದೆ. ಉಳಿದ 2 ವಿದ್ಯಾರ್ಥಿಗಳನ್ನು ಜುಲೈಯಲ್ಲಿ ದತ್ತು ಪಡೆಯುವುದೆಂದು ನಿರ್ಣಯಿಸಲಾಗಿದೆ. ಕೇಂದ್ರ ಸಮಿತಿ ವಿದ್ಯಾನಿಧಿಯಿಂದ 63 ವಿದ್ಯಾರ್ಥಿಗಳಿಗೆ ರೂ. 2,00,000/- ವಿದ್ಯಾರ್ಥಿ ವೇತನ 31.07.016ರಂದು “ಶ್ರೀ ಗೋಕರ್ಣನಾಥೇಶ್ವರ ಕಾಲೇಜಿ”ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಲಾಗಿದೆ.  ವಿದ್ಯಾರ್ಥಿ ವೇತನವನ್ನು ನಮ್ಮ ಹೆಚ್ಚಿನ ಘಟಕಗಳು ವಿತರಿಸಿವೆ. ಬೆಳ್ತಂಗಡಿ ಘಟಕ 25 ವಿದ್ಯಾರ್ಥಿಗಳಿಗೆ ತಲಾ ರೂ. 1,000/-ದಂತೆ ವಿದ್ಯಾರ್ಥಿ ವೇತನವನ್ನು ನೀಡಿದೆ. ಒಂದು ವಿದ್ಯಾರ್ಥಿಯನ್ನು ದತ್ತು ಪಡೆದು ರೂ. 10,000/-ರ ವೆಚ್ಚದ ಪೂರ್ಣ ಖರ್ಚನ್ನು ಭರಿಸಿದೆ. ಹೆರಾಜೆ ಫ್ಯಾಮಿಲಿ ಟ್ರಸ್ಟ್ ಮತ್ತು ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ವೃತ್ತಿ ಮಾರ್ಗದರ್ಶನ ಶಿಬಿರ ಹಾಗೂ ರೂ. 20,000/- ಮೌಲ್ಯದ ಪುಸ್ತಕ ವಿತರಿಸಲಾಗಿದೆ. ಬೆಳ್ತಂಗಡಿ ತಿಮ್ಮನಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾಗೂ ಬೆಳಾಲು ಅನಂತೇಶ್ವರ ಮಂದಿರದ ವತಿಯಿಂದ ಸ್ವಜಾತಿ ಬಾಂಧವರಿಗೆ ಸುಮಾರು ರೂ. 30,000/-ದ ಪುಸ್ತಕ ವಿತರಿಸಲಾಯಿತು. ಮೂಡುಕೋಡಿ ಯುವವಾಹಿನಿ ಸಂಚಾಲನ ಸಮಿತಿಯಿಂದ ಸುಮಾರು ರೂ. 34,000/- ವಿದ್ಯಾರ್ಥಿ ವೇತನವನ್ನು ವಿತರಿಸಲಾಗಿದೆ. ಉಡುಪಿ ಘಟಕ ವತಿಯಿಂದ ಸುಮಾರು 19 ವಿದ್ಯಾರ್ಥಿಗಳಿಗೆ 65 ಸಾವಿರ ನಿಧಿಯನ್ನು ವಿತರಿಸಲಾಗಿದೆ. ಮತ್ತು ಕೇಂದ್ರ ಸಮಿತಿಯ ಮಾರ್ಗದರ್ಶನದಲ್ಲಿ ಎರಡು ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ದತ್ತು ಪಡೆಯುವುದೆಂದು ನಿರ್ಧರಿಸಲಾಗಿದೆ. ಹಾಗೂ ವಿದ್ಯಾನಿಧಿ ಟ್ರಸ್ಟಿಗೆ 25 ಸಾವಿರ ದೇಣಿಗೆಯನ್ನು ನೀಡಿದ್ದಾರೆ. ಬಂಟ್ವಾಳ ಘಟಕದ ವತಿಯಿಂದ ‘ಅನ್ವೇಷಣಾ-2016’ ಎಂಬ ಕಾರ್ಯಕ್ರಮವನ್ನು ಬಿಲ್ಲವ ಸಮಾಜದ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ದಿನಾಂಕ 25-12-2016ನೇ ರವಿವಾರ “ಬ್ರಹ್ಮಶ್ರೀ ನಾರಾಯಣಗುರು ಸಭಾಭವನ” ಗಾಣದಪಡ್ಪು ಬಿ.ಸಿ.ರೋಡ್ ಇಲ್ಲಿ ಶೈಕ್ಷಣಿಕ, ವೃತ್ತಿ ಮಾರ್ಗದರ್ಶನ ಹಾಗೂ ಪುನರ್ಮನನ ಕಾರ್ಯಗಾರದೊಂದಿಗೆ ಬಹಳ ಯಶಸ್ವಿಯಾಗಿ ನಡೆಸಲಾಗಿದೆ. ಈ ಶಿಬಿರದಲ್ಲಿ 372 ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಹಳೆಯಂಗಡಿ ಘಟಕದಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಗಿದೆ. ಯೆಡ್ತಾಡಿ ಘಟಕದಿಂದ ವಿದ್ಯಾರ್ಥಿಗಳಿಗಾಗಿ 5 ದಿನದ ಬೇಸಿಗೆ ಶಿಬಿರ ನಡೆಸಿದೆ. ಉಪ್ಪಿನಂಗಡಿ ಘಟಕದಿಂದ ವಿದ್ಯಾರ್ಥಿ ವೇತನ ಹಾಗೂ ಪುಸ್ತಕ ವಿತರಣೆ ನಡೆಸಿದೆ. ಕಂಕನಾಡಿ ಘಟಕದಿಂದ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಗಿದೆ. ಮುಲ್ಕಿ ಘಟಕದಿಂದ ಪ್ರತಿಭಾ ಪುರಸ್ಕಾರ ಮತ್ತು ರೂ. 1,02,000/- ವಿದ್ಯಾರ್ಥಿ ವೇತನ ವಿತರಿಸಲಾಗಿದೆ, ಹಾಗೂ ವಿದ್ಯಾರ್ಥಿಗಳಿಗೆ ಪರೀಕ್ಷಾಪೂರ್ವ ತರಬೇತಿ, ವ್ಯಕ್ತಿತ್ವ ವಿಕಾಸನ ತರಭೇತಿ ನೀಡಲಾಗಿದೆ. ಮಂಗಳೂರು ಘಟಕದಿಂದ 10 ವಿದ್ಯಾರ್ಥಿಗಳನ್ನು ದತ್ತು ಪಡೆದು ಅವರ ಪೂರ್ಣ ಖರ್ಚು ರೂ. 1,18,500/-ನ್ನು ಭರಿಸಲಾಗಿದೆ. ಹಾಗೂ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ ದಿನಾಂಕ 23.04.2017 ರಂದು ನಡೆಸಲಾಗಿದೆ. ಸಂಪನ್ಮೂಲ ವ್ಯಕ್ತಿಯಾಗಿ ಡಾ| ರಾಜೇಂದ್ರ ಭಟ್ ಜೇಸಿ ತರಬೇತಿದಾರರು ಆಗಮಿಸಿದ್ದರು. ಬಜ್ಪೆ ಘಟಕದಿಂದ ವಿದ್ಯಾರ್ಥಿ ವೇತನ ವಿತರಿಸಲಾಗಿದೆ. ಪಣಂಬೂರು ಘಟಕದಿಂದ ಸುಮಾರು ರೂ. 15,000/- ವಿದ್ಯಾರ್ಥಿ ವೇತನ ವಿತರಿಸಲಾಗಿದೆ. ಪುತ್ತೂರು ಘಟಕದ ವತಿಯಿಂದ ಅಪಘಾತಕ್ಕೆ ಒಳಗಾದ ವಿದ್ಯಾರ್ಥಿಗೆ ರೂ. 5,000/- ಸಹಾಯಧನ ವಿತರಿಸಲಾಗಿದೆ. ಅರ್ಹವಿದ್ಯಾರ್ಥಿಗೆ ರೂ. 2,000/- ಮೊತ್ತವನ್ನು ವಿತರಿಸಿದ್ದಾರೆ. ಸುಳ್ಯದ ಘಟಕದ ವತಿಯಿಂದ 2 ವಿದ್ಯಾರ್ಥಿಗಳಿಗೆ ರೂ. 2,000/- ವಿದ್ಯಾರ್ಥಿ ವೇತನ ನೀಡಲಾಗಿದೆ.

ಕಳೆದ ಇಪ್ಪತ್ತ ನಾಲ್ಕು ವರ್ಷಗಳಿಂದ ವಿತರಿಸಲಾದ ವಿದ್ಯಾರ್ಥಿ ವೇತನದ ವಿವರ ಈ ರೀತಿ ಇದೆ.
ವರ್ಷ ವಿದ್ಯಾರ್ಥಿಗಳು ಮೊತ್ತ (ರೂ.)

  • ವರ್ಷ                    ವಿದ್ಯಾರ್ಥಿಗಳು      ಮೊತ್ತ (ರೂ.)
    1993-2005          428                  1,88,100
    2005-2006           8                        25,000
    2006-2007          38                   1,00,000
    2007-2008           71                  2,00,000
    2008-2009          64                   1,30,000
    2009-2010          59                    1,50,000
    2010-2011           40                      80,000
    2011-2012           80                    1,30,000
    2012-2013          72                     2,00,000
    2013-2014          85                     2,30,000
    2014-2015         109                    2,93,000
    2015-2016         121                    2,60,000
    2016-2017          70                     3,05,000ಬಂಧುಗಳೇ, ಇದೆಲ್ಲ ಸಾಧ್ಯವಾಗಿದ್ದು ಕೇಂದ್ರ ಸಮಿತಿಯ ಸಹಕಾರದಿಂದ, ಘಟಕಗಳ ನೆರವಿನಿಂದ ಮತ್ತು ದಾನಿಗಳ ಸೇವಾ ಮನೋಭಾವದಿಂದ ಮಾತ್ರ. ನಿಮ್ಮ ಸಹಕಾರ ನಮ್ಮ ಜೊತೆಗಿರಲಿ ಎಂದು ಆಶಿಸುತ್ತಾ, ಸಹಕರಿಸಿದ ಎಲ್ಲರಿಗೂ ನಮ್ಮ ಹೃದಯಾಂತರಾಳದ ಕೃತಜ್ಞತೆಯನ್ನು ಸಲ್ಲಿಸುತ್ತಾ, ವಿದ್ಯಾನಿಧಿಗೆ ನೀವು ದಾನಿಗಳಾಗಬಹುದು, ನಿಮ್ಮ ನೆರವನ್ನು ಅರ್ಹ ವಿದ್ಯಾರ್ಥಿಗಳಿಗೆ ತಲುಪಿಸುವ ಕೆಲಸ ನಾವು ಮಾಡುತ್ತೇವೆ. ನಮ್ಮ ಸಮಾಜದ ಸಾಕ್ಷರತೆಯ ಸಂಕಲ್ಪಕ್ಕೆ ಕೈ ಜೋಡಿಸಿ ಎಂದು ವಿನಮ್ರತೆಯಿಂದ ವಿನಂತಿಸುತ್ತಾ ನನ್ನ ವರದಿಯನ್ನು ಮುಕ್ತಾಯಗೊಳಿಸುತ್ತೇನೆ.
    ವಂದನೆಗಳು.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!