ಯುವವಾಹಿನಿ (ರಿ) ಹೆಜಮಾಡಿ ಘಟಕ .
ಬ್ರಹ್ಮ್ಮಶ್ರೀ ನಾರಾಯಣ ಗುರುವರ್ಯರ 165 ನೇ ಗುರು ಜಯಂತಿಯ ಅಂಗವಾಗಿ ಹೆಜಮಾಡಿ ಬಿಲ್ಲವರ ಹತ್ತು ಸಮಸ್ತರಿಗೆ ವಿವಿಧ ಕ್ರೀಡಾಕೂಟಗಳು ದಿನಾಂಕ 25/08/2019 ರಂದು ಹೆಜಮಾಡಿ ಬಿಲ್ಲವ ಸಂಘದ ವಠಾರದಲ್ಲಿ ಜರಗಿತು . ಈ ಪಂದ್ಯಾಟದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ) ಹೆಜಮಾಡಿ ಘಟಕದ ಅಧ್ಯಕ್ಷರಾದ ಶ್ರೀಮತಿ ಚಂದ್ರಾವತಿ ಹರೀಶ್ ವಹಿಸಿದ್ದರು .
ಅಧ್ಯಕ್ಷರಾದ ಶ್ರೀಮತಿ ಚಂದ್ರಾವತಿ ಹರೀಶ್ ಸರ್ವರನ್ನು ಸ್ವಾಗತಿಸಿದರು . ಹೆಜಮಾಡಿ ಬಿಲ್ಲವರ ಸಂಘ ದ ಉಪಾಧ್ಯಕ್ಷರು, ಹೆಜಮಾಡಿ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ದಯಾನಂದ ಹೆಜ್ಮಾಡಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷರಾದ ಶ್ರೀ ಲೋಕೇಶ್ ಅಮೀನ್ ಹಾಗು ಕೇಂದ್ರ ಸಮಿತಿಯ 2 ನೇ ಉಪಾಧ್ಯಕ್ಷರಾದ ಶ್ರೀ ಉದಯ ಅಮೀನ್ , ಹೆಜಮಾಡಿ ಘಟಕದ ಕ್ರೀಡಾ ನಿರ್ದೇಶಕರಾದ ಶ್ರೀ ರತೇಶ್ ಕುಮಾರ್ , ಕಾರ್ಯದರ್ಶಿ ರಾಕೇಶ್ ಉಪಸ್ಥಿತರಿದ್ದರು .
ಕಾರ್ಯದರ್ಶಿಯವರು ವಂದನಾರ್ಪಣೆ ಗೈದರು
ಸಭಾ ಕಾರ್ಯಕ್ರಮದ ನಂತರ ಸಮಾಜ ಬಾಂಧವರಿಗೆ ವಿವಿಧ ಸ್ಪರ್ಧೆಗಳು ನಡೆದವು. ಸುಮಾರು 150 ಹೆಚ್ಚು ಜನರು ಪಾಲ್ಗೊಂಡಿದ್ದರು ..