ಹೆಜಮಾಡಿ : ಯುವವಾಹಿನಿ (ರಿ.) ಹೆಜಮಾಡಿ ಘಟಕದ 2019 -20 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ದಿನಾಂಕ 16.06 .2019 ರಂದು ಭಾನುವಾರ ಬಿಲ್ಲವ ಸಮಾಜ ಸೇವಾ ಸಂಘ ಹೆಜಮಾಡಿಯ “ಜಯ ಸಿ ಸುವರ್ಣ ” ಸಭಾಂಗಣದಲ್ಲಿ ಜರುಗಿತು.
ಯುವವಾಹಿನಿ ಹೆಜಮಾಡಿ ಘಟಕದ ಅಧ್ಯಕ್ಷರಾದ ದಿನೇಶ್ ಹೆಜ್ಮಾಡಿ ಇವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ ನಡುಬೈಲು ಹೆಜಮಾಡಿ ಘಟಕದ ಸಮಾಜಮುಖಿ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ರಾಜೀವ ಪೂಜಾರಿ ಯವರು ಚಂದ್ರಾವತಿ ಹರೀಶ್ ನೇತ್ರತ್ವದ ನೂತನ ತಂಡಕ್ಕೆ ಪ್ರತಿಜ್ಞಾವಿಧಿ ಬೋದಿಸಿದರು.
ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷರಾಗದ ಲೋಕೇಶ್ ಅಮೀನ್ , ಕಾರ್ಕಳದ ಉದ್ಯಮಿ ಸುಭಿತ್ ಕುಮಾರ್ ಎನ್, ಮುಲ್ಕಿ ನಗರ ಪಂಚಾಯತಿನ ಮಾಜಿ ಅಧ್ಯಕ್ಷರಾದ ಸರೋಜಿನಿ ಪಿ ಸುವರ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ನೂತನ ತಂಡಕ್ಕೆ ಶುಭ ಹಾರೈಸಿದರು.
ಯುವವಾಹಿನಿ ಹೆಜಮಾಡಿ ಘಟಕದ ವತಿಯಿಂದ 1 ರಿಂದ 7 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 70 ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ತಾರಾನಾಥ್ ಎಚ್ .ಬಿ ಯವರ ವತಿಯಿಂದ ಪುಸ್ತಕ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿರುವ ಹೆಜಮಾಡಿ ಗ್ರಾಮದ ದೀಪೇಶ್ ರವರಿಗೆ ವಿದ್ಯಾಭ್ಯಾಸಕ್ಕಾಗಿ ಧನ ಸಹಾಯ ಮಾಡಲಾಯಿತು.
ಕಳೆದ ಒಂದು ವರುಷದಲ್ಲಿ ಹೆಜಮಾಡಿ ಘಟಕದ ನೇತ್ರತ್ವ ವಹಿಸಿ ಯಶಸ್ವಿಯಾದ ಯುವವಾಹಿನಿ ಹೆಜಮಾಡಿ ಘಟಕದ ಅಧ್ಯಕ್ಷರಾದ ದಿನೇಶ್ ಹೆಜ್ಮಾಡಿ ಯವರನ್ನು ಅಭಿಸಂದಿಸಲಾಯಿತು. ಮೂರ್ತೆದಾರಿಕೆಯಲ್ಲಿ ನಿರಂತರ 20 ವರ್ಷಕ್ಕೂ ಹೆಚ್ಚು ಸೇವೆ ಮಾಡಿದ ಹೆಜಮಾಡಿ ಗ್ರಾಮದ ದೇವದಾಸ್ ಇವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು .
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಚಂದ್ರಾವತಿ ಹರೀಶ್ ಅವರು ಸದಸ್ಯರ ಸಹಕಾರ ಹಾಗೂ ಹಿರಿಯರ ಮಾರ್ಗದರ್ಶನದಲ್ಲಿ ಯುವವಾಹಿನಿ ಹೆಜಮಾಡಿ ಘಟಕವನ್ನು ಯಶಸ್ವಿಯಾಗಿ ಮುನ್ನಡೆಸುವುದಾಗಿ ತಿಳಿಸಿದರು. ದಿನೇಶ್ ಹೆಜಮಾಡಿ ಸ್ವಾಗತಿಸಿದರು
ನೂತನ ಕಾರ್ಯದರ್ಶಿಭರತ್ ರಾಕೇಶ್ ಧನ್ಯವಾದ ನೀಡಿದರು